Apr 5, 2026 Languages : ಕನ್ನಡ | English

ಸೇತುವೆ ಕೆಳಗೆ ಶುರುವಾದ ದೌರ್ಜನ್ಯ ಮನೆ ನುಗ್ಗುವ ಹಂತಕ್ಕೆ - ಹುಬ್ಬಳ್ಳಿ ಕಿರಾತಕನ ಕರಾಳ ಕಥೆ ಇಲ್ಲಿದೆ!!

ಹುಬ್ಬಳ್ಳಿಯಲ್ಲಿ ಇತ್ತೀಚಿನ ದಿನಗಳಲ್ಲಿ ಸರಣಿ ಅಪರಾಧ ಪ್ರಕರಣಗಳು ವರದಿಯಾಗುತ್ತಿದ್ದು, ಇದೀಗ ಮತ್ತೊಂದು ಲವ್ ಜಿಹಾದ್ ಆರೋಪ ಕೇಳಿಬಂದಿದೆ. ಮುಸ್ಲಿಂ ಯುವಕನೊಬ್ಬ ಹಿಂದೂ ಯುವತಿಯನ್ನು ಪ್ರೀತಿಯ ಹೆಸರಲ್ಲಿ ನಂಬಿಸಿ, ಆಕೆಯನ್ನು ದೈಹಿಕವಾಗಿ ಬಳಸಿಕೊಂಡು, ವಿಡಿಯೋ ಮಾಡಿ ಬ್ಲ್ಯಾಕ್‌ಮೇಲ್ ಮಾಡಿರುವ ಕರಾಳ ಘಟನೆ ಬಯಲಾಗಿದೆ. ಈ ಸಂಬಂಧ ನಗರದ ಕೇಶ್ವಾಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಹುಬ್ಬಳ್ಳಿ ಸಂತ್ರಸ್ತೆಯ ಧೈರ್ಯದ ನಿರ್ಧಾರ ಈಗ ರಾಜ್ಯಾದ್ಯಂತ ಚರ್ಚೆ
ಹುಬ್ಬಳ್ಳಿ ಸಂತ್ರಸ್ತೆಯ ಧೈರ್ಯದ ನಿರ್ಧಾರ ಈಗ ರಾಜ್ಯಾದ್ಯಂತ ಚರ್ಚೆ

ಪರಿಚಯ ಪ್ರೇಮವಾಗಿ ಬದಲಾಗಿದ್ದು ಹೇಗೆ?

ಈ ಕಥೆ ಶುರುವಾಗಿದ್ದು ಐದು ವರ್ಷಗಳ ಹಿಂದೆ. ಆಗ ಸಂತ್ರಸ್ತ ಯುವತಿ ಕಾಲೇಜು ವಿದ್ಯಾರ್ಥಿನಿಯಾಗಿದ್ದಳು. ಒಂದು ಕಾರ್ಯಕ್ರಮದಲ್ಲಿ ಕಮರಿಪೇಟೆಯ ಗವಿ ಓಣಿ ನಿವಾಸಿ ಮುಫೀಸ್ ಮಿಯಾನ್ನವರ್ ಎಂಬಾತನ ಪರಿಚಯವಾಗಿತ್ತು. ಆರಂಭದಲ್ಲಿ ಸ್ನೇಹಿತರಾಗಿದ್ದ ಇವರು, ನಂತರ ಸಲುಗೆಯಿಂದ ಓಡಾಡಲು ಶುರು ಮಾಡಿದ್ದರು. ಇದನ್ನೇ ಬಂಡವಾಳ ಮಾಡಿಕೊಂಡ ಮುಫೀಸ್, ಒಮ್ಮೆ ಯುವತಿಯನ್ನು ಗದಗ ರಸ್ತೆಯ ಸೇತುವೆ ಬಳಿ ಕರೆದೊಯ್ದು ಆಕೆಯ ಇಚ್ಛೆಗೆ ವಿರುದ್ಧವಾಗಿ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎನ್ನಲಾಗಿದೆ.

ವಿಡಿಯೋ ಮಾಡಿ ಬ್ಲ್ಯಾಕ್‌ಮೇಲ್ ಆಟ

ಕೇವಲ ದೌರ್ಜನ್ಯ ಮಾಡುವುದಷ್ಟೇ ಅಲ್ಲದೆ, ಆ ನೀಚ ಕೃತ್ಯವನ್ನು ಮುಫೀಸ್ ತನ್ನ ಫೋನ್‌ನಲ್ಲಿ ಸೆರೆಹಿಡಿದಿದ್ದ. "ನಾನು ಹೇಳಿದಂತೆ ಕೇಳಬೇಕು, ಇಲ್ಲದಿದ್ದರೆ ಈ ವಿಡಿಯೋ ಬಹಿರಂಗಪಡಿಸುತ್ತೇನೆ. ವಿಷಯ ಯಾರಿಗಾದರೂ ಹೇಳಿದರೆ ನಿನ್ನನ್ನು ಉಳಿಸುವುದಿಲ್ಲ" ಎಂದು ಬೆದರಿಕೆ ಹಾಕಲು ಶುರು ಮಾಡಿದ್ದ. ಈ ಭಯಕ್ಕೆ ಬಿದ್ದ ಯುವತಿ ಕಳೆದ ಹಲವು ವರ್ಷಗಳಿಂದ ನರಕಯಾತನೆ ಅನುಭವಿಸಿದ್ದಾಳೆ.

