ಸರ್ಕಾರದ ಗ್ಯಾರಂಟಿ ವೇಸ್ಟ್ ಅನ್ನೋರಿಗೆ - ಮೈಸೂರು ವಿದ್ಯಾರ್ಥಿನಿ ಮಾಧುರಿ ಕೊಟ್ಟಳು ಖಡಕ್ ಉತ್ತರ!!

ಸರ್ಕಾರ ಜಾರಿಗೆ ತಂದಿರೋ 'ಗ್ಯಾರಂಟಿ ಯೋಜನೆಗಳು' ಸುಮ್ಮನೆ ವೇಸ್ಟ್ ಅಂತ ಅಂದುಕೊಳ್ಳೋರಿಗೆ ಮೈಸೂರಿನ ಒಬ್ಬಳು ಬಾಲಕಿ ತನ್ನ ಸಾಧನೆಯ ಮೂಲಕ ಉತ್ತರ ಕೊಟ್ಟಿದ್ದಾಳೆ.

ಗೃಹಲಕ್ಷ್ಮಿ ಯೋಜನೆಯ ರಿಯಲ್ ಸಕ್ಸಸ್ | Photo Credit: https://x.com/laxmi_hebbalkar
ಗೃಹಲಕ್ಷ್ಮಿ ಯೋಜನೆಯ ರಿಯಲ್ ಸಕ್ಸಸ್ | Photo Credit: https://x.com/laxmi_hebbalkar

ಮೈಸೂರಿನ ಇಲವಾಲದ ಕರ್ನಾಟಕ ಪಬ್ಲಿಕ್ ಶಾಲೆಯ ವಿದ್ಯಾರ್ಥಿನಿ ಮಾಧುರಿ ಆರ್. ಈ ಬಾರಿಯ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ 625ಕ್ಕೆ 624 ಅಂಕ ಗಳಿಸಿ ರಾಜ್ಯಕ್ಕೆ ಎರಡನೇ ಸ್ಥಾನ (2nd Rank) ಪಡೆದಿದ್ದಾಳೆ. ಈಕೆಯ ಸಾಧನೆಯ ಹಿಂದೆ ಸರ್ಕಾರದ 'ಗೃಹಲಕ್ಷ್ಮಿ' ಯೋಜನೆಯ ಹಣ ದೊಡ್ಡ ಶಕ್ತಿಯಾಗಿ ನಿಂತಿದೆ ಅನ್ನೋದೇ ವಿಶೇಷ!

ಮಾಧುರಿ ಅವರ ತಾಯಿ ಸರಿತಾ ಅವರು ಮೊದಲಿಗೆ ಒಂದು ಪ್ರೈವೇಟ್ ಕೆಲಸದಲ್ಲಿದ್ದರು. ಆದ್ರೆ ಪಾಪ, ಅನಾರೋಗ್ಯದ ಕಾರಣದಿಂದ ಅವರು ಆ ಕೆಲಸ ಬಿಡಬೇಕಾಯಿತು. ಬಡತನದ ಮನೆಯಲ್ಲಿ ಮಗಳನ್ನು ಓದಿಸೋದು ಹೇಗೆ ಅನ್ನೋ ಚಿಂತೆ ಕಾಡ್ತಿದ್ದಾಗ ನೆರವಿಗೆ ಬಂದಿದ್ದೇ ಗೃಹಲಕ್ಷ್ಮಿ ಯೋಜನೆಯ 2,000 ರೂಪಾಯಿ. ತಾಯಿಗೆ ಬರುತ್ತಿದ್ದ ಈ ಹಣವನ್ನೇ ಕೂಡಿಟ್ಟು ಮಾಧುರಿಯ ಟ್ಯೂಷನ್ ಫೀಸ್ ಕಟ್ಟಿದ್ದರು. ಆ ಪುಟ್ಟ ಹಣದ ಸಹಾಯ ಇವತ್ತು ಆಕೆಯನ್ನು ರಾಜ್ಯ ಮಟ್ಟದ ಟಾಪರ್ ಆಗಿ ಮಾಡಿದೆ.

ಈ ಸಾಧನೆಯ ವಿಷಯ ತಿಳಿಯುತ್ತಿದ್ದಂತೆ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಫುಲ್ ಖುಷಿಯಾಗಿದ್ದಾರೆ. ಈ ಬಗ್ಗೆ ಒಂದು ಸ್ಪೆಷಲ್ ಸ್ಟೇಟ್ಮೆಂಟ್ ಕೊಟ್ಟಿರೋ ಅವರು, ಮಾಧುರಿ ಸಾಧನೆಯನ್ನು ಮನಸಾರೆ ಹೊಗಳಿದ್ದಾರೆ.

