ರಾಷ್ಟ್ರೀಯ ಭದ್ರತಾ ಭೀತಿ - ‘ಕಾಕ್ರೋಚ್ ಜನತಾ ಪಕ್ಷ’ದ X ಖಾತೆ ಬ್ಲಾಕ್ ಮಾಡಲು ಕಾರಣ ಇಲ್ಲಿದೆ ನೋಡಿ!!

ನವದೆಹಲಿ: ಕಳೆದ ಕೆಲವು ದಿನಗಳಿಂದ ಸೋಶಿಯಲ್ ಮೀಡಿಯಾದಲ್ಲಿ ದೊಡ್ಡ ಬಿರುಗಾಳಿಯನ್ನೇ ಎಬ್ಬಿಸಿದ್ದ ‘ಕಾಕ್ರೋಚ್ ಜನತಾ ಪಾರ್ಟಿ’ (CJP) ಖಾತೆಗೆ ಕೊನೆಗೂ ಭಾರತ ಸರ್ಕಾರ ಬ್ರೇಕ್ ಹಾಕಿದೆ! ಹೌದು, ಈ ವ್ಯಂಗ್ಯಭರಿತ ಪೇಜ್ ಇಂಟರ್ನೆಟ್‌ನಲ್ಲಿ ಸಖತ್ ಸೌಂಡ್ ಮಾಡ್ತಿರೋ ಬೆನ್ನಲ್ಲೇ, ಗುರುವಾರ ಕೇಂದ್ರ ಸರ್ಕಾರ ಭಾರತದಲ್ಲಿ ಇದರ ಎಕ್ಸ್ (ಟ್ವಿಟ್ಟರ್) ಖಾತೆಯನ್ನು ಅಧಿಕೃತವಾಗಿ ಸ್ಥಗಿತಗೊಳಿಸಿದೆ (Block). ಇದು ಕೇವಲ ಮೀಮ್ಸ್ ಪೇಜ್ ಅಲ್ಲ, ಇದರಿಂದ "ರಾಷ್ಟ್ರೀಯ ಭದ್ರತೆಗೆ ಬೆದರಿಕೆ ಇದೆ" ಅನ್ನೋ ಗಂಭೀರ ಆರೋಪ ಕೇಳಿಬಂದ ತಕ್ಷಣ ಈ ಆಕ್ಷನ್ ತೆಗೆದುಕೊಳ್ಳಲಾಗಿದೆ.

X ನಿಂದ ‘ಕಾಕ್ರೋಚ್ ಜನತಾ ಪಕ್ಷ’ದ ಖಾತೆ ಅಮಾನತು
X ನಿಂದ ‘ಕಾಕ್ರೋಚ್ ಜನತಾ ಪಕ್ಷ’ದ ಖಾತೆ ಅಮಾನತು

ನಮ್ಮ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್ ಅವರು ಇತ್ತೀಚೆಗೆ "ವ್ಯವಸ್ಥೆಯ ಮೇಲೆ ದಾಳಿ ಮಾಡುವವರ" ಬಗ್ಗೆ ಒಂದು ಹೇಳಿಕೆ ನೀಡಿದ್ದರು. ಆ ಹೇಳಿಕೆಗೆ ವಿರೋಧವಾಗಿ ಹಾಗೂ ವ್ಯಂಗ್ಯ ಮಾಡಲು ಈ 'ಕಾಕ್ರೋಚ್ ಜನತಾ ಪಾರ್ಟಿ' ಖಾತೆಯನ್ನು ಸ್ಟಾರ್ಟ್ ಮಾಡಲಾಗಿತ್ತು. ಆದರೆ, ಭಾರತದ ಗುಪ್ತಚರ ಇಲಾಖೆ (Intelligence Bureau) ಈ ಅಕೌಂಟ್ ಮೇಲೆ ಕಣ್ಣಿಟ್ಟಾಗ ಶಾಕಿಂಗ್ ವಿಚಾರಗಳು ಬೆಳಕಿಗೆ ಬಂದಿವೆ.

ಈ ಖಾತೆಯಲ್ಲಿ ಭಾರತದ ಸಾರ್ವಭೌಮತ್ವ ಮತ್ತು ಭದ್ರತೆಗೆ ಧಕ್ಕೆ ತರುವಂತಹ "ಪ್ರಚೋದನಕಾರಿ ವಿಷಯಗಳನ್ನು" ಪೋಸ್ಟ್ ಮಾಡಲಾಗುತ್ತಿದೆ ಎಂದು ಗುಪ್ತಚರ ಇಲಾಖೆ ಪತ್ತೆಹಚ್ಚಿತ್ತು. ವಿಶೇಷವಾಗಿ ದೇಶದ ಯುವ ಜನತೆಯಲ್ಲಿ ಇದು ಫಾಸ್ಟ್‌ ಆಗಿ ಪಾಪ್ಯುಲರ್ ಆಗ್ತಿರೋದ್ರಿಂದ ಅಪಾಯ ಜಾಸ್ತಿ ಎಂದು ಅಲರ್ಟ್ ಮಾಡಲಾಗಿತ್ತು. ಈ ಮಾಹಿತಿ ಸಿಗುತ್ತಿದ್ದಂತೆ, ಕೇಂದ್ರ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ (MeitY) ತಕ್ಷಣ ಕಾರ್ಯಪ್ರವೃತ್ತವಾಯಿತು. ಮಾಹಿತಿ ತಂತ್ರಜ್ಞಾನ ಕಾಯ್ದೆ (IT Act), 2000 ರ ಸೆಕ್ಷನ್ 69A ಅಡಿಯಲ್ಲಿ ಈ ಅಕೌಂಟ್ ಅನ್ನು ತಡೆಹಿಡಿಯುವಂತೆ ಎಕ್ಸ್ (X) ಸಂಸ್ಥೆಗೆ ಖಡಕ್ ನಿರ್ದೇಶನ ನೀಡಿತು. ಸರ್ಕಾರದ ಅಧಿಕೃತ ಆದೇಶದ ಬೆನ್ನಲ್ಲೇ ಭಾರತದಲ್ಲಿ ಈ ಖಾತೆ ಕ್ಲೋಸ್ ಆಗಿದೆ.

