ಉಡುಪಿಯಲ್ಲಿ ನಡೆದ ಮದುವೆಯೊಂದು ಅಪರೂಪದಲ್ಲಿ ಅಪರೂಪದ ಕ್ಷಣಕ್ಕೆ ಸಾಕ್ಷಿಯಾಗಿದೆ. ಸಾಮಾನ್ಯವಾಗಿ ಮದುವೆಗಳಲ್ಲಿ ವಾದ್ಯಗಾರರು ಸಂಗೀತ ನುಡಿಸುತ್ತಾರೆ, ಆದರೆ ಈ ಬಾರಿ ವರ–ವಧುವೇ ತಮ್ಮ ಮದುವೆಗೆ ತಾವೇ ವಾದ್ಯ ನುಡಿಸಿ ಎಲ್ಲರ ಮೆಚ್ಚುಗೆಗೆ ಪಾತ್ರರಾದರು. ಐಶ್ವರ್ಯ ಮತ್ತು ಪ್ರಸಾದ್ ಎಂಬ ಕಲಾವಿದರ ಜೊಡಿ ಮದುವೆ ಹಾಗೂ ಇನ್ನಿತರ ಸಮಾರಂಭಗಳಲ್ಲಿ ಸ್ಯಾಕ್ಸೋಪೋನ್ ನುಡಿಸಿ ಸಾಕಷ್ಟು ಮನ್ನಣೆ ಪಡೆದಿದ್ದಾರೆ. ಇವರ ಸಂಗೀತ ಕೌಶಲ್ಯವನ್ನು ಜನರು ಹಲವು ಬಾರಿ ಮೆಚ್ಚಿಕೊಂಡಿದ್ದಾರೆ. ಆದರೆ ಅಚ್ಚರಿಯ ಸಂಗತಿ ಏನೆಂದರೆ, ನಿನ್ನೆ ಉಡುಪಿಯ ಮಂಚಿ ದುಗ್ಲಿ ಪದಾವ್ನಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಈ ಜೊಡಿ ತಮ್ಮ ಮದುವೆಯಲ್ಲೂ ಸ್ವತಃ ಸ್ಯಾಕ್ಸೋಪೋನ್ ನುಡಿಸಿದರು.
ಮದುವೆಯ ಸಂದರ್ಭದಲ್ಲಿ ವರ–ವಧುಗಳು ವೇದಿಕೆಯಲ್ಲಿ ನಿಂತು ಸ್ಯಾಕ್ಸೋಪೋನ್ ನುಡಿಸಿದಾಗ, ಅತಿಥಿಗಳು ಆಶ್ಚರ್ಯದಿಂದ ನೋಟ ಹಾಕಿದರು. ಸಂಗೀತದ ಮಧುರ ಸ್ವರಗಳು ಮದುವೆಯ ವಾತಾವರಣವನ್ನು ಇನ್ನಷ್ಟು ವಿಶೇಷಗೊಳಿಸಿದವು. ಸಾಮಾನ್ಯವಾಗಿ ಮದುವೆಗಳಲ್ಲಿ ನೃತ್ಯ, ಹಾಡು, ಸಂಭ್ರಮ ಇರುತ್ತದೆ. ಆದರೆ ಈ ಮದುವೆಯಲ್ಲಿ ಸಂಗೀತದ ಮೂಲಕ ವರ–ವಧುಗಳು ತಮ್ಮದೇ ಆದ ವಿಶಿಷ್ಟ ಗುರುತು ಮೂಡಿಸಿದರು. ಐಶ್ವರ್ಯ ಮತ್ತು ಪ್ರಸಾದ್ ಅವರ ಈ ಕೃತ್ಯವು ಮದುವೆಯ ಅತಿಥಿಗಳಲ್ಲಿ ಮಾತ್ರವಲ್ಲ, ಸಾಮಾಜಿಕ ಮಾಧ್ಯಮದಲ್ಲಿಯೂ ಚರ್ಚೆಗೆ ಕಾರಣವಾಗಿದೆ. “ಮದುವೆಯಲ್ಲೇ ವರ–ವಧುಗಳು ವಾದ್ಯ ನುಡಿಸುವುದು ಅಪರೂಪ” ಎಂದು ಜನರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಸಂಗೀತದ ಮೂಲಕ ತಮ್ಮ ಜೀವನದ ಹೊಸ ಅಧ್ಯಾಯವನ್ನು ಆರಂಭಿಸಿದ ಈ ಜೊಡಿ, ಕಲಾವಿದರಾಗಿ ತಮ್ಮ ಪ್ರೀತಿಯ ಅಭಿವ್ಯಕ್ತಿಯನ್ನು ವಿಶಿಷ್ಟವಾಗಿ ತೋರಿಸಿದ್ದಾರೆ.
ಈ ಮದುವೆ ಉಡುಪಿಯ ಜನರಿಗೆ ನೆನಪಾಗುವಂತಹ ಕ್ಷಣವಾಯಿತು. ಸಂಗೀತದೊಂದಿಗೆ ಜೀವನವನ್ನು ಆರಂಭಿಸಿದ ಐಶ್ವರ್ಯ–ಪ್ರಸಾದ್ ಜೊಡಿ, ತಮ್ಮ ಕಲೆಯ ಮೂಲಕ ದಾಂಪತ್ಯ ಜೀವನಕ್ಕೂ ಮಧುರತೆಯನ್ನು ಸೇರಿಸಿದ್ದಾರೆ. ನೀವು ಸಹ ಈ ಜೋಡಿಯ ಕಾರ್ಯಕ್ಕೆ ಮೆಚ್ಚುಗೆ ಸೂಚಿಸಿ, ಜೊತೆಗೆ ಜೋಡಿಗೆ ಶುಭಕೋರಿ ಧನ್ಯವಾದಗಳು.