ನಿಮ್ಮ ಕನಸಿನಲ್ಲಿ ಇದೊಂದು ಕಂಡು ಬಂದರೆ ರಾಜಯೋಗ ಶುರು ಆಯಿತು ಅಂದುಕೊಳ್ಳಿ!!

ಕೆಲವೊಂದಿಷ್ಟು ವಿಚಾರಗಳು ನಮ್ಮನ್ನು ನಮ್ಮ ಭವಿಷ್ಯದ ದಿನಗಳಲ್ಲಿ ಅಚ್ಚರಿ ಪಡುವಂತೆ ಮಾಡುತ್ತವೆ. ಅವುಗಳಿಗೆ ಸರಿಯಾದ ಕುರುಹುಗಳನ್ನು ಹುಡುಕುವಲ್ಲಿ ಮುನ್ನೆಚ್ಚರಿಕಾ ಸೂಚನೆಗಳನ್ನು ಅರಿಯುವಲ್ಲಿ ನಾವು ವಿಫಲವಾಗುತ್ತೆವೆ. ಹೌದು ನಾವು ನಿದ್ದೆ ಮಾಡುವಾಗ ಕನಸು ಬೀಳುತ್ತವೆ. ಆ ಕನಸುಗಳ ಹಿಂದೆ ತುಂಬಾ ಅರ್ಥವಿರುತ್ತದೆ. ಒಳ್ಳೆಯ ದಿನಗಳ ಆಗಮನ ಬಗ್ಗೆ ಸುಳಿವು ನೀಡುವ ಕನಸುಗಳು ಆಗಿರುತ್ತವೆ.  ನಮಗೆ ಬೀಳುವ ಕನಸುಗಳ ಹಿಂದಿನ ವೈಶಿಷ್ಟತೆ ಏನು ? ಯಾವ ಯಾವ ಕನಸುಗಳು ಒಳ್ಳೆಯ ಅಥವಾ ಕೆಟ್ಟ ಸಂದೇಶಗಳನ್ನು ಕೊಡುತ್ತವೆ ಎಂದು ನೋಡೋಣ. ಹಳ್ಳಿಯ ಕಡೆಗೆ ಇನ್ನೊಂದು ಮಾತಿದೆ. ಹಿರಿಯರ ಮಾತಿನಂತೆ, ಬೆಳಗಿನ ಜಾವ ಬೀಳುವ ಕನಸುಗಳು ನಿಜ ಜೀವನದಲ್ಲಿ ನೂರಕ್ಕೆ ನೂರರಷ್ಟು ಸತ್ಯ ಆಗುತ್ತವೆ. ಅವುಗಳು ಮುಂಬರುವ ದಿನಗಳಲ್ಲಿ ನಡೆದೇ ನಡೆಯುತ್ತವೆ ಎಂದು ಆಪಾರ ನಂಬಿಕೆ ಇದೆ, ಅಷ್ಟೇ ಸತ್ಯ ಕೂಡ ಹೌದು. ರಾಜಯೋಗದ ಕನಸುಗಳ ಬಗ್ಗೆ ಇಂದು ನಾವು ಈ ಲೇಖನದಲ್ಲಿ ತಿಳಿದುಕೊಳ್ಳೋಣ.   

ನಿಮ್ಮ ಕನಸಿನಲ್ಲಿ ಇದೊಂದು ಕಂಡು ಬಂದರೆ ರಾಜಯೋಗ ಶುರು ಆಯಿತು ಅಂದುಕೊಳ್ಳಿ!! | Photo Credit: AI Image
ನಿಮ್ಮ ಕನಸಿನಲ್ಲಿ ಇದೊಂದು ಕಂಡು ಬಂದರೆ ರಾಜಯೋಗ ಶುರು ಆಯಿತು ಅಂದುಕೊಳ್ಳಿ!! | Photo Credit: AI Image

1. ಕನಸುಗಳ ಅರ್ಥ

ನಿದ್ರೆ ಮಾಡುವಾಗ ಬೀಳುವ ಪ್ರತಿಯೊಂದು ಕನಸುಗಳಿಗೆ ಸ್ವಪ್ನ ಶಾಸ್ತ್ರದ ಪ್ರಕಾರ ವಿಶಿಷ್ಟ ಅರ್ಥವಿದೆ. ಅವು ಭವಿಷ್ಯದಲ್ಲಿ ಎದುರಾಗುವ ಒಳ್ಳೆಯ ಅಥವಾ ಕೆಟ್ಟ ಘಟನೆಗಳ ಸೂಚನೆಗಳನ್ನು ನೀಡುತ್ತವೆ.  ನಮಗೆ ಕಾಣುವ ಕನಸುಗಳು ಕೇವಲ ಮನಸ್ಸಿನ ಪ್ರತಿಬಿಂಬವಲ್ಲ, ಅವು ಮುಂಬರುವ ಜೀವನದ ದೊಡ್ಡ ಕನ್ನಡಿಯೂ ಆಗಿವೆ. ಕೆಲ ಕನಸುಗಳು ರಾಜಯೋಗದ ಆರಂಭವನ್ನು ಸೂಚಿಸುತ್ತವೆ ಮತ್ತು ಅವುಗಳನ್ನು ಶುಭ ಕನಸುಗಳೆಂದು ಪರಿಗಣಿಸಲಾಗುತ್ತದೆ.

2. ಹಸಿರು ಹೂವುಗಳು ಮತ್ತು ಮರಗಳ ಕನಸು

ಕನಸಿನಲ್ಲಿ ಹಸಿರು ಬಣ್ಣದ ಹೂವುಗಳು ಕಂಡು ಬಂದರೆ, ಸಸ್ಯಗಳು ಅಥವಾ ಮರಗಳನ್ನು ನೋಡುವುದು ನಿಜಕ್ಕೂ ಅತ್ಯಂತ ಶುಭ ಸಂಕೇತವೆಂದು ಹೇಳಲಾಗಿದೆ. ಇಂತಹ ಕನಸುಗಳು ಸಂತೋಷ, ಸಮೃದ್ಧಿ ಮತ್ತು ಪ್ರಗತಿಯನ್ನು ಸೂಚಿಸುತ್ತವೆ. ಸ್ವಪ್ನ ಶಾಸ್ತ್ರದ ಪ್ರಕಾರ, ಇವು ಹಣಕಾಸಿನ ಲಾಭವನ್ನು ಮುಂಬರುವ ದಿನಗಳಲ್ಲಿ ಪಡೆಯುವುದರ ಸೂಚನೆಯಾಗಿರುತ್ತದೆ ಎಂದು ಹೇಳಲಾಗುತ್ತಿದೆ. 

3. ದೇವಸ್ಥಾನ ಅಥವಾ ದೀಪದ ಕನಸು

ಕನಸಿನಲ್ಲಿ ದೇವಸ್ಥಾನ ಕಾಣುವುದು ಅಥವಾ ನೀವೂ ಉರಿಯುವ ದೀಪವನ್ನು ನೋಡಿದಂತೆ ಕಂಡು ಬಂದರೆ ದೈವಿಕ ಶಕ್ತಿಯ ಸಂಕೇತವಾಗಿದೆ. ದೇವಾಲಯವಾಗಲಿ ಅಥವಾ ದೀಪವಾಗಲಿ, ಅವುಗಳಲ್ಲಿ ದೇವರ ಸಾನ್ನಿಧ್ಯ ನೆಲೆಸಿದೆ ಎಂದು ನಂಬಲಾಗುತ್ತದೆ. ