ಇತ್ತೀಚಿನ ದಿನಗಳಲ್ಲಿ ಎಲ್ಲೆಲ್ಲೂ ಎಲೆಕ್ಟ್ರಿಕ್ ವಾಹನಗಳದ್ದೇ (EV) ಹವಾ ನಡೀತಿದೆ. ಆದ್ರೆ, ಪ್ರೈವೇಟ್ ಆಗಿ ಬಸ್ ಮತ್ತು ಟ್ರಕ್ ನಡೆಸೋ ಆಪರೇಟರ್‌ಗಳಿಗೆ ಇವಿ ಗಾಡಿಗಳನ್ನು ಕೊಳ್ಳೋಕೆ ಹೋದ್ರೆ ಬ್ಯಾಂಕ್‌ಗಳು ಈಸಿಯಾಗಿ ಸಾಲ (ಲೋನ್) ಕೊಡ್ತಿಲ್ಲ ಅನ್ನೋದು ದೊಡ್ಡ ತಲೆನೋವಾಗಿತ್ತು. ಈಗ ಈ ಗಂಭೀರ ಸಮಸ್ಯೆಗೆ ಮುಕ್ತಿ ಹಾಡಲು ಕೇಂದ್ರ ಭಾರಿ ಕೈಗಾರಿಕೆ ಮತ್ತು ಉಕ್ಕು ಸಚಿವರಾದ ಹೆಚ್.ಡಿ. ಕುಮಾರಸ್ವಾಮಿ (HDK) ಅವರು ಖುದ್ದಾಗಿ ಫೀಲ್ಡ್‌ಗೆ ಇಳಿದಿದ್ದಾರೆ.
ಹೊಸ ದೆಹಲಿಯ ಜಿಪಿಒಎ-3 (GPOA-3) ಕಚೇರಿಯಲ್ಲಿ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರ ಅಧ್ಯಕ್ಷತೆಯಲ್ಲಿ ಇಂದು ಒಂದು ಹೈ-ಲೆವೆಲ್ ಮೀಟಿಂಗ್ ನಡೆದಿದೆ. ದೇಶದಲ್ಲಿ ಪ್ರೈವೇಟ್ ಸೆಕ್ಟರ್‌ನಲ್ಲೂ ಎಲೆಕ್ಟ್ರಿಕ್ ಬಸ್‌ಗಳು ಮತ್ತು ಎಲೆಕ್ಟ್ರಿಕ್ ಟ್ರಕ್‌ಗಳ ಬಳಕೆಯನ್ನು ರಾಕೆಟ್ ವೇಗದಲ್ಲಿ ಹೆಚ್ಚಿಸೋಕೆ ಏನೆಲ್ಲಾ ಲೋನ್ ಸೌಲಭ್ಯ ಮಾಡಿಕೊಡಬಹುದು ಅನ್ನೋದರ ಬಗ್ಗೆ ಈ ಮೀಟಿಂಗ್‌ನಲ್ಲಿ ಭರ್ಜರಿ ಚರ್ಚೆ ನಡೆದಿದೆ.
ಒಂದೇ ಸೂರಿನಡಿ ಬ್ಯಾಂಕ್ ಸಾಹೇಬ್ರು ಮತ್ತು ಬಸ್, ಟ್ರಕ್ ಮಾಲೀಕರು!
ಈ ಮೀಟಿಂಗ್‌ನ ವಿಶೇಷತೆ ಏನಪ್ಪಾ ಅಂದ್ರೆ, ಕುಮಾರಸ್ವಾಮಿ ಅವರು ದೇಶದ ದೊಡ್ಡ ದೊಡ್ಡ ಬ್ಯಾಂಕ್‌ಗಳ ಅಧಿಕಾರಿಗಳನ್ನು ಹಾಗೂ ಬಸ್-ಲಾರಿ ಅಸೋಸಿಯೇಷನ್‌ನ ಲೀಡರ್‌ಗಳನ್ನು ಮುಖಾಮುಖಿ ಕೂರಿಸಿ ಮಾತನಾಡಿಸಿದ್ದಾರೆ.
