ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಬೀಜುವಳ್ಳಿ ಗ್ರಾಮದಲ್ಲಿ ಮನೆ ಭೋಗ್ಯಾ ವಿಚಾರವಾಗಿ ಎರಡು ಕುಟುಂಬಗಳ ನಡುವೆ ಗಲಾಟೆ ನಡೆದಿದ್ದು, ಮಹಿಳೆಯ ಮೇಲೆ ಹಲ್ಲೆ ನಡೆದ ಘಟನೆ ಸ್ಥಳೀಯರಲ್ಲಿ ಆಕ್ರೋಶ ಮೂಡಿಸಿದೆ. ಮನೆ ಭೋಗ್ಯಾ ವಿಚಾರವಾಗಿ ರತ್ನ ಮತ್ತು ಸಾಬಿರಾ ಎಂಬುವರ ನಡುವೆ ಕಿರಿಕ್ ಉಂಟಾಗಿದೆ. ರತ್ನ 8 ಲಕ್ಷ ರೂಪಾಯಿ ಪಡೆದು ಮನೆಯನ್ನ ಲೀಜ್‌ಗೆ ಕೊಟ್ಟಿದ್ದಳು. ಆದರೆ ಮನೆ ಬಿಡುವಾಗ ಸಾಬಿರಾ 18 ಲಕ್ಷ ರೂಪಾಯಿ ಕೊಡಬೇಕೆಂದು ಬೇಡಿಕೆ ಇಟ್ಟಿದ್ದಾಳೆ.
ಸಾಬಿರಾ “ಬ್ಯಾಂಕಿನಲ್ಲಿ ಫ್ರೀ ಕೊಡಲ್ಲ, ಮನೆ ರೀಪೇರಿ ಮಾಡಿಸಿದ್ದೇನೆ, ಟೈಲ್ಸ್ ಹಾಕಿಸಿದ್ದೇನೆ. ಆದ್ದರಿಂದ 18 ಲಕ್ಷ ಕೊಡಬೇಕು” ಎಂದು ವಾದಿಸಿದ್ದಾಳೆ. ಇದರಿಂದಾಗಿ ಇಬ್ಬರ ಕುಟುಂಬಗಳ ನಡುವೆ ತೀವ್ರ ವಾಗ್ವಾದ ಉಂಟಾಗಿದೆ. ಗಲಾಟೆಯ ವೇಳೆ ಮಹಿಳೆಯ ಜಡೆ ಹಿಡಿದು ಎಳೆದು ಬಿಸಾಡಿದ ಯುವಕನ ವರ್ತನೆ ಹಲ್ಲೆಯಾಗಿ ಪರಿಣಮಿಸಿದ್ದು, ಈ ಘಟನೆ ಸ್ಥಳೀಯರಲ್ಲಿ ಆಘಾತ ಮೂಡಿಸಿದೆ.
ಸಾಬಿರಾ ಮನೆ ಭೋಗ್ಯಾಕ್ಕೆ ಪಡೆದು ಮತ್ತೊಬ್ಬರಿಗೆ ಬಾಡಿಗೆಗೆ ಕೊಟ್ಟಿದ್ದರಿಂದ ವಿವಾದ ಮತ್ತಷ್ಟು ಗಂಭೀರಗೊಂಡಿದೆ. ಮನೆ ಬಿಡುವ ವಿಚಾರದಲ್ಲಿ ಉಂಟಾದ ಅಸಮಾಧಾನವೇ ಹಿಂಸಾತ್ಮಕ ಘಟನೆಗೆ ಕಾರಣವಾಗಿದೆ. ಈ ಘಟನೆ ಮೂಡಿಗೆರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಪ್ರಕರಣ ದಾಖಲಾಗಿದೆ. ಪೊಲೀಸರು ಗಲಾಟೆಯ ಮೂಲ ಕಾರಣ ಹಾಗೂ ಹಲ್ಲೆ ಮಾಡಿದವರ ವಿರುದ್ಧ ಕ್ರಮ ಕೈಗೊಳ್ಳಲು ತನಿಖೆ ಆರಂಭಿಸಿದ್ದಾರೆ.
ಮನೆ ಭೋಗ್ಯಾ ವಿಚಾರವಾಗಿ ಹುಟ್ಟಿದ ಹಣಕಾಸು ವಿವಾದವು ಹಿಂಸಾತ್ಮಕ ರೂಪ ಪಡೆದು ಮಹಿಳೆಯ ಮೇಲೆ ಹಲ್ಲೆ ನಡೆದಿರುವುದು ಸಮಾಜದಲ್ಲಿ ಆಘಾತ ಮೂಡಿಸಿದೆ. ಮುಂದಿನ ದಿನಗಳಲ್ಲಿ ತನಿಖೆಯಿಂದ ಹೆಚ್ಚಿನ ವಿವರಗಳು ಬಹಿರಂಗವಾಗುವ ನಿರೀಕ್ಷೆಯಿದೆ.