ಎಂಜಿನಿಯರಿಂಗ್ ಸೇರಿದಂತೆ ವಿವಿಧ ವೃತ್ತಿಪರ ಕೋರ್ಸ್‌ಗಳ ಸೀಟು ಹಿಡಿಯಲು ಕಾಯ್ತಾ ಇರೋ ವಿದ್ಯಾರ್ಥಿಗಳಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ಮತ್ತು ಉನ್ನತ ಶಿಕ್ಷಣ ಇಲಾಖೆ ಒಂದು ಶಾಕಿಂಗ್ ನ್ಯೂಸ್ ಕೊಟ್ಟಿದೆ. ಈ ವರ್ಷದಿಂದ ಅಂದ್ರೆ 2026-27ನೇ ಶೈಕ್ಷಣಿಕ ಸಾಲಿನಿಂದ ಕೆಸಿಇಟಿ (KCET) ಕೌನ್ಸೆಲಿಂಗ್ ನಿಯಮಗಳಲ್ಲಿ ಭಾರಿ ಬದಲಾವಣೆ ಮಾಡಲು ಸರ್ಕಾರ ಮುಂದಾಗಿದೆ.
ಈ ಹೊಸ ನಿಯಮದಿಂದಾಗಿ ಲಕ್ಷಾಂತರ ವಿದ್ಯಾರ್ಥಿಗಳು ಮತ್ತು ಪೋಷಕರು ಕಂಗಾಲಾಗಿದ್ದಾರೆ. ಹೌದು, ಖಾಸಗಿ ಕಾಲೇಜುಗಳ ಸೀಟು ಹಂಚಿಕೆ ವಿಧಾನದಲ್ಲಿ ಕೆಇಎ ದೊಡ್ಡ ಬದಲಾವಣೆ ಮಾಡ್ತಾ ಇದ್ದು, ಇನ್ಮುಂದೆ ಮೊದಲಿನ ತರ ಚಾಯ್ಸ್ ಇರೋದಿಲ್ಲ. ಹಾಗಾದ್ರೆ ಏನಿದು ಹೊಸ ರೂಲ್ಸ್? ಇದರಿಂದ ವಿದ್ಯಾರ್ಥಿಗಳಿಗೆ ಆಗೋ ನಷ್ಟ ಏನು? ಕಂಪ್ಲೀಟ್ ಡಿಟೇಲ್ಸ್ ಇಲ್ಲಿದೆ ನೋಡಿ.
ಹೊಸ ನಿಯಮದಲ್ಲಿ ಏನಿದೆ? (Key Points):
ಖಾಸಗಿ ಕೋಟಾ ಸೀಟುಗಳಿಗೆ ಬ್ರೇಕ್ - ಮೊದಲ ಸುತ್ತಿನ ಕೌನ್ಸೆಲಿಂಗ್ ಮುಗಿದ ಮೇಲೆ ಖಾಸಗಿ ಕಾಲೇಜುಗಳು ಕೊಡುವ 'ಖಾಸಗಿ ಕೋಟಾ'ದ ಸೀಟುಗಳನ್ನು ಇನ್ಮುಂದೆ 2ನೇ ಮತ್ತು 3ನೇ ರೌಂಡ್‌ನಲ್ಲಿ ಪರಿಗಣಿಸಲ್ಲ!
ಫಸ್ಟ್ ರೌಂಡ್‌ನಲ್ಲೇ ಸೀಟು ಸಬ್ಮಿಟ್ ಮಾಡಬೇಕು - ಕಾಲೇಜುಗಳು ತಮ್ಮ ಬಳಿ ಇರೋ ಖಾಸಗಿ ಕೋಟಾದ ಸೀಟುಗಳ ಲಿಸ್ಟ್ ಅನ್ನು ಮೊದಲ ಸುತ್ತಿನ ಕೌನ್ಸೆಲಿಂಗ್ ಆರಂಭವಾಗುವ ಮುನ್ನವೇ ಕೆಇಎಗೆ ಒಪ್ಪಿಸಬೇಕು.
