ಅಮೆರಿಕದ ಅಧ್ಯಕ್ಷ 'ಡೊನಾಲ್ಡ್ ಟ್ರಂಪ್' ಯಾರಿಗೆ ತಾನೇ ಗೊತ್ತಿಲ್ಲ ಹೇಳಿ, ಇವರು ವೇದಿಕೆ ಮೇಲೆ ಬಂದು ಮಾತನಾಡಿ್ದರೆ ಪಕ್ಕದ ರಾಷ್ಟ್ರಕ್ಕೂ ಇವರ ಸುದ್ದಿ ಮುಟ್ಟುತ್ತದೆ. ಹೌದು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಇದೀಗ ವೇದಿಕೆ ಮೇಲೆ ಹೇಳಿದ ಒಂದು ಮಾತಿಗೆ ಮತ್ತೆ ಸೋಷಿಯಲ್ ಮೀಡಿಯಾದಲ್ಲಿ ಹೆಚ್ಚು ವೈರಲ್ ಆಗುತ್ತಿದ್ದಾರೆ. ಅಸಲಿಗೆ ಡೊನಾಲ್ಡ್ ಟ್ರಂಪ್ ಅವರು ಹೇಳಿರೋದೇನು ಗೊತ್ತಾ ಮುಂದೆ ಓದಿ. ಡೊನಾಲ್ಡ್ ಟ್ರಂಪ್ ಅವರು ಮಾತನಾಡುವ ಭರದಲ್ಲಿ ಕೆಲವೊಮ್ಮೆ ನೀಡುವ ಹೇಳಿಕೆಗಳು ಹೆಚ್ಚು ಸುದ್ದಿ ಆಗುತ್ತವೆ. ಕೆಲವು ಹೇಳಿಕೆಗಳು ವಿವಾದಕ್ಕೆ ಕೆಲವೊಮ್ಮೆ ದಾರಿ ಮಾಡಿ ಕೊಡುತ್ತವೆ. ಇನ್ನೂ ಬೇರೆ ಬೇರೆ ಹೇಳಿಕೆಗಳು ಹಾಸ್ಯಾಸ್ಪದಕ್ಕೆ ಎಡೆ ಮಾಡಿಕೊಡುತ್ತವೆ.
ದೊಡ್ಡಣ್ಣ ಎಂದು ಕರೆಸಿಕೊಳ್ಳುವ ಡೊನಾಲ್ಡ್ ಟ್ರಂಪ್ ಅವರು ಇದೀಗ ಅಂತಹದ್ದೇ ಹೇಳಿಕೆ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಚರ್ಚೆ ಆಗುತ್ತಿದ್ದಾರೆ. ವಾಷಿಂಗ್ಟನ್‌ನಲ್ಲಿ ನಡೆದ ಗಾಜಾ ಶಾಂತಿ ಮಂಡಳಿ ಸಭೆಯಲ್ಲಿ ವೇದಿಕೆ ಮೇಲೆ ಮಾತನಾಡುವಾಗ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ನೀಡಿದ ಹೇಳಿಕೆ ಸೋಷಿಯಲ್ ಮೀಡಿಯಾದಲ್ಲಿ ಹೆಚ್ಚು ಟ್ರೋಲ್ ಆಗುತ್ತಿದೆ. ಪುರುಷರು ಮತ್ತು ಮಹಿಳೆಯರ ವಿಚಾರವಾಗಿ ಮಾತನಾಡುವ ಭರದಲ್ಲಿ ನೀಡಿದ ಹೇಳಿಕೆಯೇ ಇಷ್ಟು ವೈರಲ್ ಆಗುತ್ತಿರುವುದು. ಗಾಜಾ ಶಾಂತಿ ಮಂಡಳಿ ಸಭೆಯ ವೇದಿಕೆಯಲ್ಲಿ ಟ್ರಂಪ್ ಅವರು ನೀಡಿದ ಹೇಳಿಕೆ ಹೆಚ್ಚು ಚರ್ಚೆ ಆಗುತ್ತಿದ್ದು ಇದೆ ಹೇಳಿಕೆ ಚರ್ಚೆಯ ಮೂಲ ಕಾರಣವಾಗಿದೆ. ನೆಟ್ಟಿಗರು ಮಾತ್ರವಲ್ಲದೆ ಟ್ರಂಪ್ ಅವರ ಮಾತಿಗೆ ಸಭೆಯಲ್ಲಿ ಇದ್ದವ್ರು ಸಹ ನಕ್ಕು ಸುಮ್ಮನಾಗಿದ್ದಾರೆ. ಅಸಲಿಗೆ ಟ್ರಂಪ್ ಅವರು ನೀಡಿದ ಆ ಹೇಳಿಕೆ ಯಾವುದು ಎಂದು ಇದೀಗ ನೋಡೋಣ ಬನ್ನಿ.
