Apr 14, 2026 Languages : ಕನ್ನಡ | English

6,000 ಲೀಟರ್ ಟ್ಯಾಂಕರ್‌ಗೆ ₹.?? - ಜಲಮಂಡಳಿಯಿಂದ ಘೋಷಣೆಯಾದ ಬಂಪರ್ ಕೊಡುಗೆ ಇಲ್ಲಿದೆ ನೋಡಿ!!

ಸಿಲಿಕಾನ್ ಸಿಟಿಯಲ್ಲಿ ಬೇಸಿಗೆಯ ಬಿಸಿ ದಿನದಿಂದ ದಿನಕ್ಕೆ ಏರುತ್ತಿದ್ದಂತೆ, ಇತ್ತ ಭೂಮಿಯ ಒಡಲಲ್ಲಿನ ನೀರು ಕೂಡ ಬರಿದಾಗುತ್ತಿದೆ. ನಗರದ ಹಲವೆಡೆ ಅಂತರ್ಜಲ ಮಟ್ಟ ಕುಸಿದಿದ್ದು, ಕೊಳವೆಬಾವಿಗಳು ಬತ್ತಿ ಹೋಗುತ್ತಿವೆ. ಪರಿಣಾಮವಾಗಿ, ಕಾವೇರಿ ನೀರು ಸಮರ್ಪಕವಾಗಿ ಸಿಗದ ಬಡಾವಣೆಗಳಲ್ಲಿ ಈಗಲೇ ನೀರಿನ ಹಾಹಾಕಾರ ಶುರುವಾಗಿದೆ.

ಬೋರ್‌ವೆಲ್ ನಂಬಿದವರಿಗೆ ಎದುರಾಗಿದೆ ಸಂಕಷ್ಟ
ಬೋರ್‌ವೆಲ್ ನಂಬಿದವರಿಗೆ ಎದುರಾಗಿದೆ ಸಂಕಷ್ಟ

ಬೋರ್‌ವೆಲ್‌ ನಂಬಿದವರಿಗೆ ಸಂಕಷ್ಟ

ನಗರದ ಅಪಾರ್ಟ್‌ಮೆಂಟ್‌ಗಳು, ದೊಡ್ಡ ವಾಣಿಜ್ಯ ಸಂಕೀರ್ಣಗಳು ಮತ್ತು ಖಾಸಗಿ ಮನೆಗಳು ಹೆಚ್ಚಾಗಿ ಬೋರ್‌ವೆಲ್‌ಗಳ ಮೇಲೆ ಅವಲಂಬಿತವಾಗಿವೆ. ಆದರೆ ಮಳೆಯಿಲ್ಲದೆ ಕೆರೆಗಳು ಒಣಗಿರುವುದರಿಂದ ಅಂತರ್ಜಲ ಮರುಪೂರಣವಾಗದೆ ನೀರು ಕಡಿಮೆಯಾಗಿದೆ. ವಿಶೇಷವಾಗಿ ಪೀಣ್ಯ ಸಮೀಪದ ಅಂಧ್ರಹಳ್ಳಿ, ಹೊಸೂರು ರಸ್ತೆಯ ಗಾರ್ವೇಬಾವಿಪಾಳ್ಯ ಸೇರಿದಂತೆ ಹಲವೆಡೆ ಬೋರ್‌ವೆಲ್‌ಗಳಲ್ಲಿ ನೀರು ನಿಂತುಹೋಗಿದೆ.

"ನಮ್ಮ ಬೋರ್‌ನಲ್ಲಿ ನೀರು ತುಂಬಾ ಕಡಿಮೆಯಾಗಿದೆ. ಕಾವೇರಿ ನೀರು ಏನೋ ಬರುತ್ತದೆ, ಆದರೆ ಅದು ವಾರಕ್ಕೊಮ್ಮೆ ಮಾತ್ರ. ಸದ್ಯಕ್ಕೆ ದೊಡ್ಡ ಟ್ಯಾಂಕ್ ಇರುವುದರಿಂದ ಮ್ಯಾನೇಜ್ ಮಾಡುತ್ತಿದ್ದೇವೆ, ಮುಂದಿನ ದಿನಗಳಲ್ಲಿ ಏನಾಗುತ್ತೋ ಎಂಬ ಭಯವಿದೆ," ಎನ್ನುತ್ತಾರೆ ಅಂಧ್ರಹಳ್ಳಿಯ ನಿವಾಸಿ ಪವನ್.

