May 5, 2026 Languages : ಕನ್ನಡ | English

ಅಡ್ವೆಂಚರ್ ಕ್ಯಾಂಪ್‌ನಲ್ಲಿ ಘೋರ ದುರಂತ - ಜಿಪ್‌ಲೈನ್‌ನಿಂದ ಬಿದ್ದು ಯುವತಿ ಸಾವು; ಎದೆ ಜೆಲ್ ಎನ್ನುವ ವಿಡಿಯೋ!!

ಅಡ್ವೆಂಚರ್ ಅಂದ್ರೆ ಎಲ್ಲರಿಗೂ ಇಷ್ಟ. ಎತ್ತರದ ಬೆಟ್ಟಗಳ ನಡುವೆ ಹಗ್ಗ ಹಿಡಿದು ಜಾರುವ ‘ಜಿಪ್‌ಲೈನ್’ (Zipline) ಕ್ರೇಜ್ ಅಂತೂ ಇತ್ತೀಚೆಗೆ ಸಖತ್ ಜೋರಾಗಿದೆ. ಆದರೆ, ಇಲ್ಲೊಂದು ಅಡ್ವೆಂಚರ್ ಕ್ಯಾಂಪ್‌ನಲ್ಲಿ ನಡೆದ ಘಟನೆ ನೋಡಿದರೆ ನೀವು ಇನ್ಮುಂದೆ ಇಂತಹ ಸಾಹಸಕ್ಕೆ ಕೈ ಹಾಕುವ ಮುನ್ನ ನೂರು ಬಾರಿ ಯೋಚನೆ ಮಾಡ್ತೀರಾ. ಚೀನಾದ ಚಾಂಗ್‌ಕಿಂಗ್ ಅಡ್ವೆಂಚರ್ ಕ್ಯಾಂಪ್‌ನಲ್ಲಿ ಯುವತಿಯೊಬ್ಬಳು ಅತಿ ಎತ್ತರದಿಂದ ನೇರವಾಗಿ ಬಿದ್ದು ಸಾವನ್ನಪ್ಪಿರುವ ಆಘಾತಕಾರಿ ಘಟನೆ ನಡೆದಿದೆ.

ಅಡ್ವೆಂಚರ್ ಕ್ಯಾಂಪ್‌ನಲ್ಲಿ ಘೋರ ದುರಂತ - ಜಿಪ್‌ಲೈನ್‌ನಿಂದ ಬಿದ್ದು ಯುವತಿ ಸಾವು; ಎದೆ ಜೆಲ್ ಎನ್ನುವ ವಿಡಿಯೋ!! | Photo Credit: https://x.com/newszg_official
ಅಡ್ವೆಂಚರ್ ಕ್ಯಾಂಪ್‌ನಲ್ಲಿ ಘೋರ ದುರಂತ - ಜಿಪ್‌ಲೈನ್‌ನಿಂದ ಬಿದ್ದು ಯುವತಿ ಸಾವು; ಎದೆ ಜೆಲ್ ಎನ್ನುವ ವಿಡಿಯೋ!! | Photo Credit: https://x.com/newszg_official

ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುವ ಈ ಘಟನೆಯ ವಿಡಿಯೋ ನೋಡಲು ಬಹಳ ಭಯಾನಕವಾಗಿದೆ. ಆ ಯುವತಿ ಜಿಪ್‌ಲೈನ್ ರೈಡ್ ಶುರು ಮಾಡುವ ಮುನ್ನವೇ ಅಲ್ಲಿನ ಸಿಬ್ಬಂದಿಗೆ ಎಚ್ಚರಿಕೆ ನೀಡಿದ್ದಾಳೆ. 'ನನಗೆ ಹಾಕಿರುವ ಬೆಲ್ಟ್ ಸರಿಯಾಗಿ ಟೈಟ್ ಆಗಿಲ್ಲ' ಎಂದು ಎರಡು ಬಾರಿ ಕೂಗಿದ್ದಾಳೆ. ಆದರೆ, ಅಲ್ಲಿನ ಸಿಬ್ಬಂದಿ ನಿರ್ಲಕ್ಷ್ಯ ವಹಿಸಿ ಆಕೆಯನ್ನು ಎತ್ತರದಿಂದ ಜಾರಲು ಬಿಟ್ಟಿದ್ದಾರೆ.

ದುರಂತ ಅಂದ್ರೆ, ರೈಡ್ ಮಧ್ಯದಲ್ಲೇ ಆಕೆಯ ಬೆಲ್ಟ್ ಬಿಟ್ಟುಕೊಂಡಿದ್ದು, ಯುವತಿ ನೇರವಾಗಿ ನೂರಾರು ಅಡಿ ಎತ್ತರದಿಂದ ಕೆಳಕ್ಕೆ ಬಿದ್ದಿದ್ದಾಳೆ. ನೋಡುನೋಡುತ್ತಿದ್ದಂತೆ ನಡೆದ ಈ ಘಟನೆ ಅಲ್ಲಿದ್ದವರ ಎದೆಯನ್ನು ನಡುಗಿಸಿದೆ.

