Dec 13, 2025 Languages : ಕನ್ನಡ | English

ಜೆಪಿ ನಗರದಲ್ಲಿ ಕತ್ತುಕೊಯ್ದ ಶವ ಪತ್ತೆ!! ಬೆಚ್ಚಿಬಿದ್ದ ಸ್ಥಳೀಯರು

ಬೆಂಗಳೂರು ನಗರದ ಜೆಪಿ ನಗರ ಮೊದಲನೇ ಹಂತದಲ್ಲಿ ನಿನ್ನೆ ಸಂಜೆ ವೇಳೆ ಭೀಕರ ಘಟನೆ ನಡೆದಿರುವುದಾಗಿ ಬೆಳಕಿಗೆ ಬಂದಿದೆ. ತಿಲಕ್ ಕುಮಾರ್ (32) ಎಂಬ ವ್ಯಕ್ತಿಯ ಶವವು ಕತ್ತುಕೊಯ್ದ ಸ್ಥಿತಿಯಲ್ಲಿ ಪತ್ತೆಯಾದಾಗ ಸ್ಥಳೀಯರು ಒಂದು ಕ್ಷಣ ಬೆಚ್ಚಿಬಿದ್ದರು. ಪುಟ್ ಪಾತ್ ಬಳಿಯ ಮರದ ಕೆಳಗೆ ಕುಳಿತಿದ್ದ ಸ್ಥಿತಿಯಲ್ಲಿ ಮೃತದೇಹ ಕಂಡುಬಂದಿದ್ದು, ಈ ದೃಶ್ಯವು ಅಲ್ಲಿ ಹಾದುಹೋಗುತ್ತಿದ್ದ ಜನರಲ್ಲಿ ನಿಜಕ್ಕೂ ಭಯ ಹುಟ್ಟಿಸಿತು. ಭಯದ ವಾತಾವರಣ ನಿರ್ಮಾಣ ಮಾಡಿತ್ತು. ಈ ಘಟನೆ ಕುರಿತು ಸ್ಥಳೀಯರ ಪ್ರತಿಕ್ರಿಯೆ ನೋಡುವುದಾದ್ರೆ ಘಟನಾ ಸ್ಥಳದಲ್ಲಿ ರಕ್ತದ ಕಲೆಗಳು ಸ್ಪಷ್ಟವಾಗಿ ಕಾಣಿಸಿಕೊಂಡವು. ಇದನ್ನು ಕಂಡ ಸ್ಥಳೀಯರು ತಕ್ಷಣವೇ ಪೊಲೀಸರಿಗೆ ಮಾಹಿತಿ ನೀಡಿದರು. ಕೆಲವೇ ಕ್ಷಣಗಳಲ್ಲಿ ಜೆಪಿ ನಗರ ಪೊಲೀಸರು ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದರು ಎಂದು ತಿಳಿದುಬಂದಿದೆ. ಮೃತದೇಹದ ಸುತ್ತಮುತ್ತಲಿನ ಪರಿಸರವನ್ನು ಸಂಪೂರ್ಣವಾಗಿ ಪರಿಶೀಲಿಸಿ, ಯಾವುದೇ ಸುಳಿವುಗಳನ್ನು ತಪ್ಪಿಸಿಕೊಳ್ಳದಂತೆ ಕ್ರಮ ಕೈಗೊಂಡರು.

