ಟಿಕ್‌ಟಾಕ್, ಇನ್‌ಸ್ಟಾಗ್ರಾಮ್‌ಗೇ ಟಕ್ಕರ್ ಕೊಟ್ಟ ಚಾಟ್‌ಜಿಪಿಟಿ - ಕೇವಲ ಮೂರೇ ವರ್ಷಕ್ಕೆ 100 ಕೋಟಿ ಯೂಸರ್ಸ್ ದಾಟಿ ಭರ್ಜರಿ ರೆಕಾರ್ಡ್!!

ಇಂಟರ್ನೆಟ್ ಜಗತ್ತಿನಲ್ಲಿ ಹೊಸ ಇತಿಹಾಸವೊಂದು ಸೃಷ್ಟಿಯಾಗಿದೆ! ಹೌದು, ಓಪನ್ಎಐ (OpenAI) ಸಂಸ್ಥೆಯ ಸ್ಟಾರ್ ಪ್ರಾಡಕ್ಟ್ ಆದ ಚಾಟ್‌ಜಿಪಿಟಿ (ChatGPT) ಈಗ ಬರೋಬ್ಬರಿ 1 ಬಿಲಿಯನ್ (100 ಕೋಟಿ) ಮಂತ್ಲಿ ಆಕ್ಟಿವ್ ಯೂಸರ್ಸ್ (MAUs) ಹೊಂದುವ ಮೂಲಕ ಜಗತ್ತಿನಲ್ಲೇ ಅತಿ ವೇಗವಾಗಿ ಈ ಮೈಲಿಗಲ್ಲು ತಲುಪಿದ ಮೊದಲ ಅಪ್ಲಿಕೇಶನ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಈ ಹಿಂದೆ ಸೋಶಿಯಲ್ ಮೀಡಿಯಾ ಕಿಂಗ್‌ಗಳಾಗಿದ್ದ ಟಿಕ್‌ಟಾಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಮತ್ತು ಗೂಗಲ್ ಮ್ಯಾಪ್ಸ್‌ ಕೂಡ ಇಷ್ಟೊಂದು ಸ್ಪೀಡ್ ಆಗಿ ಈ ಸಾಧನೆ ಮಾಡಿರಲಿಲ್ಲ. ಆದರೆ ಚಾಟ್‌ಜಿಪಿಟಿ ಮಾತ್ರ ಇವೆಲ್ಲವನ್ನೂ ಧೂಳೀಪಟ ಮಾಡಿ ಮುನ್ನುಗ್ಗಿದೆ.

ಟಿಕ್‌ಟಾಕ್, ಇನ್‌ಸ್ಟಾಗ್ರಾಮ್ ದಾಖಲೆ ಧೂಳೀಪಟ | Photo Credit: www.internetmatters.org
ಟಿಕ್‌ಟಾಕ್, ಇನ್‌ಸ್ಟಾಗ್ರಾಮ್ ದಾಖಲೆ ಧೂಳೀಪಟ | Photo Credit: www.internetmatters.org

ಕಣ್ಣಿಮುಚ್ಚಿ ಬಿಡುವಷ್ಟರಲ್ಲಿ ನೂರು ಕೋಟಿ ಯೂಸರ್ಸ್!

ಮಾರ್ಕೆಟ್ ರಿಸರ್ಚ್ ಸಂಸ್ಥೆಯಾದ 'ಸೆನ್ಸಾರ್ ಟವರ್' ಬಿಡುಗಡೆ ಮಾಡಿರುವ ಲೇಟೆಸ್ಟ್ ರಿಪೋರ್ಟ್ ಪ್ರಕಾರ, ಚಾಟ್‌ಜಿಪಿಟಿ ಇತ್ತೀಚೆಗಷ್ಟೇ ಅಂದರೆ ಮೇ 2026 ರಲ್ಲಿ ಈ 100 ಕೋಟಿ ಯೂಸರ್ಸ್ ಮಾರ್ಕ್ ಅನ್ನು ದಾಟಿದೆ. ವಿಶೇಷ ಏನೆಂದರೆ, ನವೆಂಬರ್ 2022 ರಲ್ಲಿ ಇದು ಸಾರ್ವಜನಿಕವಾಗಿ ರಿಲೀಸ್ ಆಗಿತ್ತು. ಅಂದರೆ ಬಿಡುಗಡೆಯಾದ ಕೇವಲ ಮೂರೇ ವರ್ಷದ ಒಳಗಡೆ ಈ ರೇಂಜ್‌ಗೆ ಗ್ರೋತ್ ಕಂಡಿದೆ ಅಂದರೆ ನಂಬೋಕು ಸಾಧ್ಯವಿಲ್ಲ ಅಲ್ವಾ? ಎಐ ತಂತ್ರಜ್ಞಾನಕ್ಕೆ ಜಗತ್ತಿನಲ್ಲಿ ಎಷ್ಟು ಡಿಮ್ಯಾಂಡ್ ಇದೆ ಅನ್ನೋದಕ್ಕೆ ಚಾಟ್‌ಜಿಪಿಟಿಯ ಈ ರೇಸ್ ಜ್ವರವೇ ಸಾಕ್ಷಿ.

