ವಿದೇಶಿ ಪ್ರವಾಸಕ್ಕೆ ಹೋಗಬೇಕೆಂದು ಬ್ಯಾಗ್ ಪ್ಯಾಕ್ ಮಾಡಿಕೊಳ್ಳುತ್ತಿದ್ದ ಪ್ರವಾಸ ಪ್ರಿಯರಿಗೆ ಕೇಂದ್ರ ಸರ್ಕಾರದಿಂದ ಭರ್ಜರಿ ಗುಡ್ ನ್ಯೂಸ್ ಸಿಕ್ಕಿದೆ! ಕಳೆದ ಕೆಲವು ದಿನಗಳಿಂದ ಇಂಟರ್ನೆಟ್ ಹಾಗೂ ಸೋಶಿಯಲ್ ಮೀಡಿಯಾದಲ್ಲಿ ಭಾರಿ ತಲ್ಲಣ ಸೃಷ್ಟಿಸಿದ್ದ ವಿದೇಶ ಪ್ರಯಾಣ ತೆರಿಗೆ ಹೆಚ್ಚಳದ ಸುದ್ದಿಗೆ ಪ್ರಧಾನಿ ನರೇಂದ್ರ ಮೋದಿ ಖಡಕ್ ಆಗಿ ಬ್ರೇಕ್ ಹಾಕಿದ್ದಾರೆ.
ವಿದೇಶ ಪ್ರಯಾಣದ ಮೇಲೆ ಯಾವುದೇ ಹೊಸ ಸೆಸ್ ವಿಧಿಸುವ ಪ್ರಶ್ನೆಯೇ ಇಲ್ಲ ಎಂದು ಮೋದಿ ನೀಡಿದ ಒಂದೇ ಒಂದು ಸ್ಪಷ್ಟನೆಗೆ, ಸುಳ್ಳು ಸುದ್ದಿ ಹರಡಿದ್ದ ದೇಶದ ಪ್ರಮುಖ ಬಿಸಿನೆಸ್ ಸುದ್ದಿ ವಾಹಿನಿ ಮಂಡಿಯೂರಿ ಕ್ಷಮೆಯಾಚಿಸಿದೆ.
ಇಷ್ಟಕ್ಕೂ ಈ ಇಡೀ ವಿವಾದದ ಹೈಡ್ರಾಮಾ ಹೇಗಿತ್ತು? ಇಲ್ಲಿದೆ ನೋಡಿ ಕಂಪ್ಲೀಟ್ ರಿಪೋರ್ಟ್;
ಪ್ರಧಾನಿ ಮೋದಿಯವರ ‘ಮಿತವ್ಯಯ’ ಸಂದೇಶದ ಸುತ್ತ ಹುಟ್ಟಿಕೊಂಡ ವದಂತಿ;
ಮಧ್ಯಪ್ರಾಚ್ಯದಲ್ಲಿ ಸದ್ಯ ಇರಾನ್, ಇಸ್ರೇಲ್ ಮತ್ತು ಅಮೆರಿಕ ನಡುವೆ ಯುದ್ಧದ ಭೀತಿ ಎದುರಾಗಿರುವುದು ಜಾಗತಿಕವಾಗಿ ಕಚ್ಚಾ ತೈಲ (Crude Oil) ಬೆಲೆ ಏರಿಕೆ ಹಾಗೂ ಆರ್ಥಿಕ ಅನಿಶ್ಚಿತತೆಗೆ ಕಾರಣವಾಗಿದೆ. ಈ ಹಿನ್ನೆಲೆಯಲ್ಲಿ ಇತ್ತೀಚೆಗೆ ಪ್ರಧಾನಿ ಮೋದಿಯವರು ದೇಶದ ಜನತೆಗೆ ಒಂದು ಮಿತವ್ಯಯದ ಸಂದೇಶ ನೀಡುತ್ತಾ, "ಜಾಗತಿಕ ಬಿಕ್ಕಟ್ಟು ತಿಳಿಯಾಗುವವರೆಗೆ ಕನಿಷ್ಠ ಒಂದು ವರ್ಷದ ಮಟ್ಟಿಗೆ ಅನಗತ್ಯ ವಿದೇಶಿ ಪ್ರಯಾಣಗಳನ್ನು ಸ್ವಲ್ಪ ಕಡಿಮೆ ಮಾಡಿ" ಎಂದು ಮನವಿ ಮಾಡಿದ್ದರು.
