ಹೆಂಡತಿಗೆ ಕೈ ಕೊಟ್ಟು ಅತ್ತೆಯನ್ನೇ ಮದುವೆಯಾದ ಅಳಿಯ - ಕಾನ್ಪುರ ಅಳಿಯ-ಅತ್ತೆಯ ವಿಚಿತ್ರ ಲವ್ ಸ್ಟೋರಿ ಸೋಶಿಯಲ್ ಮೀಡಿಯಾದಲ್ಲಿ ವೈರಲ್!!

ಸೋಶಿಯಲ್ ಮೀಡಿಯಾ ಅನ್ನೋದು ದಿನಕ್ಕೊಂದು ವಿಚಿತ್ರ ಸುದ್ದಿಗಳ ಗೂಡು. ಆದರೆ ಈಗ ಉತ್ತರ ಪ್ರದೇಶದ ಕಾನ್ಪುರ ದೇಹತ್ ಜಿಲ್ಲೆಯಿಂದ ಬಂದಿರೋ ಒಂದು ಸುದ್ದಿ ಮಾತ್ರ ನೆಟ್ಟಿಗರ ತಲೆ ತಿರುಗುವಂತೆ ಮಾಡಿದೆ. ಹೆಂಡತಿಯನ್ನು ಬಿಟ್ಟು ತನ್ನ ಅತ್ತೆಯನ್ನೇ ಅಳಿಯ ಮದುವೆಯಾಗಿದ್ದಾನೆ ಅನ್ನೋ ಸುದ್ದಿ ಈಗ ಇಂಟರ್ನೆಟ್‌ನಲ್ಲಿ ಸಿಕ್ಕಾಪಟ್ಟೆ ಸೌಂಡ್ ಮಾಡ್ತಾ ಇದೆ!

ಹಳಿ ತಪ್ಪಿದ ಫ್ಯಾಮಿಲಿ ಟ್ರೀ | Photo Credit: https://x.com/thetatvaindia
ಹಳಿ ತಪ್ಪಿದ ಫ್ಯಾಮಿಲಿ ಟ್ರೀ | Photo Credit: https://x.com/thetatvaindia

ಕಾನ್ಪುರ ದೇಹತ್‌ನ ಅಕ್ಬರ್‌ಪುರ ಎಂಬ ಪ್ರದೇಶದಲ್ಲಿ ಈ ವಿಚಿತ್ರ ಘಟನೆ ನಡೆದಿದೆ ಎಂದು ಹೇಳಲಾಗುತ್ತಿದ್ದು, ಇದನ್ನು ಕೇಳಿ ಜನ ಶಾಕ್ ಆಗಿದ್ದಾರೆ. ಕೆಲವರು ನಕ್ಕರೆ, ಇನ್ನು ಕೆಲವರು ‘ಇದೇನಪ್ಪಾ ಕಲಿಯುಗ!’ ಅಂತ ಉಗುಳುತ್ತಿದ್ದಾರೆ. ಈ ಜೋಡಿಯ ವಿಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುವುದರಿಂದ ಈ ಸುದ್ದಿ ಇನ್ನಷ್ಟು ವೈರಲ್ ಆಗಿದೆ.

ವಿಡಿಯೋದಲ್ಲಿ ಏನಿದೆ? ಕೋರ್ಟ್ ಮ್ಯಾರೇಜ್ ಮಾಡಿಕೊಂಡ ಜೋಡಿ!

ವೈರಲ್ ಆಗಿರೋ ವಿಡಿಯೋದಲ್ಲಿ, ಈ ವಿಚಿತ್ರ ಜೋಡಿ ಕೈಯಲ್ಲಿ ಕೋರ್ಟ್ ಮ್ಯಾರೇಜ್ ಮಾಡಿಕೊಂಡಿರೋ ಮದುವೆ ಸರ್ಟಿಫಿಕೇಟ್ ಹಿಡಿದುಕೊಂಡು ನಿಂತಿದ್ದಾರೆ. "ನಮ್ಮಿಬ್ಬರ ಸಂಬಂಧವನ್ನು ದಯವಿಟ್ಟು ಎಲ್ಲರೂ ಒಪ್ಪಿಕೊಳ್ಳಿ, ನಮಗೆ ಆಶೀರ್ವಾದ ಮಾಡಿ" ಅಂತ ಸಾರ್ವಜನಿಕರಲ್ಲಿ ಕೇಳಿಕೊಳ್ಳುತ್ತಿದ್ದಾರೆ.

