ಬಳ್ಳಾರಿ ನಗರದಲ್ಲಿ ನಾಳೆ ಜನವರಿ 03ರಂದು ನಡೆಯಲಿರುವ ವಾಲ್ಮೀಕಿ ಪುತ್ತಳಿ ಅನಾವರಣ ಕಾರ್ಯಕ್ರಮದ ಕುರಿತಾಗಿ ರಾಜಕೀಯದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ. ಹೌದು ಬ್ಯಾನರ್ ಅಳವಡಿಕೆ ವಿಚಾರದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಕಾರ್ಯಕರ್ತರ ನಡುವೆ ತೀವ್ರ ಗಲಾಟೆ ಜಗಳ ಉಂಟಾಗಿ, ಬಳಿಕ ಕಲ್ಲು ತೂರಾಟದ ಮಟ್ಟಿಗೆ ಪರಿಸ್ಥಿತಿ ತೀವ್ರಗೊಂಡಿತು. ಬಳ್ಳಾರಿ ನಗರದ ಅವಂಬಾವಿ ಪ್ರದೇಶದಲ್ಲಿ ನಡೆದ ಈ ಘಟನೆ, ಜನಾರ್ದನ ರೆಡ್ಡಿ ಅವರ ಮನೆ ಮುಂದೆ ಕಾಂಗ್ರೆಸ್ ಕಾರ್ಯಕರ್ತರು ಬ್ಯಾನರ್ ಅಳವಡಿಸುತ್ತಿದ್ದ ಸಮಯಕ್ಕೆ ಅತ್ತ ಬಿಜೆಪಿ ಕಾರ್ಯಕರ್ತರು ಅಡ್ಡಿಪಡಿಸಿದರು ಎಂದು ಕೇಳಿ ಬಂದಿದೆ. ಬ್ಯಾನರ್ ಅಳವಡಿಕೆ ವಿಚಾರದಿಂದಲೇ ಆರಂಭವಾದ ಈ ಗಲಾಟೆ, ಕಲ್ಲು ತೂರಾಟದ ಮಟ್ಟಿಗೆ ತಲುಪಿರುವುದು ಸ್ಥಳೀಯ ರಾಜಕೀಯದ ತೀವ್ರತೆಯನ್ನು ತೋರಿಸುತ್ತದೆ.
ಈ ಘಟನೆ ಸಂದರ್ಭದಲ್ಲಿ ಗಲಾಟೆ ನಡೆದ ವೇಳೆಯೇ ಕಾಂಗ್ರೆಸ್ ಕಾರ್ಯಕರ್ತ ರಾಜಶೇಖರ್ ಸಾವಿಗೀಡಾದರು. ಬಳಿಕ ಪರಿಸ್ಥಿತಿ ಮತ್ತಷ್ಟು ಕೈ ಮೀರಿತು. ಸಾವಿನ ಸುದ್ದಿ ಸ್ಥಳೀಯ ರಾಜಕೀಯದಲ್ಲಿ ಆಕ್ರೋಶಕ್ಕೆ ಕಾರಣವಾಯಿತು. ನಿನ್ನೆಯಷ್ಟೇ ನಡೆದ ಈ ಒಂದು ಘಟನೆ ನಿಜಕ್ಕೂ ಬಳ್ಳಾರಿ ಜನತೆಯನ್ನು ಹಾಗೆ ಇಡೀ ರಾಜ್ಯವನ್ನು ಬೆಚ್ಚಿ ಬೀಳಿಸಿದೆ ಎನ್ನಬಹದು. ಬಳ್ಳಾರಿಯ ಜಿಲ್ಲಾ ರಾಜಕೀಯ ವಾತಾವರಣದಲ್ಲಿ ನಿನ್ನೆ ನಡೆದ ಬೆಳವಣಿಗೆ ಎಲ್ಲರನ್ನು ವಿಶೇಷವಾಗಿ ಗಮನ ಸೆಳೆದಿದೆ. ಹೌದು ಘಟನೆ ನಡೆದ ಪ್ರದೇಶದಲ್ಲಿ ಹೆಚ್ಚು ಕಾಲ ನಿಂತಿದ್ದ ಶಾಸಕ ಭರತ್ ರೆಡ್ಡಿ ಅವರು ಮದ್ಯಾಹ್ನ ಒಂದು ಗಂಟೆಗೆ ತಮ್ಮ ಬೆಂಬಲಿಗರ ಜೊತೆ ಸ್ಥಳವನ್ನು ಬಿಟ್ಟಿದ್ದಾರೆ. ಈ ಅಹಿತಕರ ಘಟನೆ ನಡೆದಿರುವುದು ಬೇರೆಲ್ಲೋ ಅಲ್ಲ ಬದಲಿಗೆ ಮಾಜಿ ಸಚಿವ ಜನಾರ್ಧನ ರೆಡ್ಡಿ ಅವರ ಬಳ್ಳಾರಿ ನಿವಾಸದ ಮುಂದೆ ಜರುಗಿದೆ ಎಂದು ತಿಳಿದುಬಂದಿದೆ. ಈ ವಿಷಯ ಸದ್ಯ ಸದ್ಯದ ರಾಜಕೀಯದಲ್ಲಿ ಮತ್ತೆ ವಾಗ್ವಾದ ಎದ್ದಿದ್ದು ನೂತನ ಚರ್ಚೆಗೆ ದಾರಿ ಮಾಡಿಕೊಟ್ಟಿದೆ.