ಜೆಪಿ ನಗರದಲ್ಲಿ ಕತ್ತುಕೊಯ್ದ ಶವ ಪತ್ತೆ
ಜೆಪಿ ನಗರದಲ್ಲಿ ಕತ್ತುಕೊಯ್ದ ಶವ ಪತ್ತೆ

ಘಟನಾ ಸ್ಥಳದಲ್ಲಿ ಸೋಕೋ ತಂಡವು ತಕ್ಷಣವೇ ಕಾರ್ಯನಿರ್ವಹಿಸಿತು. ಶವದ ಸ್ಥಿತಿ, ರಕ್ತದ ಗುರುತುಗಳು, ಸುತ್ತಮುತ್ತಲಿನ ವಸ್ತುಗಳು ಎಲ್ಲವನ್ನೂ ಪರಿಶೀಲಿಸಿ ಸಾಕ್ಷ್ಯಗಳನ್ನು ಸಂಗ್ರಹಿಸಲಾಯಿತು. ಶವವು ಕತ್ತುಕೊಯ್ದ ಸ್ಥಿತಿಯಲ್ಲಿ ಪತ್ತೆಯಾಗಿರುವುದರಿಂದ, ಪೊಲೀಸರು ಕೊಲೆ ಪ್ರಕರಣ ದಾಖಲಿಸಿ ತನಿಖೆಯನ್ನು ಗಂಭೀರವಾಗಿ ಮುಂದುವರಿಸಿದರು. ತನಿಖೆಯ ಸುಳಿವು ಹುಡುಕುತ್ತ ಹೋದ ಪೊಲೀಸರು ತನಿಖೆಯ ವೇಳೆ ತಿಲಕ್ ಕುಮಾರ್ ತಾನೇ ಹತ್ತಿರದ ಅಂಗಡಿಯೊಂದರಲ್ಲಿ ಚಾಕು ಖರೀದಿ ಮಾಡಿದ್ದನ್ನು ಪೊಲೀಸರು ಪತ್ತೆಹಚ್ಚಿದರು. ಈ ಮಾಹಿತಿ ಪ್ರಕರಣವನ್ನು ಇನ್ನಷ್ಟು ಗೂಢಗಟ್ಟುವಂತೆ ಮಾಡಿಡೇಯಂತೆ. ಇದು ಆತ್ಮಹತ್ಯೆಯೋ ಅಥವಾ ಕೊಲೆಯೋ ಎಂಬ ಎರಡು ಆಯಾಮಗಳಲ್ಲಿ ತನಿಖೆ ಸಾಗುತ್ತಿದ್ದು, ನಿಜಾಸತ್ಯವನ್ನು ಪತ್ತೆಹಚ್ಚಲು ಪೊಲೀಸರು ಹಲವು ದಿಕ್ಕುಗಳಲ್ಲಿ ಪರಿಶೀಲನೆ ನಡೆಸುತ್ತಿದ್ದಾರೆ.

ಹೌದು ಮೃತನ ಹಿನ್ನೆಲೆ ನೋಡುವುದಾದರೆ ಮೃತ ತಿಲಕ್ ಕುಮಾರ್ ಎಂಬ ಈ ವ್ಯಕ್ತಿ ಹಿಮಾಚಲ ಪ್ರದೇಶಡಾ  ಮೂಲದವರಾಗಿದ್ದು, ಬೆಂಗಳೂರಿನ ಹೋಟೆಲ್‌ನಲ್ಲಿ ಕೆಲಸ ಮಾಡಿಕೊಂಡಿದ್ದರು. ಆತ ನಗರದ ಜೀವನಕ್ಕೆ ಹೊಂದಿಕೊಂಡಿದ್ದರೂ, ಆತನ ಸಾವಿನ ಹಿನ್ನೆಲೆ ಇನ್ನೂ ಸ್ಪಷ್ಟವಾಗಿಲ್ಲ. ಕುಟುಂಬಸ್ಥರು ಮತ್ತು ಸಹೋದ್ಯೋಗಿಗಳಿಂದ ಮಾಹಿತಿ ಸಂಗ್ರಹಿಸುವ ಮೂಲಕ ಪೊಲೀಸರು ಪ್ರಕರಣದ ಮೂಲವನ್ನು ತಿಳಿಯಲು ಪ್ರಯತ್ನಿಸುತ್ತಿದ್ದಾರೆ. ಈ ಪ್ರಕರಣವು ಆತ್ಮಹತ್ಯೆಯೋ ಅಥವಾ ಕೊಲೆಯೋ ಎಂಬುದನ್ನು ಸ್ಪಷ್ಟಪಡಿಸಲು ಪೊಲೀಸರು ಸಂಪೂರ್ಣ ತನಿಖೆ ನಡೆಸುತ್ತಿದ್ದಾರೆ. ಸಾಕ್ಷ್ಯಗಳ ಪರಿಶೀಲನೆ, ಸಾಕ್ಷಿದಾರರ ಹೇಳಿಕೆಗಳು, ಮತ್ತು ತಿಲಕ್ ಕುಮಾರ್‌ನ ವೈಯಕ್ತಿಕ ಜೀವನದ ವಿವರಗಳನ್ನು ಆಧರಿಸಿ ಮುಂದಿನ ದಿನಗಳಲ್ಲಿ ಹೆಚ್ಚಿನ ಮಾಹಿತಿ ಹೊರಬರುವ ನಿರೀಕ್ಷೆಯಿದೆ. ಈ ಘಟನೆ ನಗರದ ಜನರಲ್ಲಿ ಆತಂಕವನ್ನು ಉಂಟುಮಾಡಿದ್ದು, ಪೊಲೀಸರು ಪ್ರಕರಣವನ್ನು ಶೀಘ್ರದಲ್ಲಿ ಬಿಚ್ಚಿಡುವ ಭರವಸೆ ನೀಡಿದ್ದಾರೆ.

Latest News