ಬೆಂಗಳೂರು: ನಿನ್ನೆ ಬೆಳಗ್ಗೆ ನಗರದಲ್ಲಿ ನಡೆದ ಘಟನೆ ಜನರ ಗಮನ ಸೆಳೆದಿದೆ. ಇಬ್ಬರು ಮಕ್ಕಳೊಂದಿಗೆ ಸ್ಕೂಟಿಯಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆ, ತಮಿಳುನಾಡು ಬಸ್ ಡ್ರೈವರ್‌ನ ರ್ಯಾಶ್ ಡ್ರೈವಿಂಗ್‌ಗೆ ಆಕ್ರೋಶ ವ್ಯಕ್ತಪಡಿಸಿದರು. ಹೌದು ಸಿಗ್ನಲ್ ಬಳಿ ಬಸ್ ವೇಗವಾಗಿ ಬಂದು, ಸ್ಕೂಟಿಗೆ ಟಚ್ ಮಾಡಿದ ಆರೋಪವನ್ನು ಈ ಮಹಿಳೆ ಮಾಡಿದ್ದಾರೆ. ಈ ಘಟನೆಗೆ ಕೋಪಗೊಂಡ ತಾಯಿ, ಬಸ್ಸಿಗೆ ಅಡ್ಡಲಾಗಿ ಸ್ಕೂಟಿ ನಿಲ್ಲಿಸಿ, ಬಳಿಕ ಆ ಬಸ್ ಡ್ರೈವರ್‌ಗೆ ಗ್ರಹಚಾರ ಬಿಡಿಸಿದರು ಎನ್ನಲಾಗಿದೆ.
ಮಕ್ಕಳೊಂದಿಗೆ ಇದ್ದರೂ, ಧೈರ್ಯವಾಗಿ ಬಸ್‌ನ್ನು ತಡೆದು ತನ್ನ ಅಸಮಾಧಾನವನ್ನು ನೇರವಾಗಿ ವ್ಯಕ್ತಪಡಿಸಿದ ಮಹಿಳೆಯ ನಡೆ ಜನರಲ್ಲಿ ಚರ್ಚೆಗೆ ಕಾರಣವಾಯಿತು. “ರ್ಯಾಶ್ ಡ್ರೈವಿಂಗ್ ಮಾಡ್ತೀರಾ? ಜನರ ಜೀವಕ್ಕೆ ಅಪಾಯ ಮಾಡ್ತೀರಾ?” ಎಂಬ ಪ್ರಶ್ನೆಗಳನ್ನು ನೇರವಾಗಿ ಕೇಳಿ, ತನ್ನ ಅಸಮಾಧಾನವನ್ನು ತೋರಿಸಿದರು. ಈ ಘಟನೆಗೆ ಸಾಕ್ಷಿಯಾದವರು ಮಹಿಳೆಯ ಧೈರ್ಯವನ್ನು ಮೆಚ್ಚಿದರು. ಕೆಲವರು “ಮಕ್ಕಳ ಜೊತೆ ಇದ್ದರೂ, ಬಸ್‌ನ್ನು ತಡೆದು ಮಾತನಾಡಿದ ಧೈರ್ಯ ಶ್ಲಾಘನೀಯ” ಎಂದು ಅಭಿಪ್ರಾಯಪಟ್ಟರೆ, ಇನ್ನು ಕೆಲವರು “ರಸ್ತೆ ಮಧ್ಯೆ ಬಸ್‌ನ್ನು ತಡೆದು ಮಾತನಾಡುವುದು ಅಪಾಯಕಾರಿಯಾಗಿದೆ” ಎಂದು ಎಚ್ಚರಿಕೆ ನೀಡಿದರು.
ಹೌದು ನಗರದಲ್ಲಿ ರ್ಯಾಶ್ ಡ್ರೈವಿಂಗ್ ಪ್ರಕರಣಗಳು ದಿನೇ ದಿನೇ ಹೆಚ್ಚುತ್ತಿವೆ. ಬಸ್, ಕಾರು, ಬೈಕ್ – ಎಲ್ಲ ವಾಹನಗಳಲ್ಲಿಯೂ ನಿಯಮ ಉಲ್ಲಂಘನೆ ಸಾಮಾನ್ಯವಾಗಿದೆ. ಇದರಿಂದ ಅಪಘಾತಗಳ ಸಂಖ್ಯೆ ಹೆಚ್ಚುತ್ತಿದ್ದು, ಜನರ ಜೀವಕ್ಕೆ ಅಪಾಯವಾಗುತ್ತಿದೆ. ಒಟ್ಟಾರೆ ಆಗಿ ಹೇಳಬೇಕು ಅಂದರೆ, ತಮಿಳುನಾಡು ಬಸ್ ಡ್ರೈವರ್‌ಗೆ ಗ್ರಹಚಾರ ಬಿಡಿಸಿದ ಮಹಿಳೆಯ ನಡೆ, ರ್ಯಾಶ್ ಡ್ರೈವಿಂಗ್ ವಿರುದ್ಧ ಜನರ ಅಸಮಾಧಾನವನ್ನು ತೋರಿಸುವ ಧೈರ್ಯದ ಉದಾಹರಣೆಯಾಗಿದೆ. ಮಕ್ಕಳ ಸುರಕ್ಷತೆಗಾಗಿ ತಾಯಿ ತೋರಿಸಿದ ಧೈರ್ಯ, ನಗರದಲ್ಲಿ ಟ್ರಾಫಿಕ್ ನಿಯಮ ಪಾಲನೆಯ ಅಗತ್ಯವನ್ನು ಮತ್ತೊಮ್ಮೆ ನೆನಪಿಸಿದೆ.