ವರದಿಗಳ ಪ್ರಕಾರ, ಮಗಳ ಮದುವೆಯಾದ ಮೇಲೆ ಈ ಅಳಿಯ ಮತ್ತು ಅತ್ತೆಯ ನಡುವೆ ಆತ್ಮೀಯತೆ ಬೆಳೆದಿತ್ತಂತೆ. ದಿನಕಳೆದಂತೆ ಇವರ ಲವ್ ಸ್ಟೋರಿ ಸೀರಿಯಸ್ ಆಗಿ ಬದಲಾಗಿದೆ. ಕೊನೆಗೆ ಅಳಿಯ ತನ್ನ ಹೆಂಡತಿಯಿಂದ (ಅಂದರೆ ಅತ್ತೆಯ ಮಗಳಿಂದ) ದೂರವಾಗಿ, ನೇರವಾಗಿ ಕೋರ್ಟ್‌ಗೆ ಹೋಗಿ ಅತ್ತೆಯನ್ನೇ ಮದುವೆಯಾಗಿದ್ದಾನೆ! ಇಷ್ಟೆಲ್ಲಾ ಗದ್ದಲ ನಡೆಯುತ್ತಿದ್ದರೂ, ಪೊಲೀಸರಿಗೆ ಈವರೆಗೆ ಯಾವುದೇ ಅಧಿಕೃತ ದೂರು ಬಂದಿಲ್ಲವಂತೆ. ಹಾಗಾಗಿ ಯಾವುದೇ ಕಾನೂನು ಕ್ರಮ ಜರುಗಿಸಿಲ್ಲ.

ಇಂಟರ್ನೆಟ್‌ನಲ್ಲಿ ಮೀಮ್ಸ್ ಹಬ್ಬ: ನೆಟ್ಟಿಗರ ಕಾಮೆಂಟ್‌ಗಳು ಭರ್ಜರಿ ಕಾಮಿಡಿ!

ಈ ವಿಚಿತ್ರ ಪ್ರೇಮಕಥೆ ಸಿಕ್ಕಿದ್ದೇ ತಡ, ಸೋಶಿಯಲ್ ಮೀಡಿಯಾ ಮಂದಿ ಸುಮ್ಮನೆ ಇರ್ತಾರಾ? ಮೀಮ್ಸ್ ಕ್ರಿಯೇಟರ್ಸ್‌ಗೆ ಹಬ್ಬ ಆಚರಿಸುವಷ್ಟು ಕಂಟೆಂಟ್ ಸಿಕ್ಕಂತಾಗಿದೆ. ತರಹೇವಾರಿ ಜೋಕ್ಸ್ ಮತ್ತು ಕಾಮೆಂಟ್‌ಗಳು ಹರಿದು ಬರುತ್ತಿವೆ.

ಒಬ್ಬ ನೆಟ್ಟಿಗ ಬರೆದಿದ್ದಾನೆ: "ಅವತ್ತು ಕೋರ್ಟ್ ಕ್ಲರ್ಕ್ ಬೆಳಿಗ್ಗೆ ಆಫೀಸಿಗೆ ಬರುವಾಗ ಜಸ್ಟ್ ಪೇಪರ್ ವರ್ಕ್ ಇರುತ್ತೆ ಅನ್ಕೊಂಡಿರ್ತಾರೆ. ಆದ್ರೆ ಅವರಿಗೆ ಅಡ್ವಾನ್ಸ್ ಜಿಯೋಮೆಟ್ರಿ ಲೆವೆಲ್‌ನ ಫ್ಯಾಮಿಲಿ ಡಯಾಗ್ರಾಮ್ ಸಿಗುತ್ತೆ ಅಂತ ಅನ್ಕೊಂಡಿರಲ್ಲ! ಈ ಫ್ಯಾಮಿಲಿ ಟ್ರೀ ಉಲ್ಟಾ ತಿರುಗಿ ತನಗೆ ತಾನೇ ಮರ್ಜ್ ಆಗ್ಬಿಟ್ಟಿದೆ!"

ಇನ್ನೊಬ್ಬ ಯೂಸರ್ ಟ್ವೀಟ್ ಮಾಡಿದ್ದಾರೆ: "ಒಬ್ಬ ಮನುಷ್ಯ ತನ್ನ ಅತ್ತೆಯನ್ನೇ ಮದುವೆಯಾದ. ಈಗ ಅವನ ಹಳೇ ಹೆಂಡತಿ ಅವನನ್ನು 'ಅಪ್ಪ' ಅನ್ಬೇಕಾ? ಅವನ ಮಕ್ಕಳು ಆಕೆಯನ್ನು 'ಅಜ್ಜಿ-ಹೆಂಡತಿ' ಅನ್ಬೇಕಾ? ಫ್ಯಾಮಿಲಿ ಟ್ರೀ ಈಗ ಫ್ಯಾಮಿಲಿ ಪ್ರೆಟ್ಜೆಲ್ (Pretzel) ತರ ಸಿಕ್ಕಾಪಟ್ಟೆ ಕಾಂಪ್ಲಿಕೇಟ್ ಆಗಿದೆ!"