ಆದರೆ ದೇಶದ ಹೆಸರಾಂತ ಆರ್ಥಿಕ ಸುದ್ದಿ ವಾಹಿನಿಯಾದ CNBC TV-18, ಪ್ರಧಾನಿಗಳ ಈ ದೇಶಭಕ್ತಿಯ ಮನವಿಯನ್ನೇ ಸಂಪೂರ್ಣವಾಗಿ ತಿರುಚಿ ಬಿತ್ತರಿಸಿತು. ಸರ್ಕಾರ ವಿದೇಶ ಪ್ರಯಾಣದ ಮೇಲೆ ಕಠಿಣ ನಿರ್ಬಂಧ ಹೇರಲು ಮತ್ತು ಜನರನ್ನ ತಡೆಯಲು ಹೊಸದಾಗಿ ಭಾರಿ ತೆರಿಗೆ ವಿಧಿಸುತ್ತಿದೆ ಎಂದು ತನ್ನ ಅಧಿಕೃತ ಎಕ್ಸ್ (ಟ್ವಿಟರ್) ಖಾತೆಯಲ್ಲಿ ಪೋಸ್ಟ್ ಹಾಕಿ ಜನರಲ್ಲಿ ಭೀತಿ ಮೂಡಿಸಿತ್ತು!
CNBC ವರದಿಯಲ್ಲಿ ಏನಿತ್ತು ಗೊತ್ತಾ?
CNBC ಸುದ್ದಿ ಸಂಸ್ಥೆ ತನ್ನ ಮೂಲಗಳನ್ನು ಉಲ್ಲೇಖಿಸಿ ಭರ್ಜರಿ ಕಥೆಯೊಂದನ್ನು ಹೆಣೆದಿತ್ತು. "ಯುದ್ಧದಿಂದ ದೇಶದ ಆರ್ಥಿಕತೆಯ ಮೇಲೆ ಬೀಳಲಿರುವ ಹೊರೆಯನ್ನು ಬ್ಯಾಲೆನ್ಸ್ ಮಾಡಲು ಕೇಂದ್ರ ಸರ್ಕಾರ ವಿದೇಶಿ ಪ್ರವಾಸಗಳ ಮೇಲೆ ಹೆಚ್ಚುವರಿ ಸೆಸ್ ಅಥವಾ ಸರ್‌ಚಾರ್ಜ್ ವಿಧಿಸಲು ಸೀರಿಯಸ್ ಆಗಿ ಪ್ಲಾನ್ ಮಾಡ್ತಿದೆ. ಈ ಸೆಸ್‌ನಿಂದ ಬರುವ ಹಣ ನೇರವಾಗಿ ಕೇಂದ್ರದ ಖಜಾನೆಗೆ ಹೋಗಲಿದ್ದು, ಕನಿಷ್ಠ ಒಂದು ವರ್ಷದವರೆಗೆ ಈ ನಿಯಮ ಚಾಲ್ತಿಯಲ್ಲಿರಲಿದೆ" ಎಂದು ವಾದಿಸಿತ್ತು. ಆದರೆ ಹಣಕಾಸು ಸಚಿವಾಲಯ ಇನ್ನೂ ಇದಕ್ಕೆ ಅಧಿಕೃತ ಮುದ್ರೆ ಒತ್ತಿಲ್ಲ ಎಂದು ಕೊನೆಯಲ್ಲಿ ಸೇರಿಸಿತ್ತು.
ಮಾಧ್ಯಮದ ‘ಫೇಕ್ ನ್ಯೂಸ್’ ಬೆನ್ನುಮೂಳೆ ಮುರಿದ ಮೋದಿ!
ಯಾವಾಗ ಈ ಸುದ್ದಿ ವೈರಲ್ ಆಗಿ ಇಡೀ ದೇಶಾದ್ಯಂತ ಪ್ರವಾಸ ಪ್ರಿಯರಲ್ಲಿ ಆತಂಕ ಮೂಡಿಸಿತೋ, ಆಗ ಸ್ವತಃ ಪ್ರಧಾನಿ ನರೇಂದ್ರ ಮೋದಿಯವರೇ ಅಖಾಡಕ್ಕಿಳಿದರು. CNBC ವರದಿಯ ಟ್ವೀಟ್ ಅನ್ನು ರೀ-ಟ್ವೀಟ್ ಮಾಡಿದ ಮೋದಿ, ಮಾಧ್ಯಮದ ಕ್ಲಾಸ್ ತಗೆದುಕೊಂಡರು. "ಇದು ಸಂಪೂರ್ಣವಾಗಿ ನಕಲಿ ಮತ್ತು ಸುಳ್ಳು ಸುದ್ದಿ. ಇದರಲ್ಲಿ ಒಂದು ಪರ್ಸೆಂಟ್ ಕೂಡ ಸತ್ಯಾಂಶವಿಲ್ಲ. ನಮ್ಮ ದೇಶದ ಜನರಿಗೆ ಸುಲಭ ಜೀವನ (Ease of Living) ಮತ್ತು ಸುಲಭವಾಗಿ ವ್ಯಾಪಾರ ನಡೆಸಲು ಪೂರಕ ವಾತಾವರಣ ನಿರ್ಮಿಸಲು ನಮ್ಮ ಸರ್ಕಾರ ಬದ್ಧವಾಗಿದೆ. ವಿದೇಶ ಪ್ರಯಾಣದ ಮೇಲೆ ಇಂತಹ ಯಾವುದೇ ತೆರಿಗೆ ಅಥವಾ ನಿರ್ಬಂಧ ಹೇರುವ ಆಲೋಚನೆ ನಮ್ಮ ಮುಂದಿಲ್ಲ" ಎಂದು ಖಡಕ್ ಆಗಿ ಟ್ವೀಟ್ ಮಾಡಿದರು.
