May 2, 2026 Languages : ಕನ್ನಡ | English

ಮಲೇಷ್ಯಾದಿಂದ ಬಂದ ಒಂದು ವಾರಕ್ಕೆ ಹೆಂಡತಿಯ ಹಠಕ್ಕೆ ಬಲಿಯಾದ ಪತಿ - ದಾಂಡೇಲಿಯಲ್ಲಿ ನಡೆದ ಕರುಣಾಜನಕ ಅಂತ್ಯ!!

ಸಂಸಾರ ಅಂದಮೇಲೆ ಸಣ್ಣಪುಟ್ಟ ಜಗಳಗಳು ಸಹಜ. ಆದರೆ ಇಲ್ಲಿ ಪತ್ನಿಯ ಹಠ ಮತ್ತು ಅನೈತಿಕ ಸಂಬಂಧದ ವ್ಯಾಮೋಹ ಒಬ್ಬ ವ್ಯಕ್ತಿಯ ಬಲಿಯನ್ನೇ ಪಡೆದಿದೆ. ದಾಂಡೇಲಿ ನಗರದ ನಿವಾಸಿ ರಾಘವೇಂದ್ರ ವಾಡಕರ್ ಎಂಬುವವರು ತಮ್ಮ ಪತ್ನಿ ನೀಡಿದ ಕಿರುಕುಳ ತಾಳಲಾರದೆ ನೇ*ಣು ಬಿಗಿದುಕೊಂಡು ಆ*ತ್ಮಹತ್ಯೆ ಮಾಡಿಕೊಂಡಿದ್ದಾರೆ. ಸಾಯುವ ಮುನ್ನ ರಾಘವೇಂದ್ರ ಅವರು ಬರೆದಿಟ್ಟಿರುವ ಡೆತ್ ನೋಟ್ ಈಗ ಎಲ್ಲರ ಕಣ್ಣಾಲಿಗಳನ್ನು ಒದ್ದೆ ಮಾಡಿದೆ.

"ನೀನು ಸತ್ತರೂ ನನಗೇನು ಚಿಂತೆಯಿಲ್ಲ" ಅಂದಿದ್ದ ಪತ್ನಿ

ಮಲೇಷಿಯಾದಿಂದ ಬಂದಿದ್ದೇ ಸಾವಿಗಾಗಿ?

ರಾಘವೇಂದ್ರ ಅವರು ಕಳೆದ ಮೂರು ವರ್ಷಗಳಿಂದ ಮಲೇಷಿಯಾದಲ್ಲಿ ಕೆಲಸ ಮಾಡುತ್ತಿದ್ದರು. ಕಷ್ಟಪಟ್ಟು ದುಡಿದು ಹೆಂಡತಿ-ಮಕ್ಕಳನ್ನು ಚೆನ್ನಾಗಿ ಇಡಬೇಕು ಎಂಬುದು ಅವರ ಆಸೆಯಾಗಿತ್ತು. ಕಳೆದ ಒಂದು ವಾರದ ಹಿಂದೆಯಷ್ಟೇ ಅವರು ಮಲೇಷಿಯಾದಿಂದ ತನ್ನ ಊರಾದ ದಾಂಡೇಲಿಗೆ ಮರಳಿದ್ದರು. ಆದರೆ, ಪತಿ ಮನೆಗೆ ಬರುತ್ತಿದ್ದಂತೆಯೇ ಪತ್ನಿ ಮೇಘಾ ಇಬ್ಬರು ಮಕ್ಕಳನ್ನು ಕರೆದುಕೊಂಡು ತನ್ನ ತವರು ಮನೆ ಧಾರವಾಡಕ್ಕೆ ಹೋಗಿದ್ದಳು.