ಕೇರ್ ಫುಲ್ ಆಗಿರಬೇಕು ಸ್ಟೂಡೆಂಟ್ಸ್ - ಈ ನಿಯಮದಿಂದಾಗಿ ವಿದ್ಯಾರ್ಥಿಗಳು ಮೊದಲ ರೌಂಡ್‌ನಲ್ಲೇ ತುಂಬಾ ಯೋಚನೆ ಮಾಡಿ, ಎಚ್ಚರಿಕೆಯಿಂದ ಕಾಲೇಜು ಮತ್ತು ಕೋರ್ಸ್ ಅನ್ನು ಸೆಲೆಕ್ಟ್ ಮಾಡಬೇಕಾಗುತ್ತದೆ.
ಇಷ್ಟಕ್ಕೂ KEA ಈ ನಿರ್ಧಾರ ತಗೊಂಡಿದ್ದು ಯಾಕೆ?
ಇಲ್ಲಿಯವರೆಗೆ ಕೌನ್ಸೆಲಿಂಗ್ ಪ್ರಕ್ರಿಯೆ ಹೇಗೆ ನಡೀತಿತ್ತು ಅಂದ್ರೆ, ಮೊದಲ ರೌಂಡ್ ಮುಗಿದ ಮೇಲೂ ಖಾಸಗಿ ಕಾಲೇಜುಗಳು ತಮ್ಮಲ್ಲಿ ಬಾಕಿ ಉಳಿದಿರೋ ಸೀಟುಗಳನ್ನು ಕೆಇಎಗೆ ಕೊಡ್ತಾ ಇದ್ದವು. ಅದನ್ನು 2ನೇ ಮತ್ತು 3ನೇ ಸುತ್ತಿನಲ್ಲಿ ಹಂಚಲಾಗುತ್ತಿತ್ತು. ಇದರಿಂದ ಏನಾಗ್ತಿತ್ತು ಅಂದ್ರೆ, ಮೊದಲ ರೌಂಡ್‌ನಲ್ಲಿ ಸೀಟು ಸಿಕ್ಕಿದ ವಿದ್ಯಾರ್ಥಿಗಳು, "ಮುಂದಿನ ರೌಂಡ್‌ನಲ್ಲಿ ಇನ್ನು ಒಳ್ಳೆ ಕಾಲೇಜು ಅಥವಾ ಇಷ್ಟವಾದ ಕೋರ್ಸ್ ಸಿಗಬಹುದು" ಅನ್ನೋ ಆಸೆಯಲ್ಲಿ ಅಡ್ಮಿಷನ್ ಮಾಡಿಸದೆ ಕಾಯ್ತಾ ಕೂತಿರುತ್ತಿದ್ದರು.
ಕಳೆದ ವರ್ಷ (2025-26) ಮೊದಲ ರೌಂಡ್ ಮುಗಿದ ಮೇಲೆ ಬರೋಬ್ಬರಿ 15,000ಕ್ಕೂ ಹೆಚ್ಚು ಖಾಸಗಿ ಕೋಟಾದ ಸೀಟುಗಳನ್ನು ಲಿಸ್ಟ್‌ಗೆ ಸೇರಿಸಲಾಗಿತ್ತು! ಇದರಿಂದ ಕೌನ್ಸೆಲಿಂಗ್ ಪ್ರಕ್ರಿಯೆ ಸಖತ್ ಲೇಟ್ ಆಗಿದ್ದಲ್ಲದೆ, ಯಾವ ಸೀಟು ಯಾರಿಗೆ ಸಿಗುತ್ತೆ ಅನ್ನೋ ಗೊಂದಲ ಕ್ರಿಯೇಟ್ ಆಗಿತ್ತು. ಕೊನೆಗೆ ಹಲವು ಸೀಟುಗಳು ಖಾಲಿ ಉಳಿದು, ಇತ್ತ ಬೇರೆ ಅರ್ಹ ವಿದ್ಯಾರ್ಥಿಗಳಿಗೂ ಅವಕಾಶ ಸಿಗದೆ ಅನ್ಯಾಯವಾಗಿತ್ತು. ಈ ಗೊಂದಲಕ್ಕೆ ಫುಲ್ ಸ್ಟಾಪ್ ಇಡಲು ಕೆಇಎ ಈಗ ಈ ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಿದೆ.
