Apr 9, 2026 Languages : ಕನ್ನಡ | English

ಬ್ರೇಕ್ ಬಿದ್ದ ಎರಡೇ ದಿನಕ್ಕೆ ಅಮೆರಿಕಾ ವಿರುದ್ಧ ಇರಾನ್ ಗರಂ - ಕದನ ವಿರಾಮದ ನಿಯಮಗಳನ್ನೇ ಗಾಳಿಗೆ ತೂರಿದ್ರಾ ಟ್ರಂಪ್?

ಪಶ್ಚಿಮ ಏಷ್ಯಾದಲ್ಲಿ ಸದ್ಯಕ್ಕೆ ನಡೀತಿರೋ ಯುದ್ಧದ ಕಥೆ ಕೇಳಿದ್ರೆ ಒಂತರ ಸಸ್ಪೆನ್ಸ್ ಸಿನಿಮಾ ನೋಡಿದ ಹಾಗೆ ಇದೆ. ಮೊನ್ನೆ ಮಂಗಳವಾರವಷ್ಟೇ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಎರಡು ವಾರಗಳ ಕಾಲ ಇರಾನ್ ಮೇಲೆ ಯಾವುದೇ ದಾಳಿ ಮಾಡಲ್ಲ, ಯುದ್ಧಕ್ಕೆ ವಿರಾಮ ಕೊಡೋಣ ಅಂತ ಅಗ್ರಿಮೆಂಟ್ ಮಾಡಿಕೊಂಡಿದ್ರು. ಆದ್ರೆ ಈ ಕದನ ವಿರಾಮ ಘೋಷಣೆಯಾದ 24 ಗಂಟೆ ಕಳೆಯೋ ಮೊದಲೇ ಇರಾನ್ ಈಗ ಅಮೆರಿಕಾ ಮೇಲೆ ಕೆಂಡಕಾರುತ್ತಿದೆ. 'ನೀವು ಕೊಟ್ಟ ಮಾತನ್ನ ನೀವೇ ಮುರಿದಿದ್ದೀರಾ' ಅಂತ ಇರಾನ್ ಸಂಸತ್ತಿನ ಸ್ಪೀಕರ್ ಮೊಹಮ್ಮದ್ ಬಗರ್ ಘಲಿಬಾಫ್ ಸೋಷಿಯಲ್ ಮೀಡಿಯಾದಲ್ಲಿ ಗುಡುಗಿದ್ದಾರೆ.

ಇರಾನ್–ಅಮೆರಿಕಾ ವಿರಾಮ 24 ಗಂಟೆಯಲ್ಲೇ ಕುಸಿತ;
ಇರಾನ್–ಅಮೆರಿಕಾ ವಿರಾಮ 24 ಗಂಟೆಯಲ್ಲೇ ಕುಸಿತ;

ಇರಾನ್ ನೀಡಿದ್ದ 10 ಅಂಶಗಳ ಪ್ರಸ್ತಾವನೆಯಲ್ಲಿ ಈಗಾಗ್ಲೇ ಮೂರು ಮುಖ್ಯ ನಿಯಮಗಳನ್ನ ಅಮೆರಿಕಾ ಬ್ರೇಕ್ ಮಾಡಿದೆ ಅನ್ನೋದು ಇರಾನ್ ವಾದ. ಈ '10-ಪಾಯಿಂಟ್ ಪ್ರಪೋಸಲ್' ಅಡಿ ಇಬ್ಬರ ಮಧ್ಯೆ ಮಾತುಕತೆ ಶುರುವಾಗಿತ್ತು. ಆದ್ರೆ ಇರಾನ್ ಹೇಳ್ತಿರೋ ಪ್ರಕಾರ:

ಲೆಬನಾನ್‌ನಲ್ಲಿ ದಾಳಿ ನಿಂತಿಲ್ಲ: ಎಲ್ಲೇ ಆಗಲಿ ತಕ್ಷಣ ದಾಳಿ ನಿಲ್ಲಿಸಬೇಕು ಅನ್ನೋದು ಮೊದಲ ಕಂಡೀಷನ್ ಆಗಿತ್ತು. ಆದ್ರೆ ಲೆಬನಾನ್ ಮೇಲೆ ಇನ್ನು ದಾಳಿ ನಡೀತಿದೆ, ಇದು ನಂಬಿಕೆ ದ್ರೋಹ ಅಂತ ಇರಾನ್ ಹೇಳ್ತಿದೆ. ಈ ವಿಷಯವನ್ನ ಪಾಕಿಸ್ತಾನ ಪ್ರಧಾನಿ ಶೆಹಬಾಜ್ ಷರೀಫ್ ಕೂಡ ಪ್ರಸ್ತಾಪ ಮಾಡಿದ್ದಾರೆ.

