Apr 29, 2026 Languages : ಕನ್ನಡ | English

ಪೂಜಾ ದತ್ತಾ ಸಾ*ವಿನ ಹಿಂದೆ ಇತ್ತಾ ಪ್ರೇಮಿಯ ಕೈವಾಡ? ಗೋಡೆಯ ಮೇಲಿನ ಬರಹಗಳ ಅಸಲಿಯತ್ತು ಇಲ್ಲಿದೆ!!

ಬೆಂಗಳೂರು ಅಂದಾಕ್ಷಣ ನಮಗೆ ನೆನಪಾಗೋದು ಐಟಿ ಹಬ್‌ಗಳು, ಕೈತುಂಬಾ ಸಂಬಳ ಪಡೆಯೋ ಟೆಕ್ಕಿಗಳು. ಆದ್ರೆ ಇದೇ ಬೆಂಗಳೂರಿನ ಆಡುಗೋಡಿಯ ಒಂದು ಪುಟ್ಟ ರೂಮಿನಲ್ಲಿ ನಡೆದ ಘಟನೆ ಈಗ ಇಡೀ ನಗರವನ್ನೇ ಬೆಚ್ಚಿಬೀಳಿಸಿದೆ. ಜಾರ್ಖಂಡ್ ಮೂಲದ 34 ವರ್ಷದ ಟೆಕ್ಕಿ ಪೂಜಾ ದತ್ತಾ ಅವರ ಸಾ*ವು ಬರೀ ಸಾ*ವಲ್ಲ, ಅದೊಂದು ನಿಗೂಢ ರಹಸ್ಯಗಳ ಸುರುಳಿ.

ಬೆಂಗಳೂರಿನ ಸಾಫ್ಟ್‌ವೇರ್ ಇಂಜಿನಿಯರ್ ಬದುಕಿನ ಕರಾಳ ಅಂತ್ಯ
ಬೆಂಗಳೂರಿನ ಸಾಫ್ಟ್‌ವೇರ್ ಇಂಜಿನಿಯರ್ ಬದುಕಿನ ಕರಾಳ ಅಂತ್ಯ

ಬೆ*ತ್ತಲೆ ಶ*ವ, ಕೊಳೆತ ಸ್ಥಿತಿ: ಏನಿದು ಘಟನೆ?

ಕಳೆದ ಸೋಮವಾರ ಸಂಜೆ ಆಡುಗೋಡಿಯ ಆ ಮನೆಯಿಂದ ಕೆಟ್ಟ ವಾಸನೆ ಬರಲು ಶುರುವಾಗಿತ್ತು. ಅಕ್ಕಪಕ್ಕದವರು ಪೊಲೀಸರಿಗೆ ವಿಷಯ ತಿಳಿಸಿದ್ರು. ಪೊಲೀಸರು ಬಂದು ಬಾಗಿಲು ಮುರಿದು ಒಳಗೆ ಹೋದಾಗ ಕಂಡ ದೃಶ್ಯ ನಿಜಕ್ಕೂ ಭಯಾನಕವಾಗಿತ್ತು. ಪೂಜಾ ದತ್ತಾ ಅವರ ಮೃತದೇಹ ನಗ್ನ ಸ್ಥಿತಿಯಲ್ಲಿತ್ತು ಮತ್ತು ಸಂಪೂರ್ಣವಾಗಿ ಕೊಳೆತು ಹೋಗಿತ್ತು. ಅಂದ್ರೆ, ಅವರು ಸಾವನ್ನಪ್ಪಿ ಹಲವು ದಿನಗಳೇ ಕಳೆದಿತ್ತು. ಬಾಗಿಲು ಒಳಗಿನಿಂದ ಲಾಕ್ ಆಗಿದ್ದರಿಂದ ಇದು ಮೊದಲ ನೋಟಕ್ಕೆ ಕೊಲೆಯಂತೆ ಕಾಣಲಿಲ್ಲ, ಆದ್ರೆ ಸಾ*ವಿನ ಸುತ್ತ ನೂರು ಪ್ರಶ್ನೆಗಳಿದ್ದವು.

