Feb 16, 2026 Languages : ಕನ್ನಡ | English

ಬೆಂಗಳೂರು, ಪವರ್ ಕಟ್ ಅಲರ್ಟ್ - ಫೆಬ್ರವರಿ 14ರಂದು ಹಲವು ಗಂಟೆ ಕರೆಂಟ್ ಇರಲ್ಲ! ನಿಮ್ಮ ಏರಿಯಾ ಲಿಸ್ಟ್ ಇಲ್ಲಿದೆ.

ಬೆಂಗಳೂರಿನ ನಾಗರಿಕರಿಗೆ ಮಹತ್ವದ ಮಾಹಿತಿ. ಫೆಬ್ರವರಿ 14ರ ಶನಿವಾರ ನಗರದ ಹಲವು ಭಾಗಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು BESCOM ಪ್ರಕಟಿಸಿದೆ. ತುರ್ತು ನಿರ್ವಹಣಾ ಕಾಮಗಾರಿಗಳ ಹಿನ್ನೆಲೆ ಈ ವಿದ್ಯುತ್ ಕಡಿತ ಮಾಡಲಾಗುತ್ತಿದೆ.

ತುರ್ತು ನಿರ್ವಹಣಾ ಕಾಮಗಾರಿಗಳಿಂದ ಬೆಂಗಳೂರಿನ ಹಲವು ಭಾಗಗಳಲ್ಲಿ ಪವರ್ ಕಟ್
ತುರ್ತು ನಿರ್ವಹಣಾ ಕಾಮಗಾರಿಗಳಿಂದ ಬೆಂಗಳೂರಿನ ಹಲವು ಭಾಗಗಳಲ್ಲಿ ಪವರ್ ಕಟ್

ಬೆಳಗ್ಗೆ 10ರಿಂದ ಸಂಜೆ 5ರವರೆಗೆ – ಜಾಲಹಳ್ಳಿ ವಿಭಾಗ

KPTCL ವತಿಯಿಂದ 66/11 ಕೆವಿ ಗೋಕುಲ ಉಪಕೇಂದ್ರದಲ್ಲಿ ತುರ್ತು ನಿರ್ವಹಣಾ ಕಾಮಗಾರಿ ನಡೆಯಲಿದೆ. ಇದರಿಂದ ಬೆಳಗ್ಗೆ 10ರಿಂದ ಸಂಜೆ 5ರವರೆಗೆ ಈ ಪ್ರದೇಶಗಳಲ್ಲಿ ಪವರ್ ಕಟ್ ಇರಲಿದೆ

  • ಗೋಕುಲ ಎಂಯುಎಸ್‌ಎಸ್
  • ಡಿ.ಬಿ.ಸಂದ್ರ 2ನೇ ಮತ್ತು 4ನೇ ಬ್ಲಾಕ್
  • ಜೆ.ಬಿ.ಕಾವಲ್ ಅರಣ್ಯ
  • ಗಂಗಮ್ಮ ವೃತ್ತ
  • ಕಮ್ಮಗೊಂಡನಹಳ್ಳಿ
  • ಬಿಇಎಲ್ ಉತ್ತರ ಮತ್ತು ದಕ್ಷಿಣ ಕಾಲೋನಿ
  • ಬಾಹುಬಲಿ ನಗರ
  • ರಾಮಚಂದ್ರಾಪುರ
  • ಜಾಲಹಳ್ಳಿ ಗ್ರಾಮ
  • ಶಾರದಾಂಬನಗರ
  • ಎಚ್‌ಎಂಟಿ ಇಂಡಸ್ಟ್ರಿಯಲ್ ಎಸ್ಟೇಟ್
  • ಪ್ರೆಸ್ಟೀಜ್ ವೆಲ್ಲಿಂಗ್ಟನ್
  • ಪ್ರೆಸ್ಟೀಜ್ ಕೆನ್ಸಿಂಗ್ಟನ್
  • ಮುತ್ಯಾಲನಗರ
  • ಚಾಮುಂಡೇಶ್ವರಿ ಲೇಔಟ್
  • ನಂಜಪ್ಪ ಲೇಔಟ್
  • ಗೋಕುಲ ಎಕ್ಸ್‌ಟೆನ್ಷನ್
  • ಎಚ್‌ಎಂಆರ್ ಲೇಔಟ್ ಮತ್ತು ಸುತ್ತಮುತ್ತಲಿನ ಪ್ರದೇಶಗಳು