ಪತ್ನಿಯ ಓಪನ್ ಚಾಲೆಂಜ್ ಮತ್ತು ಅನೈತಿಕ ಸಂಬಂಧ

ಪತ್ನಿ ಮನೆಗೆ ಬಾರದಿದ್ದಾಗ ರಾಘವೇಂದ್ರ ಅವರು ಹಲವು ಬಾರಿ ಸಂಧಾನಕ್ಕೆ ಯತ್ನಿಸಿದ್ದರು. "ಮಕ್ಕಳ ಮುಖ ನೋಡಿಯಾದರೂ ಬಾ, ನಾವಿಬ್ಬರೂ ಚೆನ್ನಾಗಿ ಸಂಸಾರ ಮಾಡೋಣ" ಎಂದು ಕಾಡಿ ಬೇಡಿಕೊಂಡಿದ್ದರು. ಆದರೆ ಮೇಘಾ ಮಾತ್ರ ಯಾವುದಕ್ಕೂ ಸೊಪ್ಪು ಹಾಕಲಿಲ್ಲ. ಅಷ್ಟೇ ಅಲ್ಲದೆ, ತನಗೆ ಬೇರೊಬ್ಬನ ಜೊತೆ ಸಂಬಂಧ ಇರುವುದನ್ನು ಓಪನ್ ಆಗಿ ಗಂಡನ ಮುಂದೆ ಹೇಳಿಕೊಂಡಿದ್ದಳು. ಗಂಡನಿಗೆ ಮತ್ತಷ್ಟು ಮಾನಸಿಕ ನೋವು ನೀಡಲು ಬೇರೆಯವರ ಜೊತೆಗಿನ ಫೋಟೋಗಳನ್ನು ವಾಟ್ಸಾಪ್ ಸ್ಟೇಟಸ್ ಹಾಕಿಕೊಳ್ಳುತ್ತಿದ್ದಳು ಎನ್ನಲಾಗಿದೆ.

"ನೀನು ಸತ್ತರೂ ನನಗೆ ಚಿಂತೆಯಿಲ್ಲ"

ಪತ್ನಿಯ ಈ ವರ್ತನೆಯಿಂದ ರಾಘವೇಂದ್ರ ತೀವ್ರವಾಗಿ ನೊಂದಿದ್ದರು. ಒಮ್ಮೆ ಹತಾಶೆಯಿಂದ ತಮ್ಮ ಕೈ ಕೊಯ್ದುಕೊಂಡು ಆ ಫೋಟೋವನ್ನು ಮೇಘಾಗೆ ಕಳುಹಿಸಿದ್ದರು. "ನಾನು ಸಾ*ಯುತ್ತೇನೆ" ಎಂದು ಹೆದರಿಸಿದರೂ ಆಕೆ ಕರಗಲಿಲ್ಲ. ಬದಲಾಗಿ, "ನೀನು ಸತ್ತರೂ ನನಗೇನು ಸಮಸ್ಯೆ ಇಲ್ಲ, ಸತ್ತು ಹೋಗು" ಎಂದು ಕಠೋರವಾಗಿ ಸಂದೇಶ ಕಳುಹಿಸಿದ್ದಳು. ಪತ್ನಿಯ ಈ ಕ್ರೂರ ಮಾತುಗಳು ಮತ್ತು ಮಕ್ಕಳಿಂದ ದೂರವಾದ ಬೇಸರ ರಾಘವೇಂದ್ರ ಅವರನ್ನು ಅಂತಿಮ ನಿರ್ಧಾರಕ್ಕೆ ತಳ್ಳಿದೆ.

ಡೆತ್ ನೋಟ್ ಬರೆದಿಟ್ಟು ಸಾವು

ತನ್ನ ಸಾವಿಗೆ ಪತ್ನಿ ಮೇಘಾಳೇ ನೇರ ಕಾರಣ ಎಂದು ಡೆತ್ ನೋಟ್‌ನಲ್ಲಿ ರಾಘವೇಂದ್ರ ಸ್ಪಷ್ಟವಾಗಿ ಬರೆದಿದ್ದಾರೆ. ಆಕೆಯ ಅನೈತಿಕ ಸಂಬಂಧ ಮತ್ತು ತನಗೆ ನೀಡಿದ ಮಾನಸಿಕ ಟಾರ್ಚರ್ ಬಗ್ಗೆ ವಿವರವಾಗಿ ಉಲ್ಲೇಖಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ದಾಂಡೇಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೆತ್ತಿಕೊಂಡಿದ್ದಾರೆ.

ಪ್ರೀತಿಸಿ ಮದುವೆಯಾದ ಹೆಂಡತಿಯೇ ಇಷ್ಟು ಕ್ರೂರವಾಗಿ ವರ್ತಿಸಿದ್ದು ರಾಘವೇಂದ್ರ ಅವರ ಸಾವಿಗೆ ಕಾರಣವಾಗಿದೆ. ಇಬ್ಬರು ಪುಟ್ಟ ಮಕ್ಕಳು ಈಗ ತಂದೆಯನ್ನು ಕಳೆದುಕೊಂಡು ಅನಾಥವಾಗಿವೆ. ಅನೈತಿಕ ಸಂಬಂಧಗಳು ಹೇಗೆ ಒಂದು ಸುಂದರ ಸಂಸಾರವನ್ನು ಸ್ಮಶಾನ ಮಾಡಬಲ್ಲವು ಎಂಬುದಕ್ಕೆ ಈ ಘಟನೆಯೇ ಕನ್ನಡಿ.