ಮತ್ತೊಬ್ಬ ಕಾಮೆಂಟಿಗಾರ: "ಮನೆಯಲ್ಲಿ ಮಗು ಯೋಚನೆ ಮಾಡ್ತಾ ಇರಬಹುದು... ಆಕೆಗೆ ಅಜ್ಜಿ ಅನ್ಬೇಕಾ, ಸಾಕುತಾಯಿ ಅನ್ಬೇಕಾ ಅಥವಾ ಜಸ್ಟ್ ‘ಗುಡ್ ಮಾರ್ನಿಂಗ್’ ಅನ್ಬೇಕಾ ಅಂತ!"

ಇನ್ನೊಬ್ಬರು ಕ್ಲಾಸಿಕ್ ಆಗಿ ಕಾಮೆಂಟ್ ಮಾಡಿದ್ದಾರೆ: "ಇವರು ‘ಕಾಲ್ ಮಿ ಡ್ಯಾಡಿ’ ಅನ್ನೋ ಡೈಲಾಗ್ ಅನ್ನು ಅತಿಯಾಗಿ ಸೀರಿಯಸ್ ಆಗಿ ತಗೊಂಡಿದ್ದಾರೆ ಅನಿಸುತ್ತೆ!"

‘ಘೋರ ಕಲಿಯುಗ’ ಅಂತ ಉರಿದುಬಿದ್ದ ಜನ!

ಒಂದೆಡೆ ಜೋಕ್ಸ್ ನಡೀತಾ ಇದ್ರೆ, ಇನ್ನೊಂದೆಡೆ ಸಾರ್ವಜನಿಕರು ಈ ಜೋಡಿಯ ವಿರುದ್ಧ ತೀವ್ರ ಆಕ್ರೋಶ ಹೊರಹಾಕಿದ್ದಾರೆ. ಕೌಟುಂಬಿಕ ಮೌಲ್ಯಗಳನ್ನು ಗಾಳಿಗೆ ತೂರಿದ ಇವರ ನಡೆಗೆ ತೀವ್ರ ವಿರೋಧ ವ್ಯಕ್ತವಾಗಿದೆ.

ಒಬ್ಬ ಮಹಿಳಾ ನೆಟ್ಟಿಗರು ಕಾಮೆಂಟ್ ಮಾಡಿ, "ಗಂಡಸರು ಹದಗೆಡುವುದು ಹೊಸದೇನಲ್ಲ, ಆದರೆ ಆ ತಾಯಿಗೆ ಏನಾಗಿದೆ? ತನ್ನದೇ ಹೆತ್ತ ಮಗಳ ಜೀವನವನ್ನು ಹಾಳು ಮಾಡಲು ಆಕೆಗೆ ಹೇಗೆ ಮನಸ್ಸು ಬಂತು?" ಎಂದು ಪ್ರಶ್ನಿಸಿದ್ದಾರೆ. ಇನ್ನು ಕೆಲವರು, "ಇದು ಒಬ್ಬ ತಾಯಿ ತನ್ನ ಮಗಳಿಗೆ ಮಾಡಬಹುದಾದ ಅತಿ ದೊಡ್ಡ ದ್ರೋಹ. ಘೋರ ಕಲಿಯುಗ ಅಂದ್ರೆ ಇದೇ. ಸಮಾಜ ಹಾಳಾಗಿ ಹೋಗ್ತಿದೆ" ಎಂದು ಕಳವಳ ವ್ಯಕ್ತಪಡಿಸಿದ್ದಾರೆ. ಹಳೆಯ ಫೇಮಸ್ ಹಿಂದಿ ಸೀರಿಯಲ್ ಹೆಸರಾದ "ಯೇ ರಿಶ್ತಾ ಕ್ಯಾ ಕೆಹ್ಲಾತಾ ಹೈ?" (ಈ ಸಂಬಂಧಕ್ಕೆ ಏನೆಂದು ಹೆಸರಿಡಲಿ?) ಅಂತನೂ ಜನ ರೇಗಿಸುತ್ತಿದ್ದಾರೆ.

ಸದ್ಯಕ್ಕಂತೂ ಈ ಮದುವೆಯ ಬಗ್ಗೆ ಯಾವುದೇ ಅಧಿಕೃತ ಸರ್ಕಾರಿ ಮೂಲಗಳಿಂದ ಖಚಿತ ಮಾಹಿತಿ ಸಿಕ್ಕಿಲ್ಲ. ಆದರೂ, ಡಿಜಿಟಲ್ ಜಮಾನಾದಲ್ಲಿ ಈ ಅಳಿಯ-ಅತ್ತೆಯ ವಿಚಿತ್ರ ಮದುವೆ ಸುದ್ದಿ ಮಾತ್ರ ಸೋಷಿಯಲ್ ಮೀಡಿಯಾದಲ್ಲಿ ಇಡೀ ದೇಶಾದ್ಯಂತ ಭಾರಿ ಚರ್ಚೆಗೆ ಗ್ರಾಸವಾಗಿದೆ.

Latest News