ಡ್ರೋನ್ ಕಿರಿಕಿರಿ: ಇರಾನ್ ಗಡಿಯೊಳಗೆ ಯಾವುದೇ ಅಮೆರಿಕಾ ವಿಮಾನ ಅಥವಾ ಡ್ರೋನ್ ಬರಬಾರದು ಅನ್ನೋದು ರೂಲ್ಸ್. ಆದ್ರೆ ಇರಾನ್‌ನ ಲಾರ್ (Lar) ನಗರದ ಮೇಲೆ ಡ್ರೋನ್ ಒಂದು ಹಾರಾಡ್ತಾ ಇತ್ತಂತೆ. ಅದನ್ನ ಇರಾನ್ ಹೊಡೆದು ಉರುಳಿಸಿದೆ. "ನಮ್ಮ ಏರ್ ಸ್ಪೇಸ್ ಒಳಗೆ ಯಾಕೆ ಬಂದಿರಿ?" ಅನ್ನೋದು ಇರಾನ್ ಪ್ರಶ್ನೆ.

ಯುರೇನಿಯಂ ಎನ್ರಿಚ್‌ಮೆಂಟ್: ಇರಾನ್ ಗೆ ಇರೋ ಹಕ್ಕುಗಳ ಬಗ್ಗೆ ಕೂಡ ಅಮೆರಿಕಾ ಅಡ್ಡಗಾಲು ಹಾಕ್ತಿದೆ ಅನ್ನೋದು ಇರಾನ್ ಸಂಸದರ ಆರೋಪ.

ಘಲಿಬಾಫ್ ಅವರ ಪ್ರಕಾರ, "ಮಾತುಕತೆ ಶುರುವಾಗೋ ಮೊದಲೇ ಹೀಗೆ ಕಂಡೀಷನ್ಸ್ ಬ್ರೇಕ್ ಮಾಡಿದ್ರೆ, ಇನ್ನು ಶಾಂತಿ ಮಾತುಕತೆ ಮಾಡೋದ್ರಲ್ಲಿ ಅರ್ಥವೇ ಇಲ್ಲ" ಅಂದಿದ್ದಾರೆ. ಅಂದ್ರೆ ಈ ಕದನ ವಿರಾಮ ಇನ್ನು ಎಷ್ಟು ದಿನ ಇರುತ್ತೆ ಅನ್ನೋದು ಈಗ ದೊಡ್ಡ ಡೌಟು.

ಈ ಯುದ್ಧ ಶುರುವಾಗಿದ್ದು ಫೆಬ್ರವರಿ 28ಕ್ಕೆ. ಅಮೆರಿಕಾ ಮತ್ತು ಇಸ್ರೇಲ್ ಜೊತೆಯಾಗಿ ಇರಾನ್‌ನ ಪರಮೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಅವರನ್ನ ಕೊಂದಿದ್ದವು. ಇದಕ್ಕೆ ಪ್ರತಿಯಾಗಿ ಇರಾನ್ ಕೂಡ ಇಸ್ರೇಲ್ ಮತ್ತು ಅರಬ್ ದೇಶಗಳಲ್ಲಿರೋ ಅಮೆರಿಕಾ ಬೇಸ್‌ಗಳ ಮೇಲೆ ದಾಳಿ ಮಾಡಿತ್ತು. ಟ್ರಂಪ್ ಅವರು ಇತ್ತೀಚೆಗೆ 'ಆಪರೇಷನ್ ಎಪಿಕ್ ಫ್ಯೂರಿ' (Operation Epic Fury) ಯಶಸ್ವಿಯಾಗಿದೆ ಅಂತ ಅನೌನ್ಸ್ ಮಾಡಿದ್ರು. ಆದ್ರೆ ಈ ದಾಳಿಗಳಲ್ಲಿ ಸಾವಿರಾರು ಜನರು ಸತ್ತು, ಲಕ್ಷಾಂತರ ಜನ ಬೀದಿಗೆ ಬಂದಿರೋದು ತುಂಬಾನೇ ಬೇಸರದ ಸಂಗತಿ.

