ಇರಾನ್-ಇಸ್ರೇಲ್ ಯುದ್ಧ : ಹಾರ್ಮುಜ್ ಜಲಸಂಧಿ ಬಂದ್ - ಯಾರಾದರೂ ಬಂದರೆ ಪರಿಸ್ಥಿತಿ ನೆಟ್ಟಗಿರಲ್ಲ ಎಂದ ಇರಾನ್ ಪಡೆ!!

ಕಳೆದ ನಾಲ್ಕು ವಾರಗಳಿಂದ ನಡೆಯುತ್ತಿರುವ ಇರಾನ್ ಮತ್ತು ಇಸ್ರೇಲ್ ನಡುವಿನ ಯುದ್ಧ ಈಗ ಅಕ್ಷರಶಃ ಕೆಂಡದಂತಾಗಿದೆ. ಇಡೀ ಜಗತ್ತೇ ಈ ಯುದ್ಧದ ಕಡೆಗೆ ಕಣ್ಣಿಟ್ಟಿದೆ. ಯಾಕಂದ್ರೆ, ಇರಾನ್‌ನ ಪ್ರಬಲ ಸೇನೆಯಾದ 'ರೆವಲ್ಯೂಷನರಿ ಗಾರ್ಡ್ಸ್' (IRGC) ಈಗ ಒಂದು ಭೀಕರ ಎಚ್ಚರಿಕೆಯನ್ನು ನೀಡಿದೆ. ಅದೇನಪ್ಪಾ ಅಂದ್ರೆ, ಜಗತ್ತಿನ ಅತಿ ಪ್ರಮುಖ ತೈಲ ಸಾಗಾಣಿಕೆಯ ಹಾದಿಯಾಗಿರೋ 'ಹಾರ್ಮುಜ್ ಜಲಸಂಧಿ'ಯನ್ನು (Strait of Hormuz) ಈಗ ಸಂಪೂರ್ಣವಾಗಿ ಬಂದ್ ಮಾಡಲಾಗಿದೆ ಎನ್ನಲಾಗುತ್ತಿದೆ. 

ಇರಾನ್-ಇಸ್ರೇಲ್ ಯುದ್ಧದ ಬಿಸಿ – ಹಾರ್ಮುಜ್ ಜಲಸಂಧಿ ಬಂದ್!! | Photo Credit: https://www.deccanherald.com/
ಇರಾನ್-ಇಸ್ರೇಲ್ ಯುದ್ಧದ ಬಿಸಿ – ಹಾರ್ಮುಜ್ ಜಲಸಂಧಿ ಬಂದ್!! | Photo Credit: https://www.deccanherald.com/

ಇರಾನ್ ಪಡೆಗಳು ಹೇಳುವ ಪ್ರಕಾರ, ಅಮೆರಿಕ ಮತ್ತು ಇಸ್ರೇಲ್ ಬೆಂಬಲಿತ ದೇಶಗಳ ಯಾವುದೇ ಹಡಗುಗಳು ಈ ಹಾದಿಯಲ್ಲಿ ಸಂಚರಿಸುವಂತಿಲ್ಲ. ಒಂದು ವೇಳೆ ಯಾರಾದರೂ ನಿಯಮ ಮೀರಿ ಈ ಜಲಸಂಧಿಯನ್ನು ದಾಟಲು ಪ್ರಯತ್ನಿಸಿದರೆ, ಅವರಿಗೆ 'ಕಠಿಣ ಶಿಕ್ಷೆ' ಕಾದಿದೆ ಎಂದು ಇರಾನ್ ಗುಡುಗಿದೆ. ಇದು ಕೇವಲ ಯುದ್ಧವಲ್ಲ, ಜಾಗತಿಕ ಮಟ್ಟದಲ್ಲಿ ತೈಲ ಬೆಲೆ ಏರಿಕೆಗೆ ಮತ್ತು ಆರ್ಥಿಕ ಸಂಕಷ್ಟಕ್ಕೆ ನಾಂದಿ ಹಾಡುವ ಮುನ್ಸೂಚನೆಯಂತೆ ಕಾಣುತ್ತಿದೆ.

