May 6, 2026 Languages : ಕನ್ನಡ | English

ಪೊಲೀಸ್ ಕಮಿಷನರ್ ಗೆ ರೂಮ್ ಗೆ ಬರ್ತಿಯಾ, 'ರೇಟ್ ಎಷ್ಟು ನಿಂದು' ಎಂದ ರೌಡಿಗಳು - ಐಪಿಎಸ್ ಸುಮತಿ ಮುಂದೆ ಮಾಡಿದ್ದೆ ಬೇರೆ!!

ನಗರದಲ್ಲಿ ಮಹಿಳೆಯರು ಮಧ್ಯರಾತ್ರಿ ಓಡಾಡೋದು ಸೇಫ್ ಅಲ್ವಾ? ಬಸ್ ನಿಲ್ದಾಣದಲ್ಲಿ ಒಬ್ಬಂಟಿಯಾಗಿ ನಿಂತರೆ ಏನಾಗುತ್ತೆ? ಈ ಪ್ರಶ್ನೆಗಳಿಗೆ ಉತ್ತರ ಹುಡುಕಲು ಹೋದ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರಿಗೆ ಎದುರಾದ ಅನುಭವ ನಿಜಕ್ಕೂ ಮೈ ಜುಂ ಎನಿಸುವಂತಿದೆ. ಆಂಧ್ರಪ್ರದೇಶದ ಮಲ್ಕಾಜ್‌ಗಿರಿ ಪೊಲೀಸ್ ಕಮಿಷನರ್ ಸುಮತಿ ಅವರು ನಡೆಸಿದ ಒಂದು ಸಾಹಸೀ 'ಅಂಡರ್‌ಕವರ್ ಆಪರೇಷನ್' ಈಗ ದೇಶಾದ್ಯಂತ ಸಖತ್ ಸದ್ದು ಮಾಡ್ತಿದೆ.

ರೇಟ್ ಎಷ್ಟು ಅಂತ ಕೇಳಿದ ರೌಡಿಗಳಿಗೆ ಚಳ್ಳೆಹಣ್ಣು ತಿನ್ನಿಸಿದ ಲೇಡಿ;
ರೇಟ್ ಎಷ್ಟು ಅಂತ ಕೇಳಿದ ರೌಡಿಗಳಿಗೆ ಚಳ್ಳೆಹಣ್ಣು ತಿನ್ನಿಸಿದ ಲೇಡಿ;

ಸಿವಿಲ್ ಡ್ರೆಸ್‌ನಲ್ಲಿ ಕಮಿಷನರ್ ಎಂಟ್ರಿ!

ದಿಲ್‌ಸುಖ್‌ನಗರ ಬಸ್ ನಿಲ್ದಾಣದ ಬಳಿ ರಾತ್ರಿ ವೇಳೆ ಮಹಿಳೆಯರಿಗೆ ಕಿರುಕುಳ ನೀಡಲಾಗುತ್ತಿದೆ ಎಂಬ ದೂರುಗಳು ಕಮಿಷನರ್ ಕಚೇರಿಗೆ ಪದೇ ಪದೇ ಬರುತ್ತಿದ್ದವು. ಇದನ್ನು ಖುದ್ದಾಗಿ ಪರಿಶೀಲಿಸಲು ನಿರ್ಧರಿಸಿದ ಸಿಪಿ ಸುಮತಿ ಅವರು, ಯಾವುದೇ ಭದ್ರತೆ ಇಲ್ಲದೆ ಸಾಮಾನ್ಯ ಮಹಿಳೆಯಂತೆ ಸಿವಿಲ್ ಡ್ರೆಸ್ ಧರಿಸಿ ಕಾರ್ಯಾಚರಣೆಗೆ ಇಳಿದರು. ಮೇ 6ರ ಬುಧವಾರದಂದು ಮಧ್ಯರಾತ್ರಿ 12:30 ರಿಂದ 3:30 ರವರೆಗೆ ಇವರು ಬಸ್ ನಿಲ್ದಾಣದಲ್ಲಿ ಏಕಾಂಗಿಯಾಗಿ ಬಸ್‌ಗಾಗಿ ಕಾಯುವವರಂತೆ ನಿಂತಿದ್ದರು.

"ರೇಟ್ ಎಷ್ಟು?" ಎಂದ ಕಿಡಿಗೇಡಿಗಳು!