ಶಾಸಕರಾದ ಭರತ್ ರೆಡ್ಡಿ ಅವರ ಉಪಸ್ಥಿತಿ, ಅಲ್ಲಿ ನೆರೆದಿದ್ದ ಜನರೊಂದಿಗೆ ನಡೆಸಿದ ಮಾತುಕತೆ ಮತ್ತು ಬಳಿಕ ಘಟನೆ ನಡೆದ ಜಾಗದಿಂದ ಹೊರ ನಡೆದ ಸನ್ನಿವೇಶಗಳು ಈ ಎಲ್ಲಾ ನಿರ್ಧಾರಗಳು ಸದ್ಯ ಬಳ್ಳಾರಿ ರಾಜಕೀಯದಲ್ಲಿ ಅತೀವವಾಗಿ ದೊಡ್ಡ ಸಂದೇಶ ನೀಡುತ್ತಿವೆ ಎನ್ನಬಹುದು. ಘಟನೆ ನಡೆದ ಬಳಿಕ ಸಾರ್ವಜನಿಕರಲ್ಲಿ ಮಾಧ್ಯಮ ಮಿತ್ರರಲ್ಲಿ ಹಾಗೂ ಅಲ್ಲಿಯ ರಾಜಕೀಯ ಜನರ ವಲಯದಲ್ಲಿಯೂ ಹೆಚ್ಚು ಆತಂಕ ಹುಟ್ಟಿದ್ದು ಯಾವ ರೀತಿ ಈ ಘಟನೆ ಸಂಬಂದಿತ ಬೆಳವಣಿಗೆಗಳು ಎದುರಾಗುತ್ತವೆ ಎಂದು ಮುಂದಿನ ದಿನಗಳಲ್ಲಿ ಕಾದು ನೋಡಬೇಕಿದೆ.
ಹೌದು ಬಳ್ಳಾರಿ ನಗರದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಕಾರ್ಯಕರ್ತರ ನಡುವೆ ತೀವ್ರ ಗಲಾಟೆ ನಡೆದ ಬಳಿಕ, ಕೆಲವರು ಕೈಯಲ್ಲಿ ಕಲ್ಲು ಹಿಡಿದು ಅತ್ತಿಂದಿತ್ತ ತೂರಾಟ ನಡೆಸಿದರು, ಕಟ್ಟಿಗೆ ಹಿಡಿದು ಕಾರ್ಯಕರ್ತರು ಪರಸ್ಪರ ದಾಳಿ ಮಾಡಿದ ಸನ್ನಿವೇಶಗಳು ಸಹ ಕಂಡು ಬಂದವು. ಇದಾದ ಬಳಿಕ ಬಳ್ಳಾರಿ ಗಲಾಟೆ ನಿಯಂತ್ರಣಕ್ಕೆ ಬರದ ಕಾರಣ ಪೊಲೀಸರು ಲಾಠಿ ಚಾರ್ಜ್ ನಡೆಸಿದರು ಎನ್ನಲಾಗಿದೆ. ಲಾಠಿ ಚಾರ್ಜ್‌ನಿಂದಲೂ ನಡೆದ ಘಟನೆ ಪರಿಸ್ಥಿತಿ ನಿಯಂತ್ರಿಸಲು ಆಗದೆ ಇದ್ದಾಗ ಪೊಲೀಸರು ಐದಾರು ಬಾರಿ ಫೈರಿಂಗ್ ನಡೆಸಿದರು ಎಂದು ಕೇಳಿ ಬಂದಿದೆ.
ಬಳ್ಳಾರಿ ನಗರದ ಶಾಸಕರಾದ ಭರತ್ ರೆಡ್ಡಿ ಅವರು ಬೆಳಗಿನ ಜಾವ 1:30ರವರೆಗೂ ಘಟನಾ ಸ್ಥಳದಲ್ಲೇ ಕುಳಿತರು. ಹಾಗೇನೇ ಜನಾರ್ಧನ ರೆಡ್ಡಿ ಮತ್ತು ಸೋಮಶೇಖರ್ ರೆಡ್ಡಿ ಬಂಧನ ಆಗುವವರೆಗೂ ಈ ಸ್ಥಳದಿಂದ ಕದಲಲ್ಲ ಎಂದು ಭರತ್ ಅವರು ಪಟ್ಟು ಹಿಡಿದು ಕುಳಿತಿದ್ದು ಕಂಡು ಬಂದಿತು. ಇವರ ಅಲ್ಲಿನ ಹಾಜರಾತಿ ಸ್ಥಳೀಯ ರಾಜಕೀಯದಲ್ಲಿ ದೊಡ್ಡ ಸಂದೇಶ ನೀಡಿದೆ. ಈ ಅಹಿತಕರ ಘಟನೆ ಮುಂಬರುವ ದಿನಗಳಲ್ಲಿ ಯಾವ ರೀತಿ ಪರಿಣಾಮ ತಿರುವು ಪಡೆದುಕೊಳ್ಳುತ್ತದೆ ಎಂದು ಕಾಡು ನೋಡಬೇಕಿದೆ.