ಅಕೌಂಟ್ ನಲ್ಲಿರುವ ಹಣ ಎಗರಿಸಲು ಬಂದಿದೆ ಕಳ್ಳರ ಹೊಸ ಉಪಾಯ - ಎಂದಿಗೂ ಈ ನಂಬರ್ ಡಯಲ್ ಮಾಡ್ಬೇಡಿ!!

ನಿಮ್ಮ ಬ್ಯಾಂಕ್ ಖಾತೆಯಲ್ಲಿರುವ ಹಣ ಸುರಕ್ಷಿತವಾಗಿರಬೇಕಾದರೆ ಕೇವಲ OTP ಗುಟ್ಟಾಗಿಟ್ಟರೆ ಸಾಕಾಗುವುದಿಲ್ಲ. ಈಗಿನ ಸೈಬರ್ ಕಳ್ಳರು ಇನ್ನೊಂದು ಹೆಜ್ಜೆ ಮುಂದೆ ಹೋಗಿ, ನಿಮ್ಮ ಫೋನ್‌ಗೆ ಬರುವ ದೃಢೀಕರಣ ಕರೆಗಳನ್ನೇ ಹೈಜಾಕ್ ಮಾಡುತ್ತಿದ್ದಾರೆ. ಇದನ್ನೇ 'ಕಾಲ್ ಫಾರ್ವರ್ಡಿಂಗ್ ಸ್ಕ್ಯಾಮ್' ಎಂದು ಕರೆಯಲಾಗುತ್ತಿದೆ. ಇಂಟರ್ನೆಟ್ ಇಲ್ಲದಿದ್ದರೂ, ಸಾಮಾನ್ಯ ಬಟನ್ ಫೋನ್ ಬಳಸುವವರನ್ನೂ ಈ ಬಲೆಗೆ ಬೀಳಿಸಬಹುದಾಗಿದೆ.

ಸೈಬರ್ ಕಳ್ಳರ ಹೊಸ ಆಟ: ನಿಮ್ಮ ಕರೆಗಳ ಹೈಜಾಕ್
ಸೈಬರ್ ಕಳ್ಳರ ಹೊಸ ಆಟ: ನಿಮ್ಮ ಕರೆಗಳ ಹೈಜಾಕ್

ಅಸಲಿಗೆ ವಂಚಕರು ಹೇಗೆ ಬಲೆಗೆ ಬೀಳಿಸುತ್ತಾರೆ?  

ವಂಚಕರು ಮೊದಲು ನಂಬಿಕೆ ಮೂಡಿಸುವ ರೀತಿಯಲ್ಲಿ ಮಾತನಾಡುತ್ತಾರೆ. ಅವರು ಡೆಲಿವರಿ ಬಾಯ್, ಟೆಲಿಕಾಂ ಅಧಿಕಾರಿ ಅಥವಾ ಕೊರಿಯರ್ ಏಜೆಂಟ್ ಎಂದು ಪರಿಚಯಿಸಿಕೊಳ್ಳುತ್ತಾರೆ. ನಿಮ್ಮ ಪಾರ್ಸೆಲ್ ವಿಳಾಸ ತಪ್ಪಾಗಿದೆ ಅಥವಾ ಸಿಮ್ ಕಾರ್ಡ್ ಬ್ಲಾಕ್ ಆಗಲಿದೆ ಎಂದು ಭಯ ಹುಟ್ಟಿಸುತ್ತಾರೆ. ನಂತರ, ನಿಮ್ಮ ಡಯಲ್ ಪ್ಯಾಡ್‌ನಲ್ಲಿ 21 ಅಥವಾ 401 ನಂತಹ ಕೋಡ್‌ಗಳನ್ನು ಅವರ ಮೊಬೈಲ್ ಸಂಖ್ಯೆಯೊಂದಿಗೆ ಡಯಲ್ ಮಾಡಲು ಹೇಳುತ್ತಾರೆ.

