Apr 13, 2026 Languages : ಕನ್ನಡ | English

ಸಂಬಂಧಗಳ ಪಾವಿತ್ರ್ಯತೆಗೇ ಕೊಳ್ಳಿ ಇಟ್ಟ ಮೈದುನ-ಅತ್ತಿಗೆ; ಮನೆಯೊಡೆಯ ಹಡಗಿನಲ್ಲಿದ್ದಾಗ ನಡೆದಿದ್ದೇ ಬೇರೆ!!

ಬದುಕಿನಲ್ಲಿ ನಾವು ಯಾರನ್ನಾದರೂ ಅತೀಯಾಗಿ ನಂಬುತ್ತೇವೆ ಅಂದರೆ, ಅವರು ನಮಗೆ ಎಂದು ಕೂಡ ಮೋಸ ಮಾಡುವುದಿಲ್ಲ ಎಂಬ ಭರವಸೆ ನಮಗಿರುತ್ತೆ. ಅದರಲ್ಲೂ ಮದುವೆಯಾದ ಮೇಲೆ ಹೆಂಡತಿ ಮತ್ತು ಹುಟ್ಟಿದಾಗಿನಿಂದ ಜೊತೆಗಿದ್ದ ಅಣ್ಣ ಅಥವಾ ತಮ್ಮನ ಮೇಲೆ ಬೆಟ್ಟದಷ್ಟು ವಿಶ್ವಾಸವಿರುತ್ತೆ. ಆದರೆ ಇಲ್ಲೊಬ್ಬ ಯುವಕನ ಜೀವನದಲ್ಲಿ ನಡೆದ ಘಟನೆ ಕೇಳಿದರೆ, "ಇಂಥ ಕಾಲವೂ ಬಂತಾ?" ಎಂದು ನೀವು ಅಚ್ಚರಿ ಪಡುತ್ತೀರಿ.

ಮದುವೆಯ ನಂತರದ ಮೋಸ: ತಮ್ಮನಿಂದಲೇ ದ್ರೋಹ; | Photo Credit: https://x.com/Trishulwarrior
ಮದುವೆಯ ನಂತರದ ಮೋಸ: ತಮ್ಮನಿಂದಲೇ ದ್ರೋಹ; | Photo Credit: https://x.com/Trishulwarrior

ಹೊಸ ಜೀವನದ ಕನಸು, ದೂರದ ಪ್ರಯಾಣ

ಈ ಘಟನೆ ಶುರುವಾಗಿದ್ದು ಕಳೆದ ಜನವರಿಯಲ್ಲಿ. ಆ ಯುವಕ ವೃತ್ತಿಯಲ್ಲಿ ಮರ್ಚೆಂಟ್ ನೇವಿ ಉದ್ಯೋಗಿ. ಹಡಗಿನಲ್ಲಿ ಕೆಲಸ ಮಾಡುವುದರಿಂದ ತಿಂಗಳುಗಟ್ಟಲೆ ಮನೆಯಿಂದ ದೂರ, ಸಮುದ್ರದ ನಡುವೆಯೇ ಇರಬೇಕಾದ ಪರಿಸ್ಥಿತಿ. ಜನವರಿಯಲ್ಲಿ ಅದ್ಧೂರಿಯಾಗಿ ಮದುವೆಯಾಯ್ತು, ಹೊಸ ಜೀವನದ ನೂರಾರು ಕನಸುಗಳನ್ನು ಕಂಡಿದ್ದ ಆತ, ಮದುವೆಯಾದ ಕೇವಲ 7 ದಿನಕ್ಕೆ ತನ್ನ ಕರ್ತವ್ಯದ ನಿಮಿತ್ತ ಮತ್ತೆ ಹಡಗಿಗೆ ಮರಳಬೇಕಾಯಿತು.