"ಗ್ಯಾರಂಟಿ ಯೋಜನೆಗಳು ಜನರ ಬದುಕನ್ನೇ ಬದಲಿಸುತ್ತಿವೆ ಅನ್ನೋದಕ್ಕೆ ಮಾಧುರಿಯೇ ಬೆಸ್ಟ್ ಎಕ್ಸಾಂಪಲ್. ಬಡವರ ಮನೆಯ ಮಗು ರಾಜ್ಯಕ್ಕೆ ರ್ಯಾಂಕ್ ಪಡೆಯಲು ನಮ್ಮ ಗ್ಯಾರಂಟಿ ಹಣ ಆಧಾರವಾಗಿದೆ ಅನ್ನೋದು ಕೇಳಿ ಹೆಮ್ಮೆ ಅನಿಸ್ತಿದೆ. 'ನಮ್ಮ ಸರ್ಕಾರ ನಮ್ಮ ಹೆಮ್ಮೆ, ನಮ್ಮ ಗ್ಯಾರಂಟಿ ನಮ್ಮ ಹೆಮ್ಮೆ' ಅನ್ನೋದು ಇವತ್ತು ಪ್ರೂವ್ ಆಗಿದೆ," ಅಂತ ಅವರು ಹೇಳಿದ್ದಾರೆ.

ಶಿಕ್ಷಣದಲ್ಲೂ ಗ್ಯಾರಂಟಿ ಕ್ರಾಂತಿ!

ಬರಿ ಅಷ್ಟೇ ಅಲ್ಲ, ವಿರೋಧ ಪಕ್ಷದವರಿಗೂ ಒಂದು ಟಾಂಗ್ ಕೊಟ್ಟಿದ್ದಾರೆ ಡಿಕೆಶಿ. "ಗ್ಯಾರಂಟಿಗಳಿಂದ ಯಾರೋ ದೇವರಿಗೆ ಕಿರೀಟ ಮಾಡಿಸ್ತಿದ್ದಾರೆ, ಇನ್ಯಾರೋ ಬಳೆ ಅಂಗಡಿ ಇಟ್ಟುಕೊಂಡು ಜೀವನ ಮಾಡ್ತಿದ್ದಾರೆ. ಈಗ ನೋಡಿ, ಶಿಕ್ಷಣ ರಂಗದಲ್ಲೂ ನಮ್ಮ ಯೋಜನೆಗಳು ಕ್ರಾಂತಿ ಮಾಡ್ತಿವೆ. ಇನ್ನಾದ್ರೂ ವಿರೋಧ ಪಕ್ಷದವರು ಸುಳ್ಳು ಹೇಳಿ ಜನರ ದಾರಿ ತಪ್ಪಿಸೋದನ್ನ ನಿಲ್ಲಿಸಲಿ" ಅಂತ ಗುಡುಗಿದ್ದಾರೆ.

ಮಾಧುರಿ ಸಾಧನೆ ಎಲ್ಲರಿಗೂ ಸ್ಫೂರ್ತಿ

ನೋಡಿ ಗೆಳೆಯರೇ, ಸೌಲಭ್ಯವನ್ನ ಹೇಗೆ ಬಳಸಿಕೊಳ್ಳಬೇಕು ಅನ್ನೋದಕ್ಕೆ ಮಾಧುರಿ ಒಂದು ಸ್ಫೂರ್ತಿ. ಕೈಗೆ ಬಂದ 2 ಸಾವಿರ ರೂಪಾಯಿಯಲ್ಲಿ ಅತ್ತೆ-ಸೊಸೆ ಜಗಳ ಆಡೋ ಬದಲು ಅಥವಾ ಅನಗತ್ಯ ಖರ್ಚು ಮಾಡೋ ಬದಲು, ಮಗಳ ಭವಿಷ್ಯಕ್ಕಾಗಿ ಖರ್ಚು ಮಾಡಿದ ತಾಯಿ ಸರಿತಾ ಅವರ ನಿರ್ಧಾರ ಇವತ್ತು ಇಡೀ ರಾಜ್ಯವೇ ಅವರ ಮನೆ ಕಡೆ ತಿರುಗಿ ನೋಡುವಂತೆ ಮಾಡಿದೆ.

Latest News