ಮೀಟಿಂಗ್‌ನಲ್ಲಿ ಎಸ್‌ಬಿಐ (SBI), ಪಂಜಾಬ್ ನ್ಯಾಷನಲ್ ಬ್ಯಾಂಕ್, ಕೆನರಾ ಬ್ಯಾಂಕ್, ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ, ಎಚ್‌ಡಿಎಫ್‌ಸಿ (HDFC) ಮತ್ತು ಸಿಡ್ಬಿ (SIDBI) ತರಹದ ಸರ್ಕಾರಿ ಹಾಗೂ ಪ್ರೈವೇಟ್ ಬ್ಯಾಂಕ್‌ಗಳ ಸೀನಿಯರ್ ಆಫೀಸರ್ಸ್ ಭಾಗವಹಿಸಿದ್ದರು. ಇನ್ನೊಂದೆಡೆ ಇವಿ ಗಾಡಿಗಳನ್ನು ಕೊಳ್ಳಬೇಕಾದ ಆಲ್ ಇಂಡಿಯಾ ಮೋಟಾರ್ ಟ್ರಾನ್ಸ್‌ಪೋರ್ಟ್ ಕಾಂಗ್ರೆಸ್ (AIMTC), ಕೋದಂಡರಾಮು ಲಾರಿ ಅಸೋಸಿಯೇಷನ್, ಬಸ್ ಆಪರೇಟರ್ಸ್ ಕಾನ್ಫೆಡರೇಶನ್ ಆಫ್ ಇಂಡಿಯಾ (BOCI), ನಮ್ಮ ಕರ್ನಾಟಕ ಬಸ್ ಆಪರೇಟರ್ಸ್ ಅಸೋಸಿಯೇಷನ್ (KBOA) ಮತ್ತು ಸೌತ್ ಇಂಡಿಯಾ ಮೋಟಾರ್ ಟ್ರಾನ್ಸ್‌ಪೋರ್ಟ್ ಅಸೋಸಿಯೇಷನ್‌ನ ಪ್ರತಿನಿಧಿಗಳು ಹಾಗೂ ದೊಡ್ಡ ಪ್ರೈವೇಟ್ ಟ್ರಾವೆಲ್ಸ್ ಕಂಪನಿಗಳ ಮಾಲೀಕರು ಹಾಜರಿದ್ದರು.
ಅಸಲಿಗೆ ಈ ಮೀಟಿಂಗ್‌ನ ಉದ್ದೇಶ ಏನಿತ್ತು?
ಪ್ರೈವೇಟ್ ಆಪರೇಟರ್‌ಗಳು ಇವಿ ಬಸ್ ಅಥವಾ ಟ್ರಕ್ ಕೊಳ್ಳೋಕೆ ಹೋದಾಗ ಬ್ಯಾಂಕ್‌ನಿಂದ ಸಾಲ ಸಿಗಲು ಯಾವೆಲ್ಲಾ ಅಡಚಣೆಗಳು ಆಗ್ತಿವೆ? ಸದ್ಯಕ್ಕೆ ಇವಿ ವಾಹನಗಳಿಗೆ ಬ್ಯಾಂಕಿಂಗ್ ಸೆಕ್ಟರ್‌ನಲ್ಲಿ ಲೋನ್ ಕೊಡೋ ಪರಿಸ್ಥಿತಿ ಹೇಗಿದೆ? ಈ ಇವಿ ಸಾಲದ ಕಿರಿಕಿರಿ ತಪ್ಪಿಸಲು ಏನೆಲ್ಲಾ ಐಡಿಯಾಗಳಿವೆ? ಮತ್ತು ಇವೆಲ್ಲದಕ್ಕೂ ಕೇಂದ್ರ ಸರ್ಕಾರದಿಂದ ಯಾವ ರೀತಿಯ ಸಪೋರ್ಟ್ ಬೇಕು ಅನ್ನೋದನ್ನು ಪಕ್ಕಾ ಮಾಡಿಕೊಳ್ಳುವುದೇ ಈ ಮೀಟಿಂಗ್‌ನ ಮುಖ್ಯ ಅಜೆಂಡಾ ಆಗಿತ್ತು.
The Ministry of Heavy Industries (MHI), Government of India, held a high-level meeting under the chairmanship of Shri H. D. Kumaraswamy, Hon’ble Union Minister for Heavy Industries & Steel, today at GPOA-3, New Delhi, with senior representatives of public and private sector banks… pic.twitter.com/bqRCWvI0bL
— Ministry of Heavy Industries (@MHI_GoI) May 20, 2026
ಲೋನ್ ಸಿಗೋದು ಇನ್ಮುಂದೆ ಸಖತ್ ಈಸಿ: ಸರ್ಕಾರದ ಮಾಸ್ಟರ್ ಪ್ಲಾನ್!