ಒಂದು ವರ್ಷದ ರಹಸ್ಯ ಬದುಕು

ಪೊಲೀಸರು ತನಿಖೆ ಶುರು ಮಾಡಿದಾಗ ಸಿಕ್ಕ ಮೊದಲ ಆಘಾತಕಾರಿ ಮಾಹಿತಿ ಅಂದ್ರೆ, ಪೂಜಾ ಕಳೆದ ಒಂದು ವರ್ಷದಿಂದ ಯಾರ ಸಂಪರ್ಕದಲ್ಲೂ ಇರಲಿಲ್ಲ! ಹೌದು, ಒಬ್ಬ ಸಾಫ್ಟ್‌ವೇರ್ ಇಂಜಿನಿಯರ್ ಆಗಿದ್ದ ಈಕೆ:

  • ಒಂದು ವರ್ಷದ ಹಿಂದೆಯೇ ತನ್ನ ಕೆಲಸಕ್ಕೆ ರಿಸೈನ್ ಮಾಡಿದ್ದಳು.
  • ತನ್ನ ಹಳೆಯ ಸಿಮ್ ಕಾರ್ಡ್ ಬಿಸಾಡಿ, ಹೊಸ ನಂಬರ್ ತಗೊಂಡಿದ್ದಳು.
  • ಆ ಹೊಸ ನಂಬರ್ ಬಗ್ಗೆ ತನ್ನ ತಂದೆ-ತಾಯಿಗಾಗಲಿ ಅಥವಾ ಆತ್ಮೀಯ ಸ್ನೇಹಿತರಿಗಾಗಲಿ ತಿಳಿಸಿರಲೇ ಇಲ್ಲ.
  • ವಿಶೇಷ ಅಂದ್ರೆ, ಕಳೆದ ಮೂರು ತಿಂಗಳಿನಿಂದ ಆ ಹೊಸ ಸಿಮ್ ಕೂಡ ಬಂದ್ ಆಗಿತ್ತು.
  • ಮನೆ ಮಾಲೀಕರು ಕೂಡ ಪೂಜಾರನ್ನ ನೋಡಿ ಮೂರು ತಿಂಗಳಾಗಿತ್ತು ಅಂದ್ರೆ, ಈಕೆ ಆ ನಾಲ್ಕು ಗೋಡೆಗಳ ನಡುವೆ ಎಷ್ಟು ಏಕಾಂಗಿಯಾಗಿದ್ರು ಅನ್ನೋದನ್ನ ಊಹಿಸಿಕೊಳ್ಳಿ.

ಗೋಡೆಯ ಮೇಲಿದ್ದ ಬರಹಗಳು ಮತ್ತು ಮಾನಸಿಕ ಖಿನ್ನತೆ

ಪೊಲೀಸರು ಮನೆಯನ್ನು ತಪಾಸಣೆ ಮಾಡುವಾಗ ಅವರಿಗೆ ಕಂಡಿದ್ದು ಗೋಡೆಯ ಮೇಲೆ ಹರಡಿದ್ದ ವಿಚಿತ್ರ ಬರಹಗಳು. ಪೂಜಾ ತನ್ನ ಮನಸ್ಸಿನಲ್ಲಿದ್ದ ನೋವು, ಆತಂಕ ಮತ್ತು ಗೊಂದಲಗಳನ್ನ ಗೋಡೆಯ ಮೇಲೆ ಬರೆದಿದ್ದರು ಎನ್ನಲಾಗಿದೆ.

"ಒಬ್ಬ ಮನುಷ್ಯ ತೀವ್ರವಾದ ಮಾನಸಿಕ ಖಿನ್ನತೆಗೆ (Depression) ಒಳಗಾದಾಗ ಮಾತ್ರ ಇಂತಹ ಕೆಲಸಗಳನ್ನು ಮಾಡಲು ಸಾಧ್ಯ" ಎನ್ನುತ್ತಾರೆ ತನಿಖಾಧಿಕಾರಿಗಳು.

