ಹತ್ತು ವರ್ಷದ 'ರಾಖಿ' ಬಾಂಧವ್ಯಕ್ಕೆ ರಕ್ತದ ಮಸಿ - 14 ವರ್ಷದ ಹುಡುಗಿಯ ಮೇಲೆ ಮೂವರಿಂದ ಹೀನ ಕೃತ್ಯ ಬಯಲು!!

ಡೆಹ್ರಾಡೂನ್‌ನಲ್ಲಿ ನಡೆದ ಈ ಭೀಕರ ಘಟನೆಯು ಮನುಕುಲವೇ ಅಸಹ್ಯ ಪಡುವಂತಿದೆ. 14 ವರ್ಷದ ಅಪ್ರಾಪ್ತ ಹಿಂದೂ ಹುಡುಗಿಯ ಮೇಲೆ ಮೂವರು ಮುಸ್ಲಿಂ ಯುವಕರು ಸಾಮೂಹಿಕವಾಗಿ ದೌರ್ಜನ್ಯ  ಮತ್ತು ಅ*ತ್ಯಾಚಾರ ಎಸಗಿದ್ದಾರೆ ಎಂದು ವರದಿ ಆಗಿರೋದಾಗಿ ಕೇಳಿ ಬಂದಿದೆ. ಇದು ಕೇವಲ ಕಾನೂನಿನ ಉಲ್ಲಂಘನೆಯಲ್ಲ, ಬದಲಾಗಿ ಸಮಾಜದಲ್ಲಿನ ಪವಿತ್ರ ನಂಬಿಕೆಗಳಿಗೆ ಎಸಗಿದ ದೊಡ್ಡ ದ್ರೋಹವಾಗಿದೆ. ಈ ಕ್ರೂರ ಕೃತ್ಯವು ಶಿಕ್ಷಣ ಮತ್ತು ಸಂಸ್ಕಾರದ ಅಗತ್ಯತೆಯನ್ನು ಮತ್ತೊಮ್ಮೆ ಎತ್ತಿ ತೋರಿಸಿದೆ. ಆರೋಪಿಗಳು ಬಾಲಕಿಗೆ ಅಮಲು ಪದಾರ್ಥ ನೀಡಿ, ಆಕೆಯನ್ನು ಕಾಡಿಗೆ ಅಪಹರಿಸಿಕೊಂಡು ಹೋಗಿ ಈ ಕೃತ್ಯ ಎಸಗಿದ್ದಾರೆ ಎಂದು ತಿಳಿದುಬಂದಿದೆ.

ಅಪ್ರಾಪ್ತ ಬಾಲಕಿಯ ಮೇಲೆ ಸಾಮೂಹಿಕ ದೌರ್ಜನ್ಯ ; | Photo Credit: X@TeamHinduUnited
ಅಪ್ರಾಪ್ತ ಬಾಲಕಿಯ ಮೇಲೆ ಸಾಮೂಹಿಕ ದೌರ್ಜನ್ಯ ; | Photo Credit: X@TeamHinduUnited

ಈ ಇಡೀ ಪ್ರಕರಣದಲ್ಲಿ ಅತ್ಯಂತ ನೋವಿನ ಸಂಗತಿ ಎಂದರೆ ಬಾಲಕಿಯ ಮತ್ತು ಆರೋಪಿಗಳಲ್ಲಿ ಒಬ್ಬನ ನಡುವೆ ಇದ್ದ ಸಂಬಂಧ. ಈ ಬಾಲಕಿ ಕಳೆದ 10 ವರ್ಷಗಳಿಂದ ಆತನಿಗೆ ಪ್ರತಿ ವರ್ಷ ತಪ್ಪದೇ 'ರಾಖಿ' ಕಟ್ಟುತ್ತಿದ್ದಳು. ಅವನನ್ನು ತನ್ನ ಸ್ವಂತ ಅಣ್ಣನಿಗಿಂತಲೂ ಹೆಚ್ಚಾಗಿ ನಂಬಿದ್ದಳು. ಹಿಂದೂ ಸಂಪ್ರದಾಯದಂತೆ ರಾಖಿ ಎಂದರೆ ರಕ್ಷಣೆಯ ಭರವಸೆ. ಆದರೆ, ಯಾರನ್ನು ರಕ್ಷಕ ಎಂದು ನಂಬಿದ್ದಳೋ, ಅವನೇ ಭಕ್ಷಕನಾಗಿ ಬದಲಾಗಿರುವುದು ಸಮಾಜದ ಕ್ರೂರ ಮುಖವನ್ನು ಎತ್ತಿ ತೋರಿಸುತ್ತಿದೆ.

