ಮೇ 31ರಂದು ಆಕಾಶದಲ್ಲಿ ಮೂಡಲಿದ್ದಾನೆ 'ಬ್ಲೂ ಮೂನ್' - ಚಂದಮಾಮ ನಿಜಕ್ಕೂ ನೀಲಿ ಬಣ್ಣಕ್ಕೆ ತಿರುಗುತ್ತಾನಾ?

ನಾಳೆ ರಾತ್ರಿ (ಮೇ 31) ನೀವೇನಾದರೂ ಆಕಾಶದ ಕಡೆ ನೋಡಿದರೆ ನಿಮಗೊಂದು ಸಖತ್ ಸ್ಪೆಷಲ್ ನೋಟ ಕಣ್ಣಿಗೆ ಬೀಳಲಿದೆ. ಹೌದು, ಖಗೋಳ ಲೋಕದಲ್ಲಿ ನಾಳಿನ ರಾತ್ರಿ ತುಂಬಾ ವಿಶೇಷವಾದದ್ದು. ಯಾಕಂದ್ರೆ, ನಾಳೆ ಆಕಾಶದಲ್ಲಿ 'ಬ್ಲೂ ಮೂನ್' (Blue Moon) ಕಾಣಿಸಿಕೊಳ್ಳುತ್ತಿದ್ದಾನೆ. ಅಷ್ಟೇ ಅಲ್ಲ, ವಿಜ್ಞಾನಿಗಳು ಇದನ್ನು 'ಮೈಕ್ರೋಮೂನ್' (Micro Moon) ಅಂತಾನೂ ಕರೆಯುತ್ತಿದ್ದಾರೆ.

ಮೇ ತಿಂಗಳ ಕೊನೆಯ ದಿನ – ಬ್ಲೂ ಮೂನ್ ಮ್ಯಾಜಿಕ್; | Photo Credit: AI
ಮೇ ತಿಂಗಳ ಕೊನೆಯ ದಿನ – ಬ್ಲೂ ಮೂನ್ ಮ್ಯಾಜಿಕ್; | Photo Credit: AI

ಯಾವಾಗಲೂ ಬಿಳಿಯಾಗಿ, ಬೆಳ್ಳಿಯಂತೆ ಹೊಳೆಯುವ ಚಂದಮಾಮನಿಗೆ ಇದೇನಪ್ಪಾ 'ಬ್ಲೂ ಮೂನ್' ಅಂತ ಹೆಸರು? ನಾಳೆ ರಾತ್ರಿ ಚಂದ್ರ ನಿಜವಾಗಲೂ ನೀಲಿ ಬಣ್ಣಕ್ಕೆ ಚೇಂಜ್ ಆಗ್ತಾನಾ? ನಮಗೆ ಚಂದ್ರ ಯಾಕೆ ಚಿಕ್ಕದಾಗಿ ಕಾಣಿಸ್ತಾನೆ? ಇಂತಹ ಎಲ್ಲಾ ಇಂಟರೆಸ್ಟಿಂಗ್ ಪ್ರಶ್ನೆಗಳಿಗೆ ಸಿಂಪಲ್ ಆದ ಉತ್ತರ ಇಲ್ಲಿದೆ ನೋಡಿ.

ನಿಜಕ್ಕೂ ಚಂದ್ರ ನೀಲಿ ಬಣ್ಣಕ್ಕೆ ತಿರುಗುತ್ತಾನಾ?

ಮೊದಲನೇದಾಗಿ ನಿಮ್ಮ ಕನ್ಫ್ಯೂಷನ್ ಕ್ಲಿಯರ್ ಮಾಡ್ತೀವಿ ಕೇಳಿ. 'ಬ್ಲೂ ಮೂನ್' ಅಂದ ತಕ್ಷಣ ಚಂದ್ರ ನೀಲಿ ಬಣ್ಣಕ್ಕೆ ಬದಲಾಗುತ್ತಾನೆ ಅಂತ ಮಾತ್ರ ಅಂದುಕೋಬೇಡಿ! ನಾಳೆ ರಾತ್ರಿ ಕೂಡ ಚಂದಮಾಮ ಎಂದಿನಂತೆ ಸಖತ್ ಬ್ರೈಟ್ ಆಗಿ, ಬಿಳಿ ಬಣ್ಣದಲ್ಲೇ ಕಂಗೊಳಿಸಲಿದ್ದಾನೆ.