ಮದುವೆಗೆ ಸಂಚು ಮತ್ತು ಕುಟುಂಬದ ಮಧ್ಯಪ್ರವೇಶ

2025ರಲ್ಲಿ ಈತ ಯುವತಿಯನ್ನು ಬ್ಲ್ಯಾಕ್‌ಮೇಲ್ ಮಾಡಿ ಧಾರವಾಡದಲ್ಲಿ ರಿಜಿಸ್ಟರ್ ಮದುವೆ ಮಾಡಿಕೊಳ್ಳಲು ಪ್ಲಾನ್ ಮಾಡಿದ್ದ. ಆದರೆ ಸಕಾಲಕ್ಕೆ ಯುವತಿಯ ಕುಟುಂಬದವರಿಗೆ ಈ ವಿಷಯ ತಿಳಿದು ಮದುವೆಯನ್ನು ತಡೆದಿದ್ದರು. ಅಷ್ಟಾದರೂ ಮುಫೀಸ್ ಸುಮ್ಮನಾಗಿರಲಿಲ್ಲ. ಆಗಾಗ ಯುವತಿಯ ಮನೆಗೆ ಬಂದು ಹೋಗುತ್ತಿದ್ದ ಈತ, 2025ರ ನವೆಂಬರ್‌ನಲ್ಲಿ ಮನೆಯಲ್ಲಿ ಯಾರೂ ಇಲ್ಲದ ವೇಳೆ ನುಗ್ಗಿ ಮತ್ತೆ ಅತ್ಯಾಚಾರ ಮಾಡಿದ್ದಾನೆ. ಅಲ್ಲದೆ, ನಿನ್ನ ತಂದೆ-ತಾಯಿಯನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿದ್ದರಿಂದ ಯುವತಿ ಸುಮ್ಮನಾಗಿದ್ದಳು.

ಧೈರ್ಯ ತುಂಬಿದ ಸಮೀರ್ ಮುಲ್ಲಾ ಪ್ರಕರಣ

ಹುಬ್ಬಳ್ಳಿಯ ಜಿಮ್ ಟ್ರೈನರ್ ಸಮೀರ್ ಮುಲ್ಲಾ ಎಂಬಾತ ಇದೇ ರೀತಿ ಬ್ಲ್ಯಾಕ್‌ಮೇಲ್ ಮಾಡಿ ಸಿಕ್ಕಿಬಿದ್ದ ಸುದ್ದಿ ರಾಜ್ಯಾದ್ಯಂತ ಹಬ್ಬಿತ್ತು. ಆ ಘಟನೆ ಹೊರಬಂದ ಮೇಲೆ ಸಂತ್ರಸ್ತ ಯುವತಿಗೆ ಹೊಸ ಧೈರ್ಯ ಬಂದಿದೆ. ನನಗಾದ ಅನ್ಯಾಯ ಇನ್ನೊಬ್ಬರಿಗೆ ಆಗಬಾರದು ಎಂದು ನಿರ್ಧರಿಸಿದ ಆಕೆ, ಈಗ ಕೇಶ್ವಾಪುರ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದಾಳೆ.

ಈಗಾಗಲೇ ಹುಬ್ಬಳ್ಳಿಯಲ್ಲಿ ಇಂತಹ ಪ್ರಕರಣಗಳು ಹೆಚ್ಚುತ್ತಿರುವುದು ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ. ಹಿಂದೂಪರ ಸಂಘಟನೆಗಳು ಈ ಘಟನೆಯನ್ನು ತೀವ್ರವಾಗಿ ಖಂಡಿಸಿದ್ದು, ಆರೋಪಿಗೆ ಕಠಿಣ ಶಿಕ್ಷೆಯಾಗಬೇಕು ಎಂದು ಆಗ್ರಹಿಸಿವೆ. ಸದ್ಯ ಪೊಲೀಸರು ಮುಫೀಸ್ ವಿರುದ್ಧ ಎಫ್‌ಐಆರ್ ದಾಖಲಿಸಿಕೊಂಡು ತನಿಖೆ ಚುರುಕುಗೊಳಿಸಿದ್ದಾರೆ.

ಪ್ರೀತಿಯ ಹೆಸರಲ್ಲಿ ಯಾರಾದರೂ ಬೆದರಿಕೆ ಹಾಕಿದರೆ ಅಥವಾ ವಿಡಿಯೋ ಮಾಡಿ ಬ್ಲ್ಯಾಕ್‌ಮೇಲ್ ಮಾಡಿದರೆ ಹೆದರಿ ಸುಮ್ಮನಾಗಬೇಡಿ. ಕೂಡಲೇ ಪೋಷಕರಿಗೆ ತಿಳಿಸಿ ಅಥವಾ ಪೊಲೀಸರ ಸಹಾಯ ಪಡೆಯಿರಿ. ನಿಮ್ಮ ಮೌನ ಅಪರಾಧಿಗೆ ಮತ್ತಷ್ಟು ಬಲ ನೀಡುತ್ತದೆ.