ಒಬ್ಬ ಟೆಕ್ಕಿಯಾಗಿ ದೊಡ್ಡ ಸಂಬಳ ಪಡೆಯುತ್ತಿದ್ದ ಹುಡುಗಿ, ದಿಢೀರನೆ ಕೆಲಸ ಬಿಟ್ಟು, ಎಲ್ಲರನ್ನೂ ದೂರವಿಟ್ಟು ಯಾಕೆ ಹೀಗೆ ಏಕಾಂತಕ್ಕೆ ಶರಣಾದರು? ಇದಕ್ಕೆ ಪ್ರೇಮ ವೈಫಲ್ಯ ಕಾರಣವೇ? ಅಥವಾ ಮನೆಯವರ ಜೊತೆಗಿನ ಅಸಮಾಧಾನವೇ? ಈ ಪ್ರಶ್ನೆಗಳಿಗೆ ಪೊಲೀಸರು ಉತ್ತರ ಹುಡುಕುತ್ತಿದ್ದಾರೆ.

ಆ ರಹಸ್ಯ ಸ್ನೇಹಿತ ಯಾರು?

ಪೂಜಾ ಬಗ್ಗೆ ಒಂದು ಕೀಳು ಮಾಹಿತಿ ಸಿಕ್ಕಿದ್ದು ಅವರ ಮನೆ ಮಾಲೀಕರಿಂದ. ಪೂಜಾ ಹೆಚ್ಚಾಗಿ ಒಬ್ಬ ಹುಡುಗನ ಜೊತೆ ಫೋನಿನಲ್ಲಿ ಗಲಾಟೆ ಮಾಡುತ್ತಿದ್ದರು ಅಥವಾ ಆತ ಮನೆಗೆ ಬಂದಾಗ ಇಬ್ಬರ ನಡುವೆ ಜೋರಾಗಿ ವಾಗ್ವಾದ ನಡೆಯುತ್ತಿತ್ತು ಎನ್ನಲಾಗಿದೆ. ಹಾಗಾದ್ರೆ ಆ 'ಸ್ನೇಹಿತ' ಯಾರು? ಆತನ ಜೊತೆಗಿನ ಜಗಳವೇ ಪೂಜಾರನ್ನ ಈ ಸ್ಥಿತಿಗೆ ತಳ್ಳಿತಾ? ಈ ಆಯಾಮದಲ್ಲೂ ಆಡುಗೋಡಿ ಪೊಲೀಸರು ತನಿಖೆ ಮಾಡ್ತಿದ್ದಾರೆ.

ಸದ್ಯಕ್ಕೆ ಸಿಕ್ಕಿರುವ ಮಾಹಿತಿಯ ಪ್ರಕಾರ ಇದು ಕೊಲೆ ಎನ್ನಲು ಯಾವುದೇ ಸಾಕ್ಷ್ಯಗಳಿಲ್ಲ. ಆದರೆ, ಒಬ್ಬ ಸುಶಿಕ್ಷಿತ ಯುವತಿ ಈ ಮಟ್ಟಕ್ಕೆ ಖಿನ್ನತೆಗೆ ಜಾರಿ, ಅನಾಥವಾಗಿ ಸಾವನ್ನಪ್ಪಿದ್ದು ಮಾತ್ರ ಸಮಾಜಕ್ಕೆ ದೊಡ್ಡ ಎಚ್ಚರಿಕೆ.

ಬಣ್ಣದ ಲೋಕದಂತೆ ಕಾಣುವ ಐಟಿ ಲೈಫ್‌ನ ಹಿಂದೆ ಇಂತಹದ್ದೊಂದು ಕರಾಳ ಮೌನ ಇರುತ್ತೆ ಅಂತ ಯಾರೂ ಅಂದುಕೊಂಡಿರಲಿಲ್ಲ. ಪೊಲೀಸರು ಈಗ ಪೂಜಾ ಅವರ ಕಳೆದ ಒಂದು ವರ್ಷದ ಕಾಲ್ ರೆಕಾರ್ಡ್ಸ್ (CDR) ಚೆಕ್ ಮಾಡ್ತಿದ್ದಾರೆ. ಆ ಫೋನ್ ರೆಕಾರ್ಡ್ಸ್ ಸಿಕ್ಕರೆ ಪೂಜಾ ಸಾವಿನ ಅಸಲಿ ಸತ್ಯ ಹೊರಬೀಳಲಿದೆ.