ಹಾಗಾದರೆ ಇದಕ್ಕೆ 'ಬ್ಲೂ ಮೂನ್' ಅಂತ ಯಾಕೆ ಕರೆಯುತ್ತಾರೆ ಗೊತ್ತಾ? ಸಾಮಾನ್ಯವಾಗಿ ಒಂದು ವರ್ಷದಲ್ಲಿ 12 ಹುಣ್ಣಿಮೆಗಳು (Full Moon) ಬರುತ್ತವೆ. ಅಂದರೆ ತಿಂಗಳಿಗೆ ಒಂದೇ ಹುಣ್ಣಿಮೆ. ಆದರೆ, ಇಂಗ್ಲಿಷ್ ಕ್ಯಾಲೆಂಡರ್‌ನ ದಿನಗಳು ಮತ್ತು ಚಂದ್ರನ ಲೂನಾರ್ ಸೈಕಲ್ (29.5 ದಿನಗಳು) ಮಧ್ಯೆ ಇರೋ ಸಣ್ಣ ಡಿಫರೆನ್ಸ್‌ನಿಂದಾಗಿ, ಅಪರೂಪಕ್ಕೆ ಒಂದೇ ತಿಂಗಳಲ್ಲಿ ಎರಡು ಹುಣ್ಣಿಮೆಗಳು ಬಂದುಬಿಡುತ್ತವೆ. ಹೀಗೆ ಒಂದೇ ತಿಂಗಳಲ್ಲಿ ಬರುವ ಎರಡನೇ ಹುಣ್ಣಿಮೆಯ ಚಂದ್ರನನ್ನು ವಿಜ್ಞಾನದ ಭಾಷೆಯಲ್ಲಿ 'ಬ್ಲೂ ಮೂನ್' ಅಂತ ಕರೆಯಲಾಗುತ್ತದೆ.

ಈ ಮೇ ತಿಂಗಳ ಆರಂಭದಲ್ಲಿ ಅಂದರೆ ಮೇ 1 ರಂದು ಈಗಾಗಲೇ ಒಂದು ಹುಣ್ಣಿಮೆ ಮುಗಿದಿದೆ. ಈಗ ಮೇ 31 ರಂದು ತಿಂಗಳ ಕೊನೆಯ ದಿನ ಮತ್ತೊಂದು ಹುಣ್ಣಿಮೆ ಬಂದಿದೆ. ಹಾಗಾಗಿ ಈ ನಾಳಿನ ಚಂದ್ರನಿಗೆ ಬ್ಲೂ ಮೂನ್ ಎಂಬ ಹೆಸರು ಬಂದಿದೆ ಅಷ್ಟೇ.

ಮತ್ತೆ ಇಂತಹ ಚಂದ್ರನನ್ನು ನೋಡಲು 2028 ರವರೆಗೆ ಕಾಯಬೇಕು!

ಇಂತಹ ಅಪರೂಪದ ಘಟನೆಗಳು ಸದಾ ನಡೆಯುವುದಿಲ್ಲ. ಇದಕ್ಕೂ ಮುನ್ನ 2023 ರ ಆಗಸ್ಟ್ ತಿಂಗಳಲ್ಲಿ ಒಂದೇ ತಿಂಗಳು ಎರಡು ಹುಣ್ಣಿಮೆ ಬಂದಿದ್ದವು. ಈಗ 2026ರ ಮೇ ತಿಂಗಳಲ್ಲಿ ಈ ಮ್ಯಾಜಿಕ್ ನಡೆಯುತ್ತಿದೆ. ಇನ್ನು ಮುಂದಿನ ಬ್ಲೂ ಮೂನ್ ನೋಡಬೇಕೆಂದರೆ ನಾವು 2028ರ ಡಿಸೆಂಬರ್ ವರೆಗೆ, ಅಂದರೆ ಸುಮಾರು ಎರಡುವರೆ ವರ್ಷಗಳ ಕಾಲ ಕಾಯಲೇಬೇಕು! ಅದಕ್ಕೇ ನಾಳಿನ ಹುಣ್ಣಿಮೆ ಇಷ್ಟೊಂದು ಸ್ಪೆಷಲ್.

ಏನಿದು 'ಮೈಕ್ರೋಮೂನ್'? ಚಂದ್ರ ಯಾಕೆ ಚಿಕ್ಕದಾಗಿ ಕಾಣಿಸ್ತಾನೆ?