ದೊಡ್ಡಣ್ಣರಾದ ಯುಎಸ್ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಹೇಳಿದ ಹಾಗೆ 'ನನಗೆ ಪುರುಷರ ಬಗ್ಗೆ ಯಾವುದೇ ಆಸಕ್ತಿಯಿಲ್ಲ. ಆದರೆ ಮಹಿಳೆಯರೆಂದರೆ ತುಂಬಾ ಇಷ್ಟ' ಎಂದು ಹೇಳಿದ್ದಾರೆ ಎಂದು ಕೇಳಿಬಂದಿದೆ. ಹೌದು, ಪೆರುಗ್ವೆ ಅಧ್ಯಕ್ಷರಾದ ಸ್ಯಾಂಟಿಯಾಗೊ ಪೆನಾ ಅವರು ಅಮೆರಿಕದ ಅಧ್ಯಕ್ಷರಾದ ಡೊನಾಲ್ಡ್ ಟ್ರಂಪ್ ಅವರನ್ನು ಈ ಸಭೆಗೆ ಆಹ್ವಾನ ಮಾಡಿದ್ದರು. ಈ ವಿಶೇಷ ಬರುವಿಕೆಯ ಆಹ್ವಾನಕ್ಕೆ ಸ್ಪಂದಿಸಿದ ಟ್ರಂಪ್ ಅವರು ಕಾರ್ಯಕ್ರಮಕ್ಕೆ ಬಂದಿದ್ದು,ಇದೆ ವೇಳೆಯೇ ಸಭೆಯಲ್ಲಿದ್ದವರು ಸಹ ಟ್ರಂಪ್ ಅವರ ಮಾತಿಗೆ ಮೆಲ್ಲಗೆ ನಗುವಂತಾಗಿದೆ. ಪೆರುಗ್ವೆ ಅಧ್ಯಕ್ಷರು ಸಹ, ಟ್ರಂಪ್ ಆಡಿದ ಮಹಿಳೆ ಪುರುಷರ ವಿಚಾರದ ಮಾತಿಗೆ ನಗೆ ಬೀರಿದ್ದಾರೆ.
ಅಸಲಿಗೆ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಹೇಳಿದ್ದೇನು?
ಅಮೆರಿಕದ ಅಧ್ಯಕ್ಷರಾದ ಡೊನಾಲ್ಡ್ ಟ್ರಂಪ್ ಅವರು ಅತ್ತ, ಪೆನಾ ಅವರ ಮುಖ ನೋಡಿ 'ಅಧ್ಯಕ್ಷರೇ ಇಲ್ಲಿಗೆ ಆಗಮಿಸಿದ್ದಕ್ಕೆ ನಿಮಗೆ ತುಂಬಾ ಧನ್ಯವಾದ ಎಂದ ಟ್ರಂಪ್, ಮುಂದುವರೆದು ಪೆನಾ ಅವರ ಯೌವನ, ರೂಪ ಚೆಂದ. ಸುಂದರ ಯುವ ವ್ಯಕ್ತಿ ಎಂದು ಬಣ್ಣಿಸಿದರು. ಯುವಕರಾಗಿ, ಸುಂದರವಾಗಿ ಇರೋದು ಯಾವಾಗಲೂ ಸದಾ ಒಳ್ಳೆಯದೇ. ಆದ್ರೆ ಇದರ ಅರ್ಥ ನಾನು ನಿಮ್ಮನ್ನು ಇಷ್ಟಪಡಬೇಕು ಅಂತೇನು ಇಲ್ಲ. ನನಗೆ ಯುವಕರು ಹಾಗೂ ಈ ಸುಂದರ ಪುರುಷರು ಅಷ್ಟಾಗಿ ಇಷ್ಟ ಆಗೋಲ್ಲ ಎಂದು ಡೊನಾಲ್ಡ್ ಟ್ರಂಪ್ ಅವರು ಸಭೆಯಲ್ಲೇ ಈ ಹೇಳಿಕೆ ನೀಡಿದ್ದು ಎಲ್ಲರ ಗಮನ ಸೆಳೆಯಿತು. ಮುಂದುವರಿದು ಟ್ರಂಪ್ ಅವರು, ಆದ್ರೆ ಮಹಿಳೆಯರನ್ನು ಕಂಡರೆ ನನಗೆ ಹೆಚ್ಚು ಇಷ್ಟ. ಈ ಪುರುಷರೆಂದರೆ ಅಷ್ಟಕಷ್ಟೇ ಎಂದು ಹೇಳಿ ನಕ್ಕಿದ್ದಾರೆ.
ಈ ಹೇಳಿಕೆಯ ಬೆನ್ನಲ್ಲೇ ಸಭೆಯಲ್ಲಿದ್ದ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಹೇಳಿಕೆಯ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಬಾರಿ ವೈರಲ್ ಆಗುತ್ತಿದೆ. ಸಭೆಯಲ್ಲಿ ಮಾತು ಮುಂದುವರೆಸಿದ ಟ್ರಂಪ್ ಅವರು ಲಿಫ್ಟ್ ಅನಾಹುತದ ಬಗ್ಗೆಯೂ ಮಾತನಾಡಿದರು. ವಿಶ್ವಸಂಸ್ಥೆಯಲ್ಲಿ ನಡೆದ ಲಿಫ್ಟ್ ಅಚಾತುರ್ಯ ಘಟನೆ ಬಗ್ಗೆ ಮನಬಿಚ್ಚಿ ಮಾತಾಡಿದ ಟ್ರಂಪ್ ಅವರು ತಮ್ಮ ಹೆಂಡತಿಯನ್ನು ಕೆಳಗೆ ಬೀಳದಂತೆ ರಕ್ಷಣೆ ಮಾಡಿದ ಪರಿಯನ್ನು ನೆನಪಿಸಿಕೊಂಡರು.