Apr 24, 2026 Languages : ಕನ್ನಡ | English

10ನೇ ತರಗತಿ ಪಾಸ್ ಆಗಿದ್ದೀರಾ? ಕೈತುಂಬಾ ಸಂಬಳ ನೀಡುವ ಟಾಪ್ 6 ಸರ್ಕಾರಿ ಕೆಲಸಗಳಿವು - ಇಲ್ಲಿದೆ ಸಂಕ್ಷಿಪ್ತ ಮಾಹಿತಿ!!

ನಮ್ಮ ಸುತ್ತಮುತ್ತಲಿನ ಜನರಲ್ಲಿ ಒಂದು ಮಾತಿದೆ, "ಸರ್ಕಾರಿ ಕೆಲಸ ಸಿಗಬೇಕಾದ್ರೆ ಡಿಗ್ರಿ ಮಾಡ್ಬೇಕು, ಆಮೇಲೆ ವರ್ಷಾನುಗಟ್ಟಲೆ ಕೋಚಿಂಗ್ ತಗೋಬೇಕು" ಅಂತ. ಆದ್ರೆ ಈ ಮಾತು ನೂರಕ್ಕೆ ನೂರರಷ್ಟು ನಿಜವಲ್ಲ. ಎಲ್ಲರ ಮನೆಯ ಆರ್ಥಿಕ ಪರಿಸ್ಥಿತಿ 25-26 ವರ್ಷದವರೆಗೂ ಕಾಯುವಷ್ಟು ಚೆನ್ನಾಗಿರೋದಿಲ್ಲ. ಎಷ್ಟೋ ಜನ ವಿದ್ಯಾರ್ಥಿಗಳಿಗೆ ಚಿಕ್ಕ ವಯಸ್ಸಿನಲ್ಲೇ ಮನೆಯ ಜವಾಬ್ದಾರಿ ಹೊರಬೇಕಾದ ಅನಿವಾರ್ಯತೆ ಇರುತ್ತೆ. ಅಂಥವರಿಗೆ ನಿಮ್ಮ ಕೈಲಿರೋ SSLC ಅಂಕಪಟ್ಟಿ ಇದೆಯಲ್ಲ, ಅದು ಬರೀ ಕಾಗದವಲ್ಲ, ಅದೊಂದು 'ಗೋಲ್ಡನ್ ಟಿಕೆಟ್'!

10ನೇ ತರಗತಿ ಪಾಸಾದವರಿಗೆ 6 ಸರ್ಕಾರಿ ಕೆಲಸದ ಅವಕಾಶಗಳು;
10ನೇ ತರಗತಿ ಪಾಸಾದವರಿಗೆ 6 ಸರ್ಕಾರಿ ಕೆಲಸದ ಅವಕಾಶಗಳು;

ಹೌದು, ಕೇವಲ 10ನೇ ತರಗತಿ ಪಾಸಾಗಿದ್ದರೆ ಸಾಕು, ಕೇಂದ್ರ ಮತ್ತು ರಾಜ್ಯ ಸರ್ಕಾರದಲ್ಲಿ ಲೈಫ್ ಸೆಟಲ್ ಆಗುವಂತಹ ಕೆಲಸಗಳು ನಿಮಗಾಗಿ ಕಾಯುತ್ತಿವೆ. ಅಂತಹ 6 ಅದ್ಭುತ ಅವಕಾಶಗಳ ಮಾಹಿತಿ ಇಲ್ಲಿದೆ ನೋಡಿ.

ರೈಲ್ವೆ ಇಲಾಖೆಯ 'ಗ್ರೂಪ್ ಡಿ' (Railway Group D)

ಭಾರತೀಯ ರೈಲ್ವೆ ಪ್ರಪಂಚದ ಅತಿದೊಡ್ಡ ಕೆಲಸ ನೀಡುವ ಸಂಸ್ಥೆಗಳಲ್ಲಿ ಒಂದು. ಇಲ್ಲಿ ಹೆಲ್ಪರ್, ಟ್ರ್ಯಾಕ್ ಮೈಂಟೇನರ್ ಅಂತಹ ಹುದ್ದೆಗಳಿಗೆ 10ನೇ ತರಗತಿ ಪಾಸಾದವರನ್ನೇ ತಗೋತಾರೆ. ಒಂದು ಕಂಪ್ಯೂಟರ್ ಪರೀಕ್ಷೆ ಮತ್ತು ಫಿಸಿಕಲ್ ಟೆಸ್ಟ್ ಪಾಸ್ ಮಾಡಿದ್ರೆ ಸಾಕು, ನಿಮ್ಮ ಲೈಫ್ ಸೇಫ್. ಇದರ ಜೊತೆಗೆ ಫ್ರೀ ರೈಲ್ವೆ ಪಾಸ್ ಮತ್ತು ಮೆಡಿಕಲ್ ಫೆಸಿಲಿಟಿ ಕೂಡ ಸಿಗುತ್ತೆ.