Our story on government considering tax/cess on foreign travel is not accurate.
— CNBC-TV18 (@CNBCTV18News) May 15, 2026
We withdraw the story and regret the error.
ಮಾಧ್ಯಮಕ್ಕೆ ಮುಖಭಂಗ; ಬಹಿರಂಗವಾಗಿ ಕ್ಷಮೆ ಕೇಳಿದ ಚಾನೆಲ್!
ದೇಶದ ಪ್ರಧಾನಿಯೇ ನೇರವಾಗಿ ಬಂದು ಮಾಧ್ಯಮದ ವರದಿಯನ್ನು ‘ಫೇಕ್ ನ್ಯೂಸ್’ ಎಂದು ಜರೆದ ಮೇಲೆ ಚಾನೆಲ್‌ಗೆ ಮುಖಭಂಗವಾಯಿತು. ತಕ್ಷಣವೇ ಎಚ್ಚೆತ್ತ CNBC TV-18 ತನ್ನ ಹಳೆಯ ಟ್ವೀಟ್ ಅನ್ನು ಡಿಲೀಟ್ ಮಾಡಿತು. ಅಷ್ಟೇ ಅಲ್ಲದೆ, "ಸರ್ಕಾರ ವಿದೇಶ ಪ್ರಯಾಣದ ಮೇಲೆ ಸೆಸ್ ಹೇರಲು ಚಿಂತಿಸುತ್ತಿದೆ ಎಂದು ನಾವು ಬಿತ್ತರಿಸಿದ ವರದಿ ನಿಖರವಾಗಿಲ್ಲ (ತಪ್ಪಾಗಿದೆ). ನಾವು ಆ ವರದಿಯನ್ನು ತಕ್ಷಣವೇ ಹಿಂತೆಗೆದುಕೊಳ್ಳುತ್ತಿದ್ದೇವೆ ಮತ್ತು ಈ ಪ್ರಮಾದಕ್ಕಾಗಿ ವಿಷಾದಿಸುತ್ತೇವೆ" ಎಂದು ಟ್ವೀಟ್ ಮಾಡುವ ಮೂಲಕ ಬಹಿರಂಗವಾಗಿ ದೇಶದ ಜನರಲ್ಲಿ ಕ್ಷಮೆ ಕೇಳಿತು.
This is totally false.
— Narendra Modi (@narendramodi) May 15, 2026
Not an iota of truth in this.
There is no question of putting such restrictions on foreign travel.
We remain committed to improving ‘Ease of Doing Business’ and ‘Ease of Living’ for our people. https://t.co/9lxjbxz0nV
ಒಟ್ಟಾರೆಯಾಗಿ, ಇತ್ತೀಚಿನ ದಿನಗಳಲ್ಲಿ ಜವಾಬ್ದಾರಿಯುತ ದೊಡ್ಡ ಮಾಧ್ಯಮ ಸಂಸ್ಥೆಗಳೂ ಕೂಡ ಟಿಆರ್‌ಪಿ ಅಥವಾ ವೀವ್ಸ್‌ಗಾಗಿ ಕ್ರಾಸ್ ಚೆಕ್ ಮಾಡಿಕೊಳ್ಳದೆ ಇಂತಹ ಗಂಭೀರ ವಿಷಯಗಳ ಬಗ್ಗೆ ಸುಳ್ಳು ಸುದ್ದಿ ಹರಡುವುದು ಹೆಚ್ಚಾಗುತ್ತಿದೆ. ಆದರೆ ಪ್ರಧಾನಿ ಮೋದಿ ಅವರ ಸಮಯಪ್ರಜ್ಞೆಯಿಂದಾಗಿ ಸಾರ್ವಜನಿಕರಲ್ಲಿದ್ದ ದೊಡ್ಡ ಗೊಂದಲ ಕ್ಷಣಾರ್ಧದಲ್ಲಿ ಬಗೆಹರಿದಂತಾಗಿದೆ!