ಬೆಂಗಳೂರು: ಮೈಸೂರು ರಸ್ತೆ ಕೆಂಗೇರಿ ಮೆಟ್ರೋ ನಿಲ್ದಾಣದ ಬಳಿ ನಡು ರಸ್ತೆಯಲ್ಲಿ ಸ್ಪೋರ್ಟ್ಸ್ ಲ್ಯಾಂಬೋರ್ಗಿನಿ ಕಾರು ವೇಗವಾಗಿ ಓಡಿದ ಘಟನೆ ನಿನ್ನೆ ಸಂಜೆ ಜನರಲ್ಲಿ ಆತಂಕ ಮೂಡಿಸಿತು. ಅಕಸ್ಮಾತ್ ವೇಗದ ಕಾರು ರಸ್ತೆ ಮಧ್ಯೆ ರೇಸ್ ಮಾಡಿದಂತೆ ಓಡಿದ ದೃಶ್ಯಗಳು ವಾಹನ ಸವಾರರನ್ನು ಬೆಚ್ಚಿಬೀಳುವಂತೆ ಮಾಡಿವೆ ತಿಳಿದುಬಂದಿದೆ.
ಈ ಘಟನೆಗೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಹೌದು MH 01 EB7434 ನಂಬರಿನ ಕಾರು ರಸ್ತೆ ಮಧ್ಯೆ ಹುಚ್ಚಾಟ ನಡೆಸಿದ ದೃಶ್ಯಗಳು ನೆಟ್ಟಿಗರ ಆಕ್ರೋಶಕ್ಕೆ ಕಾರಣವಾಗಿವೆ. “ಇದು ರಸ್ತೆ, ರೇಸ್ ಟ್ರ್ಯಾಕ್ ಅಲ್ಲ” ಎಂದು ಹಲವರು ತೀವ್ರವಾಗಿ ಪ್ರತಿಕ್ರಿಯಿಸಿದರು. ವಾಹನ ಸವಾರರು ಒಂದು ಕ್ಷಣ ಆತಂಕಗೊಂಡು ತಮ್ಮ ವಾಹನಗಳನ್ನು ತಡೆದು ಅಪಘಾತ ತಪ್ಪಿಸಿಕೊಂಡಿದ್ದಾರೆ. “ನಮ್ಮ ಜೀವಕ್ಕೆ ಅಪಾಯ ಮಾಡ್ತಾರೆ, ಇಂತಹ ಹುಚ್ಚಾಟವನ್ನು ತಡೆಯಬೇಕು” ಎಂದು ಸ್ಥಳೀಯರು ಬೇಸರ ವ್ಯಕ್ತಪಡಿಸಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ಈ ವಿಡಿಯೋ ಹಂಚಿಕೊಂಡ ನೆಟ್ಟಿಗರು, “ನಗರದ ರಸ್ತೆಗಳು ಜನರ ಸಂಚಾರಕ್ಕೆ, ರೇಸ್‌ಗೆ ಅಲ್ಲ” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. “ಇಂತಹ ವಾಹನ ಚಾಲಕರಿಗೆ ಕಠಿಣ ಕ್ರಮ ಕೈಗೊಳ್ಳಬೇಕು” ಎಂಬ ಬೇಡಿಕೆ ಹೆಚ್ಚುತ್ತಿದೆ. ನಗರದಲ್ಲಿ ಸ್ಪೋರ್ಟ್ಸ್ ಕಾರು, ಬೈಕ್ ಹಾಗೂ ಇತರ ವಾಹನಗಳಿಂದ ನಿಯಮ ಉಲ್ಲಂಘನೆ ಪ್ರಕರಣಗಳು ಹೆಚ್ಚುತ್ತಿವೆ. ವೇಗದ ಹುಚ್ಚಾಟದಿಂದ ಅಪಘಾತಗಳ ಸಂಖ್ಯೆ ಹೆಚ್ಚುತ್ತಿರುವುದು ಆತಂಕಕಾರಿ. ಟ್ರಾಫಿಕ್ ಪೊಲೀಸರು ಇಂತಹ ಘಟನೆಗಳನ್ನು ತಡೆಯಲು ಹೆಚ್ಚಿನ ಕ್ರಮ ಕೈಗೊಳ್ಳಬೇಕಿದೆ.
ಹೌದು ಮೈಸೂರು ರಸ್ತೆಯಲ್ಲಿ ನಡೆದ ಲ್ಯಾಂಬೋರ್ಗಿನಿ ಹುಚ್ಚಾಟವು ಜನರಲ್ಲಿ ಭಯ ಮೂಡಿಸಿದ್ದು, ಕೆಲವರಿಗೆ ಹೆಚ್ಚು ಆಕ್ರೋಶ ಮತ್ತು ಬೇಸರ ಮೂಡಿಸಿತು ಎನ್ನಬಹುದು. ರಸ್ತೆ ಸುರಕ್ಷತೆಗಾಗಿ ಕಠಿಣ ಕ್ರಮ ಕೈಗೊಳ್ಳುವುದು ಅಗತ್ಯ ಎಂಬ ಸಂದೇಶವನ್ನು ಈ ಘಟನೆ ಮತ್ತೊಮ್ಮೆ ನೆನಪಿಸಿದೆ. ವಿಡಿಯೋ ಇಲ್ಲಿದೆ ನೋಡಿ ಹಾಗೆ ಈ ಘಟನೆ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ ಧನ್ಯವಾದಗಳು.