Feb 16, 2026 Languages : ಕನ್ನಡ | English

ಆಸೆ ಪಟ್ಟರೆ ಎಲ್ಲಾ ಸಿಕ್ಕಿಬಿಡುತ್ತಾ - ಸಿಎಂ ಪಟ್ಟದ ಕನಸಿನ ಬಗ್ಗೆ ರಾಮಲಿಂಗಾರೆಡ್ಡಿ ಮುಕ್ತ ಮಾತು!!

ಬೀದರ್‌ನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಸಚಿವ ರಾಮಲಿಂಗಾರೆಡ್ಡಿ, ಕಾಂಗ್ರೆಸ್ ಶಾಸಕರ ಫಾರೀನ್ ಟೂರ್ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ. “ಅದರ ಬಗ್ಗೆ ನನಗೆ ಗೊತ್ತಿಲ್ಲ, ಮಾಧ್ಯಮದ ಮೂಲಕ ವಿಚಾರ ತಿಳಿದು ಬಂದಿದೆ. ಫಾರೀನ್ ಟೂರ್ ಅಂದರೆ ಸ್ಟಡಿ ಟೂರ್” ಎಂದು ಅವರು ಸ್ಪಷ್ಟಪಡಿಸಿದರು.

ಸಿಎಂ ಆಗೋ ಕನಸು ಬಗ್ಗೆ ಹಾಸ್ಯಮಿಶ್ರಿತ ಉತ್ತರ ನೀಡಿದ ರಾಮಲಿಂಗಾರೆಡ್ಡಿ
ಸಿಎಂ ಆಗೋ ಕನಸು ಬಗ್ಗೆ ಹಾಸ್ಯಮಿಶ್ರಿತ ಉತ್ತರ ನೀಡಿದ ರಾಮಲಿಂಗಾರೆಡ್ಡಿ

ನಾಯಕತ್ವ ಬದಲಾವಣೆ ಚರ್ಚೆ, ಡಿಸಿಎಂ ಡಿ.ಕೆ. ಶಿವಕುಮಾರ್ ಅವರ ವರಿಷ್ಠರ ಬೇಟಿ ವಿಚಾರಗಳ ಬಗ್ಗೆ ಕೇಳಿದ ಪ್ರಶ್ನೆಗೆ ಅವರು ಪ್ರತಿಕ್ರಿಯಿಸಿ, “ಸಿಎಂ ಬದಲಾವಣೆ ವಿಚಾರ ನನಗೆ ಗೊತ್ತಿಲ್ಲ. ನಾನು ಏನೇ ಮಾತಾಡಿದ್ರು ಪಕ್ಷಕ್ಕೆ ಹಾನಿಯಾಗುತ್ತದೆ. ಹೀಗಾಗಿ ನಾನು ಏನು ಮಾತಾಡೋದಿಲ್ಲ” ಎಂದು ಹೇಳಿದರು.

ಮಾಧ್ಯಮದವರು “ನೀವು ಸಿಎಂ ಆಗೋ ಕನಸಿಲ್ವಾ?” ಎಂದು ಕೇಳಿದಾಗ, ರಾಮಲಿಂಗಾರೆಡ್ಡಿ ಹಾಸ್ಯಮಿಶ್ರಿತವಾಗಿ ಉತ್ತರಿಸಿ, “ನನಗೆ ಸಿಎಂ ಆಗಿ ಎಂದು ಬೇರೆ ಯಾರೂ ಕೇಳೋದಿಲ್ಲ. ನೀವು ಮಾತ್ರ ಕೇಳ್ತಿದೀರಾ. ಆಸೆ ಪಟ್ಟದ್ದು ಆಗುತ್ತಾ?” ಎಂದು ಹೇಳಿದರು.

ಮಾಜಿ ಸಚಿವ ಭೈರತ್ತಿ ಬಸವರಾಜ ಅರೆಸ್ಟ್ ವಿಚಾರಕ್ಕೂ ಅವರು ಪ್ರತಿಕ್ರಿಯೆ ನೀಡಿದರು. “ಕೋರ್ಟ್‌ನಲ್ಲಿ ಅವರಿಗೆ ಬೆಲ್ ಸಿಕ್ಕಿಲ್ಲ, ಅದಕ್ಕಾಗಿ ಅರೆಸ್ಟ್ ಮಾಡಿದ್ದಾರೆ” ಎಂದು ವಿವರಿಸಿದರು. ಬೀದರ್‌ನಲ್ಲಿ ನಡೆದ ಈ ಸಂವಾದದಲ್ಲಿ ರಾಮಲಿಂಗಾರೆಡ್ಡಿ ತಮ್ಮ ನಿಲುವು ಸ್ಪಷ್ಟಪಡಿಸಿದ್ದು, ಪಕ್ಷದ ಒಳಗಿನ ವಿಚಾರಗಳ ಬಗ್ಗೆ ಹೆಚ್ಚು ಮಾತನಾಡುವುದನ್ನು ತಪ್ಪಿಸಿಕೊಂಡರು. ಅವರು ನೀಡಿದ ಹೇಳಿಕೆಗಳಿಂದ, ಪಕ್ಷದ ಹಿತವನ್ನು ಕಾಪಾಡುವ ನಿಲುವು ಸ್ಪಷ್ಟವಾಗಿ ಕಂಡುಬಂತು ಎನ್ನಬಹುದು. 

Latest News