ಕೊನೆಗೂ ಫಿಕ್ಸ್ ಆಯ್ತು ಡಿಶಿ ಪಟ್ಟಾಭಿಷೇಕದ ಮುಹೂರ್ತ - ಆದರೆ ಡಿಕೆಶಿ ಅಭಿಮಾನಿಗಳಿಗೆ ಕಾದಿತ್ತು ಬಿಗ್ ಶಾಕ್?!

ಬೆಂಗಳೂರು: ರಾಜ್ಯ ರಾಜಕೀಯದ ಹೈಡ್ರಾಮಾಕ್ಕೆ ಕೊನೆಗೂ ತೆರೆ ಬಿದ್ದಿದ್ದು, ಕರಾವಳಿ-ಮಲೆನಾಡು ಸೇರಿದಂತೆ ಇಡೀ ಕರ್ನಾಟಕವೇ ಕುತೂಹಲದಿಂದ ಕಾಯುತ್ತಿದ್ದ ಆ ಬಿಗ್ ಮೂಹೂರ್ತ ಫಿಕ್ಸ್ ಆಗಿದೆ. ಸಿದ್ದರಾಮಯ್ಯ ಅವರು ಸಿಎಂ ಸ್ಥಾನಕ್ಕೆ ಅಧಿಕೃತವಾಗಿ ರಿಸೈನ್ ಮಾಡಿದ ಬೆನ್ನಲ್ಲೇ, ನೂತನ ಮುಖ್ಯಮಂತ್ರಿಯಾಗಿ ಡಿ.ಕೆ. ಶಿವಕುಮಾರ್ (DK Shivakumar) ಅವರ ಪಟ್ಟಾಭಿಷೇಕಕ್ಕೆ ದಿನಾಂಕ ನಿಗದಿಯಾಗಿದೆ. ಬರುವ ಬುಧವಾರ ಅಂದರೆ ಜೂನ್ 3 ರಂದು ಡಿಕೆಶಿ ಅವರು ಕರ್ನಾಟಕದ ಹೊಸ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ.

ಡಿಕೆಶಿ ಪಟ್ಟಾಭಿಷೇಕಕ್ಕೆ ಬಿಗ್ ಟ್ವಿಸ್ಟ್ ಕೊಟ್ಟ ಹೈಕಮಾಂಡ್
ಡಿಕೆಶಿ ಪಟ್ಟಾಭಿಷೇಕಕ್ಕೆ ಬಿಗ್ ಟ್ವಿಸ್ಟ್ ಕೊಟ್ಟ ಹೈಕಮಾಂಡ್

ಆದರೆ, ಇಲ್ಲೊಂದು ಟ್ವಿಸ್ಟ್ ಇದೆ! ಅಭಿಮಾನಿಗಳು ಅಂದುಕೊಂಡಂತೆ ಕಂಠೀರವ ಸ್ಟೇಡಿಯಂನಲ್ಲೋ ಅಥವಾ ಅರಮನೆ ಮೈದಾನದಲ್ಲೋ ಲಕ್ಷಾಂತರ ಜನರ ಸಮ್ಮುಖದಲ್ಲಿ ಈ ಪ್ರೋಗ್ರಾಂ ನಡೆಯುತ್ತಿಲ್ಲ. ಬದಲಾಗಿ ರಾಜಭವನದ ಗ್ಲಾಸ್ ಹೌಸ್‌ನಲ್ಲಿ ಅತ್ಯಂತ ಸರಳವಾಗಿ ಈ ಕಾರ್ಯಕ್ರಮವನ್ನು ಮುಗಿಸಲು ಹೈಕಮಾಂಡ್ ಗ್ರೀನ್ ಸಿಗ್ನಲ್ ನೀಡಿದೆ.

ಇಂದು ಸಂಜೆ ಸಿಎಲ್‌ಪಿ ಸಭೆ: ಡಿಕೆಶಿ ಹೆಡ್ ಆಫ್ ದಿ ಫ್ಯಾಮಿಲಿ!