ಅಪಾಯಕಾರಿ ಕೋಡ್‌ಗಳು ಬಗ್ಗೆ ಇರಲಿ ಎಚ್ಚರಿಕೆ

  • 21 [ಮೊಬೈಲ್ ಸಂಖ್ಯೆ] # → ಎಲ್ಲಾ ಕರೆಗಳು ವಂಚಕರಿಗೆ ಹೋಗುತ್ತವೆ
  • 67 [ಮೊಬೈಲ್ ಸಂಖ್ಯೆ] # → ನೀವು ಬ್ಯುಸಿ ಇದ್ದಾಗ ಕರೆ ವರ್ಗಾವಣೆಯಾಗುತ್ತದೆ
  • 401 [ಮೊಬೈಲ್ ಸಂಖ್ಯೆ] → ಬೇಷರತ್ತಾದ ಕಾಲ್ ಫಾರ್ವರ್ಡಿಂಗ್ ಸಕ್ರಿಯವಾಗುತ್ತದೆ

ಒಮ್ಮೆ ಈ ಕೋಡ್‌ಗಳನ್ನು ಡಯಲ್ ಮಾಡಿದರೆ, ನಿಮ್ಮ ಬ್ಯಾಂಕ್‌ನಿಂದ ಬರುವ Voice OTP ಕರೆಗಳು ನೇರವಾಗಿ ವಂಚಕರಿಗೆ ತಲುಪುತ್ತವೆ.

ತುರ್ತು ಕ್ರಮಗಳ ಕೈಗೊಳ್ಳಿ 

ನೀವು ತಿಳಿಯದೆ ಇಂತಹ ಕೋಡ್‌ಗಳನ್ನು ಡಯಲ್ ಮಾಡಿದರೆ ಅಥವಾ ಕರೆಗಳು ಬೇರೆಯವರಿಗೆ ಹೋಗುತ್ತಿದೆ ಎಂಬ ಅನುಮಾನವಿದ್ದರೆ:

  • ತಕ್ಷಣ ##002# ಡಯಲ್ ಮಾಡಿ → ಇದು ಎಲ್ಲಾ ಫಾರ್ವರ್ಡಿಂಗ್ ಸೆಟ್ಟಿಂಗ್‌ಗಳನ್ನು ಅಳಿಸುತ್ತದೆ.
  • ಸೈಬರ್ ವಂಚನೆ ನಡೆದರೆ ವಿಳಂಬ ಮಾಡದೆ 1930 ಗೆ ಕರೆ ಮಾಡಿ ದೂರು ನೀಡಿ.

ನಮ್ಮ ಸಲಹೆ ಹೀಗಿದೆ - ಸುರಕ್ಷತೆ ನಿಮ್ಮ ಕೈಯಲ್ಲಿ  

ಯಾವುದೇ ಬ್ಯಾಂಕ್ ಅಥವಾ ಟೆಲಿಕಾಂ ಕಂಪನಿ ತನ್ನ ಗ್ರಾಹಕರಿಗೆ ಫೋನ್‌ನಲ್ಲಿ ಇಂತಹ ‘ಸ್ಟಾರ್’ (*) ಅಥವಾ ‘ಹ್ಯಾಶ್’ (#) ಕೋಡ್‌ಗಳನ್ನು ಡಯಲ್ ಮಾಡಲು ಕೇಳುವುದಿಲ್ಲ. ಅಪರಿಚಿತರು ಹೇಳಿದರೂ ಅಂತಹ ಕೋಡ್‌ಗಳನ್ನು ಬಳಸಬೇಡಿ. ಜೊತೆಗೆ ನಿಮ್ಮ ಫೋನ್ ಸೆಟ್ಟಿಂಗ್ಸ್‌ನಲ್ಲಿ ‘Call Forwarding’ ಆಯ್ಕೆಯನ್ನು ಆಗಾಗ್ಗೆ ಪರಿಶೀಲಿಸಿ.

  • ಸ್ಮಾರ್ಟ್‌ಫೋನ್ ಇಲ್ಲದವರಿಗೂ ಈ ವಂಚನೆ ಸಾಧ್ಯ – ಏಕೆಂದರೆ ಇದು USSD ಕೋಡ್ ಆಧಾರಿತ.
  • ಇಂಟರ್ನೆಟ್ ಆಫ್ ಮಾಡಿದರೂ ವಂಚನೆ ತಪ್ಪದು – ಕಾಲ್ ಫಾರ್ವರ್ಡಿಂಗ್ ಸೆಲ್ಯುಲಾರ್ ನೆಟ್‌ವರ್ಕ್‌ನಲ್ಲಿ ಕಾರ್ಯನಿರ್ವಹಿಸುತ್ತದೆ.

Latest News

Related News