ಟ್ರಂಪ್ ಮಾತ್ರ "ನಾನು ಮತ್ತು ಇರಾನ್ ಬಹುತೇಕ ಎಲ್ಲಾ ಪಾಯಿಂಟ್‌ಗಳಿಗೂ ಒಪ್ಪಿಕೊಂಡಿದ್ದೀವಿ, ಈ ಎರಡು ವಾರಗಳ ಗ್ಯಾಪ್‌ನಲ್ಲಿ ಎಲ್ಲವನ್ನ ಫೈನಲ್ ಮಾಡೋಣ" ಅಂತ ಹೇಳ್ತಿದ್ದಾರೆ. ಟ್ರಂಪ್ ಅವರಿಗೆ ಇರಾನ್ ಕೊಟ್ಟ 10 ಅಂಶಗಳ ಪ್ಲಾನ್ 'ವರ್ಕಬಲ್' ಅಂತ ಅನ್ಸಿದೆ. ಆದ್ರೆ ಗ್ರೌಂಡ್‌ನಲ್ಲಿ ಮಾತ್ರ ಪರಿಸ್ಥಿತಿ ಬೇರೆ ತರಹ ಇದೆ. ಇರಾನ್ ಗೆ ಅಮೆರಿಕಾ ಮೇಲೆ ಮೊದಲೇ ನಂಬಿಕೆ ಇಲ್ಲ, ಈಗ ಈ 'ವೈಲೇಷನ್' ಇಂದಾಗಿ ಆ ನಂಬಿಕೆ ಇನ್ನು ಕಡಿಮೆಯಾಗಿದೆ ಎಂದು ಕೇಳಿ ಬರುತ್ತಿದೆ.  

ಪಶ್ಚಿಮ ಏಷ್ಯಾದ ಈ ಯುದ್ಧ ಇಡೀ ಜಗತ್ತಿನ ಮೇಲೆ ಪರಿಣಾಮ ಬೀರ್ತಿದೆ. ಪೆಟ್ರೋಲ್ ಬೆಲೆ ಇಂದ ಹಿಡಿದು ಗ್ಲೋಬಲ್ ಮಾರ್ಕೆಟ್ ವರೆಗೂ ಎಲ್ಲವನ್ನೂ ಈ ಯುದ್ಧ ಅಲುಗಾಡಿಸ್ತಿದೆ. ಟ್ರಂಪ್ ಅವರ ಈ 'ಟೂ ವೀಕ್ಸ್' ಫಾರ್ಮುಲಾ ವರ್ಕ್ ಆಗುತ್ತಾ? ಅಥವಾ ಮತ್ತೆ ಬಾಂಬ್ ಗಳ ಸದ್ದು ಕೇಳುತ್ತಾ? ಅನ್ನೋದು ಇನ್ನು ಕೆಲವು ದಿನಗಳಲ್ಲಿ ಗೊತ್ತಾಗಲಿದೆ.

ಯುದ್ಧ ಯಾವುದಕ್ಕೂ ಪರಿಹಾರ ಅಲ್ಲ ಅನ್ನೋದು ಎಲ್ಲರಿಗೂ ಗೊತ್ತು. ಆದ್ರೆ ಈ ದೇಶಗಳ ನಡುವಿನ 'ಪವರ್ ಪಾಲಿಟಿಕ್ಸ್' ಮಧ್ಯೆ ಸಾಮಾನ್ಯ ಜನ ಮಾತ್ರ ನಲುಗಿ ಹೋಗ್ತಿದ್ದಾರೆ. ನಿಮಗೆ ಈ ವಿಷಯದ ಬಗ್ಗೆ ಏನನ್ನಿಸುತ್ತೆ? ಕಮೆಂಟ್ ಮಾಡಿ ತಿಳಿಸಿ ಮತ್ತು ಹೆಚ್ಚಿನ ಅಪ್‌ಡೇಟ್ಸ್‌ಗಾಗಿ ನಮ್ಮನ್ನ ಫಾಲೋ ಮಾಡಿ. 

Latest News