ಇವತ್ತು ಸಂಜೆ 4 ಗಂಟೆಗೆ ಸರಿಯಾಗಿ ವಿಧಾನಸೌಧದಲ್ಲಿ ಕಾಂಗ್ರೆಸ್ ಶಾಸಕಾಂಗ ಪಕ್ಷದ (CLP) ಮಹತ್ವದ ಸಭೆ ಆಯೋಜನೆಗೊಂಡಿದೆ. ಈ ಮೀಟಿಂಗ್‌ನಲ್ಲಿ ಕೆಪಿಸಿಸಿ ಸಾರಥಿ ಡಿ.ಕೆ. ಶಿವಕುಮಾರ್ ಅವರನ್ನು ಎಲ್ಲಾ ಶಾಸಕರು ಒಮ್ಮತದಿಂದ ಅಧಿಕೃತ ಶಾಸಕಾಂಗ ಪಕ್ಷದ ನಾಯಕನನ್ನಾಗಿ ಆಯ್ಕೆ ಮಾಡಲಿದ್ದಾರೆ. ಈ ಪ್ರಕ್ರಿಯೆ ಮುಗಿಯುತ್ತಿದ್ದಂತೆ ಜೂನ್ 3 ರಂದು ಅವರು ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಹಾಗೂ ರಾಜ್ಯಸಭಾ ಸದಸ್ಯ ಜಿ.ಸಿ. ಚಂದ್ರಶೇಖರ್ ಅವರು ಸುದ್ದಿಗೋಷ್ಠಿಯಲ್ಲಿ ಕನ್ಫರ್ಮ್ ಮಾಡಿದ್ದಾರೆ.

ಆರಂಭದಲ್ಲಿ ಪ್ರಮಾಣವಚನ ಸಮಾರಂಭ ಎಲ್ಲಾಗಬೇಕು ಅನ್ನೋ ಬಗ್ಗೆ ಪಕ್ಷದ ಒಳಗೆ ಸಖತ್ ಕನ್ಫ್ಯೂಷನ್ ಇತ್ತು. ಡಿಕೆಶಿ ಅವರು ಮೊದಲ ಬಾರಿಗೆ ಸಿಎಂ ಆಗುತ್ತಿರುವುದರಿಂದ ಭರ್ಜರಿ ಶೋ ಮಾಡಬೇಕು ಎಂಬ ಪ್ಲಾನ್ ಕೂಡ ಇತ್ತು. ಆದರೆ ಕೊನೆ ಕ್ಷಣದಲ್ಲಿ ಎಲ್ಲಾ ಗೊಂದಲಗಳಿಗೆ ಬ್ರೇಕ್ ಹಾಕಿದ ಹೈಕಮಾಂಡ್, ರಾಜಭವನದ ಆವರಣದಲ್ಲೇ ಸಿಂಪಲ್ ಆಗಿ ಮುಗಿಸಲು ಸೂಚಿಸಿದೆ.

"ಬೆಂಗಳೂರಿಗೆ ಯಾರೂ ಬರಬೇಡಿ..." ಕೈ ನಾಯಕರ ದಿಢೀರ್ ಮನವಿ!

ಡಿಕೆಶಿ ಪ್ರಮಾಣವಚನ ಸ್ವೀಕಾರದ ಈ ಅದ್ಧೂರಿ ಕಾರ್ಯಕ್ರಮಕ್ಕೆ ಸಾರ್ವಜನಿಕರಿಗೆ ಮತ್ತು ಅಭಿಮಾನಿಗಳಿಗೆ ಎಂಟ್ರಿ ಇಲ್ಲ ಎಂದು ಜಿ.ಸಿ. ಚಂದ್ರಶೇಖರ್ ಸ್ಪಷ್ಟಪಡಿಸಿದ್ದಾರೆ. "ನಾವು ಈ ಕಾರ್ಯಕ್ರಮಕ್ಕೆ ಯಾರಿಗೂ ಯಾವುದೇ ರೀತಿಯ ಪಾಸ್‌ಗಳನ್ನು ವಿತರಿಸುತ್ತಿಲ್ಲ. ಇತ್ತೀಚೆಗೆ ತೈಲ ಬೆಲೆ ಏರಿಕೆಯಾಗಿರುವುದರಿಂದ ಇಂತಹ ದೊಡ್ಡ ಮಟ್ಟದ ಆಡಂಬರದ ಕಾರ್ಯಕ್ರಮ ಬೇಡ ಎಂದು ಹೈಕಮಾಂಡ್ ತೀರ್ಮಾನಿಸಿದೆ. ಹಾಗಾಗಿ ರಾಜ್ಯದ ಮೂಲೆ ಮೂಲೆಗಳಿಂದ ಅಭಿಮಾನಿಗಳು ಯಾರೂ ಬೆಂಗಳೂರಿಗೆ ಬರಬೇಡಿ," ಎಂದು ಅವರು ಕೈ ಮುಗಿದು ಮನವಿ ಮಾಡಿದ್ದಾರೆ.