ಇಷ್ಟಕ್ಕೇ ನಿಲ್ಲದ ಇರಾನ್, ಇಸ್ರೇಲ್ ಮತ್ತು ಕುವೈತ್ ಮೇಲೆ ಸರಣಿ ಕ್ಷಿಪಣಿ ದಾಳಿಗಳನ್ನು ನಡೆಸಿದೆ ಎನ್ನಲಾಗಿದೆ. ಈ ದಾಳಿಯಿಂದಾಗಿ ಅಲ್ಲಿನ ವಾಣಿಜ್ಯ ಬಂದರುಗಳಿಗೆ ಭಾರಿ ಹಾನಿಯಾಗಿದೆ ಎಂದು ವರದಿಯಾಗಿದೆ. ಯುದ್ಧದ ತೀವ್ರತೆ ಎಷ್ಟಿದೆ ಅಂದ್ರೆ, ಇರಾನ್‌ನಲ್ಲಿರುವ ಸುಮಾರು 120ಕ್ಕೂ ಹೆಚ್ಚು ಮ್ಯೂಸಿಯಂಗಳು ಮತ್ತು ಐತಿಹಾಸಿಕ ಕಟ್ಟಡಗಳು ಅಮೆರಿಕ ಹಾಗೂ ಇಸ್ರೇಲ್‌ನ ವೈಮಾನಿಕ ದಾಳಿಯಿಂದ ಧ್ವಂಸವಾಗಿವೆ ಎಂದು ಇರಾನ್ ಸರ್ಕಾರ ದೂರಿದೆ. ತನ್ನ ದೇಶದ ಇತಿಹಾಸದ ಮೇಲೆ ಈ ರೀತಿ ದಾಳಿ ನಡೆಸಿರುವುದಕ್ಕೆ ಇರಾನ್ ಕೆಂಡಾಮಂಡಲವಾಗಿದೆ.

ಮತ್ತೊಂದೆಡೆ, ಯುದ್ಧದ ನಡುವೆ ಇರಾನ್‌ನ ಶಾಲೆಯೊಂದರ ಮೇಲೆ ನಡೆದ ದಾಳಿಯ ಬಗ್ಗೆ ವಿಶ್ವಸಂಸ್ಥೆ (UN) ತೀವ್ರ ಆಕ್ರೋಶ ಹೊರಹಾಕಿದೆ. ಶಾಲಾ ಮಕ್ಕಳ ಮೇಲೆ ನಡೆದ ಈ ಹ*ಲ್ಲೆಯನ್ನು ಖಂಡಿಸಿರುವ ವಿಶ್ವಸಂಸ್ಥೆ, ಈ ಘಟನೆಗೆ ಸಂಬಂಧಪಟ್ಟವರಿಗೆ ತಕ್ಕ 'ನ್ಯಾಯ' ಸಿಗಲೇಬೇಕು ಎಂದು ಪಟ್ಟು ಹಿಡಿದಿದೆ. ಅಮಾಯಕರ ಪ್ರಾಣದ ಜೊತೆ ನಡೆಯುತ್ತಿರುವ ಈ ಆಟ ನಿಲ್ಲಬೇಕು ಎಂಬುದು ಎಲ್ಲರ ಆಶಯವಾಗಿದೆ.

ಇದರ ಪರಿಣಾಮ ಏನಾಗಬಹುದು?

ಈ ಯುದ್ಧ ಕೇವಲ ಎರಡು ದೇಶಗಳ ನಡುವಿನ ಕದನವಾಗಿ ಉಳಿದಿಲ್ಲ. ಹಾರ್ಮುಜ್ ಜಲಸಂಧಿ ಬಂದ್ ಆಗಿರುವುದರಿಂದ ಪೆಟ್ರೋಲ್, ಡೀಸೆಲ್ ಬೆಲೆ ಗಗನಕ್ಕೇರುವ ಆತಂಕ ಶುರುವಾಗಿದೆ. ಅಮೆರಿಕ ಈ ಯುದ್ಧಕ್ಕೆ ನೇರವಾಗಿ ಇಳಿದರೆ ಇದು ಮೂರನೇ ಮಹಾಯುದ್ಧದ ರೂಪ ಪಡೆದರೂ ಅಚ್ಚರಿಯಿಲ್ಲ. ಹಳೆಯ ಕಟ್ಟಡಗಳು ಮತ್ತು ಮ್ಯೂಸಿಯಂಗಳು ನಾಶವಾಗುತ್ತಿರುವುದು ಮಾನವ ಕುಲದ ಸಾಂಸ್ಕೃತಿಕ ನಷ್ಟವಾಗಿದೆ.

ಈ ಯುದ್ಧದ ಪ್ರತಿ ಕ್ಷಣದ ಅಪ್‌ಡೇಟ್‌ಗಳನ್ನು ನಾವು ನಿಮಗೆ ನೀಡುತ್ತಿರುತ್ತೇವೆ. ಪರಿಸ್ಥಿತಿ ಎಲ್ಲಿಗೆ ಬಂದು ನಿಲ್ಲುತ್ತದೆ ಎಂಬುದು ಈಗ ಕುತೂಹಲ ಮೂಡಿಸಿದೆ.

Latest News