May 7, 2026 Languages : ಕನ್ನಡ | English

ಬೆಂಗಳೂರಿನ ಆಸ್ಪತ್ರೆಯಲ್ಲಿ ನಡೆದ ಈ ಭೀಕರ ಕಳ್ಳತನ - ಯಾವ ಆಸ್ಪತ್ರೆ ಗೊತ್ತಾ ಇಲ್ಲಿದೆ ನೋಡಿ!!

ನಾವೆಲ್ಲರೂ ಆಸ್ಪತ್ರೆಗೆ ಹೋಗುವುದು ರೋಗ ವಾಸಿ ಮಾಡಿಕೊಳ್ಳಲು. ಅಲ್ಲಿನ ವೈದ್ಯರು ಮತ್ತು ಸಿಬ್ಬಂದಿಯನ್ನು ನಾವು ಕುರುಡಾಗಿ ನಂಬುತ್ತೇವೆ. ಆದರೆ ಬೆಂಗಳೂರಿನಲ್ಲಿ ನಡೆದ ಈ ಘಟನೆ ಕೇಳಿದರೆ ನೀವು ಇನ್ಮುಂದೆ ಆಸ್ಪತ್ರೆಗೆ ಹೋಗುವಾಗ ನೂರು ಬಾರಿ ಯೋಚಿಸುತ್ತೀರಿ. ಶಸ್ತ್ರಚಿಕಿತ್ಸೆಗೆಂದು ದಾಖಲಾಗಿದ್ದ ಮಹಿಳೆಯೊಬ್ಬರ ಬರೋಬ್ಬರಿ 9.7 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣಗಳನ್ನು ಅದೇ ಆಸ್ಪತ್ರೆಯ ಮಹಿಳಾ ಸಿಬ್ಬಂದಿಯೇ ಕಳ್ಳತನ ಮಾಡಿರುವ ಘಟನೆ ಬೆಳಕಿಗೆ ಬಂದಿದೆ.

ಆಸ್ಪತ್ರೆಗೆ ಚಿಕಿತ್ಸೆಗೆ ಹೋದ್ರೆ ಒಡವೆ ಬಗ್ಗೆ ಇರಲಿ ಎಚ್ಚರ | Photo Credit: AI
ಆಸ್ಪತ್ರೆಗೆ ಚಿಕಿತ್ಸೆಗೆ ಹೋದ್ರೆ ಒಡವೆ ಬಗ್ಗೆ ಇರಲಿ ಎಚ್ಚರ | Photo Credit: AI

ಬೆಂಗಳೂರಿನ ಹೆಣ್ಣೂರು-ಬಾಗಲೂರು ಮುಖ್ಯರಸ್ತೆಯಲ್ಲಿರುವ ಖಾಸಗಿ ಆಸ್ಪತ್ರೆಯಲ್ಲಿ ಈ ಆಘಾತಕಾರಿ ಘಟನೆ ನಡೆದಿದೆ.

ಏನಿದು ಘಟನೆ?
ಯಲಹಂಕ ನಿವಾಸಿಯಾದ 41 ವರ್ಷದ ವ್ಯಕ್ತಿಯೊಬ್ಬರು ತನ್ನ ಪತ್ನಿಯನ್ನು ಶಸ್ತ್ರಚಿಕಿತ್ಸೆಗಾಗಿ (Operation) ಮೇ 1ರಂದು ಈ ಆಸ್ಪತ್ರೆಗೆ ದಾಖಲಿಸಿದ್ದರು. ಮೇ 2ರ ಬೆಳಗ್ಗೆ ಆಪರೇಷನ್ ಥಿಯೇಟರ್‌ಗೆ ಕರೆದೊಯ್ಯುವ ಮೊದಲು, ಅಲ್ಲಿನ ನರ್ಸಿಂಗ್ ಸಿಬ್ಬಂದಿ "ಮೈಮೇಲಿರುವ ಒಡವೆಗಳನ್ನೆಲ್ಲಾ ತೆಗೆದು ಇಡಿ" ಎಂದು ಸೂಚಿಸಿದ್ದಾರೆ. ನರ್ಸ್ ಮಾತು ನಂಬಿದ ಮಹಿಳೆ, ತನ್ನ 65 ಗ್ರಾಂ ಚಿನ್ನದ ಮಾಂಗಲ್ಯ ಸರ, 9 ಗ್ರಾಂ ಕಿವಿಯೋಲೆ ಮತ್ತು ಬೆಳ್ಳಿಯ ಕಾಲುಗಜ್ಜೆಗಳನ್ನು ಬಿಚ್ಚಿ ಹ್ಯಾಂಡ್‌ಬ್ಯಾಗ್‌ನಲ್ಲಿ ಇಟ್ಟು, ಅದನ್ನು ವಾರ್ಡ್‌ನಲ್ಲಿದ್ದ ಕಪಾಟಿನೊಳಗೆ (Cupboard) ಭದ್ರವಾಗಿ ಇರಿಸಿದ್ದರು.

