Jan 25, 2026 Languages : ಕನ್ನಡ | English

ಕಬ್ಬನ್ ಪಾರ್ಕ್ ಫ್ಲವರ್ ಶೋಗೆ ಭರ್ಜರಿ ಪ್ರತಿಕ್ರಿಯೆ: ಮೂರು ದಿನಗಳಲ್ಲಿ 2.76 ಲಕ್ಷಕ್ಕೂ ಹೆಚ್ಚು ಜನ ಭೇಟಿ

ಬೆಂಗಳೂರು: ಕಬ್ಬನ್ ಪಾರ್ಕ್‌ನಲ್ಲಿ ನಡೆಯುತ್ತಿರುವ ಫ್ಲವರ್ ಶೋಗೆ ಜನಸಾಗರ ಕಿಕ್ಕಿರಿದು ಹರಿದು ಬರುತ್ತಿದೆ. ನವೆಂಬರ್ 27ರಿಂದ ಆರಂಭವಾದ ಈ ಹೂವಿನ ಪ್ರದರ್ಶನವು ಕನ್ನಡ ರಾಜ್ಯೋತ್ಸವ ಹಾಗೂ ಮಕ್ಕಳ ದಿನಾಚರಣೆಯ ವಿಶೇಷವಾಗಿ ಹನ್ನೊಂದು ದಿನಗಳ ಕಾಲ ನಡೆಯುತ್ತಿದೆ.

Cubbon Park Flower Show 2025
Cubbon Park Flower Show 2025

ಭಾನುವಾರ ಒಂದೇ ದಿನ 64,410 ಜನರು ಪ್ರದರ್ಶನ ವೀಕ್ಷಿಸಿದ್ದು, 10 ಲಕ್ಷ 72 ಸಾವಿರ ರೂ. ವಹಿವಾಟು ನಡೆದಿದೆ. ಚಳಿ-ಮಳೆ ನಡುವೆಯೂ ಜನರು ಉತ್ಸಾಹದಿಂದ ಭಾಗವಹಿಸಿದ್ದು, ವಯಸ್ಕರು 45,760 ಹಾಗೂ ಮಕ್ಕಳು 18,650 ಜನರು ಹಾಜರಿದ್ದರು. ವೀಕೆಂಡ್ ರಜೆ ಕಾರಣದಿಂದ ಹೆಚ್ಚಿನ ಸಂಖ್ಯೆಯಲ್ಲಿ ಜನರು ಆಗಮಿಸಿದ್ದಾರೆ.

ಶುಕ್ರವಾರ 66,550, ಶನಿವಾರ 64,760, ಭಾನುವಾರ 64,410 ಜನರು ಭೇಟಿ ನೀಡಿದ್ದು, ಇದುವರೆಗೆ ಒಟ್ಟು 2,76,000ಕ್ಕೂ ಹೆಚ್ಚು ಜನರು ಹೂವಿನ ಪ್ರದರ್ಶನವನ್ನು ವೀಕ್ಷಿಸಿದ್ದಾರೆ.

ಡಿಸೆಂಬರ್ 7ರವರೆಗೆ ನಡೆಯಲಿರುವ ಈ ಫ್ಲವರ್ ಶೋದಲ್ಲಿ ವೈವಿಧ್ಯಮಯ ಹೂವುಗಳು, ಫಲಪುಷ್ಪ ವಿನ್ಯಾಸಗಳು ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಜನರನ್ನು ಆಕರ್ಷಿಸುತ್ತಿವೆ. ಕಬ್ಬನ್ ಪಾರ್ಕ್‌ನಲ್ಲಿ ನಡೆಯುತ್ತಿರುವ ಈ ಪ್ರದರ್ಶನವು ಬೆಂಗಳೂರಿನ ಪ್ರಮುಖ ಆಕರ್ಷಣೆಯಾಗಿ ಪರಿಣಮಿಸಿದೆ.