Mar 1, 2026 Languages : ಕನ್ನಡ | English

ಬೆಂಗಳೂರಿಗರಿಗೆ ಸಿಹಿ ಸುದ್ದಿ - ಕಾವೇರಿ 6ನೇ ಹಂತದ ಯೋಜನೆ'ಗೆ ಡಿಸಿಎಂ ಡಿ.ಕೆ.ಶಿ ಗ್ರೀನ್ ಸಿಗ್ನಲ್!!

ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ತಮ್ಮ ಪರವಾಗಿ ಯಾರೂ ದೆಹಲಿಗೆ ಹೋಗಿ ಶಕ್ತಿ ಪ್ರದರ್ಶನ ಮಾಡುವ ಅಗತ್ಯವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಶಾಸಕರು ಭೋಜನ ಕೂಟ ಸೇರುವುದು ಅಥವಾ ದೆಹಲಿಗೆ ಹೋಗುವುದು ಅವರ ವೈಯಕ್ತಿಕ ವಿಚಾರವಾಗಿದ್ದು, ಅದಕ್ಕೂ ಪಕ್ಷಕ್ಕೂ ಸಂಬಂಧವಿಲ್ಲ ಎಂದು ಅವರು ತಿಳಿಸಿದರು. "ನಿಮಗೆ ಮಂತ್ರಿ ಸ್ಥಾನ ಅಥವಾ ಅಧಿಕಾರ ಬೇಕಿದ್ದರೆ ವರಿಷ್ಠರ ಬಳಿ ಹೋಗಿ ಕೇಳಿಕೊಳ್ಳಿ, ಆದರೆ ನನ್ನ ಹೆಸರಿನಲ್ಲಿ ದೆಹಲಿಗೆ ಹೋಗುವುದು ಬೇಡ" ಎಂದು ಅವರು ಶಾಸಕರಿಗೆ ಮನವಿ ಮಾಡಿದರು. ಹಿರಿಯ ನಾಯಕರಾದ ತಾವು ಮತ್ತು ಸಿದ್ದರಾಮಯ್ಯನವರು ಈಗಾಗಲೇ ಹಲವು ಬಾರಿ ಅಧಿಕಾರ ಅನುಭವಿಸಿದ್ದೇವೆ, ಈಗ ಹೊಸಬರಿಗೆ ಮಂತ್ರಿಯಾಗುವ ಆಸೆ ಇರುವುದು ಸಹಜ. ಈ ಕುರಿತು ವರಿಷ್ಠರ ಗಮನಕ್ಕೆ ತರುವುದಾಗಿ ಅವರು ಭರವಸೆ ನೀಡಿದರು.

ಶಿವಕುಮಾರ್ ಸ್ಪಷ್ಟ ಸಂದೇಶ – ದೆಹಲಿಗೆ ಹೋಗಿ ಶಕ್ತಿ ಪ್ರದರ್ಶನ ಬೇಡ
ಶಿವಕುಮಾರ್ ಸ್ಪಷ್ಟ ಸಂದೇಶ – ದೆಹಲಿಗೆ ಹೋಗಿ ಶಕ್ತಿ ಪ್ರದರ್ಶನ ಬೇಡ

ವಿನಯ್ ಕುಲಕರ್ಣಿ ಪ್ರಕರಣ ಮತ್ತು ರಾಜಕೀಯ ಕಿರುಕುಳ:
ಮಾಜಿ ಸಚಿವ ವಿನಯ್ ಕುಲಕರ್ಣಿ ಅವರಿಗೆ ಜಾಮೀನು ಸಿಕ್ಕಿರುವ ವಿಚಾರವಾಗಿ ಮಾತನಾಡಿದ ಅವರು, ಇದೊಂದು ರಾಜಕೀಯ ಕಿರುಕುಳದ ಪ್ರಕರಣ ಎಂದು ಆರೋಪಿಸಿದರು. ಈ ಹಿಂದೆ ಯಡಿಯೂರಪ್ಪ ಅವರ ಸರ್ಕಾರವು ರಾಜಕೀಯ ದ್ವೇಷದಿಂದ ಮುಕ್ತಾಯಗೊಂಡಿದ್ದ ಪ್ರಕರಣವನ್ನು ಸಿಬಿಐಗೆ ಹಸ್ತಾಂತರಿಸಿತ್ತು. ವಿನಯ್ ಕುಲಕರ್ಣಿ ಅವರು ತಮ್ಮ ಕ್ಷೇತ್ರಕ್ಕೆ ಕಾಲಿಡದಂತೆ ನಿರ್ಬಂಧ ಹೇರಿದ್ದು ಅನ್ಯಾಯವಾಗಿತ್ತು. ಈಗ ನ್ಯಾಯಾಲಯವು ಅವರಿಗೆ ನ್ಯಾಯ ಒದಗಿಸಿದೆ. ಅಂತಹ ವೇದನೆಯನ್ನು ತಾವೂ ಅನುಭವಿಸಿರುವುದಾಗಿ ಹೇಳಿದ ಶಿವಕುಮಾರ್, ನ್ಯಾಯಾಲಯದ ತೀರ್ಪನ್ನು ಗೌರವಿಸುವುದಾಗಿ ತಿಳಿಸಿದರು.

ಉದ್ಯೋಗ ನೇಮಕಾತಿ ಮತ್ತು ಅಭಿವೃದ್ಧಿ ಯೋಜನೆಗಳು:
ರಾಜ್ಯದಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗೆ ಸರ್ಕಾರ ಬದ್ಧವಾಗಿದೆ ಎಂದು ಡಿ.ಕೆ. ಶಿವಕುಮಾರ್ ತಿಳಿಸಿದರು. ಮೊದಲ ಹಂತದಲ್ಲಿ 56 ಸಾವಿರ ಹುದ್ದೆಗಳನ್ನು ಹಳೆಯ ಮೀಸಲಾತಿ ಅನ್ವಯ ನೇಮಕ ಮಾಡಲು ಸಚಿವ ಸಂಪುಟ ನಿರ್ಧರಿಸಿದೆ. ಒಟ್ಟಾರೆಯಾಗಿ 2.84 ಲಕ್ಷ ಖಾಲಿ ಹುದ್ದೆಗಳನ್ನು ಹಂತ ಹಂತವಾಗಿ ತುಂಬಲಾಗುವುದು ಎಂದು ಅವರು ಯುವಕರಿಗೆ ಭರವಸೆ ನೀಡಿದರು. ಇನ್ನು ಬೆಂಗಳೂರಿನ ಕುಡಿಯುವ ನೀರಿನ ಸಮಸ್ಯೆ ನೀಗಿಸಲು 7 ಸಾವಿರ ಕೋಟಿ ವೆಚ್ಚದ 'ಕಾವೇರಿ 6ನೇ ಹಂತದ ಯೋಜನೆ'ಗೆ ಅನುಮೋದನೆ ನೀಡಲಾಗಿದೆ. ಜೈಕಾ ಸಂಸ್ಥೆಯ ನೆರವಿನೊಂದಿಗೆ ಈ ಯೋಜನೆಯನ್ನು ಜಾರಿಗೊಳಿಸಲಾಗುತ್ತಿದ್ದು, ಭವಿಷ್ಯದಲ್ಲಿ ನಗರಕ್ಕೆ ನೀರಿನ ತೊಂದರೆಯಾಗದಂತೆ ಮುನ್ನೆಚ್ಚರಿಕೆ ವಹಿಸಲಾಗಿದೆ ಎಂದು ಅವರು ವಿವರಿಸಿದರು.

Latest News