ಟಾಲಿವುಡ್ ಅಷ್ಟೇ ಅಲ್ಲದೇ ಇಡೀ ಸೌತ್ ಇಂಡಸ್ಟ್ರಿಯಲ್ಲಿ ಸಖತ್ ಸೌಂಡ್ ಮಾಡ್ತಿರೋ ನಟಿ ಅಂದ್ರೆ ಅದು ಅನಸೂಯಾ ಭಾರದ್ವಾಜ್. ಅಲ್ಲು ಅರ್ಜುನ್ ನಟನೆಯ 'ಪುಷ್ಪ' ಸಿನಿಮಾದಲ್ಲಿ 'ದಾಕ್ಷಾಯಣಿ' ಅನ್ನೋ ಕಡಕ್ ವಿಲನ್ ರೋಲ್ ಮಾಡಿದ್ದ ಈ ನಟಿ, ಈಗ ಸೋಷಿಯಲ್ ಮೀಡಿಯಾದಲ್ಲಿ ಭಾರಿ ಸದ್ದು ಮಾಡ್ತಿದ್ದಾರೆ. ವಿಷಯ ಏನಪ್ಪಾ ಅಂದ್ರೆ, ಒಂದು ಹಳೇ ಘಟನೆಯನ್ನು ನೆನೆಸಿಕೊಂಡು ನಟಿ ಅನಸೂಯಾ ಮಧ್ಯರಾತ್ರಿ ತನ್ನ ಗಂಡನ ಮುಂದೆಯೇ ಕುಡಿದು ಬಿಕ್ಕಿ ಬಿಕ್ಕಿ ಅತ್ತಿದ್ದರಂತೆ! ಸ್ವತಃ ಅವರೇ ಇತ್ತೀಚಿನ ಸಂದರ್ಶನವೊಂದರಲ್ಲಿ ಈ ರಹಸ್ಯ ಬಿಚ್ಚಿಟ್ಟಿದ್ದು, ಈಗ ಸೋಷಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗ್ತಿದೆ.
ಆ್ಯಂಕರ್ ಟು ಬ್ಯುಸಿ ಹೀರೋಯಿನ್
ಮೊದಲಿಗೆ ಟಿವಿ ಶೋಗಳಲ್ಲಿ ಆ್ಯಂಕರ್ ಆಗಿ ಕೆರಿಯರ್ ಸ್ಟಾರ್ಟ್ ಮಾಡಿದ ಅನಸೂಯಾ, ತಮ್ಮ ಕಿಲ್ಲರ್ ಲುಕ್ಸ್ ಮತ್ತು ಮಾತಿನ ಶೈಲಿಯಿಂದಲೇ ತೆಲುಗು ಪ್ರೇಕ್ಷಕರ ಮನಸ್ಸು ಗೆದ್ದರು. ಆ್ಯಂಕರ್ ಆಗಿ ಸಖತ್ ಕ್ರೇಜ್ ಗಳಿಸಿದ ನಂತರ ಇವರಿಗೆ ಸಿನಿಮಾಗಳಲ್ಲಿ ನಟಿಸುವ ಬಂಪರ್ ಆಫರ್ಸ್ ಸಿಕ್ಕವು. 'ಕ್ಷಣಂ' ಮತ್ತು 'ಸೊಗ್ಗಾಡೆ ಚಿನ್ನಿ ನಾಯನಾ' ದಂತಹ ಸೂಪರ್ ಹಿಟ್ ಚಿತ್ರಗಳಲ್ಲಿ ನಟಿಸಿ ಸೈ ಎನಿಸಿಕೊಂಡರು.
ಆದರೆ, ಇವರ ಲಕ್ ಬದಲಾಗಿದ್ದೇ ಡೈರೆಕ್ಟರ್ ಸುಕುಮಾರ್ ಮತ್ತು ರಾಮ್ ಚರಣ್ ಕಾಂಬಿನೇಷನ್‌ನ 'ರಂಗಸ್ಥಳಂ' ಸಿನಿಮಾದಿಂದ. ಈ ಸಿನಿಮಾದಲ್ಲಿ ಅವರು ಮಾಡಿದ 'ರಂಗಮ್ಮತ್ತೆ' ಪಾತ್ರಕ್ಕೆ ಇಂಡಸ್ಟ್ರಿಯಲ್ಲಿ ಭಾರಿ ಪ್ರಶಂಸೆ ವ್ಯಕ್ತವಾಯಿತು. ಈ ಸಿನಿಮಾ ಬ್ಲಾಕ್‌ಬಸ್ಟರ್ ಆದ ಮೇಲೆ ಅನಸೂಯಾ ಟಾಲಿವುಡ್‌ನಲ್ಲಿ ಬಿಡುವಿಲ್ಲದ ನಟಿಯಾದರು. ಎಷ್ಟು ಫೇಮಸ್ ಆದರೋ ಅಷ್ಟೇ ಬೇಗ ಆಗಾಗ ವಿವಾದ ಮತ್ತು ಟ್ರೋಲ್‌ಗಳಿಂದಲೂ ಸುದ್ದಿಯಾಗುತ್ತಲೇ ಇರುತ್ತಾರೆ.
"ಯಾವುದೇ ಕಾರಣ ಕೊಡದೆ 3 ದೊಡ್ಡ ಸಿನಿಮಾಗಳಿಂದ ಕಿತ್ತೆಸೆದರು!"