ಇವಿ ಬಸ್ ಮತ್ತು ಟ್ರಕ್‌ಗಳ ಬೆಲೆ ನಾರ್ಮಲ್ ಗಾಡಿಗಳಿಗಿಂತ ಕೋಟಿ ಕೋಟಿ ಜಾಸ್ತಿ ಇರೋದ್ರಿಂದ ಬ್ಯಾಂಕ್‌ಗಳು ಸಾಲ ಕೊಡೋಕೆ ಯೋಚನೆ ಮಾಡ್ತಿವೆ. ಈ ರಿಸ್ಕ್ ಕಮ್ಮಿ ಮಾಡಲು ಕುಮಾರಸ್ವಾಮಿ ಅವರ ನೇತೃತ್ವದಲ್ಲಿ ಎರಡು ಸೂಪರ್ ಐಡಿಯಾಗಳನ್ನು ಚರ್ಚೆ ಮಾಡಲಾಗಿದೆ:
1. ಕ್ರೆಡಿಟ್ ಗ್ಯಾರಂಟಿ (Credit Guarantee): ಬಸ್, ಲಾರಿ ಮಾಲೀಕರು ಲೋನ್ ಸರಿಯಾಗಿ ಕಟ್ಟದಿದ್ದರೆ ಬ್ಯಾಂಕ್‌ಗಳಿಗೆ ಲಾಸ್ ಆಗಬಾರದು ಅಂತ ಸರ್ಕಾರವೇ ಒಂದು ಗ್ಯಾರಂಟಿ ಸ್ಕೀಮ್ ತರಲು ಪ್ಲಾನ್ ಮಾಡ್ತಿದೆ. ಇದರಿಂದ ಬ್ಯಾಂಕ್‌ಗಳು ಧೈರ್ಯವಾಗಿ ಸಾಲ ಕೊಡಬಹುದು.
2. ಇಂಟರೆಸ್ಟ್ ಸಬ್ವೆನ್ಷನ್ (Interest Subvention): ಇವಿ ಗಾಡಿ ಕೊಳ್ಳೋ ಬಡ ಮತ್ತು ಮಧ್ಯಮ ವರ್ಗದ ಟ್ರಾನ್ಸ್‌ಪೋರ್ಟ್ ಮಾಲೀಕರಿಗೆ ಬಡ್ಡಿಯ ಹೊರೆ ಕಮ್ಮಿ ಮಾಡಲು ಸರ್ಕಾರದಿಂದ ಬಡ್ಡಿ ರಿಯಾಯಿತಿ (ಸಬ್ಸಿಡಿ) ನೀಡುವ ಬಗ್ಗೆಯೂ ಗಂಭೀರ ಆಲೋಚನೆ ನಡೆದಿದೆ.
ಈ ಎರಡು ಪ್ಲಾನ್‌ಗಳು ಜಾರಿಗೆ ಬಂದರೆ ಖಾಸಗಿ ವಲಯದ ಟ್ರಾನ್ಸ್‌ಪೋರ್ಟ್ ಉದ್ಯಮದಲ್ಲಿ ಎಲೆಕ್ಟ್ರಿಕ್ ವಾಹನಗಳ ಕ್ರಾಂತಿಯೇ ನಡೆಯಲಿದೆ. ಮಾಲಿನ್ಯ ಮುಕ್ತ ಭಾರತ ನಿರ್ಮಿಸಲು ಪ್ರೈವೇಟ್ ಆಪರೇಟರ್ಸ್‌ಗೆ ಸಾಲದ ಸೌಲಭ್ಯ ಒದಗಿಸುವುದು ಅತ್ಯಗತ್ಯವಾಗಿದ್ದು, ಕುಮಾರಸ್ವಾಮಿ ಅವರ ಈ ಹೊಸ ಹೆಜ್ಜೆ ಸಾರಿಗೆ ಉದ್ಯಮಿಗಳ ಮುಖದಲ್ಲಿ ಸದ್ಯಕ್ಕಂತೂ ದೊಡ್ಡ ನಗು ತರಿಸಿದೆ!