Feb 17, 2026 Languages : ಕನ್ನಡ | English

ಕಳಪೆ ಡಾಂಬರ್ ಕಾಮಗಾರಿ ವಿರುದ್ಧ ಸ್ಥಳೀಯರ ಆಕ್ರೋಶ - ನಿನ್ನೆ ಹಾಕಿದ ಡಾಂಬರ್ ಇಂದು ಕಿತ್ತ ಘಟನೆ

ಚಿಕ್ಕಮಗಳೂರು ನಗರದ ನಾಯ್ಡು ರಸ್ತೆಯಲ್ಲಿ ನಡೆದ ಕಳಪೆ ಕಾಮಗಾರಿ ವಿರುದ್ಧ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಿನ್ನೆ ಹಾಕಿದ ಡಾಂಬರ್ ಇಂದು ಕಾಲಲ್ಲೇ ಕಿತ್ತಿರುವ ಘಟನೆ ಸಾರ್ವಜನಿಕರಲ್ಲಿ ಅಸಮಾಧಾನ ಮೂಡಿಸಿದೆ.

ಕಳಪೆ ಕಾಮಗಾರಿಗೆ ಸ್ಥಳೀಯರ ಕಿಡಿ: ತಕ್ಷಣ ದುರಸ್ಥಿ ಆಗ್ರಹ
ಕಳಪೆ ಕಾಮಗಾರಿಗೆ ಸ್ಥಳೀಯರ ಕಿಡಿ: ತಕ್ಷಣ ದುರಸ್ಥಿ ಆಗ್ರಹ

ನಾಯ್ಡು ರಸ್ತೆಯಲ್ಲಿ ಲೋಕೋಪಯೋಗಿ ಇಲಾಖೆ ನಡೆಸಿದ ಡಾಂಬರ್ ಕಾಮಗಾರಿ ಕಳಪೆ ಗುಣಮಟ್ಟದ್ದಾಗಿರುವುದರಿಂದ, ಸ್ಥಳೀಯರು ನಿನ್ನೆ ಹಾಕಿದ ಡಾಂಬರ್ ಇಂದು ನೆಲದಿಂದಲೇ ಕಿತ್ತುಹಾಕಿದರು. “ಇದು ಹೆಚ್.ಡಿ. ತಮ್ಮಯ್ಯ ಚಿನ್ನದ ರಸ್ತೆ” ಎಂದು ಸ್ಥಳೀಯರು ವ್ಯಂಗ್ಯವಾಡಿದರು.

ಸ್ಥಳೀಯರು “ಜನರನ್ನ ಫೂಲ್ ಮಾಡ್ಬೇಡಿ, ಮಾಡೋ ಕೆಲಸ ನೀಟಾಗಿ ಮಾಡಿ” ಎಂದು ಅಧಿಕಾರಿಗಳ ವಿರುದ್ಧ ಕಿಡಿ ಉಗಿದರು. ಕಳಪೆ ಗುಣಮಟ್ಟದ ಡಾಂಬರ್ ಹಾಕಿರುವುದರಿಂದ ಬೈಕ್‌ಗಳು ಸ್ಕಿಡ್ ಆಗಿ ಅಪಘಾತ ಸಂಭವಿಸುವ ಸಾಧ್ಯತೆ ಹೆಚ್ಚಿದೆ ಎಂದು ಜನರು ಆತಂಕ ವ್ಯಕ್ತಪಡಿಸಿದರು. “ಅಮಾಹುತವಾದರೆ ಹೊಣೆ ಯಾರೆ?” ಎಂದು ಪ್ರಶ್ನಿಸಿದರು.

ಚಿಕ್ಕಮಗಳೂರು ನಗರದಲ್ಲಿ ಲೋಕೋಪಯೋಗಿ ಇಲಾಖೆ ವ್ಯಾಪಕವಾಗಿ ಡಾಂಬರ್ ಕಾಮಗಾರಿ ನಡೆಸುತ್ತಿದೆ. ಆದರೆ, ಗುಣಮಟ್ಟದ ಕೊರತೆಯಿಂದ ಜನರಲ್ಲಿ ಅಸಮಾಧಾನ ಹೆಚ್ಚಾಗಿದೆ. ರಸ್ತೆಗೆ ಹಾಕಿರುವ ಗ್ರಾವಲ್ ಕಳಪೆಯಾಗಿರುವುದರಿಂದ ವಾಹನ ಸವಾರರಿಗೆ ತೊಂದರೆ ಉಂಟಾಗಿದೆ.

ಸ್ಥಳೀಯರು ತಕ್ಷಣವೇ ಕಾಮಗಾರಿಯನ್ನು ದುರಸ್ಥಿ ಮಾಡುವಂತೆ ಆಗ್ರಹಿಸಿದ್ದಾರೆ. “ಕಳಪೆ ಕಾಮಗಾರಿಯಿಂದ ಜನರ ಜೀವಕ್ಕೆ ಅಪಾಯ ಉಂಟಾಗಬಾರದು. ಗುಣಮಟ್ಟದ ಕೆಲಸ ಮಾಡಿ ಜನರ ವಿಶ್ವಾಸ ಉಳಿಸಿಕೊಳ್ಳಿ” ಎಂದು ಅವರು ಒತ್ತಾಯಿಸಿದರು.

ಚಿಕ್ಕಮಗಳೂರು ನಗರದಲ್ಲಿ ನಡೆಯುತ್ತಿರುವ ಡಾಂಬರ್ ಕಾಮಗಾರಿ ಗುಣಮಟ್ಟದ ಕೊರತೆಯಿಂದ ಜನರಲ್ಲಿ ಆಕ್ರೋಶ ವ್ಯಕ್ತವಾಗಿದೆ. ನಿನ್ನೆ ಹಾಕಿದ ಡಾಂಬರ್ ಇಂದು ಕಿತ್ತಿರುವುದು ಕಾಮಗಾರಿಯ ದುರವಸ್ಥೆಯನ್ನು ತೋರಿಸುತ್ತದೆ. ಸ್ಥಳೀಯರ ಆಗ್ರಹದಂತೆ, ಅಧಿಕಾರಿಗಳು ತಕ್ಷಣವೇ ದುರಸ್ಥಿ ಕೈಗೊಂಡು ಗುಣಮಟ್ಟದ ಕೆಲಸ ಮಾಡುವ ಅಗತ್ಯವಿದೆ.

Latest News