Apr 8, 2026 Languages : ಕನ್ನಡ | English

2nd PU ರಿಸಲ್ಟ್ ಡೇಟ್ ಫಿಕ್ಸ್ - ಸಚಿವ ಮಧು ಬಂಗಾರಪ್ಪ ಅವರಿಂದ ಗ್ರೀನ್ ಸಿಗ್ನಲ್!!

ಪಿಯುಸಿ ಪರೀಕ್ಷೆ ಬರೆದು ಅಪ್ಪಿ ತಪ್ಪಿ ರಿಲ್ಯಾಕ್ಸ್ ಆಗಿದ್ದ ವಿದ್ಯಾರ್ಥಿಗಳಲ್ಲಿ ಈಗ ಮತ್ತೆ ಎದೆಬಡಿತ ಜಾಸ್ತಿಯಾಗಿದೆ. ಯಾಕಂದ್ರೆ, ಕಳೆದ ಕೆಲವು ದಿನಗಳಿಂದ "ಇವತ್ತು ಬರುತ್ತೆ, ನಾಳೆ ಬರುತ್ತೆ" ಅಂತಾ ಕಾಡುತ್ತಿದ್ದ ದ್ವಿತೀಯ ಪಿಯುಸಿ ಫಲಿತಾಂಶ (2nd PU Result 2026) ಪ್ರಕಟವಾಗುವ ದಿನಾಂಕ ಈಗ ಅಧಿಕೃತವಾಗಿ ಪಕ್ಕಾ ಆಗಿದೆ. ಹೌದು, ನಾಳೆ ಅಂದರೆ ಏಪ್ರಿಲ್ 9, ಗುರುವಾರ ನಿಮ್ಮ ಫಲಿತಾಂಶ ಹೊರಬೀಳಲಿದೆ.

7 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳ ಕಾಯುವಿಕೆಗೆ ನಾಳೆ ಅಂತ್ಯ
7 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳ ಕಾಯುವಿಕೆಗೆ ನಾಳೆ ಅಂತ್ಯ

ನಿಜ ಹೇಳ್ಬೇಕಂದ್ರೆ, ರಿಸಲ್ಟ್ ಇವತ್ತೇ ಬರಬೇಕಿತ್ತು. ಆದರೆ ಕೆಲವು ತಾಂತ್ರಿಕ ಕಾರಣಗಳು ಹಾಗೂ ಉಪಚುನಾವಣೆಯ ಗಡಿಬಿಡಿಯಿಂದಾಗಿ ಒಂದು ದಿನ ಮುಂದೂಡಲ್ಪಟ್ಟಿದೆ. ಈಗ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು ಗ್ರೀನ್ ಸಿಗ್ನಲ್ ಕೊಟ್ಟಿದ್ದು, ನಾಳೆ ಸಂಜೆಯ ಹೊತ್ತಿಗೆ ವಿದ್ಯಾರ್ಥಿಗಳ ಭವಿಷ್ಯ ನಿರ್ಧಾರವಾಗಲಿದೆ.

ಫಲಿತಾಂಶ ಯಾಕೆ ಲೇಟ್ ಆಯ್ತು?

ನಿಮಗೆಲ್ಲ ಗೊತ್ತಿರೋ ಹಾಗೆ, ಈ ಬಾರಿ ಮೌಲ್ಯಮಾಪನ ಕೆಲಸಗಳು ತುಂಬಾನೇ ಚುರುಕಾಗಿ ನಡೆದಿದ್ದವು. ಆದರೆ ಕೊನೆಯ ಕ್ಷಣದಲ್ಲಿ ದಾವಣಗೆರೆ ದಕ್ಷಿಣ ಹಾಗೂ ಬಾಗಲಕೋಟೆ ಉಪಚುನಾವಣೆಯ ಮತದಾನ ಇರುವುದರಿಂದ, ಸಚಿವರು ಅತ್ತ ಬಿಜಿಯಾಗಿದ್ದಾರೆ. ಹಾಗಾಗಿ, ಮತದಾನ ಮುಗಿದ ನಂತರ ಅಂದರೆ ನಾಳೆ ಸಂಜೆ ಸುದ್ದಿಗೋಷ್ಠಿ ನಡೆಸಿ ಅಧಿಕೃತವಾಗಿ ಫಲಿತಾಂಶ ಬಿಡುಗಡೆ ಮಾಡಲಿದ್ದಾರೆ. ಜೊತೆಗೆ ಮೌಲ್ಯಮಾಪನದ ಸಣ್ಣಪುಟ್ಟ ಕೆಲಸಗಳು ಬಾಕಿ ಇದ್ದ ಕಾರಣ ಮಂಡಳಿ ಅಧ್ಯಕ್ಷರಾದ ಪ್ರಕಾಶ್ ಅವರು ಫಲಿತಾಂಶವನ್ನು ಏಪ್ರಿಲ್ 9ಕ್ಕೆ ಫಿಕ್ಸ್ ಮಾಡಿದ್ದಾರೆ.