ಒಬ್ಬ ಮಹಿಳೆ ಏಕಾಂಗಿಯಾಗಿ ನಿಂತಿರುವುದನ್ನು ಕಂಡ ಪುಂಡರು ಅತಿ ಕಡಿಮೆ ಸಮಯದಲ್ಲಿ ಅವರ ಸುತ್ತುವರಿಯಲು ಆರಂಭಿಸಿದರು. ತಾನು ಪೊಲೀಸ್ ಕಮಿಷನರ್ ಎಂಬ ಅರಿವಿಲ್ಲದ ಸುಮಾರು 40 ಕಿಡಿಗೇಡಿಗಳು ಅವರ ಬಳಿ ಬಂದು ಅಸಭ್ಯವಾಗಿ ವರ್ತಿಸಿದ್ದಾರೆ. "ನಿನ್ನ ರೇಟ್ ಎಷ್ಟು?", "ರೂಮ್‌ಗೆ ಬರ್ತೀಯಾ?" ಎಂಬಂತಹ ಅಶ್ಲೀಲ ಮಾತುಗಳನ್ನಾಡಿ ಮಾನಸಿಕವಾಗಿ ಕಿರುಕುಳ ನೀಡಿದ್ದಾರೆ.

ಒಬ್ಬ ಉನ್ನತ ದರ್ಜೆಯ ಪೊಲೀಸ್ ಅಧಿಕಾರಿಗೆ ಈ ಸ್ಥಿತಿ ಎದುರಾದರೆ, ಇನ್ನು ಸಾಮಾನ್ಯ ಮಹಿಳೆಯರ ಗತಿ ಏನು? ಎಂಬ ಆತಂಕಕಾರಿ ಸತ್ಯ ಈ ಕಾರ್ಯಾಚರಣೆಯಿಂದ ಜಗತ್ತಿಗೆ ಗೊತ್ತಾಗಿದೆ.

40 ಪುಂಡರ ಹೆಡೆಮುರಿ ಕಟ್ಟಿದ ಪೊಲೀಸ್ ಪಡೆ!

ಕಿಡಿಗೇಡಿಗಳು ಅತಿರೇಕವಾಗಿ ವರ್ತಿಸುತ್ತಿದ್ದಂತೆಯೇ, ಸುತ್ತಮುತ್ತ ಮಫ್ತಿಯಲ್ಲಿ ಸಿದ್ಧವಾಗಿದ್ದ ಪೊಲೀಸ್ ತಂಡಗಳು ತಕ್ಷಣ ದಾಳಿ ನಡೆಸಿದವು. ಕಮಿಷನರ್ ಜೊತೆ ಅಸಭ್ಯವಾಗಿ ವರ್ತಿಸಿದ 40 ವ್ಯಕ್ತಿಗಳನ್ನು ಸ್ಥಳದಲ್ಲೇ ವಶಕ್ಕೆ ಪಡೆಯಲಾಯಿತು. ಇವರಲ್ಲಿ ಹೆಚ್ಚಿನವರು ವಿದ್ಯಾರ್ಥಿಗಳು ಮತ್ತು ಖಾಸಗಿ ಕಂಪನಿ ಉದ್ಯೋಗಿಗಳಾಗಿದ್ದು, ಕೆಲವರು ಗಾಂ*ಜಾ ಮತ್ತು ಮದ್ಯದ ಅಮಲಿನಲ್ಲಿದ್ದರು ಎಂದು ತಿಳಿದುಬಂದಿದೆ.

ಸಮಾಜಕ್ಕೆ ಒಂದು ದೊಡ್ಡ ಸಂದೇಶ

ಮಧ್ಯರಾತ್ರಿ 12:30 ರಿಂದ 3:30 ವರೆಗೆ ನಡೆದ ಈ ಅಂಡರ್‌ಕವರ್ ಆಪರೇಷನ್ ಮಹಿಳೆಯರ ಸುರಕ್ಷತೆಯ ಬಗ್ಗೆ ನಾವೆಲ್ಲರೂ ಯೋಚಿಸುವಂತೆ ಮಾಡಿದೆ. ಬರಿ ಘೋಷಣೆಗಳಿಂದ ಬದಲಾವಣೆ ಸಾಧ್ಯವಿಲ್ಲ, ಜನರ ಮನಸ್ಥಿತಿ ಬದಲಾಗಬೇಕು ಮತ್ತು ಇಂತಹ ಕಿಡಿಗೇಡಿಗಳಿಗೆ ಕಾನೂನಿನ ಭಯ ಇರಬೇಕು ಎಂಬುದು ಈ ಘಟನೆಯಿಂದ ಸಾಬೀತಾಗಿದೆ.

ಸಿಪಿ ಸುಮತಿ ಅವರ ಈ ಕೆಚ್ಚೆದೆಯ ನಿರ್ಧಾರಕ್ಕೆ ಈಗ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಮಹಿಳೆಯರ ರಕ್ಷಣೆಗಾಗಿ ಖುದ್ದಾಗಿ ಬೀದಿಗೆ ಇಳಿದ ಇಂತಹ ಅಧಿಕಾರಿಗಳು ನಮಗೆ ಮಾದರಿ. 

Latest News