ಮಧ್ಯಾಹ್ನ 3ರವರೆಗೆ – ಅಮರಜ್ಯೋತಿ ಮತ್ತು ಎನ್‌ಜಿಇಎಫ್ ಸ್ಟೇಷನ್

66/11 ಕೆವಿ ಅಮರಜ್ಯೋತಿ ಸ್ಟೇಷನ್‌ನಲ್ಲಿ ಕಾಮಗಾರಿ ಹಿನ್ನೆಲೆ ಬೆಳಗ್ಗೆ 10ರಿಂದ ಮಧ್ಯಾಹ್ನ 3ರವರೆಗೆ ದೊಮ್ಮಲೂರು 2ನೇ ಹಂತ, ಕೊಡಿಹಳ್ಳಿ, ಯೋಗಾನಂದ ಲೇಔಟ್, ಎಚ್ಎಎಲ್ 2ನೇ ಹಂತ, ಇಎಸ್ಐ ಆಸ್ಪತ್ರೆ, 100 ಫೀಟ್ ರಸ್ತೆ, ಸಾಲರ್ಪುರಿಯಾ ಟೆಕ್ ಪಾರ್ಕ್, ಡೈಮಂಡ್ ಡಿಸ್ಟ್ರಿಕ್ಟ್ ಸೇರಿದಂತೆ ಹಲವೆಡೆ ಪವರ್ ಕಟ್ ಇರಲಿದೆ.

ಅದೇ ರೀತಿ 66/11 ಕೆವಿ ಎನ್‌ಜಿಇಎಫ್ ಸ್ಟೇಷನ್ ಕಾಮಗಾರಿ ಹಿನ್ನೆಲೆ ಜೋಗುಪಾಳ್ಯ, ಕಾರ್ ಸ್ಟ್ರೀಟ್, ಬಜಾರ್ ಸ್ಟ್ರೀಟ್, ಹಲಸೂರು, ಇಂದಿರಾನಗರ 1ನೇ ಹಂತ, ಓಲ್ಡ್ ಮದ್ರಾಸ್ ರಸ್ತೆ, ಕಗ್ಗದಾಸಪುರ, ಸಿ.ವಿ.ರಾಮನ್ ನಗರ, ಕಸ್ತೂರಿನಗರ, ಭುವನೇಶ್ವರಿ ನಗರ, ನಾಗವಾರಪಾಳ್ಯ ಸೇರಿದಂತೆ ಹಲವು ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ.

ಸಂಜೆ 5ರವರೆಗೆ – ರೆಮಕೊ ಮತ್ತು ಕಂಠೀರವ ಸ್ಟೇಷನ್

66/11 ಕೆವಿ ರೆಮಕೊ ಸ್ಟೇಷನ್ ಕಾಮಗಾರಿ ಹಿನ್ನೆಲೆ ಮೈಸೂರು ರಸ್ತೆ 4ನೇ, 6ನೇ, 7ನೇ ಕ್ರಾಸ್, ಶಾಮಣ್ಣ ಗಾರ್ಡನ್, ಮಂಜುನಾಥ ನಗರ, ನ್ಯೂ ಗುಡ್ಡದಹಳ್ಳಿ, ಕುವೆಂಪು ನಗರ ಪ್ರದೇಶಗಳಲ್ಲಿ ಬೆಳಗ್ಗೆ 10ರಿಂದ ಸಂಜೆ 5ರವರೆಗೆ ಪವರ್ ಕಟ್ ಇರಲಿದೆ.

ಇನ್ನೂ 66/11 ಕೆವಿ ಕಂಠೀರವ ಸ್ಟೇಷನ್ ಕಾಮಗಾರಿ ಹಿನ್ನೆಲೆ ಕಬ್ಬನ್‌ಪೇಟೆ, ನೃಪತುಂಗ ರಸ್ತೆ, ಸರ್ಕಾರಿ ಕಲಾ ಕಾಲೇಜು, ಮಾರ್ತಾಸ್ ಆಸ್ಪತ್ರೆ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜು ಸ್ಥಗಿತಗೊಳ್ಳಲಿದೆ.

ನಿರ್ವಹಣಾ ಕಾಮಗಾರಿಗಳು ಸಮಯಕ್ಕೆ ಪೂರ್ಣಗೊಂಡರೆ ವಿದ್ಯುತ್ ಸರಬರಾಜು ಬೇಗ ಮರುಸ್ಥಾಪನೆ ಮಾಡುವುದಾಗಿ ಬೆಸ್ಕಾಂ ತಿಳಿಸಿದೆ. ಸಾರ್ವಜನಿಕರು ಅಗತ್ಯ ಮುಂಜಾಗ್ರತಾ ಕ್ರಮ ಕೈಗೊಳ್ಳುವಂತೆ ಮನವಿ ಮಾಡಲಾಗಿದೆ.

Latest News