Feb 16, 2026 Languages : ಕನ್ನಡ | English

ಎಂಥಾ ಜನ ಗುರು!! ಜಗದೀಶ್ ಶೆಟ್ಟರ್ ಬಳಿ ಇದೆಂಥಾ ಬೇಡಿಕೆ ಇಟ್ಟಿದ್ದಾನೆ ನೋಡಿ!!

ಬೆಳಗಾವಿಯಲ್ಲಿ ವಿಚಿತ್ರ ಘಟನೆ ನಡೆದಿದೆ. ಪ್ರತಿಕ್ ಮಲಜಿ ಎಂಬ ಯುವಕ ಸಂಸದ ಜಗದೀಶ್ ಶೆಟ್ಟರ್ ಅವರಿಗೆ ನೇರವಾಗಿ ಕರೆ ಮಾಡಿ ಹೊಸದಾಗಿ ಲಾಂಚ್ ಆಗಿರುವ ಐಫೋನ್ 17 ಪ್ರೋ ಮ್ಯಾಕ್ಸ್ ನೀಡುವಂತೆ ಬೇಡಿಕೆ ಇಟ್ಟಿದ್ದಾನೆ. “ಸರ್ ನನಗೊಂದು ಹೆಲ್ಪ ಆಗಬೇಕು ನಿಮ್ಮಿಂದ. ಸರ್ ಹೊಸದಾದ ಐಫೋನ್ 17 ಪ್ರೋ ಮ್ಯಾಕ್ಸ್ ಲಾಂಚ್ ಆಗಿದೆ. ಅದರ ಒಂದು ಪೀಸ್ ನನಗೆ ಬೇಕು” ಎಂದು ಯುವಕ ಬೇಡಿಕೆ ಇಟ್ಟಿದ್ದಾನೆ.

ಜಗದೀಶ್ ಶೆಟ್ಟರ್
ಜಗದೀಶ್ ಶೆಟ್ಟರ್

ಈ ಅಸಾಮಾನ್ಯ ಬೇಡಿಕೆಗೆ ತಬ್ಬಿಬ್ಬಾದ ಸಂಸದ ಜಗದೀಶ್ ಶೆಟ್ಟರ್, “ಎಂಪಿ ಬಳಿ ಇಂತಹವನೆಲ್ಲ ಕೇಳ್ತಿರಾ?” ಎಂದು ಪ್ರತಿಕ್ರಿಯಿಸಿ ತಕ್ಷಣವೇ ಫೋನ್ ಕಟ್ ಮಾಡಿದ್ದಾರೆ. ಸಂಸದರಿಗೆ ಇಂತಹ ವೈಯಕ್ತಿಕ ಬೇಡಿಕೆ ಇಟ್ಟಿರುವುದು ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ.

ಘಟನೆಯ ಆಡಿಯೋ ಕ್ಲಿಪ್ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಜನರಲ್ಲಿ ಕುತೂಹಲ ಮೂಡಿಸಿದೆ. ರಾಜಕೀಯ ನಾಯಕರಿಗೆ ಸಾಮಾನ್ಯವಾಗಿ ಜನರು ಸಾರ್ವಜನಿಕ ಸಮಸ್ಯೆಗಳ ಪರಿಹಾರಕ್ಕಾಗಿ ಸಂಪರ್ಕಿಸುವುದು ಸಹಜ. ಆದರೆ, ಐಫೋನ್ ಬೇಡಿಕೆ ಇಟ್ಟಿರುವುದು ಅಸಾಮಾನ್ಯವಾಗಿದ್ದು, ಜನರಲ್ಲಿ ನಗುವಿಗೂ, ಚರ್ಚೆಗೂ ಕಾರಣವಾಗಿದೆ.

ಈ ಘಟನೆ ರಾಜಕೀಯ ವ್ಯಕ್ತಿಗಳ ಮೇಲೆ ಜನರು ಹೇಗೆ ವಿಭಿನ್ನ ರೀತಿಯಲ್ಲಿ ಬೇಡಿಕೆ ಇಡುತ್ತಾರೆ ಎಂಬುದಕ್ಕೆ ಉದಾಹರಣೆಯಾಗಿದೆ. ಕೆಲವರು ಇದನ್ನು ಹಾಸ್ಯವಾಗಿ ನೋಡುತ್ತಿದ್ದರೆ, ಕೆಲವರು ಸಂಸದರಿಗೆ ಇಂತಹ ಅಸಂಬದ್ಧ ಬೇಡಿಕೆ ಇಡುವುದು ಅಸಮಂಜಸ ಎಂದು ಟೀಕಿಸುತ್ತಿದ್ದಾರೆ.

ಸದ್ಯ ಬೆಳಗಾವಿ ರಾಜಕೀಯ ವಲಯದಲ್ಲಿ ಈ ಘಟನೆ ವೈರಲ್ ಆಗಿ, ಸಾಮಾಜಿಕ ಮಾಧ್ಯಮಗಳಲ್ಲಿ ಚರ್ಚೆಗೆ ಕಾರಣವಾಗಿದೆ. ಸಂಸದ ಜಗದೀಶ್ ಶೆಟ್ಟರ್ ಅವರ ತಕ್ಷಣದ ಪ್ರತಿಕ್ರಿಯೆ, “ಇಂತಹ ಬೇಡಿಕೆಗಳಿಗೆ ರಾಜಕೀಯ ನಾಯಕರ ಸಮಯ ವ್ಯರ್ಥ ಮಾಡಬಾರದು” ಎಂಬ ಸಂದೇಶವನ್ನು ಸಾರಿದಂತಾಗಿದೆ. ಈ ಘಟನೆ ಜನರ ಕುತೂಹಲಕ್ಕೆ ಕಾರಣವಾಗಿದ್ದು, ರಾಜಕೀಯ ನಾಯಕರಿಗೆ ಸಾರ್ವಜನಿಕರು ಮಾಡುವ ಬೇಡಿಕೆಗಳ ವೈವಿಧ್ಯತೆಯನ್ನು ಮತ್ತೊಮ್ಮೆ ಬೆಳಕಿಗೆ ತಂದಿದೆ.