ಆದರೆ, ಮಧ್ಯಾಹ್ನ ಶಸ್ತ್ರಚಿಕಿತ್ಸೆ ಮುಗಿದು ವಾಪಸ್ ಬಂದು ನೋಡಿದಾಗ ಕಪಾಟಿನಲ್ಲಿದ್ದ ಬಂಗಾರ ಮಾಯವಾಗಿತ್ತು! ಕಪಾಟಿನ ಬಾಗಿಲು ಒಡೆದಿರಲಿಲ್ಲ, ಆದರೂ ಒಡವೆಗಳು ಇರಲಿಲ್ಲ. ಇದನ್ನು ಕಂಡು ದಂಪತಿ ಬೆಚ್ಚಿಬಿದ್ದಿದ್ದಾರೆ.

ತಕ್ಷಣವೇ ಪೊಲೀಸರಿಗೆ ದೂರು ನೀಡಲಾಯಿತು. ಹೆಣ್ಣೂರು ಪೊಲೀಸರು ಸ್ಥಳಕ್ಕೆ ಬಂದು ತನಿಖೆ ನಡೆಸಿದಾಗ ಒಂದು ಕುತೂಹಲಕಾರಿ ವಿಷಯ ಬಯಲಿಗೆ ಬಂತು. ಕಪಾಟಿನ ಬಾಗಿಲು ಒಡೆಯದಿದ್ದರಿಂದ, ಈ ಕೆಲಸ ವಾರ್ಡ್‌ಗೆ ಪ್ರವೇಶ ಇರುವವರದ್ದೇ ಇರಬೇಕು ಎಂದು ಪೊಲೀಸರು ಶಂಕಿಸಿದ್ದರು. ಆಸ್ಪತ್ರೆಯ ಸಿಬ್ಬಂದಿಯನ್ನು ವಿಚಾರಣೆಗೆ ಒಳಪಡಿಸಿದಾಗ, ಇತ್ತೀಚೆಗಷ್ಟೇ ಕೆಲಸಕ್ಕೆ ಸೇರಿದ್ದ ಮಹಿಳಾ ಸಿಬ್ಬಂದಿಯೇ ಈ ಕೃತ್ಯ ಎಸಗಿರುವುದು ಪತ್ತೆಯಾಗಿದೆ. ಸದ್ಯ ಪೊಲೀಸರು ಆಕೆಯನ್ನು ಬಂಧಿಸಿ ಆಭರಣಗಳನ್ನು ವಶಪಡಿಸಿಕೊಳ್ಳುವ ಪ್ರಕ್ರಿಯೆಯಲ್ಲಿದ್ದಾರೆ.

ರೋಗಿಗಳಿಗೆ ಮತ್ತು ಸಾರ್ವಜನಿಕರಿಗೆ ಕಿವಿಮಾತು:
ಈ ಘಟನೆ ನಮ್ಮೆಲ್ಲರಿಗೂ ಒಂದು ದೊಡ್ಡ ಪಾಠ. ಆಸ್ಪತ್ರೆಗೆ ಹೋಗುವಾಗ ಈ ಕೆಳಗಿನ ಮುನ್ನೆಚ್ಚರಿಕೆಗಳನ್ನು ವಹಿಸುವುದು ತುಂಬಾ ಒಳ್ಳೆಯದು:

ಒಡವೆಗಳನ್ನು ಮನೇಲೇ ಇಡಿ: ಶಸ್ತ್ರಚಿಕಿತ್ಸೆ ಇರಲಿ ಅಥವಾ ಇರದೇ ಇರಲಿ, ಆಸ್ಪತ್ರೆಗೆ ಹೋಗುವಾಗ ಬೆಲೆಬಾಳುವ ಆಭರಣಗಳನ್ನು ಧರಿಸಬೇಡಿ. ಮನೇಲಿಟ್ಟು ಹೋಗುವುದು ಅತ್ಯಂತ ಸುರಕ್ಷಿತ.

ಬ್ಯಾಂಕ್ ಲಾಕರ್ ಬಳಸಿ: ನಿಮ್ಮ ಬಳಿ ಅತಿ ಹೆಚ್ಚು ಬಂಗಾರವಿದ್ದರೆ ಆಸ್ಪತ್ರೆಯ ಕಪಾಟುಗಳನ್ನು ನಂಬಬೇಡಿ. ಆಸ್ಪತ್ರೆಗಳಲ್ಲಿ ಬರುವ ಹೋಗುವವರ ಸಂಖ್ಯೆ ಹೆಚ್ಚಿರುವುದರಿಂದ ಅಲ್ಲಿ ಭದ್ರತೆ ಕಡಿಮೆ ಇರುತ್ತದೆ.

Latest News