ಬರೀ ಹರಟೆ ಅಷ್ಟೇ ಅಲ್ಲ, ಇದು ಆಲ್ ಇನ್ ಒನ್ ಗುರು!

ಶುರುವಿನಲ್ಲಿ ಬರೀ ಪ್ರಶ್ನೆಗಳಿಗೆ ಉತ್ತರ ಹುಡುಕೋಕೆ ಅಥವಾ ಸುಮ್ಮನೆ ಚಾಟ್ ಮಾಡೋಕೆ ಬಳಸುತ್ತಿದ್ದ ಈ ಎಐ ಅಸಿಸ್ಟೆಂಟ್, ಇವತ್ತು ಸ್ಟೂಡೆಂಟ್ಸ್, ಪ್ರೊಫೆಷನಲ್ಸ್, ಬಿಸಿನೆಸ್‌ಮನ್‌ಗಳು ಮತ್ತು ಡೆವಲಪರ್ಸ್‌ಗಳ ದೈನಂದಿನ ಲೈಫ್‌ನ ಭಾಗವಾಗಿಬಿಟ್ಟಿದೆ. ಆಫೀಸ್ ಕೆಲಸ ಸುಲಭ ಮಾಡೋಕೆ, ಕೋಡಿಂಗ್ ಬರೆಯೋಕೆ, ರಿಸರ್ಚ್ ಮಾಡಲು, ಕಂಟೆಂಟ್ ರೈಟಿಂಗ್, ಕಸ್ಟಮರ್ ಕೇರ್ ಮತ್ತು ಪ್ಲಾನಿಂಗ್ ಮಾಡಲು ಜಗತ್ತಿನಾದ್ಯಂತ ಜನರು ಪ್ರತಿದಿನ ಚಾಟ್‌ಜಿಪಿಟಿಯನ್ನು ಡಿಪೆಂಡ್ ಆಗುತ್ತಿದ್ದಾರೆ. ಇದು ಕೊಡುವ ಫಾಸ್ಟ್ ರೆಸ್ಪಾನ್ಸ್ ಮತ್ತು ಮಲ್ಟಿಮೋಡಲ್ ಫೀಚರ್ಸ್ (ಟೆಕ್ಸ್ಟ್, ವಾಯ್ಸ್, ಇಮೇಜ್ ಎಲ್ಲವನ್ನೂ ಹ್ಯಾಂಡಲ್ ಮಾಡೋ ಕೆಪಾಸಿಟಿ) ಇಷ್ಟೊಂದು ದೊಡ್ಡ ಮಟ್ಟದಲ್ಲಿ ಜನಪ್ರಿಯತೆ ಪಡೆಯಲು ಮುಖ್ಯ ಕಾರಣವಾಗಿದೆ.

ಸಖತ್ ಟಫ್ ಕಾಂಪಿಟೇಷನ್ ನಡುವೆಯೂ ನಂಬರ್ ಒನ್!