ಈ ಘಟನೆಯ ನಂತರದ ವಿಡಿಯೋ ಕೂಡ ಈಗ ವೈರಲ್ ಆಗಿದೆ. ಯುವತಿಯನ್ನು ಸ್ಟ್ರೆಚರ್ ಮೇಲೆ ಮಲಗಿಸಿ ಕರೆದುಕೊಂಡು ಹೋಗುತ್ತಿರುವ ದೃಶ್ಯ ಕರುಳು ಹಿಂಡುವಂತಿದೆ. ಎತ್ತರದಿಂದ ಬಿದ್ದ ಕಾರಣಕ್ಕೆ ಆಕೆ ಪೂರ್ತಿ ರಕ್ತಸಿಕ್ತವಾಗಿದ್ದಳು. ಅಲ್ಲಿಗೆ ಬಂದ ಪ್ಯಾರಾಮೆಡಿಕ್ ಸಿಬ್ಬಂದಿ ಆಕೆಯನ್ನು ಉಳಿಸಲು ಪ್ರಯತ್ನಿಸಿದರಾದರೂ, ಅಷ್ಟರಲ್ಲೇ ಆಕೆಯ ಪ್ರಾಣ ಹೋಗಿತ್ತು.

ಬಹಳ ನೋವಿನ ಸಂಗತಿ ಅಂದ್ರೆ, ತನಗೆ ಅಪಾಯ ಇದೆ ಅಂತ ಗೊತ್ತಿದ್ದರೂ ಸಿಬ್ಬಂದಿಗಳ ಬೇಜವಾಬ್ದಾರಿಯಿಂದ ಆಕೆ ಪ್ರಾಣ ಕಳೆದುಕೊಳ್ಳಬೇಕಾಯಿತು. ಇಷ್ಟು ಎತ್ತರದ ರೈಡ್‌ಗಳಲ್ಲಿ ಸುರಕ್ಷತಾ ಕ್ರಮಗಳನ್ನು ಸರಿಯಾಗಿ ಪರೀಕ್ಷಿಸದೆ ಇರೋದೇ ಇಂತಹ ಸಾವಿಗೆ ಕಾರಣವಾಗುತ್ತಿದೆ.

ಈ ಘಟನೆ ನಮ್ಮೆಲ್ಲರಿಗೂ ಒಂದು ದೊಡ್ಡ ಪಾಠ. ನಮ್ಮ ದೇಶದಲ್ಲೂ ಇಂತಹ ಅಡ್ವೆಂಚರ್ ಸ್ಪೋರ್ಟ್ಸ್ ಫೇಮಸ್ ಆಗ್ತಿವೆ. ನೀವು ಇಂತಹ ಜಾಗಕ್ಕೆ ಹೋದಾಗ ಈ ಕೆಳಗಿನ ವಿಷಯಗಳನ್ನು ನೆನಪಿಡಿ:

  • ಸುರಕ್ಷತೆ ಮೊದಲು - ಬೆಲ್ಟ್ ಅಥವಾ ಹಗ್ಗ ಸಡಿಲವಾಗಿದೆ ಅಂತ ನಿಮಗೆ ಅನಿಸಿದರೆ, ಯಾವುದೇ ಕಾರಣಕ್ಕೂ ರೈಡ್ ಮಾಡಬೇಡಿ. ಸಿಬ್ಬಂದಿ ಎಷ್ಟೇ ಒತ್ತಾಯಿಸಿದರೂ ಕೇಳಬೇಡಿ.
  • ಟಿಕೇಟ್ ಮುನ್ನ ಚೆಕ್ ಮಾಡಿ - ಆ ಅಡ್ವೆಂಚರ್ ಕ್ಯಾಂಪ್‌ಗೆ ಸರಿಯಾದ ಪರವಾನಗಿ ಮತ್ತು ಸೇಫ್ಟಿ ಸರ್ಟಿಫಿಕೇಟ್ ಇದೆಯೇ ಅನ್ನೋದನ್ನ ಒಮ್ಮೆ ಗಮನಿಸಿ!
  • ಅಪಾಯದ ಮುನ್ಸೂಚನೆ - ವಿಪರೀತ ಗಾಳಿ ಅಥವಾ ಮಳೆ ಇದ್ದಾಗ ಇಂತಹ ಎತ್ತರದ ಸಾಹಸಗಳಿಗೆ ಕೈ ಹಾಕಬೇಡಿ.

ಚಾಂಗ್‌ಕಿಂಗ್‌ನ ಈ ಘಟನೆಯ ನಂತರ ನೆಟ್ಟಿಗರು ಅಡ್ವೆಂಚರ್ ಕ್ಯಾಂಪ್ ಮಾಲೀಕರ ವಿರುದ್ಧ ಕೆಂಡಾಮಂಡಲವಾಗಿದ್ದಾರೆ. "ಅವಳು ಮೊದಲೇ ಹೇಳಿದ್ದರೂ ಯಾಕೆ ಕೇಳಲಿಲ್ಲ?" ಎಂದು ಪ್ರಶ್ನೆ ಮಾಡುತ್ತಿದ್ದಾರೆ. ಲಾಭದ ಆಸೆಗೆ ಬಿದ್ದು ಜನರ ಜೀವದ ಜೊತೆ ಆಟವಾಡುವ ಇಂತಹ ಸಂಸ್ಥೆಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂಬ ಆಗ್ರಹ ಕೇಳಿಬಂದಿದೆ.

ಸಾಹಸ ಮಾಡೋದು ಮಜಾ ಕೊಡುತ್ತೆ ನಿಜ, ಆದರೆ ಅದು ಸಾವಿನ ಜೊತೆಗಿನ ಆಟವಾಗಬಾರದು ಅಷ್ಟೇ!

Latest News