ರಿಸಲ್ಟ್ ಎಲ್ಲಿ ಮತ್ತು ಹೇಗೆ ನೋಡುವುದು?

ಫಲಿತಾಂಶ ನೋಡಲು ನೀವು ಇಂಟರ್ನೆಟ್ ಕೆಫೆಗಳಿಗೆ ಅಲೆಯಬೇಕಿಲ್ಲ. ನಿಮ್ಮ ಕೈಯಲ್ಲಿರುವ ಮೊಬೈಲ್‌ನಲ್ಲೇ ಸುಲಭವಾಗಿ ಚೆಕ್ ಮಾಡಬಹುದು.

ಮೊದಲು ಅಧಿಕೃತ ವೆಬ್‌ಸೈಟ್ karresults.nic.in ಗೆ ಭೇಟಿ ನೀಡಿ.

ಅಲ್ಲಿ ಕೇಳಲಾದ ಜಾಗದಲ್ಲಿ ನಿಮ್ಮ ನೋಂದಣಿ ಸಂಖ್ಯೆ (Registration Number) ಟೈಪ್ ಮಾಡಿ.

ನಿಮ್ಮ ಹುಟ್ಟಿದ ದಿನಾಂಕವನ್ನು (DOB) ನಮೂದಿಸಿ.

'Submit' ಕೊಟ್ಟರೆ ನಿಮ್ಮ ಅಂಕಪಟ್ಟಿ ಸ್ಕ್ರೀನ್ ಮೇಲೆ ಕಾಣಿಸುತ್ತದೆ.

ವಿಶೇಷ ಸೂಚನೆ: ಈ ಬಾರಿ ಮಂಡಳಿಯು ಡಿಜಿ ಲಾಕರ್ (DigiLocker) ಮೂಲಕವೂ ರಿಸಲ್ಟ್ ನೋಡಲು ಅವಕಾಶ ಮಾಡಿಕೊಟ್ಟಿದೆ. ಇದರಿಂದಾಗಿ ಪ್ರತಿ ವರ್ಷ ರಿಸಲ್ಟ್ ಬಂದಾಗ ವೆಬ್‌ಸೈಟ್ ಹ್ಯಾಂಗ್ ಆಗುವ ಅಥವಾ ಸರ್ವರ್ ಸ್ಲೋ ಆಗುವ ಕಿರಿಕಿರಿ ಈ ಬಾರಿ ಇರುವುದಿಲ್ಲ ಅಂತ ನಿರ್ದೇಶಕ ಎಚ್.ಎನ್. ಗೋಪಾಲಕೃಷ್ಣ ಅವರು ಭರವಸೆ ನೀಡಿದ್ದಾರೆ.

ಈ ಬಾರಿಯ ಪರೀಕ್ಷೆಯ ಒಂದು ನೋಟ

ಈ ವರ್ಷ ಒಟ್ಟು 7,10,363 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದಾರೆ. ಫೆಬ್ರವರಿ 28 ರಿಂದ ಮಾರ್ಚ್ 17 ರವರೆಗೆ ರಾಜ್ಯದ 1217 ಕೇಂದ್ರಗಳಲ್ಲಿ ಪರೀಕ್ಷೆಗಳು ಸುಸೂತ್ರವಾಗಿ ನಡೆದಿದ್ದವು. ಕಳೆದ ವರ್ಷ (2025) ಒಟ್ಟು ಶೇ. 73.45 ರಷ್ಟು ಫಲಿತಾಂಶ ಬಂದಿತ್ತು. ಈ ಬಾರಿ ಈ ದಾಖಲೆ ಮುರಿಯುತ್ತಾ? ಅಥವಾ ವಿದ್ಯಾರ್ಥಿಗಳು ಅದಕ್ಕಿಂತ ಹೆಚ್ಚಿನ ಸಾಧನೆ ಮಾಡುತ್ತಾರಾ ಅನ್ನೋದನ್ನ ಕಾದು ನೋಡಬೇಕು.

ರಿಸಲ್ಟ್ ಅನ್ನೋದು ಜೀವನದ ಒಂದು ಸಣ್ಣ ಹಂತವಷ್ಟೇ. ಅಂಕಗಳು ಸ್ವಲ್ಪ ಹೆಚ್ಚು ಕಡಿಮೆ ಆದರೂ ಎದೆಗುಂದಬೇಡಿ. ಸೋಲು-ಗೆಲುವು ಏನೇ ಇರಲಿ, ಅದನ್ನು ಸಮಾನವಾಗಿ ಸ್ವೀಕರಿಸಿ ಮುಂದಿನ ಗುರಿಯತ್ತ ಗಮನಹರಿಸಿ. ಎಲ್ಲಾ ಪಿಯುಸಿ ವಿದ್ಯಾರ್ಥಿಗಳಿಗೂ ಶುಭವಾಗಲಿ!