ಬಸ್ ಬುಕಿಂಗ್ ಕ್ಯಾನ್ಸಲ್: ಆರಂಭದಲ್ಲಿ ರಾಜ್ಯದ ಬೇರೆ ಬೇರೆ ಜಿಲ್ಲೆಗಳಿಂದ ಜನರನ್ನು ಕರೆತರಲು ಕಾಂಗ್ರೆಸ್ ನಾಯಕರು ಭರ್ಜರಿ ಪ್ಲಾನ್ ಮಾಡಿಕೊಂಡಿದ್ದರು. ಇದಕ್ಕಾಗಿ ಬರೋಬ್ಬರಿ 10,000 ದಿಂದ 15,000 ಬಸ್‌ಗಳನ್ನು ಕಾಯ್ದಿರಿಸುವ ಬಗ್ಗೆ ಚರ್ಚೆಗಳು ಕೂಡ ನಡೆದಿದ್ದವು. ಆದರೆ ಪ್ರಸ್ತುತ ಇರುವ ಇಂಧನ ಬಿಕ್ಕಟ್ಟು ಮತ್ತು ಬೆಂಗಳೂರಿನ ಟ್ರಾಫಿಕ್ ಜಾಮ್ ಸಮಸ್ಯೆಯನ್ನು ಗಮನದಲ್ಲಿಟ್ಟುಕೊಂಡು ಆ ಪ್ಲಾನ್ ಅನ್ನು ಕಂಪ್ಲೀಟ್ ಆಗಿ ಡ್ರಾಪ್ ಮಾಡಲಾಗಿದೆ.

ಸರಳತೆಗೆ ಶರಣಾದ ಕನಕಪುರದ ಬಂಡೆ!

ಡಿ.ಕೆ. ಶಿವಕುಮಾರ್ ಅವರು ಇದೇ ಮೊದಲ ಬಾರಿಗೆ ರಾಜ್ಯದ ಅತ್ಯುನ್ನತ ಸಿಎಂ ಗದ್ದುಗೆ ಏರುತ್ತಿದ್ದರೂ, ಯಾವುದೇ ಹಮ್ಮು-ಬಿಮ್ಮು ಇಲ್ಲದೆ ಪಕ್ಷದ ಶಿಸ್ತಿನ ಸಿಪಾಯಿಯಂತೆ ಸರಳ ಕಾರ್ಯಕ್ರಮಕ್ಕೆ ಒಪ್ಪಿಕೊಂಡಿದ್ದಾರೆ. ದೇಶದಲ್ಲಿ ಹಾಗೂ ರಾಜ್ಯದಲ್ಲಿ ಸಾಮಾನ್ಯ ಜನರು ಎದುರಿಸುತ್ತಿರುವ ಆರ್ಥಿಕ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು, ಅನಗತ್ಯ ಖರ್ಚು ವೆಚ್ಚಗಳಿಗೆ ಬ್ರೇಕ್ ಹಾಕಲು ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

ರಾಜಭವನದ ಗ್ಲಾಸ್ ಹೌಸ್‌ನಲ್ಲಿ ಕೇವಲ ರಾಜ್ಯಪಾಲರು, ಆಯ್ದ ವಿವಿಐಪಿಗಳು ಹಾಗೂ ಹಿರಿಯ ನಾಯಕರ ಸಮ್ಮುಖದಲ್ಲಿ ಈ ಪ್ರಮಾಣವಚನ ಪ್ರಕ್ರಿಯೆ ಮುಗಿಯಲಿದೆ. ಒಟ್ಟಿನಲ್ಲಿ ಆಡಂಬರವಿಲ್ಲದೆ ಸಿಂಪಲ್ ಆಗಿ ಗದ್ದುಗೆ ಏರುತ್ತಿರುವ ಡಿಕೆಶಿ ಅವರ ಮುಂದಿನ ಆಡಳಿತ ಹೇಗಿರಲಿದೆ ಎಂಬ ಕುತೂಹಲ ಈಗ ಇಡೀ ರಾಜ್ಯದ ಜನರಲ್ಲಿ ಮೂಡಿದೆ.

Latest News