May 9, 2026 Languages : ಕನ್ನಡ | English

ಗಂಡನ ಮನೆಗೆ ಬಂದರೂ ಗುಟ್ಟಾಗಿ ಪ್ರಿಯಕರನ ಜೊತೆ ಸಂಪರ್ಕ - ಗಂಡನ ಮನೆಯಲ್ಲೇ ಎಂಥಾ ಕೆಲಸ ಮಾಡಿದ್ದಾಳೆ ನೋಡಿ!!

ಬೆಳಗಾವಿ: ಸಿನಿಮಾದಲ್ಲಿ ಬರುವಂತಹ ಟ್ವಿಸ್ಟ್‌ವೊಂದು ಬೆಳಗಾವಿಯ ರಾಮದುರ್ಗ ತಾಲೂಕಿನ ಹೊಸಕೋಟಿ ಗ್ರಾಮದಲ್ಲಿ ನಡೆದಿದೆ. ಪ್ರಿಯಕರನ ಜೊತೆ ಮಜಾ ಮಾಡಲು ಸ್ವಂತ ಗಂಡನ ಮನೆಯಲ್ಲೇ ಚಿನ್ನಾಭರಣ ದೋಚಿದ ಪತ್ನಿ ಮತ್ತು ಆಕೆಯ ಪ್ರಿಯಕರ ಈಗ ಪೊಲೀಸರ ಅತಿಥಿಯಾಗಿದ್ದಾರೆ. 21 ಲಕ್ಷ ರೂಪಾಯಿ ಚಿನ್ನದೊಂದಿಗೆ ಎಸ್ಕೇಪ್ ಆಗಿದ್ದ ಈ ಜೋಡಿಯನ್ನು ಪೊಲೀಸರು ಕೇವಲ 48 ಗಂಟೆಯಲ್ಲಿ ಹೆಡೆಮುರಿ ಕಟ್ಟಿದ್ದಾರೆ!

ಪತ್ನಿ-ಪ್ರಿಯಕರ ಜೋಡಿ 21 ಲಕ್ಷ ಚಿನ್ನ ದೋಚಿದ ಪ್ರಕರಣ!
ಪತ್ನಿ-ಪ್ರಿಯಕರ ಜೋಡಿ 21 ಲಕ್ಷ ಚಿನ್ನ ದೋಚಿದ ಪ್ರಕರಣ!

ಮದುವೆಯಾದರೂ ಮುಗಿಯದ ಹಳೆ ಪ್ರೇಮ!

ಈ ಕಥೆಯ ನಾಯಕಿ ಹಸೀನಾ ನದಾಫ್. ಮೂಲತಃ ಮೂಡಲಗಿ ತಾಲೂಕಿನ ಈಕೆಗೆ ಕೇವಲ ಎರಡು ತಿಂಗಳ ಹಿಂದೆಯಷ್ಟೇ ಹೊಸಕೋಟಿ ಗ್ರಾಮದ ಶರೀಫ್ ಎಂಬುವವರ ಜೊತೆ ಅದ್ಧೂರಿಯಾಗಿ ಮದುವೆಯಾಗಿತ್ತು. ಹೊಸ ಜೀವನ ಶುರು ಮಾಡಬೇಕಿದ್ದ ಹಸೀನಾ ಮನಸ್ಸಿನಲ್ಲಿ ಮಾತ್ರ ಬೇರೆಯದೇ ಪ್ಲಾನ್ ಇತ್ತು. ಮದುವೆಗೂ ಮುನ್ನವೇ ಈಕೆಗೆ ಹಣಮಂತ ಮಾರಾಪೂರ ಎಂಬಾತನ ಜೊತೆ ಲವ್ ಇತ್ತು. ಮದುವೆಯಾಗಿ ಗಂಡನ ಮನೆಗೆ ಬಂದರೂ ಹಸೀನಾ ತನ್ನ ಹಳೆಯ ಪ್ರಿಯಕರನನ್ನ ಮರೆತಿರಲಿಲ್ಲ. ಅವನ ಜೊತೆ ಗುಟ್ಟಾಗಿ ಸಂಪರ್ಕ ಇಟ್ಟುಕೊಂಡಿದ್ದಳು.

ಪ್ಲಾನ್ ಮಾಡಿದ್ದು 'ಪಕ್ಕಾ', ಆದರೆ ಪೊಲೀಸರು 'ಶಾರ್ಪ್'!

ಪ್ರಿಯಕರ ಹಣಮಂತನ ಜೊತೆ ಓಡಿಹೋಗಿ ಹೊಸ ಜೀವನ ಶುರು ಮಾಡಬೇಕು ಎಂಬುದು ಹಸೀನಾಳ ಕನಸಾಗಿತ್ತು. ಆದರೆ ಅದಕ್ಕೆ ಹಣದ ಅಡ್ಡಿಯಿತ್ತು. ಈ ಹಣಕ್ಕಾಗಿ ಆಕೆ ಆರಿಸಿಕೊಂಡಿದ್ದು ತನ್ನದೇ ಪತಿಯ ಮನೆಯನ್ನು! ಗಂಡನ ಮನೆಯವರು ನಂಬಿಕೆಯಿಂದ ಇಟ್ಟಿದ್ದ ಸುಮಾರು 21 ಲಕ್ಷ ರೂಪಾಯಿ ಮೌಲ್ಯದ 154 ಗ್ರಾಂ ಚಿನ್ನಾಭರಣ ಮತ್ತು ಬೆಳ್ಳಿಯನ್ನು ಲೂಟಿ ಮಾಡಿದ್ದಾಳೆ.

