Apr 1, 2026 Languages : ಕನ್ನಡ | English

ಪಿಯುಸಿ ವಿದ್ಯಾರ್ಥಿಗಳೇ ಗಮನಿಸಿ - ಈ ದಿನಾಂಕದಂದೇ ಹೊರಬೀಳಲಿದೆ ದ್ವಿತೀಯ ಪಿಯುಸಿ ರಿಸಲ್ಟ್!!

ಪಿಯುಸಿ ಪರೀಕ್ಷೆ ಬರೆದು ರಿಸಲ್ಟ್‌ಗಾಗಿ ಉಗುರು ಕಚ್ಚುತ್ತಾ ಕಾಯುತ್ತಿರುವ ವಿದ್ಯಾರ್ಥಿಗಳಿಗೆ ಒಂದು ಇಂಟರೆಸ್ಟಿಂಗ್ ಅಪ್‌ಡೇಟ್ ಇಲ್ಲಿದೆ. ಮಾರ್ಚ್ 31ರಂದು ಫಸ್ಟ್ ಪಿಯುಸಿ ರಿಸಲ್ಟ್ ಅನೌನ್ಸ್ ಆದ ಬೆನ್ನಲ್ಲೇ, ಈಗ ಎಲ್ಲರ ಕಣ್ಣು ಸೆಕೆಂಡ್ ಪಿಯುಸಿ ಫಲಿತಾಂಶದ ಮೇಲಿದೆ. ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿಯು (KSEAB) ರಿಸಲ್ಟ್ ಕೊಡಲು ಪಕ್ಕಾ ಪ್ಲಾನ್ ಮಾಡಿಕೊಂಡಿದೆ.

ಯುಗಾದಿ ಹಬ್ಬದ ಬೆನ್ನಲ್ಲೇ ಪಿಯುಸಿ ಫಲಿತಾಂಶದ ಧಮಾಕ
ಯುಗಾದಿ ಹಬ್ಬದ ಬೆನ್ನಲ್ಲೇ ಪಿಯುಸಿ ಫಲಿತಾಂಶದ ಧಮಾಕ

ಯಾವಾಗ ಬರಬಹುದು ರಿಸಲ್ಟ್?

ಸದ್ಯಕ್ಕೆ ಸಿಗುತ್ತಿರುವ ಮಾಹಿತಿ ಪ್ರಕಾರ, ಏಪ್ರಿಲ್ ಎರಡನೇ ವಾರದಲ್ಲಿ ಅಂದರೆ ಸರಿಯಾಗಿ ಏಪ್ರಿಲ್ 7 ಅಥವಾ 8ರ ಆಸುಪಾಸಿನಲ್ಲಿ ದ್ವಿತೀಯ ಪಿಯುಸಿ ಫಲಿತಾಂಶ ಹೊರಬೀಳುವ ಸಾಧ್ಯತೆ ದಟ್ಟವಾಗಿದೆ. ಮಂಡಳಿಯು ಮೊದಲು ಪ್ರೆಸ್ ಮೀಟ್ ಮಾಡಿ ರಿಸಲ್ಟ್ ಹೈಲೈಟ್ಸ್ ಹಂಚಿಕೊಳ್ಳಲಿದೆ, ಆಮೇಲೆ ನೀವು ಆನ್‌ಲೈನ್‌ನಲ್ಲಿ ನಿಮ್ಮ ಅಂಕಗಳನ್ನು ಚೆಕ್ ಮಾಡಬಹುದು.

ಆನ್‌ಲೈನ್‌ನಲ್ಲಿ ರಿಸಲ್ಟ್ ಚೆಕ್ ಮಾಡೋದು ಹೇಗೆ? (ಸಿಂಪಲ್ ಸ್ಟೆಪ್ಸ್)

ರಿಸಲ್ಟ್ ಬಂದ ತಕ್ಷಣ ಸೈಬರ್ ಸೆಂಟರ್‌ಗೆ ಓಡಬೇಕಿಲ್ಲ, ನಿಮ್ಮ ಮೊಬೈಲ್‌ನಲ್ಲೇ ಹೀಗೆ ನೋಡಿ:

  1. ಮೊದಲು ಅಧಿಕೃತ ವೆಬ್‌ಸೈಟ್ karresults.nic.in ಗೆ ಭೇಟಿ ನೀಡಿ.