ಎಸ್‌ಎಸ್‌ಸಿ ಎಂಟಿಎಸ್ (SSC MTS)

ಕೇಂದ್ರ ಸರ್ಕಾರದ ವಿವಿಧ ದೊಡ್ಡ ದೊಡ್ಡ ಆಫೀಸ್‌ಗಳಲ್ಲಿ ಕೆಲಸ ಮಾಡಬೇಕಾ? ಹಾಗಾದ್ರೆ ಸ್ಟಾಫ್ ಸೆಲೆಕ್ಷನ್ ಕಮಿಷನ್ (SSC) ನಡೆಸೋ ಎಂಟಿಎಸ್ ಪರೀಕ್ಷೆ ಬರೆಯಿರಿ. ಇಲ್ಲಿ ಪಿಯೂನ್, ಮಾಲಿ, ಚೌಕಿದಾರ್ ಅಂತಹ ಹುದ್ದೆಗಳಿರುತ್ತವೆ. ಆರಂಭದಲ್ಲೇ 18,000 ರೂ. ಗಿಂತ ಹೆಚ್ಚು ಸಂಬಳ ಸಿಗುತ್ತೆ. ಪರೀಕ್ಷೆ ಕೂಡ ಅಷ್ಟೇನೂ ಕಷ್ಟ ಇರೋದಿಲ್ಲ.

ಪರೀಕ್ಷೆಯೇ ಇಲ್ಲದ ಕೆಲಸ: ಅಂಚೆ ಇಲಾಖೆ (Post Office GDS)

ನನಗೆ ಪರೀಕ್ಷೆ ಬರೆಯೋಕೆ ಭಯ, ಅಂಕಗಳ ಮೇಲೆ ಕೆಲಸ ಸಿಗಲ್ವಾ? ಅಂತ ಕೇಳೋರಿಗೆ ಇದು ಬೆಸ್ಟ್ ಆಪ್ಷನ್. ಅಂಚೆ ಇಲಾಖೆಯ ಜಿಡಿಎಸ್ (GDS) ಹುದ್ದೆಗಳಿಗೆ ಯಾವುದೇ ಎಕ್ಸಾಮ್ ಇರೋದಿಲ್ಲ. ನಿಮ್ಮ 10ನೇ ತರಗತಿಯ ಮಾರ್ಕ್ಸ್ ಕಾರ್ಡ್ ಮೇಲೆ ನೇರ ನೇಮಕಾತಿ ನಡೆಯುತ್ತೆ. ಸೈಕಲ್ ತುಳಿಯೋಕೆ ಬಂದ್ರೆ ಮತ್ತು ನಿಮ್ಮ ಊರಿನ ಭಾಷೆ ಗೊತ್ತಿದ್ರೆ ಸಾಕು, ಈ ಕೆಲಸ ನಿಮ್ಮದಾಗಬಹುದು.

ಊರಿನಲ್ಲೇ ಸೇವೆ: ಅಂಗನವಾಡಿ ಹುದ್ದೆಗಳು

ನಮ್ಮ ಹಳ್ಳಿ ಮತ್ತು ಗ್ರಾಮೀಣ ಭಾಗದ ಮಹಿಳೆಯರಿಗೆ ತಮ್ಮ ಊರಿನಲ್ಲೇ ಕೆಲಸ ಮಾಡೋಕೆ ಇದಕ್ಕಿಂತ ಒಳ್ಳೆಯ ಅವಕಾಶ ಮತ್ತೊಂದಿಲ್ಲ. 10ನೇ ತರಗತಿ ಪಾಸಾದ ಮಹಿಳೆಯರು ಅಂಗನವಾಡಿ ಕಾರ್ಯಕರ್ತೆ ಮತ್ತು ಸಹಾಯಕಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು.