ಈ ಎಐ ಇಂಡಸ್ಟ್ರಿಯಲ್ಲಿ ಸದ್ಯ ಭರ್ಜರಿ ಕಾಂಪಿಟೇಷನ್ ನಡೀತಿದೆ. ಓಪನ್ಎಐ ಸಂಸ್ಥೆಗೆ ಗೂಗಲ್, ಮೆಟಾ ಮತ್ತು ಆಂಥ್ರೋಪಿಕ್‌ನಂತಹ ದೊಡ್ಡ ದೊಡ್ಡ ಟೆಕ್ ದೈತ್ಯರು ಸಖತ್ ಫೈಟ್ ಕೊಡ್ತಿದ್ದಾರೆ. ಆದರೂ ಚಾಟ್‌ಜಿಪಿಟಿ ತನ್ನ ನಂಬರ್ ಒನ್ ಸ್ಥಾನವನ್ನು ಬಿಟ್ಟುಕೊಟ್ಟಿಲ್ಲ. 2026ರ ಆರಂಭದಲ್ಲೇ ಇದು ವಾರಕ್ಕೆ 90 ಕೋಟಿ ಆಕ್ಟಿವ್ ಯೂಸರ್ಸ್ ಹಾಗೂ 5 ಕೋಟಿ ಪ್ರೀಮಿಯಂ (ಪೇಯಿಂಗ್) ಸಬ್‌ಸ್ಕ್ರೈಬರ್‌ಗಳನ್ನು ಹೊಂದಿತ್ತು.

ಇನ್ನೊಂದೆಡೆ, ಕಾಂಪಿಟೇಷನ್‌ನಲ್ಲಿರೋ ಆಂಥ್ರೋಪಿಕ್ ಸಂಸ್ಥೆಯ ಕ್ಲೋಡ್ ಎಐ (Claude AI) ಕೂಡ ಸಖತ್ ಸ್ಪೀಡ್ ಆಗಿ ಬೆಳೆಯುತ್ತಿದೆ. ಸದ್ಯ ಕ್ಲೋಡ್ ಎಐ ಜಾಗತಿಕವಾಗಿ 5.6 ಕೋಟಿ ಮಂತ್ಲಿ ಆಕ್ಟಿವ್ ಯೂಸರ್ಸ್ ಹೊಂದಿದೆ ಎಂದು ಸೆನ್ಸಾರ್ ಟವರ್ ಡೇಟಾ ಹೇಳಿದೆ.

ಮುಂದಿನ ದಿನಗಳಲ್ಲಿ ಏನಾಗುತ್ತೆ?

ಚಾಟ್‌ಜಿಪಿಟಿ ಸದ್ಯಕ್ಕೆ ಗ್ರಾಹಕ ತಂತ್ರಜ್ಞಾನದ (Consumer Tech) ಇತಿಹಾಸದಲ್ಲೇ ಅತ್ಯಂತ ವೇಗವಾಗಿ ಬೆಳೆದ ಪ್ರಾಡಕ್ಟ್ ಆಗಿ ತನ್ನ ಸ್ಥಾನವನ್ನು ಭದ್ರಪಡಿಸಿಕೊಂಡಿದೆ. ಈಗ ಓಪನ್ಎಐ ಮತ್ತು ಇತರ ಕಂಪನಿಗಳು ಕೇವಲ ಯೂಸರ್ಸ್ ಸಂಖ್ಯೆಯನ್ನು ಹೆಚ್ಚು ಮಾಡುವುದರ ಜೊತೆಗೆ, ಬಿಸಿನೆಸ್ ಕಂಪನಿಗಳಿಗೆ ಎಐ ಮಾಡೆಲ್‌ಗಳನ್ನು ಮಾರಿ ಹಣ ಗಳಿಸುವುದು (Monetisation) ಹೇಗೆ ಅನ್ನೋದರ ಕಡೆಗೆ ಹೆಚ್ಚು ಗಮನ ಹರಿಸುತ್ತಿವೆ.

ಹಿಂದೊಂದು ಕಾಲವಿತ್ತು, ಸೋಶಿಯಲ್ ಮೀಡಿಯಾ ಮತ್ತು ಗೂಗಲ್ ಸರ್ಚ್ ಇಲ್ಲದೆ ನಮ್ಮ ದಿನ ಕಳಿಯುತ್ತಿರಲಿಲ್ಲ. ಆದರೆ ಇನ್ಮುಂದೆ ಈ ಎಐ ಅಸಿಸ್ಟೆಂಟ್‌ಗಳು ಕೂಡ ನಮ್ಮ ನಿತ್ಯ ಜೀವನದ ಅತ್ಯಗತ್ಯ ಅಂಗವಾಗಲಿವೆ ಅನ್ನೋದಕ್ಕೆ ಚಾಟ್‌ಜಿಪಿಟಿಯ ಈ 100 ಕೋಟಿಯ ಹೊಸ ರೆಕಾರ್ಡ್ ದೊಡ್ಡ ಉದಾಹರಣೆ.

Latest News