ನಾಳಿನ ಚಂದ್ರನಿಗೆ ಇರೋ ಇನ್ನೊಂದು ಹೆಸರು 'ಮೈಕ್ರೋಮೂನ್'. ನಮಗೆಲ್ಲಾ ಗೊತ್ತಿರೋ ಹಾಗೆ ಚಂದ್ರನು ಭೂಮಿಯನ್ನು ಸಂಪೂರ್ಣವಾಗಿ ರೌಂಡ್ ಆಗಿ ಸುತ್ತುವುದಿಲ್ಲ, ಬದಲಿಗೆ ಎಗ್ ಶೇಪ್ ಅಥವಾ ಅಂಡಾಕಾರದ ಕಕ್ಷೆಯಲ್ಲಿ (Elliptical Axis) ಸುತ್ತುತ್ತಾನೆ. ಇದರಿಂದಾಗಿ ಚಂದ್ರ ಭೂಮಿಗೆ ಒಮ್ಮೊಮ್ಮೆ ಹತ್ತಿರ ಬಂದರೆ, ಇನ್ನು ಒಮ್ಮೊಮ್ಮೆ ಸಿಕ್ಕಾಪಟ್ಟೆ ದೂರ ಹೋಗುತ್ತಾನೆ.

ನಾಳೆ ಮೇ 31 ರಂದು ಚಂದ್ರ ಭೂಮಿಯಿಂದ ಈ ವರ್ಷದಲ್ಲೇ ಅತಿ ಹೆಚ್ಚು ದೂರದಲ್ಲಿ ಇರಲಿದ್ದಾನೆ. ಸಾಮಾನ್ಯವಾಗಿ ಭೂಮಿ ಮತ್ತು ಚಂದ್ರನ ನಡುವಿನ ದೂರ ಸುಮಾರು 2,26,000 ಮೈಲಿಗಳು ಇರುತ್ತದೆ. ಆದರೆ ನಾಳೆ ಚಂದ್ರ ಬರೋಬ್ಬರಿ 2,52,088 ಮೈಲಿ ದೂರದಲ್ಲಿ ಇರಲಿದ್ದಾನೆ! ಭೂಮಿಯಿಂದ ಅತಿ ಹೆಚ್ಚು ದೂರ ಇರುವುದರಿಂದ, ಆಕಾಶದಲ್ಲಿ ಚಂದ್ರನ ಸೈಜ್ ಬೇರೆ ಹುಣ್ಣಿಮೆಗಿಂತ ಸ್ವಲ್ಪ ಚಿಕ್ಕದಾಗಿ ಕಾಣಿಸುತ್ತದೆ. ಅದಕ್ಕೇ ಇದನ್ನು 'ಮೈಕ್ರೋಮೂನ್' ಎನ್ನುತ್ತಾರೆ. ಆದರೆ ಸಾಮಾನ್ಯ ಕಣ್ಣುಗಳಿಂದ ನಮಗೆ ಈ ಸೈಜ್ ವ್ಯತ್ಯಾಸ ಅಷ್ಟಾಗಿ ಗೊತ್ತಾಗುವುದಿಲ್ಲ, ಸೈಂಟಿಫಿಕ್ ಟೆಲಿಸ್ಕೋಪ್‌ಗಳಲ್ಲಿ ಮಾತ್ರ ಇದು ಸ್ಪಷ್ಟವಾಗಿ ತಿಳಿಯುತ್ತದೆ.

ಹಾಗಾಗಿ, ನಾಳೆ ರಾತ್ರಿ ಊಟ ಮುಗಿಸಿ ಆರಾಮಾಗಿ ಟೆರೇಸ್ ಮೇಲೋಗಿ ಆಕಾಶದ ಕಡೆ ಒಮ್ಮೆ ಕಣ್ಣು ಹಾಯಿಸಿ. ನೀಲಿ ಬಣ್ಣಕ್ಕೆ ತಿರುಗದಿದ್ದರೂ, ಎರಡುವರೆ ವರ್ಷಕ್ಕೊಮ್ಮೆ ಬರುವ ಈ ಅಪರೂಪದ 'ಬ್ಲೂ ಮೂನ್' ಮತ್ತು 'ಮೈಕ್ರೋಮೂನ್' ಸುಂದರ ನೋಟವನ್ನು ಮಿಸ್ ಮಾಡದೇ ಎಂಜಾಯ್ ಮಾಡಿ!

Latest News

Related News