CBSE 12ನೇ ರಿಸಲ್ಟ್ ಔಟ್ - ನಿಮ್ಮ ಅಂಕಪಟ್ಟಿ ಚೆಕ್ ಮಾಡಲು ಇಲ್ಲಿರೋ ಡೈರೆಕ್ಟ್ ಲಿಂಕ್ ಬಳಸಿ!!

ಬೆಂಗಳೂರು: ಸಿಬಿಎಸ್‌ಇ 12ನೇ ತರಗತಿಯ ವಿದ್ಯಾರ್ಥಿಗಳ ದೀರ್ಘಕಾಲದ ಕಾಯುವಿಕೆಗೆ ಕೊನೆಗೂ ತೆರೆ ಬಿದ್ದಿದೆ! ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿಯು 2026ನೇ ಸಾಲಿನ ಪರೀಕ್ಷಾ ಫಲಿತಾಂಶವನ್ನು ಅಧಿಕೃತವಾಗಿ ಬಿಡುಗಡೆ ಮಾಡಿದೆ. ದೇಶಾದ್ಯಂತ ಲಕ್ಷಾಂತರ ವಿದ್ಯಾರ್ಥಿಗಳು ಈಗ ತಮ್ಮ ಭವಿಷ್ಯದ ಅಂಕಪಟ್ಟಿಗಳನ್ನು ನೋಡಲು ಮುಗಿಬೀಳ್ತಿದ್ದಾರೆ.

CBSE 12ನೇ ಫಲಿತಾಂಶ
CBSE 12ನೇ ಫಲಿತಾಂಶ

ರಿಸಲ್ಟ್ ನೋಡುವುದು ಎಲ್ಲಿ?
ಸರ್ವರ್ ಬ್ಯುಸಿ ಇರೋದ್ರಿಂದ ಗೊಂದಲ ಬೇಡ, ನೀವು ಈ ಕೆಳಗಿನ ಅಧಿಕೃತ ವೆಬ್‌ಸೈಟ್‌ಗಳ ಮೂಲಕ ನಿಮ್ಮ ರಿಸಲ್ಟ್ ನೋಡಬಹುದು:

  • cbseresults.nic.in
  • cbse.gov.in

ವೆಬ್‌ಸೈಟ್ ಓಪನ್ ಆಗದಿದ್ದರೆ ಚಿಂತೆ ಮಾಡಬೇಡಿ, ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿರೋ DigiLocker ಅಥವಾ UMANG ಆಪ್‌ಗಳ ಮೂಲಕವೂ ಡಿಜಿಟಲ್ ಅಂಕಪಟ್ಟಿ ಮತ್ತು ಮೈಗ್ರೇಶನ್ ಸರ್ಟಿಫಿಕೇಟ್ ಪಡೆದುಕೊಳ್ಳಬಹುದು.

  • ಹಂತ ಹಂತವಾಗಿ ರಿಸಲ್ಟ್ ಚೆಕ್ ಮಾಡೋ ಸಿಂಪಲ್ ವಿಧಾನ
  • ಮೊದಲು ಸಿಬಿಎಸ್‌ಇ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ.
  • ಹೋಮ್ ಪೇಜ್‌ನಲ್ಲಿ ಕಾಣುವ ‘Class 12th Result 2026’ ಲಿಂಕ್ ಮೇಲೆ ಕ್ಲಿಕ್ ಮಾಡಿ.
  • ನಿಮ್ಮ ರೋಲ್ ನಂಬರ್, ಸ್ಕೂಲ್ ನಂಬರ್ ಮತ್ತು ಅಡ್ಮಿಟ್ ಕಾರ್ಡ್ ಐಡಿಯನ್ನು ಸರಿಯಾಗಿ ನಮೂದಿಸಿ.
  • ‘Submit’ ಬಟನ್ ಒತ್ತಿದ ತಕ್ಷಣ ನಿಮ್ಮ ರಿಸಲ್ಟ್ ಪರದೆಯ ಮೇಲೆ ಕಾಣುತ್ತೆ.
  • ಅದನ್ನು ಡೌನ್‌ಲೋಡ್ ಮಾಡಿಕೊಳ್ಳಿ ಅಥವಾ ಒಂದು ಪ್ರಿಂಟ್ ತಗೆದಿಟ್ಟುಕೊಳ್ಳಿ.