ಮನೆಯಲ್ಲಿ ಕಳ್ಳತನವಾದ ವಿಷಯ ತಿಳಿಯುತ್ತಿದ್ದಂತೆ ಮನೆಯವರು ಗಾಬರಿಯಾಗಿದ್ದರು. ಕೂಡಲೇ ಕುಟುಂಬಸ್ಥರು ಕಟಕೋಳ ಪೊಲೀಸ್ ಠಾಣೆಯಲ್ಲಿ ದೂರು ನೀಡಿದರು. ಪೊಲೀಸರು ತನಿಖೆ ಶುರು ಮಾಡಿದಾಗ ಆರಂಭದಲ್ಲಿ ಇದೊಂದು ಸಾಮಾನ್ಯ ಕಳ್ಳತನದಂತೆ ಕಂಡಿತ್ತು. ಆದರೆ ಮನೆಯಲ್ಲೇ ಇದ್ದ ಸೊಸೆಯ ನಡವಳಿಕೆ ಪೊಲೀಸರಿಗೆ ಅನುಮಾನ ತರಿಸಿತ್ತು.

ಖಾಕಿ ಪಡೆಯ ಮಿಂಚಿನ ಕಾರ್ಯಾಚರಣೆ

ಪ್ರಕರಣ ದಾಖಲಾದ ಕೂಡಲೇ ರಾಮದುರ್ಗ ಸಿಪಿಐ ವಿನಾಯಕ ಬಡಿಗೇರ ಮತ್ತು ಪಿಎಸ್‌ಐ ಬಸವರಾಜ್ ಕೊಣ್ಣೂರೆ ಅವರ ನೇತೃತ್ವದ ತಂಡ ಅಖಾಡಕ್ಕಿಳಿಯಿತು. ತಾಂತ್ರಿಕ ಸಾಕ್ಷ್ಯಗಳು ಮತ್ತು ಕಾಲ್ ಲಿಸ್ಟ್ ಪರಿಶೀಲಿಸಿದಾಗ ಹಸೀನಾಳ 'ಸೀಕ್ರೆಟ್ ಪ್ರೇಮಾಯಣ' ಬಯಲಿಗೆ ಬಂತು.

ಪೊಲೀಸರು ತಮ್ಮದೇ ಸ್ಟೈಲ್‌ನಲ್ಲಿ ವಿಚಾರಣೆ ನಡೆಸುತ್ತಿದ್ದಂತೆ ಹಸೀನಾ ಮತ್ತು ಆಕೆಯ ಪ್ರಿಯಕರ ಹಣಮಂತ ತಾವೇ ಕಳ್ಳತನ ಮಾಡಿದ್ದಾಗಿ ಒಪ್ಪಿಕೊಂಡಿದ್ದಾರೆ. ಕೃತ್ಯ ನಡೆದ ಕೇವಲ 48 ಗಂಟೆಗಳ ಒಳಗಾಗಿ ಈ ಕಿಲಾಡಿ ಜೋಡಿಯನ್ನು ಬಂಧಿಸಿ, ಅವರಿಂದ ಪೂರ್ತಿ ಚಿನ್ನಾಭರಣಗಳನ್ನು ವಶಪಡಿಸಿಕೊಳ್ಳುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಬೆಚ್ಚಿಬಿದ್ದ ಗ್ರಾಮಸ್ಥರು!

ನಂಬಿ ಮನೆಗೆ ಬಂದ ಸೊಸೆಯೇ ಇಂತಹ ಕೆಲಸ ಮಾಡುತ್ತಾಳೆ ಎಂದು ಗ್ರಾಮಸ್ಥರು ಕನಸಿನಲ್ಲೂ ಅಂದುಕೊಂಡಿರಲಿಲ್ಲ. "ಎರಡು ತಿಂಗಳ ಸಂಸಾರದಲ್ಲೇ ಇಂತಹ ಕಿರಾತಕ ಬುದ್ಧಿ ತೋರಿಸಿದ್ದಾಳೆ ಎಂದರೆ ಹೇಗೆ?" ಎಂದು ಜನ ಮಾತಾಡಿಕೊಳ್ಳುತ್ತಿದ್ದಾರೆ. ಇನ್ನು ಅತ್ಯಂತ ವೇಗವಾಗಿ ಕಳ್ಳರನ್ನು ಹಿಡಿದು ಮಾಲನ್ನು ವಾಪಸ್ ತಂದ ರಾಮದುರ್ಗ ಪೊಲೀಸರಿಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ. ರಾಮರಾಜನ್ ಅವರು ಸಖತ್ ಮೆಚ್ಚುಗೆ ಸೂಚಿಸಿದ್ದಾರೆ.

ಪ್ರಿಯಕರನಿಗಾಗಿ ಸಂಸಾರಕ್ಕೆ ಕೊಳ್ಳಿ ಇಡಲು ಹೊರಟ ಮಹಿಳೆ ಈಗ ಅತ್ತ ಪತಿಯೂ ಇಲ್ಲದೆ, ಇತ್ತ ಪ್ರಿಯಕರನೂ ಸಿಗದೆ ಜೈಲು ಪಾಲಾಗಿದ್ದಾಳೆ! 

Latest News