Apr 9, 2026 Languages : ಕನ್ನಡ | English

ಅಮೆರಿಕದ ಯುದ್ಧ ಹಡಗಿನ ಮೇಲೆ ಇರಾನ್ ಕ್ಷಿಪಣಿ ದಾಳಿ? ಸಮುದ್ರದ ಮಧ್ಯೆ ಆರಂಭವಾಯ್ತು ಮಹಾಯುದ್ಧ!!

ಒಂದೆಡೆ ಇಸ್ರೇಲ್ ಮತ್ತು ಲೆಬೆನಾನ್ ನಡುವೆ ಯುದ್ಧ ನಿಲ್ಲಬಹುದು ಎಂದು ಜಗತ್ತು ನಿರೀಕ್ಷಿಸುತ್ತಿದ್ದರೆ, ಇತ್ತ ಇರಾನ್ ಮಾತ್ರ ಮತ್ತೊಂದು ಭೀಕರ ಸಮರಕ್ಕೆ ನಾಂದಿ ಹಾಡುತ್ತಿದೆ. ಮಧ್ಯಪ್ರಾಚ್ಯದಲ್ಲಿ ಕ್ಷಿಪಣಿ ಮತ್ತು ಬಾಂಬ್‌ಗಳ ಸದ್ದು ಇನ್ನೂ ಅಡಗಿಲ್ಲ. ಇಸ್ರೇಲ್ ನಡೆಸಿದ ಭೀಕರ ದಾಳಿಯಿಂದ ನೂರಾರು ಮಂದಿ ಪ್ರಾಣ ಕಳೆದುಕೊಳ್ಳುತ್ತಿದ್ದರೆ, ಇತ್ತ ಇರಾನ್ ಹೊಸದೊಂದು ಬಾಂಬ್ ಸಿಡಿಸಿ ಜಗತ್ತಿಗೆ ಶಾಕ್ ನೀಡಿದೆ.

34 ಕಿಲೋಮೀಟರ್ ಅಗಲದ ಜಲಮಾರ್ಗಕ್ಕಾಗಿ ಜಗತ್ತಿನ ಹಗೆತನ
34 ಕಿಲೋಮೀಟರ್ ಅಗಲದ ಜಲಮಾರ್ಗಕ್ಕಾಗಿ ಜಗತ್ತಿನ ಹಗೆತನ

ವಿಶ್ವದ ತೈಲ ವ್ಯಾಪಾರಕ್ಕೆ ಅತ್ಯಂತ ಪ್ರಮುಖವಾಗಿರುವ 'ಹಾರ್ಮುಜ್ ಜಲಸಂಧಿ' (Strait of Hormuz) ಮೇಲೆ ಇರಾನ್ ಈಗ ತನ್ನ ಪೂರ್ಣ ಹಿಡಿತ ಸಾಧಿಸಲು ಮುಂದಾಗಿದೆ. "ನಮ್ಮ ಅನುಮತಿ ಇಲ್ಲದೆ ಯಾರೂ ಈ ಮಾರ್ಗದಲ್ಲಿ ಹಡಗು ಓಡಿಸುವಂತಿಲ್ಲ. ಒಂದು ವೇಳೆ ನಿಯಮ ಮೀರಿ ಬಂದರೆ ಆ ಹಡಗನ್ನು ಸುಟ್ಟು ಭಸ್ಮ ಮಾಡುತ್ತೇವೆ" ಎಂದು ಇರಾನ್ ನೌಕಾಪಡೆ ರೇಡಿಯೋ ಮೂಲಕ ಹಡಗುಗಳಿಗೆ ನೇರ ಎಚ್ಚರಿಕೆ ನೀಡಿದೆ. ಇರಾನಿನ ಸೆಪಾ ನೌಕಾಪಡೆಯಿಂದ ಗ್ರೀನ್ ಸಿಗ್ನಲ್ ಸಿಕ್ಕರೆ ಮಾತ್ರ ಈ ಮಾರ್ಗದಲ್ಲಿ ಚಲಿಸಲು ಸಾಧ್ಯ ಎಂದು ಅದು ಸ್ಪಷ್ಟಪಡಿಸಿದೆ.

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇತ್ತೀಚೆಗಷ್ಟೇ ಒಂದು ಹೇಳಿಕೆ ನೀಡಿದ್ದರು. "ಇರಾನ್ ತಕ್ಷಣವೇ ಹಾರ್ಮುಜ್ ಜಲಸಂಧಿಯನ್ನು ಸುರಕ್ಷಿತ ಸಂಚಾರಕ್ಕಾಗಿ ಮುಕ್ತಗೊಳಿಸಿದರೆ ಮಾತ್ರ ನಾವು ಇರಾನ್ ಮೇಲಿನ ದಾಳಿಯನ್ನು ಎರಡು ವಾರಗಳ ಕಾಲ ನಿಲ್ಲಿಸುತ್ತೇವೆ" ಎಂದು ಷರತ್ತು ಹಾಕಿದ್ದರು. ಆದರೆ, ಇರಾನ್ ಇದಕ್ಕೆ ಬಗ್ಗುವಂತೆ ಕಾಣುತ್ತಿಲ್ಲ. ಉಲ್ಟಾ, "ನಾವು ಹೇಳಿದಂತೆ ಕೇಳದಿದ್ದರೆ ಹಡಗುಗಳನ್ನು ಹೊಡೆದುರುಳಿಸುತ್ತೇವೆ" ಎಂದು ಗುಡುಗುವ ಮೂಲಕ ಅಮೆರಿಕಕ್ಕೆ ನೇರ ಸವಾಲು ಹಾಕಿದೆ.