  2. ಅಲ್ಲಿ ಕಾಣಿಸುವ ‘Karnataka 2nd PUC Result 2026’ ಲಿಂಕ್ ಮೇಲೆ ಕ್ಲಿಕ್ ಮಾಡಿ.

  3. ನಿಮ್ಮ ರಿಜಿಸ್ಟ್ರೇಶನ್ ನಂಬರ್ ಮತ್ತು ಹುಟ್ಟಿದ ದಿನಾಂಕವನ್ನು (Date of Birth) ಟೈಪ್ ಮಾಡಿ.

  4. ‘Submit’ ಬಟನ್ ಒತ್ತಿದರೆ ಸಾಕು, ನಿಮ್ಮ ಮಾರ್ಕ್ಸ್ ಕಾರ್ಡ್ ಸ್ಕ್ರೀನ್ ಮೇಲೆ ಬರುತ್ತೆ.

  5. ಫ್ಯೂಚರ್ ಯೂಸ್‌ಗಾಗಿ ಒಂದು ಸ್ಕ್ರೀನ್‌ಶಾಟ್ ಅಥವಾ ಪ್ರಿಂಟ್‌ಔಟ್ ತಗೆದಿಟ್ಟುಕೊಳ್ಳಿ.

ಒಂದು ವೇಳೆ ಅಂಕ ಕಡಿಮೆ ಬಂದರೆ?

ರಿಸಲ್ಟ್ ಬಂದ ಮೇಲೆ ಮಾರ್ಕ್ಸ್ ನೋಡಿ ಬೇಸರ ಮಾಡಿಕೊಳ್ಳಬೇಡಿ. ನಿಮಗೆ ಅಂಕಗಳ ಬಗ್ಗೆ ಡೌಟ್ ಇದ್ದರೆ ಮರುಮೌಲ್ಯಮಾಪನಕ್ಕೆ (Re-evaluation) ಅಪ್ಲೈ ಮಾಡೋಕೆ ಚಾನ್ಸ್ ಇರುತ್ತೆ. ಇನ್ನು ಪರೀಕ್ಷೆಯಲ್ಲಿ ಫೇಲ್ ಆದವರಿಗೆ ಅಥವಾ ಅಂಕ ಹೆಚ್ಚಿಸಿಕೊಳ್ಳಬೇಕು ಅನ್ನೋರಿಗೆ ಏಪ್ರಿಲ್ 25 ರಿಂದ ಮೇ ಮೊದಲ ವಾರದವರೆಗೆ ಪೂರಕ ಪರೀಕ್ಷೆಗಳನ್ನು ನಡೆಸಲು ಮಂಡಳಿ ತಯಾರಿ ನಡೆಸಿದೆ.

ಈ ಬಾರಿಯ ಪರೀಕ್ಷೆಯ ಹೈಲೈಟ್ಸ್

ಫೆಬ್ರವರಿ 28 ರಿಂದ ಮಾರ್ಚ್ 17ರವರೆಗೆ ನಡೆದ ಈ ಬಾರಿಯ ಪರೀಕ್ಷೆಯಲ್ಲಿ ರಾಜ್ಯಾದ್ಯಂತ ಸುಮಾರು 7 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದಾರೆ. ಒಟ್ಟು 1217 ಸೆಂಟರ್‌ಗಳಲ್ಲಿ ಎಕ್ಸಾಮ್ಸ್ ನಡೆದಿದ್ದು, ಈಗ ಎಲ್ಲರಲ್ಲೂ "ನನ್ನ ರಿಸಲ್ಟ್ ಏನಾಗಬಹುದು?" ಅನ್ನೋ ಕುತೂಹಲ ಮನೆಮಾಡಿದೆ.

ಯುಗಾದಿ ಹಬ್ಬ ಮುಗಿದ ಬೆನ್ನಲ್ಲೇ ಪಿಯುಸಿ ವಿದ್ಯಾರ್ಥಿಗಳ ಭವಿಷ್ಯದ ರಿಸಲ್ಟ್ ಹೊರಬೀಳಲಿದೆ. ಪರೀಕ್ಷೆ ಬರೆದ ಎಲ್ಲರಿಗೂ ಆಲ್ ದಿ ಬೆಸ್ಟ್!