ಸಾಮಾನ್ಯವಾಗಿ ಸೋಷಿಯಲ್ ಮೀಡಿಯಾದಲ್ಲಿ ನೆಟ್ಟಿಗರು ಟ್ರೋಲ್ ಮಾಡಿದರೆ ಅನಸೂಯಾ ಸುಮ್ಮನೆ ಕೂರುವ ಹೆಣ್ಣಲ್ಲ, ಅವರಿಗೂ ಖಡಕ್ ಆಗಿಯೇ ರಿಪ್ಲೈ ಕೊಡ್ತಾರೆ. ಆದರೆ, ವೃತ್ತಿಜೀವನದ ಆರಂಭದಲ್ಲಿ ನಡೆದ ಒಂದು ಕಹಿ ಘಟನೆ ಇವರ ಮನಸ್ಸಿಗೆ ಭಾರಿ ಬೇಸರ ತಂದಿತ್ತಂತೆ.
ಸಂದರ್ಶನದಲ್ಲಿ ಆ ದಿನಗಳನ್ನು ನೆನೆದ ಅನಸೂಯಾ, "ನನ್ನ ಕೆರಿಯರ್ ಆರಂಭದಲ್ಲಿ ಮೂರು ದೊಡ್ಡ ಸಿನಿಮಾಗಳಿಗೆ ಮೊದಲು ನನ್ನನ್ನೇ ಹೀರೋಯಿನ್ ಆಗಿ ಫಿಕ್ಸ್ ಮಾಡಿದ್ದರು. ಆದರೆ, ಕೊನೆ ಕ್ಷಣದಲ್ಲಿ ಯಾವುದೇ ಕಾರಣ ನೀಡದೆ ನನ್ನನ್ನು ಆ ಸಿನಿಮಾಗಳಿಂದ ಕಿತ್ತೆಸೆದರು. ನಾನೊಬ್ಬಳು ಹುಡುಗಿ ಅನ್ನೋ ಕಾರಣಕ್ಕೋ ಏನೋ, ಕನಿಷ್ಠ ಪಕ್ಷ ನಿನಗೆ ಯಾಕೆ ಚಾನ್ಸ್ ತಪ್ಪಿತು ಅನ್ನೋ ಸಣ್ಣ ಎಕ್ಸ್‌ಪ್ಲನೇಷನ್ ಕೂಡ ಯಾರೂ ಕೊಡಲಿಲ್ಲ. ಆ ಸಿನಿಮಾಗಳಿಂದ ನನ್ನನ್ನು ಯಾಕೆ ತೆಗೆದರು ಅಂತ ಇವತ್ತಿಗೂ ನನಗೆ ಗೊತ್ತಿಲ್ಲ" ಎಂದು ಕಣ್ಣೀರು ಹಾಕಿದ್ದಾರೆ.
ಮಧ್ಯರಾತ್ರಿ ಗಂಡನ ಮುಂದೆ ಅತ್ತಿದ್ದೇಕೆ?
ಸಿನಿಮಾಗಳಿಂದ ರಿಜೆಕ್ಟ್ ಆದ ಆ ದೊಡ್ಡ ನೋವನ್ನು ತಡೆದುಕೊಳ್ಳಲು ಅನಸೂಯಾಗೆ ಸಾಧ್ಯವಾಗಲಿಲ್ಲವಂತೆ. "ಮನೆಯಲ್ಲಿ ಯಾರಿಗೂ ಗೊತ್ತಾಗಬಾರದು ಅಂತ ಸೈಲೆಂಟ್ ಆಗಿದ್ದೆ. ಆದರೆ ಮನಸ್ಸಿನ ಒಳಗಿನ ಬೇಸರ ತಡೆಯೋಕೆ ಆಗದೆ ಮಧ್ಯರಾತ್ರಿ 2 ಗಂಟೆಗೆ ಸ್ವಲ್ಪ ಕುಡಿದು, ನೋವು ತಡೆಯಲಾರದೆ ಗಂಡನನ್ನು ಗಟ್ಟಿಯಾಗಿ ಹಿಡಿದುಕೊಂಡು ಬಿಕ್ಕಿ ಬಿಕ್ಕಿ ಅತ್ತಿದ್ದೆ" ಎಂದು ತಮ್ಮ ಪರ್ಸನಲ್ ಲೈಫ್ ವಿಷಯವನ್ನು ಹಂಚಿಕೊಂಡಿದ್ದಾರೆ.
ಟ್ರೋಲಿಗರಿಗೆ ಅನಸೂಯಾ ಕಡಕ್ ವಾರ್ನಿಂಗ್: "ನಾನು ಕುಡಿಯುತ್ತೇನೆ ಅನ್ನೋ ವಿಷಯವನ್ನು ನಾನೇ ಓಪನ್ ಆಗಿ ಒಪ್ಪಿಕೊಂಡಿದ್ದೇನೆ. ಆದರೆ ನಾನು ಲಿಮಿಟ್ ಆಗಿ ಕುಡಿಯುತ್ತೇನೆ. ಇದನ್ನೇ ದೊಡ್ಡ ವಿವಾದ ಮಾಡಿ ಕೆಲವರು ಸೋಷಿಯಲ್ ಮೀಡಿಯಾದಲ್ಲಿ ನನ್ನನ್ನು ಸಿಕ್ಕಾಪಟ್ಟೆ ಟ್ರೋಲ್ ಮಾಡಿದರು. ಆದರೆ ಯಾರು ಎಷ್ಟೇ ನೆಗಟಿವ್ ಆಗಿ ಟ್ರೋಲ್ ಮಾಡಿದರೂ ನನಗೇನೂ ಆಗಲ್ಲ, ನಾನು ನನ್ನ ಕೆಲಸದಲ್ಲಿ ಬ್ಯುಸಿಯಾಗಿದ್ದೇನೆ" ಎಂದು ಟ್ರೋಲಿಗರಿಗೆ ಖಡಕ್ ಟಾಂಗ್ ನೀಡಿದ್ದಾರೆ ಪುಷ್ಪ ನಟಿ.