ಹೋಗುವಾಗ ಹೆಂಡತಿಯ ಕಣ್ಣಲ್ಲಿ ನೀರಿತ್ತು, "ಜಾಗರೂಕತೆಯಿಂದ ಹೋಗಿ ಬನ್ನಿ" ಎಂಬ ಹಾರೈಕೆಯಿತ್ತು. ಆ ಪ್ರೀತಿಯನ್ನೇ ಮನಸ್ಸಿನಲ್ಲಿಟ್ಟುಕೊಂಡು ಆತ ಹಡಗು ಹತ್ತಿದ್ದ. ಆರಂಭದಲ್ಲಿ ಎಲ್ಲವೂ ಸರಿಯಾಗಿಯೇ ಇತ್ತು. ದಿನಾ ಫೋನ್ ಕಾಲ್, ವಿಡಿಯೋ ಕಾಲ್ ನಡೆಯುತ್ತಿತ್ತು. 

ಬದಲಾದ ನಡವಳಿಕೆ, ಮೂಡಿದ ಅನುಮಾನ

ಆದರೆ ದಿನ ಕಳೆದಂತೆ ಹೆಂಡತಿಯ ನಡವಳಿಕೆಯಲ್ಲಿ ಬದಲಾವಣೆ ಕಾಣತೊಡಗಿತು. ಮೊದಲೆಲ್ಲಾ ಗಂಟೆಗಟ್ಟಲೆ ಮಾತನಾಡುತ್ತಿದ್ದವಳು, ಆಮೇಲೆ ಫೋನ್ ಎತ್ತಲು ಹಿಂಜರಿಯತೊಡಗಿದಳು. ಏನಾದರೂ ಕೇಳಿದರೆ ಯಾವುದೋ ಒಂದು ನೆಪ ಹೇಳಿ ಫೋನ್ ಕಟ್ ಮಾಡುತ್ತಿದ್ದಳು. ಒಂದು ದಿನ ಆಕಸ್ಮಿಕವಾಗಿ ಆಕೆ ತನ್ನ ಸ್ವಂತ ತಮ್ಮನ (ಮೈದುನ) ಜೊತೆ ಗಂಟೆಗಟ್ಟಲೆ ಚಾಟಿಂಗ್ ಮಾಡುತ್ತಿರುವುದು ಈತನ ಗಮನಕ್ಕೆ ಬಂತು.

ಆದರೆ, "ಮನೆಯವರೇ ಅಲ್ವಾ, ಮಾತನಾಡುತ್ತಿರಬಹುದು" ಎಂದು ಆತ ಅದನ್ನು ನಿರ್ಲಕ್ಷಿಸಿದ. ತನ್ನ ಒಡಹುಟ್ಟಿದವನ ಮೇಲೆ ಆತನಿಗೆ ಅಷ್ಟೊಂದು ನಂಬಿಕೆಯಿತ್ತು. ಆದರೆ ಆ ನಂಬಿಕೆಯೇ ಆತನ ಪಾಲಿಗೆ ಮುಳುವಾಗುತ್ತೆ ಎಂದು ಆತ ಅಂದುಕೊಂಡಿರಲಿಲ್ಲ.

ಮನೆಗೆ ಬಂದಾಗ ಕಾದಿತ್ತು 'ಶಾಕ್'!

ಕೆಲವು ತಿಂಗಳುಗಳ ಕೆಲಸ ಮುಗಿಸಿ, ಹೆಂಡತಿಯನ್ನು ನೋಡುವ ಆಸೆಯಿಂದ ಆತ ಮನೆಗೆ ಮರಳಿದ. ಆದರೆ ಮನೆಗೆ ಬಂದವನಿಗೆ ಹೆಂಡತಿಯ ಮುಖದಲ್ಲಿ ಸಂಭ್ರಮ ಕಾಣಲಿಲ್ಲ, ಬದಲಾಗಿ ಒಂದು ರೀತಿಯ ಭಯ ಮತ್ತು ಅಂತರ ಎದ್ದು ಕಾಣುತ್ತಿತ್ತು.

