ರೈಲಿನಲ್ಲಿ ಸಮೋಸ ಬುಟ್ಟಿ ಮೇಲೆ ಬರಿಗಾಲಿಟ್ಟು ಕುಳಿತಿದ್ದ ವ್ಯಾಪಾರಿ - ವಿಡಿಯೋ ನೋಡಿ ಜನ ಫುಲ್ ಗರಂ!

ನಮ್ಮ ದೇಶದಲ್ಲಿ ಟ್ರೈನ್ ಜರ್ನಿ ಅಂದ್ರೆ ಅದೊಂಥರಾ ಕನೆಕ್ಷನ್. ಲಾಂಗ್ ಜರ್ನಿ ಹೊರಟಾಗ ಟ್ರೈನ್‌ನಲ್ಲಿ ಬರೋ ಸಮೋಸ, ಚಹಾ, ವಡಾಪಾವ್ ತಿನ್ನುತ್ತಾ ಹೋಗೋ ಮಜಾನೇ ಬೇರೆ. ಆದ್ರೆ, ಸೋಶಿಯಲ್ ಮೀಡಿಯಾದಲ್ಲಿ ಇವತ್ತು (ಮೇ 27) ಹೊರಬಿದ್ದಿರೋ ಒಂದು ಶಾಕಿಂಗ್ ವಿಡಿಯೋ ನೋಡಿದ್ರೆ, ಇನ್ಮುಂದೆ ನೀವು ಟ್ರೈನ್‌ನಲ್ಲಿ ಯಾವುದೇ ಫುಡ್ ಮುಟ್ಟೋಕು ಮುಂಚೆ ಹತ್ತು ಸಲ ಯೋಚನೆ ಮಾಡ್ತೀರಾ!

IRCTC ತಕ್ಷಣದ ಆಕ್ಷನ್: ತನಿಖೆಗೆ ಆದೇಶ ; | Photo Credit: https://x.com/The_Senapati
IRCTC ತಕ್ಷಣದ ಆಕ್ಷನ್: ತನಿಖೆಗೆ ಆದೇಶ ; | Photo Credit: https://x.com/The_Senapati

ಚಲಿಸುತ್ತಿದ್ದ ರೈಲಿನ ಬೋಗಿಯೊಂದರಲ್ಲಿ ಅನಧಿಕೃತ ಫುಡ್ ವೆಂಡರ್ (ರೈಲ್ವೇ ಇಲಾಖೆಯ ಪರ್ಮಿಷನ್ ಇಲ್ಲದ ವ್ಯಾಪಾರಿ) ಒಬ್ಬ ತಾನು ಮಾರಾಟ ಮಾಡಲು ತಂದಿದ್ದ ಸಮೋಸ ಮತ್ತು ಸ್ನ್ಯಾಕ್ಸ್ ಬುಟ್ಟಿಯ ಮೇಲೆಯೇ ನೇರವಾಗಿ ತನ್ನ ಬರಿಗಾಲುಗಳನ್ನು ಇಟ್ಟುಕೊಂಡು ಆರಾಮಾಗಿ ಕೂತಿದ್ದಾನೆ. ಈ ವಿಡಿಯೋ ಸದ್ಯಕ್ಕೆ ಇಂಟರ್ನೆಟ್‌ನಲ್ಲಿ ಭಾರಿ ಸಂಚಲನ ಸೃಷ್ಟಿಸಿದ್ದು, ಜನರ ಆಕ್ರೋಶಕ್ಕೆ ಕಾರಣವಾಗಿದೆ.

ವಾಶ್‌ಬೇಸಿನ್ ಹತ್ತಿರನೇ ಇತ್ತಾ ಸಮೋಸ ಬುಟ್ಟಿ? ಅಸಲಿ ಕತೆ ಇಲ್ಲಿದೆ:

ವೈರಲ್ ಆಗಿರೋ ಕ್ಲಿಪ್‌ನಲ್ಲಿ ಏನಿದೆ ಅಂದ್ರೆ, ಟ್ರೈನ್‌ನ ವಾಶ್‌ಬೇಸಿನ್ (ಕೈ ತೊಳೆಯೋ ಜಾಗ) ಹತ್ತಿರನೇ ಈ ಸಮೋಸ ಬುಟ್ಟಿಯನ್ನು ಇಡಲಾಗಿದೆ. ಅದರ ಪಕ್ಕದಲ್ಲೇ ಕೂತಿರೋ ಆ ವ್ಯಾಪಾರಿ, ತನ್ನ ಎರಡು ಕೊಳಕು ಕಾಲುಗಳನ್ನು ಓಪನ್ ಆಗಿರೋ ಆ ತಿಂಡಿ ಬುಟ್ಟಿಯ ಮೇಲೆಯೇ ಇಟ್ಟುಕೊಂಡಿದ್ದಾನೆ. ಅಷ್ಟು ಮಾತ್ರವಲ್ಲ, ಆ ತಿಂಡಿಗಳನ್ನು ಮುಚ್ಚೋಕೆ ಕನಿಷ್ಠ ಒಂದು ಪ್ಲಾಸ್ಟಿಕ್ ಅಥವಾ ಬಟ್ಟೆಯನ್ನು ಕೂಡ ಬಳಸಿಲ್ಲ.