ವಿದ್ಯಾರ್ಥಿಗಳಿಗೆ ಆಗೋ ತೊಂದರೆ ಏನು?
ಸರ್ಕಾರ ಮತ್ತು ಖಾಸಗಿ ಕಾಲೇಜುಗಳ ನಡುವಿನ ಅಗ್ರಿಮೆಂಟ್ ಪ್ರಕಾರ ಮೊದಲೇ ಸೀಟು ಕೊಡಬೇಕು ಅನ್ನೋ ನಿಯಮ ಮೊದಲಿನಿಂದಲೂ ಇತ್ತು. ಆದ್ರೆ ಯಾರೂ ಇದನ್ನು ಸೀರಿಯಸ್ ಆಗಿ ತಗೊಂಡಿರಲಿಲ್ಲ. ಇನ್ಮುಂದೆ ಮೊದಲ ರೌಂಡ್ ಪ್ರಕ್ರಿಯೆ ಶುರುವಾಗುವ ಮುನ್ನವೇ ಖಾಸಗಿ ಸೀಟುಗಳು ಲಿಸ್ಟ್‌ನಲ್ಲಿ ಇರಬೇಕು.
ಇದರಿಂದ ವಿದ್ಯಾರ್ಥಿಗಳಿಗೆ 2ನೇ ಅಥವಾ 3ನೇ ರೌಂಡ್‌ನಲ್ಲಿ "ಲಕ್" ಪರೀಕ್ಷೆ ಮಾಡಲು ಚಾನ್ಸ್ ಸಿಗಲ್ಲ. ಮೊದಲ ಸುತ್ತಿನಲ್ಲೇ ಟಾಪ್ ಕಾಲೇಜುಗಳ ಸೀಟುಗಳು ಫುಲ್ ಆಗಿಬಿಡೋದ್ರಿಂದ ಕಾಂಪಿಟಿಷನ್ ವಿಪರೀತ ಜಾಸ್ತಿ ಆಗಲಿದೆ. ರಾಂಕಿಂಗ್‌ನಲ್ಲಿ ಸ್ವಲ್ಪ ಹಿಂದೆ ಇರೋ ವಿದ್ಯಾರ್ಥಿಗಳಿಗೆ ತಮಗೆ ಇಷ್ಟ ಬಂದ ಕಾಲೇಜು ಸಿಗೋದು ಇನ್ಮುಂದೆ ಕಷ್ಟ ಆಗಬಹುದು.
ಪೋಷಕರಿಗೆ ಮುಖ್ಯ ಮಾಹಿತಿ - ಈ ಬಾರಿ ಆಪ್ಷನ್ ಎಂಟ್ರಿ (Option Entry) ಮಾಡುವಾಗ ವಿದ್ಯಾರ್ಥಿಗಳು ಮತ್ತು ಪೋಷಕರು ನೂರಕ್ಕೆ ನೂರು ಜಾಗರೂಕರಾಗಿರಬೇಕು. ಮೊದಲ ರೌಂಡ್‌ನಲ್ಲೇ ಸಿಗುವ ಕಾಲೇಜಿಗೆ ಸೇರಲು ಮಾನಸಿಕವಾಗಿ ಸಿದ್ಧರಿರಬೇಕು. ಇಲ್ಲಾಂದ್ರೆ ನೆಕ್ಸ್ಟ್ ರೌಂಡ್‌ನಲ್ಲಿ ಒಳ್ಳೆ ಸೀಟು ಸಿಗುತ್ತೆ ಅನ್ನೋ ಗ್ಯಾರಂಟಿ ಇರೋದಿಲ್ಲ. ಎಂಜಿನಿಯರಿಂಗ್ ಮಾತ್ರವಲ್ಲದೆ ಅಗ್ರಿಕಲ್ಚರ್, ನರ್ಸಿಂಗ್, ಬಿ-ಫಾರ್ಮ್, ಆರ್ಕಿಟೆಕ್ಚರ್ ಸೇರಿದಂತೆ ಎಲ್ಲಾ ವೃತ್ತಿಪರ ಕೋರ್ಸ್‌ಗಳಿಗೂ ಇದೇ ನಿಯಮ ಅನ್ವಯ ಆಗಲಿದೆ!