ಈ ಬಾರಿಯ ಫಲಿತಾಂಶ ಹೇಗಿದೆ?

ಈ ವರ್ಷ ಒಟ್ಟು ಶೇ. 85.20 ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಆದರೆ ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಫಲಿತಾಂಶದಲ್ಲಿ ಸ್ವಲ್ಪ ಕುಸಿತ ಕಂಡಿದೆ. 2025ರಲ್ಲಿ ಶೇ. 88.39ರಷ್ಟು ಮಂದಿ ಪಾಸಾಗಿದ್ದರು, ಅಂದರೆ ಈ ಬಾರಿ ಸುಮಾರು ಶೇ. 3.19 ರಷ್ಟು ಕಡಿಮೆ ಫಲಿತಾಂಶ ಬಂದಿದೆ.

ವಿಶೇಷ ಅಂದ್ರೆ, ವಿದ್ಯಾರ್ಥಿಗಳ ಮೇಲೆ ಮಾನಸಿಕ ಒತ್ತಡ ಹೇರಬಾರದು ಅನ್ನೋ ಕಾರಣಕ್ಕೆ ಸಿಬಿಎಸ್‌ಇ ಈ ಬಾರಿಯೂ ಯಾವುದೇ 'ಟಾಪರ್ಸ್ ಲಿಸ್ಟ್' ಅಥವಾ ರ‍್ಯಾಂಕ್ ಪಟ್ಟಿಯನ್ನು ಬಿಡುಗಡೆ ಮಾಡಿಲ್ಲ. ಬರಿ ಗ್ರೇಡ್ ಮತ್ತು ಅಂಕಗಳ ಆಧಾರದ ಮೇಲೆ ಫಲಿತಾಂಶ ನೀಡಿದೆ.

ಅಂಕ ಕಡಿಮೆ ಬಂದರೆ ಅಥವಾ ಫೇಲ್ ಆದರೆ ಏನು ಮಾಡಬೇಕು?

ಒಂದು ವೇಳೆ ರಿಸಲ್ಟ್ ನಿಮ್ಮ ನಿರೀಕ್ಷೆಯಂತೆ ಬರದಿದ್ದರೆ ಅಥವಾ ಒಂದೆರಡು ವಿಷಯಗಳಲ್ಲಿ ಮಾರ್ಕ್ಸ್ ಕಮ್ಮಿ ಅನಿಸಿದರೆ ಧೃತಿಗೆಡಬೇಡಿ. ನಿಮಗಾಗಿ ಮಂಡಳಿಯು ಈ ಕೆಳಗಿನ ಅವಕಾಶಗಳನ್ನು ನೀಡಿದೆ:

ಮರುಮೌಲ್ಯಮಾಪನ (Re-evaluation): ನಿಮ್ಮ ಅಂಕಗಳನ್ನು ಮತ್ತೊಮ್ಮೆ ಎಣಿಕೆ ಮಾಡಲು ಅಥವಾ ಪೇಪರ್ ಮರುಪರಿಶೀಲನೆ ಮಾಡಲು ಅರ್ಜಿ ಸಲ್ಲಿಸಬಹುದು.

ಕಂಪಾರ್ಟ್‌ಮೆಂಟ್ ಪರೀಕ್ಷೆ: ಒಂದು ಅಥವಾ ಎರಡು ವಿಷಯದಲ್ಲಿ ಫೇಲ್ ಆದವರಿಗೆ ಮತ್ತೆ ಪರೀಕ್ಷೆ ಬರೆದು ಪಾಸಾಗಲು ಮಂಡಳಿಯು ಶೀಘ್ರದಲ್ಲೇ ದಿನಾಂಕ ಪ್ರಕಟಿಸಲಿದೆ.

Latest News