ರಾಕೆಟ್ ವೇಗದಲ್ಲಿ ಫಾಲೋವರ್ಸ್ ರೈಸ್!

ಈ ಖಾತೆಯನ್ನು ನಿರ್ಬಂಧಿಸಲು ಮನವಿ ಮಾಡಿದಾಗ ಭಾರತದಲ್ಲಿ ಇದಕ್ಕೆ ಕೇವಲ 90,000 ಫಾಲೋವರ್ಸ್ ಇದ್ದರು. ಆದರೆ ಗುರುವಾರ ಸಂಜೆಯ ಹೊತ್ತಿಗೆ ಗ್ಲೋಬಲ್ ಲೆವೆಲ್‌ನಲ್ಲಿ ಇದರ ಫಾಲೋವರ್ಸ್ ಸಂಖ್ಯೆ ಬರೋಬ್ಬರಿ 2 ಲಕ್ಷ ದಾಟಿಬಿಟ್ಟಿತ್ತು! ಭಾರತದೊಳಗೆ ಈ ಖಾತೆಯನ್ನು ಬ್ಯಾನ್ ಮಾಡಲಾಗಿದ್ದರೂ, ಬೇರೆ ದೇಶಗಳ ಜನರಿಗೆ ಇದು ಎಂದಿನಂತೆ ಕಾಣಿಸುತ್ತಿದೆ.

ಇನ್‌ಸ್ಟಾಗ್ರಾಮ್ ಕಥೆ ಏನು?: ಸದ್ಯಕ್ಕೆ ಟ್ವಿಟ್ಟರ್ (X) ಅಕೌಂಟ್ ಮಾತ್ರ ಬ್ಯಾನ್ ಆಗಿದೆ. ಆದರೆ ಇನ್‌ಸ್ಟಾಗ್ರಾಮ್‌ನಲ್ಲಿ ಈ ಪೇಜ್‌ಗೆ ಬರೋಬ್ಬರಿ 1.6 ಕೋಟಿಗೂ (16 Million) ಹೆಚ್ಚು ಫಾಲೋವರ್ಸ್ ಇದ್ದಾರೆ! ಸದ್ಯ ಇನ್‌ಸ್ಟಾಗ್ರಾಮ್ ಅಕೌಂಟ್ ಅನ್ನು ಕೂಡ ಭಾರತದಲ್ಲಿ ನಿರ್ಬಂಧಿಸುವ ಪ್ರಕ್ರಿಯೆ ನಡೆಯುತ್ತಿದೆ ಎಂದು ಹಿರಿಯ ಸರ್ಕಾರಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಯಾರು ಈ ಪೇಜ್ ಓನರ್? 'ಕಾಕ್ರೋಚ್' ಕಮ್‌ಬ್ಯಾಕ್!

ಈ ಇಡೀ ಟ್ರೆಂಡ್‌ನ ಕಿಂಗ್‌ಪಿನ್ ಯಾರು ಗೊತ್ತಾ? 30 ವರ್ಷದ ಅಭಿಜೀತ್ ದಿಪ್ಕೆ. ಮೂಲತಃ ಮಹಾರಾಷ್ಟ್ರದವರಾದ ಇವರು ಪ್ರಸ್ತುತ ಅಮೆರಿಕದ ಬೋಸ್ಟನ್‌ನಲ್ಲಿ ನೆಲೆಸಿದ್ದಾರೆ. ಭಾರತದಲ್ಲಿ ಅಕೌಂಟ್ ಬ್ಯಾನ್ ಆದ ತಕ್ಷಣ ರಿಯಾಕ್ಟ್ ಮಾಡಿರೋ ದಿಪ್ಕೆ, "ನಿರೀಕ್ಷೆಯಂತೆ ಭಾರತದಲ್ಲಿ ಅಕೌಂಟ್ ತಡೆಹಿಡಿಯಲಾಗಿದೆ" ಎಂದು ಪೋಸ್ಟ್ ಮಾಡಿದ್ದಾರೆ. ಅಷ್ಟೇ ಅಲ್ಲ, ಇದಾಗಿ ಕೆಲವೇ ಗಂಟೆಗಳಲ್ಲಿ 'Cockroach is back' ಅನ್ನೋ ಹೊಸ ಖಾತೆಯನ್ನು ತೆರೆದಿರುವುದಾಗಿ ಅನೌನ್ಸ್ ಮಾಡಿ ಸರ್ಕಾರಕ್ಕೆ ಚಾಲೆಂಜ್ ಹಾಕಿದ್ದಾರೆ!

Latest News