ವರದಿಗಳ ಪ್ರಕಾರ, ಆರೋಪಿಗಳು ಮುಂಚಿತವಾಗಿಯೇ ಪ್ಲಾನ್ ಮಾಡಿಕೊಂಡು ಈ ಕೃತ್ಯ ಎಸಗಿದ್ದಾರೆ ಎನ್ನಲಾಗುತ್ತಿದೆ. ಮೊದಲು ಬಾಲಕಿಗೆ ಮಂಪರು ಬರುವಂತಹ ಮಾದಕ ದ್ರ*ವ್ಯವನ್ನು ನೀಡಿದ್ದಾರೆ. ನಂತರ ಆಕೆ ಪ್ರಜ್ಞೆ ತಪ್ಪುತ್ತಿದ್ದಂತೆ, ನಿರ್ಜನ ಪ್ರದೇಶವಾದ ಕಾಡಿಗೆ ಕರೆದೊಯ್ದಿದ್ದಾರೆ. ಅಲ್ಲಿ ಮೂವರು ಸೇರಿ ಬಾಲಕಿಯ ಮೇಲೆ ದೌರ್ಜನ್ಯ ನಡೆಸಿದ್ದಾರೆ. ಹತ್ತು ವರ್ಷಗಳ ಕಾಲ ತಂಗಿಯಂತೆ ನೋಡಬೇಕಾದವನೇ ಇಂತಹ ಹೀನ ಕೃತ್ಯಕ್ಕೆ ಮುಂದಾಗಿರುವುದು ಇಡೀ ಡೆಹ್ರಾಡೂನ್ ನಗರವನ್ನ ಬೆಚ್ಚಿಬೀಳಿಸಿದೆ.

ಈ ಘಟನೆ ತಿಳಿಯುತ್ತಿದ್ದಂತೆ ಸ್ಥಳೀಯ ನಿವಾಸಿಗಳು ಮತ್ತು ವಿವಿಧ ಸಂಘಟನೆಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿವೆ. ವಿದ್ಯಾ ದೇಗುಲದಂತೆ ಪವಿತ್ರವಾದ ಸಂಬಂಧಗಳನ್ನು ಈ ರೀತಿ ಮಲಿನಗೊಳಿಸಿರುವುದು ಕ್ಷಮಿಸಲಾರದ ಅಪರಾಧ ಎಂದು ಜನರು ಆಕ್ರೋಶ ಹೊರಹಾಕಿದ್ದಾರೆ. ಸದ್ಯ ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡಿದ್ದು, ಆರೋಪಿಗಳ ವಿರುದ್ಧ ಪೋಕ್ಸೋ ಕಾಯ್ದೆಯಡಿ ಮತ್ತು ಗಂಭೀರ ಕ್ರಿಮಿನಲ್ ಸೆಕ್ಷನ್‌ಗಳ ಅಡಿಯಲ್ಲಿ ಕ್ರಮ ಕೈಗೊಳ್ಳಲು ಮುಂದಾಗಿದ್ದಾರೆ.

ನಂಬಿಕೆಯೇ ಬದುಕಿನ ಆಧಾರ, ಆದರೆ ಅದೇ ನಂಬಿಕೆಗೆ ದ್ರೋಹ ಬಿದ್ದಾಗ ಎಷ್ಟು ನೋವಾಗುತ್ತದೆ ಎಂಬುದಕ್ಕೆ ಈ ಘಟನೆಯೇ ಸಾಕ್ಷಿ. ಅಣ್ಣನೆಂದು ನಂಬಿ ರಾಖಿ ಕಟ್ಟಿದ ಕೈಗಳಿಗೇ ಇಂತಹ ಅನ್ಯಾಯವಾಗುತ್ತದೆ ಎಂದು ಯಾರೂ ಕನಸಿನಲ್ಲೂ ಯೋಚಿಸಿರಲಿಲ್ಲ. ಆ ಪುಟ್ಟ ಬಾಲಕಿಯ ಮೇಲೆ ನಡೆದ ದೌರ್ಜನ್ಯ ಇಡೀ ಸಮಾಜವನ್ನೇ ನಡುಗಿಸಿದೆ. ನೊಂದ ಕುಟುಂಬದವರು ಕಣ್ಣೀರು ಹಾಕುತ್ತಾ ನ್ಯಾಯಕ್ಕಾಗಿ ಮೊರೆ ಇಡುತ್ತಿದ್ದಾರೆ. ಇನ್ನು ಮುಂದೆ ಯಾವುದೇ ಮಗುವಿಗೆ ಇಂತಹ ಪರಿಸ್ಥಿತಿ ಬರದಂತೆ ತಪ್ಪಿತಸ್ಥರಿಗೆ ಕಠಿಣ ಶಿಕ್ಷೆಯಾಗಲಿ ಎಂಬುದು ಎಲ್ಲರ ಆಶಯವಾಗಿದೆ. ಸಮಾಜದಲ್ಲಿ ಶಾಂತಿ ಕಾಪಾಡಲು ಪೊಲೀಸ್ ಇಲಾಖೆಯು ಹದ್ದಿನ ಕಣ್ಣಿಟ್ಟಿದೆ.

Latest News

Related News