ಈ ಜಲಸಂಧಿ ಯಾಕೆ ಇಷ್ಟು ಮುಖ್ಯ?

ಹಾರ್ಮುಜ್ ಜಲಸಂಧಿ ಎಂಬುದು ಇರಾನ್ ಮತ್ತು ಒಮನ್ ನಡುವೆ ಇರುವ ಕೇವಲ 34 ಕಿಲೋಮೀಟರ್ ಅಗಲದ ಒಂದು ಸಣ್ಣ ಜಲಮಾರ್ಗ. ಆದರೆ ಇದರ ತಾಕತ್ತು ಮಾತ್ರ ಅಪಾರ:

ತೈಲ ಪೂರೈಕೆ: ವಿಶ್ವದ ಒಟ್ಟು ತೈಲ ಪೂರೈಕೆಯ ಐದನೇ ಒಂದು ಭಾಗ (1/5th) ಇದೇ ಮಾರ್ಗವಾಗಿ ಸಾಗಬೇಕು.

ಆಹಾರ ಮತ್ತು ರಸಗೊಬ್ಬರ: ತೈಲ ಮಾತ್ರವಲ್ಲದೆ, ಕೃಷಿಗೆ ಬೇಕಾದ ರಸಗೊಬ್ಬರ ಮತ್ತು ಪ್ರಮುಖ ಸರಕುಗಳು ಇಡೀ ಜಗತ್ತಿಗೆ ತಲುಪಲು ಇದೇ ಪ್ರಮುಖ ರಸ್ತೆ.

ಒಂದು ವೇಳೆ ಇರಾನ್ ಈ ಮಾರ್ಗವನ್ನು ಬಂದ್ ಮಾಡಿದರೆ ಅಥವಾ ಹಡಗುಗಳ ಮೇಲೆ ದಾಳಿ ಮಾಡಿದರೆ, ಜಗತ್ತಿನಾದ್ಯಂತ ಪೆಟ್ರೋಲ್, ಡೀಸೆಲ್ ಬೆಲೆ ಗಗನಕ್ಕೇರುವುದು ಗ್ಯಾರಂಟಿ.

ಸದ್ಯದ ವರದಿಗಳ ಪ್ರಕಾರ, ಹಾರ್ಮುಜ್ ಜಲಸಂಧಿಯಲ್ಲಿ ನೂರಾರು ಹಡಗುಗಳು ಏನು ಮಾಡಬೇಕೆಂದು ತಿಳಿಯದೆ ನಿಂತಿವೆ. ಇರಾನ್‌ನ ಯುದ್ಧ ವಿಮಾನಗಳು ಸದಾ ಪರ್ಷಿಯನ್ ಕೊಲ್ಲಿಯ ಮೇಲೆ ಹಾರಾಡುತ್ತಿವೆ. ವಾಲ್ ಸ್ಟ್ರೀಟ್ ಜರ್ನಲ್ ಬಿಡುಗಡೆ ಮಾಡಿದ ಫೋಟೋ ಮತ್ತು ವಿಡಿಯೋಗಳು ಈ ಭಾಗದಲ್ಲಿ ಯುದ್ಧದ ಭೀತಿ ಎಷ್ಟು ಜೋರಾಗಿದೆ ಎಂಬುದನ್ನು ಬಿಚ್ಚಿಟ್ಟಿವೆ.

ಜಗತ್ತು ಶಾಂತಿಯನ್ನು ಬಯಸುತ್ತಿದೆ, ಆದರೆ ಇರಾನ್ ಮತ್ತು ಇಸ್ರೇಲ್ ನಡುವಿನ ಈ ಹಗೆತನ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಅಮೆರಿಕದ ಬೆದರಿಕೆಗೂ ಇರಾನ್ ಕೇರ್ ಮಾಡುತ್ತಿಲ್ಲ. ಒಂದು ವೇಳೆ ಇರಾನ್ ತನ್ನ ಎಚ್ಚರಿಕೆಯಂತೆ ಹಡಗುಗಳನ್ನು ಹೊಡೆದುರುಳಿಸಿದರೆ, ಅದು ಮೂರನೇ ಮಹಾಯುದ್ಧಕ್ಕೆ ನಾಂದಿ ಹಾಡಿದರೂ ಅಚ್ಚರಿಯಿಲ್ಲ.

Latest News