ದಿನಗಳು ಕಳೆದಂತೆ ಆಕೆಗೆ ಹುಷಾರಿಲ್ಲದಂತಾದಾಗ ಆಸ್ಪತ್ರೆಗೆ ಕರೆದುಕೊಂಡು ಹೋದಾಗ ಸಿಕ್ಕ ವರದಿ ಆತನ ಇಡೀ ಪ್ರಪಂಚವನ್ನೇ ನುಚ್ಚುನೂರು ಮಾಡಿತು. ಆಕೆ 2 ತಿಂಗಳ ಗರ್ಭಿಣಿ! ಆತ ಹಡಗಿನಿಂದ ಬಂದು ಕೇವಲ ಕೆಲವು ದಿನಗಳಷ್ಟೇ ಆಗಿತ್ತು. ಅಂದರೆ ಆ ಮಗು ಈತನದ್ದಲ್ಲ ಎಂಬುದು ಜಗಜ್ಜಾಹೀರಾಯಿತು.

ಒಡೆಯಿತು ನಂಬಿಕೆಯ ಅರಮನೆ

ಆತ ಗದರಿಸಿ ಸತ್ಯ ಕೇಳಿದಾಗ ಆಕೆ ಹೇಳಿದ ಮಾತು ಆತನ ಎದೆಗೆ ಚೂ*ರಿ ಹಾಕಿದಂತಾಯಿತು. ಆ ಮಗು ಬೇರೆ ಯಾರದ್ದೋ ಅಲ್ಲ, ಸ್ವತಃ ಈತನ ತಮ್ಮನದ್ದೇ ಆಗಿತ್ತು ಎಂದು ತಿಳಿದುಬಂದಿದೆ.  ಗಂಡ ಮನೆಯಲ್ಲಿ ಇಲ್ಲದ ಸಮಯ ನೋಡಿ, ಹೆಂಡತಿ ಮತ್ತು ತಮ್ಮ ಸೇರಿ ಈ ಘೋರ ದ್ರೋಹ ಎಸಗಿದ್ದರು.

ಒಂದೇ ಕ್ಷಣದಲ್ಲಿ ಆತನ ಮದುವೆ, ನಂಬಿಕೆ ಮತ್ತು ಕುಟುಂಬದ ಗೌರವ ಎಲ್ಲವೂ ಮಣ್ಣು ಪಾಲಾಯಿತು. ತನ್ನ ರಕ್ತದ ಸಂಬಂಧವೇ ಬೆನ್ನಿಗೆ ಚೂ*ರಿ ಹಾಕಿದ್ದನ್ನು ಕಂಡು ಆತ ದಿಗಿಲುಗೊಂಡಿದ್ದಾನೆ.

ಸಂಬಂಧಗಳಲ್ಲಿ ನಂಬಿಕೆ ಇರಬೇಕು ನಿಜ, ಆದರೆ ಅತಿಯಾದ ನಂಬಿಕೆ ಕೆಲವೊಮ್ಮೆ ಕಣ್ಣು ಮುಚ್ಚುವಂತೆ ಮಾಡುತ್ತದೆ. ಮನುಷ್ಯನ ವಿಕೃತ ಮನಸ್ಸು ಎಲ್ಲಿಗೆ ಬಂದು ನಿಂತಿದೆ ಎಂದರೆ, ಪವಿತ್ರವಾದ ಮದುವೆ ಮತ್ತು ಒಡಹುಟ್ಟಿದವರ ಸಂಬಂಧಕ್ಕೂ ಬೆಲೆ ಇಲ್ಲದಂತಾಗಿದೆ. ಈ ಯುವಕನ ಪರಿಸ್ಥಿತಿ ಯಾರಿಗೂ ಬರಬಾರದು. ಸಂಬಂಧಗಳ ಪಾವಿತ್ರ್ಯತೆ ಕಾಪಾಡುವುದು ಪ್ರತಿಯೊಬ್ಬರ ಜವಾಬ್ದಾರಿ. ಇಂತಹ ಘಟನೆಗಳು ಸಮಾಜಕ್ಕೆ ಒಂದು ಕಪ್ಪು ಚುಕ್ಕೆ. 

Latest News