ಇದನ್ನು ನೋಡಿದ ಪ್ಯಾಸೆಂಜರ್ ಒಬ್ಬರು ತಕ್ಷಣ ತಮ್ಮ ಮೊಬೈಲ್‌ನಲ್ಲಿ ವಿಡಿಯೋ ರೆಕಾರ್ಡ್ ಮಾಡಿ ಟ್ವಿಟ್ಟರ್ (X) ನಲ್ಲಿ ಪೋಸ್ಟ್ ಮಾಡಿದ್ದಾರೆ. "ನಾವು ದುಡ್ಡು ಕೊಟ್ಟು ತಿನ್ನೋದು ಇಂಥ ಕೊಳಕು ಫುಡ್ ಅನ್ನಾ? ರೈಲ್ವೇ ಇಲಾಖೆಯಲ್ಲಿ ಹೈಜೀನ್ ಮತ್ತು ಫುಡ್ ಸೇಫ್ಟಿ ಎಲ್ಲಿ ಹೋಗಿದೆ?" ಅಂತ ನೆಟ್ಟಿಗರು ಇಂಡಿಯನ್ ರೈಲ್ವೇಸ್‌ಗೆ ಟ್ಯಾಗ್ ಮಾಡಿ ಸರಿಯಾಗಿ ಕ್ಲಾಸ್ ತಗೋತಿದ್ದಾರೆ.

ಐಆರ್‌ಸಿಟಿಸಿ (IRCTC) ತಕ್ಷಣದ ರಿಯಾಕ್ಷನ್ ಏನು?

ವಿಡಿಯೋ ವೈರಲ್ ಆಗಿ ಸಾರ್ವಜನಿಕರಿಂದ ಭಾರಿ ಆಕ್ರೋಶ ವ್ಯಕ್ತವಾಗುತ್ತಿದ್ದಂತೆ, ರೈಲ್ವೇ ಕೆಟರಿಂಗ್ ವಿಭಾಗವಾದ ಐಆರ್‌ಸಿಟಿಸಿ (IRCTC) ಎಚ್ಚೆತ್ತುಕೊಂಡಿದೆ. ತಕ್ಷಣ ಈ ಬಗ್ಗೆ ತನಿಖೆ ನಡೆಸಿರೋ ಅಧಿಕಾರಿಗಳು ಕೆಲವು ಪ್ರಮುಖ ವಿಷಯಗಳನ್ನು ಸ್ಪಷ್ಟಪಡಿಸಿದ್ದಾರೆ:

ಅನಧಿಕೃತ ವ್ಯಾಪಾರಿ - ಈ ರೀತಿ ಸಮೋಸ ಮಾರುತ್ತಿದ್ದ ವ್ಯಕ್ತಿ ರೈಲ್ವೇ ಇಲಾಖೆಯಿಂದ ಅಧಿಕೃತ ಪರವಾನಗಿ ಪಡೆದವನಲ್ಲ (Unauthorized Vendor). ಇವರು ಕದ್ದುಮುಚ್ಚಿ ಟ್ರೈನ್ ಒಳಗಡೆ ಬಂದು ಬ್ಯುಸಿನೆಸ್ ಮಾಡ್ತಿದ್ದಾರೆ ಎಂದು ಹೇಳಿದ್ದಾರೆ.

ಅಧಿಕಾರಿಗಳಿಗೆ ಸೂಚನೆ - ಈ ಘಟನೆ ಬಗ್ಗೆ ಸಂಬಂಧಪಟ್ಟ ರೈಲ್ವೇ ಭದ್ರತಾ ಪಡೆ (RPF) ಮತ್ತು ಸ್ಥಳೀಯ ಅಧಿಕಾರಿಗಳಿಗೆ ಮಾಹಿತಿ ನೀಡಲಾಗಿದ್ದು, ಆ ಲೀಗಲ್ ಆಕ್ಷನ್ ತಗೋತೀವಿ ಅಂದಿದ್ದಾರೆ.