ಟ್ಯಾಂಕರ್‌ಗಳಿಗೆ ಫುಲ್ ಡಿಮ್ಯಾಂಡ್

ಯಾವಾಗ ಬೋರ್‌ವೆಲ್‌ಗಳಲ್ಲಿ ನೀರು ಕಡಿಮೆಯಾಯಿತೋ, ಜನರು ಅನಿವಾರ್ಯವಾಗಿ ಖಾಸಗಿ ಟ್ಯಾಂಕರ್ ನೀರನ್ನು ಅವಲಂಬಿಸುತ್ತಿದ್ದಾರೆ. ಪ್ರಸ್ತುತ ಮಾರುಕಟ್ಟೆಯಲ್ಲಿ ಖಾಸಗಿ ಟ್ಯಾಂಕರ್‌ಗಳ ದರ ಹೀಗಿದೆ:

  • 6,000 ಲೀಟರ್ ಟ್ಯಾಂಕರ್: ₹ 600
  • 12,000 ಲೀಟರ್ ಟ್ಯಾಂಕರ್: ₹ 1,200

(ಇದು ಕೇವಲ 3 ಕಿ.ಮೀ ವ್ಯಾಪ್ತಿಯ ದರವಾಗಿದ್ದು, ದೂರ ಹೆಚ್ಚಾದಂತೆ ಬೆಲೆಯೂ ಏರುತ್ತದೆ)

ಕೆಲವು ಅಪಾರ್ಟ್‌ಮೆಂಟ್‌ಗಳಲ್ಲಿ ಪರಿಸ್ಥಿತಿ ಎಷ್ಟು ಗಂಭೀರವಾಗಿದೆಯೆಂದರೆ, ಇದ್ದ ಬೋರ್ ಬತ್ತಿದ್ದರಿಂದ ಹೊಸದಾಗಿ ಬೋರ್‌ವೆಲ್ ಕೊರೆಸಲು ಜಲತಜ್ಞರನ್ನು ಕರೆಸಿ ಚೆಕ್ ಮಾಡಿಸುತ್ತಿದ್ದಾರೆ.

ನಗರದ ನಾಗಶೆಟ್ಟಿಹಳ್ಳಿ ಹಾಗೂ ಸಂಜಯನಗರದಂತಹ ಪ್ರದೇಶಗಳಲ್ಲಿ ಕಾವೇರಿ ನೀರಿನ ಪೂರೈಕೆ ಕಡಿಮೆಯಾಗಿದೆ ಎಂದು ಜನರು ಆರೋಪಿಸುತ್ತಿದ್ದರೂ, ಜಲಮಂಡಳಿ ಮಾತ್ರ "ಕಾವೇರಿ ಪೂರೈಕೆಯಲ್ಲಿ ವ್ಯತ್ಯಯವಿಲ್ಲ" ಎಂದು ಹೇಳುತ್ತಿದೆ. "ಕಡಿಮೆ ನೀರಿರುವ ಕಡೆ ನಾವು ಕಾವೇರಿ ಟ್ಯಾಂಕರ್ ಮೂಲಕ ನೀರು ಒದಗಿಸುತ್ತಿದ್ದೇವೆ, ಪರಿಸ್ಥಿತಿ ನಿಯಂತ್ರಣದಲ್ಲಿದೆ," ಎಂದು ಅಧಿಕಾರಿಗಳು ಭರವಸೆ ನೀಡಿದ್ದಾರೆ.

ಇನ್ನು ಹವಾಮಾನ ತಜ್ಞ ಶ್ರೀನಿವಾಸ್ ರೆಡ್ಡಿ ಅವರ ಪ್ರಕಾರ, "ಮೇ ತಿಂಗಳ 2 ಅಥವಾ 3ನೇ ವಾರದಲ್ಲಿ ಪೂರ್ವ ಮುಂಗಾರು ಮಳೆ ಬರುವ ಸಾಧ್ಯತೆಯಿದೆ. ಅಲ್ಲಿಯವರೆಗೆ ಅಂತರ್ಜಲದ ಕೊರತೆ ಕಾಡುವುದು ಗ್ಯಾರಂಟಿ."

ಮಳೆ ಬರುವವರೆಗೂ ಬೆಂಗಳೂರಿಗರು ನೀರನ್ನು ಅಳೆದು ಸುರಿದು ಬಳಸಬೇಕಾದ ಅನಿವಾರ್ಯತೆ ಎದುರಾಗಿದೆ.