ದೇಶ ಸೇವೆಗೆ ಅವಕಾಶ: ಇಂಡಿಯನ್ ಕೋಸ್ಟ್ ಗಾರ್ಡ್

ನಮಗೆ ಯೂನಿಫಾರ್ಮ್ ಹಾಕಿ ದೇಶ ಸೇವೆ ಮಾಡೋ ಆಸೆ ಇದ್ರೆ, ಕೋಸ್ಟ್ ಗಾರ್ಡ್‌ನಲ್ಲಿ 'ನಾವಿಕ್' (Navik) ಹುದ್ದೆಗೆ ಸೇರಬಹುದು. ಇಲ್ಲಿ ಅಡುಗೆ ಮತ್ತು ಮನೆಯ ನಿರ್ವಹಣೆಯ ಕೆಲಸಗಳಿರುತ್ತವೆ. 21,700 ರೂ. ಆರಂಭಿಕ ವೇತನದ ಜೊತೆಗೆ ಫ್ರೀ ರೇಷನ್, ಯೂನಿಫಾರ್ಮ್ ಮತ್ತು ಕ್ಯಾಂಟೀನ್ ಸೌಲಭ್ಯಗಳೆಲ್ಲಾ ಇರುತ್ತವೆ.

ಕೆಲಸ ಹುಡುಕುವ ಮುನ್ನ ಈ ಮೂರು ಟಿಪ್ಸ್ ನೆನಪಿಡಿ:

ವಯಸ್ಸು 18 ಆಗಿರಲಿ: ಸರ್ಕಾರಿ ಕೆಲಸಕ್ಕೆ ಅಪ್ಲೈ ಮಾಡೋಕೆ ಕನಿಷ್ಠ 18 ವರ್ಷ ತುಂಬಿರಬೇಕು. ಅಲ್ಲಿಯವರೆಗೂ ಸುಮ್ಮನೆ ಕೂರದೆ ಪರೀಕ್ಷೆಯ ಸಿಲಬಸ್ ಓದುತ್ತಿರಿ.

ದಾಖಲೆಗಳನ್ನ ರೆಡಿ ಮಾಡಿಡಿ: ನಿಮ್ಮ ಹೆಸರಿನ ಸ್ಪೆಲ್ಲಿಂಗ್ ಮಾರ್ಕ್ಸ್ ಕಾರ್ಡ್ ಮತ್ತು ಆಧಾರ್ ಕಾರ್ಡ್‌ನಲ್ಲಿ ಸೇಮ್ ಇದೆಯೇ ಅಂತ ಈಗಲೇ ಚೆಕ್ ಮಾಡ್ಕೊಳ್ಳಿ. ಜಾತಿ ಮತ್ತು ಆದಾಯ ಪ್ರಮಾಣ ಪತ್ರವನ್ನ ಅಪ್‌ಡೇಟ್ ಮಾಡಿಸಿಡಿ.

ಬೇಸಿಕ್ ಕಂಪ್ಯೂಟರ್ ಕೋರ್ಸ್: ಪುರುಸೊತ್ತಿದ್ದಾಗ ಒಂದು ಎರಡು ತಿಂಗಳ ಕಂಪ್ಯೂಟರ್ ಸರ್ಟಿಫಿಕೇಟ್ ಕೋರ್ಸ್ ಮಾಡಿಟ್ಟುಕೊಳ್ಳಿ. ಇದು ತುಂಬಾ ಇಲಾಖೆಗಳಲ್ಲಿ ಕಡ್ಡಾಯವಾಗಿ ಬೇಕಾಗುತ್ತೆ.

ನಮ್ಮದೊಂದು ಸಣ್ಣ ಸಲಹೆ: 18ನೇ ವಯಸ್ಸಿಗೆ ಕೆಲಸಕ್ಕೆ ಸೇರಿದ್ರೆ, ನಿಮ್ಮ ವಯಸ್ಸಿನ ಬೇರೆ ಹುಡುಗರು ಡಿಗ್ರಿ ಮುಗಿಸಿ ಬರೋ ಹೊತ್ತಿಗೆ ನಿಮಗೆ 4 ವರ್ಷದ ಎಕ್ಸ್‌ಪೀರಿಯನ್ಸ್ ಇರುತ್ತೆ. ಅಷ್ಟೇ ಅಲ್ಲ, ಇಲಾಖೆಯ ಒಳಗಡೆ ನಡೆಯೋ ಎಕ್ಸಾಮ್ ಬರೆದು ನೀವು ಬೇಗನೆ ಪ್ರಮೋಷನ್ ಕೂಡ ತಗೋಬಹುದು.

Latest News