ಸರ್ವೀಸ್ ಪ್ರೊವೈಡರ್‌ಗೆ ಎಚ್ಚರಿಕೆ - ಟ್ರೈನ್‌ನಲ್ಲಿರೋ ಅಧಿಕೃತ ಕೆಟರಿಂಗ್ ಸಿಬ್ಬಂದಿಗೆ ವಾರ್ನಿಂಗ್ ನೀಡಲಾಗಿದ್ದು, ಇನ್ಮುಂದೆ ಟ್ರೈನ್ ಒಳಗೆ ಇಂಥ ಯಾರಾದರೂ ಅನಧಿಕೃತ ವ್ಯಾಪಾರಿಗಳು ಕಂಡರೆ ತಕ್ಷಣ ಕಂಪ್ಲೇಂಟ್ ಮಾಡಬೇಕು ಮತ್ತು ಫುಡ್ ಸೇಫ್ಟಿ ಸ್ಟ್ಯಾಂಡರ್ಡ್ಸ್ ಅನ್ನು ಕಡ್ಡಾಯವಾಗಿ ಮೇಂಟೇನ್ ಮಾಡಬೇಕು ಎಂದು ಕಟ್ಟುನಿಟ್ಟಿನ ಆರ್ಡರ್ ಹಾಕಿದ್ದಾರೆ.

ಈ ವಿಡಿಯೋ ನೋಡಿದ ಮೇಲೆ ಸಾಮಾನ್ಯ ಜನರಿಗೆ ಮಾತ್ರವಲ್ಲದೆ ನಿಯಮಿತವಾಗಿ ಟ್ರೈನ್‌ನಲ್ಲಿ ಓಡಾಡೋ ಪ್ರತಿಯೊಬ್ಬರಿಗೂ ತಲೆ ಕೆಟ್ಟಿದೆ. ಭಾರತೀಯ ರೈಲ್ವೇಯಲ್ಲಿ ಹೈಜೀನ್ (ಸ್ವಚ್ಛತೆ) ಸಮಸ್ಯೆ ಇವತ್ತಿನದ್ದಲ್ಲ, ತುಂಬಾ ವರ್ಷಗಳಿಂದಲೂ ಇಂಥ ಕಂಪ್ಲೇಂಟ್‌ಗಳು ಬರ್ತಾನೆ ಇವೆ.

ಸೋಶಿಯಲ್ ಮೀಡಿಯಾದಲ್ಲಿ ಜನ "ನಾವು ಇನ್ಮುಂದೆ ಯಾವುದೇ ಕಾರಣಕ್ಕೂ ಟ್ರೈನ್ ಒಳಗಡೆ ಇರೋ ಫುಡ್ ಆರ್ಡರ್ ಮಾಡಲ್ಲ, ಮನೆಯಿಂದಲೇ ಬುತ್ತಿ ಕಟ್ಕೊಂಡು ಹೋಗ್ತೀವಿ" ಅಂತ ಶಪಥ ಮಾಡ್ತಿದ್ದಾರೆ. ಇನ್ನು ಕೆಲವರು, "ಬರೀ ಪ್ರಾಮಿಸ್ ಮಾಡೋದಲ್ಲ, ಟ್ರೈನ್ ಒಳಗೆ ಇಂಥವರು ಹೇಗೆ ಬರ್ತಾರೆ? ಸೆಕ್ಯೂರಿಟಿ ಇಲ್ವಾ? ಇಂಥವರ ಮೇಲೆ ಕಠಿಣ ಕಾನೂನು ಕ್ರಮ ತಗೋಬೇಕು" ಅಂತ ಡಿಮ್ಯಾಂಡ್ ಮಾಡ್ತಿದ್ದಾರೆ.

ಹೈದರಾಬಾದ್ ಏರ್‌ಪೋರ್ಟ್‌ನಲ್ಲಿ ನಾಯಿ ಎಂಜಲು ತಿಂದ ಘಟನೆ ಮಾಸುವ ಮುನ್ನವೇ, ಈಗ ಟ್ರೈನ್‌ನಲ್ಲಿ ಸಮೋಸದ ಮೇಲೆ ಕಾಲಿಟ್ಟಿರೋ ಈ ವಿಡಿಯೋ ದೇಶದ ಜನರನ್ನು ಮತ್ತಷ್ಟು ಚಿಂತೆಗೀಡು ಮಾಡಿದೆ. ನಾವು ದಿನಾ ತಿನ್ನೋ ಹೊರಗಿನ ಫುಡ್ ಎಷ್ಟು ಸೇಫ್ ಅನ್ನೋದು ದೊಡ್ಡ ಪ್ರಶ್ನೆಯಾಗಿದೆ. ಟ್ರೈನ್‌ಗಳಲ್ಲಿ ಈ ತರಹದ ಬೇಜವಾಬ್ದಾರಿತನಕ್ಕೆ ಬ್ರೇಕ್ ಹಾಕೋದು ಹೇಗೆ? ಮುಂದಿನ ಸಲ ಟ್ರೈನ್‌ನಲ್ಲಿ ತಿಂಡಿ ತಗೊಳೋ ಮುನ್ನ ಒಮ್ಮೆ ಯೋಚಿಸಿ!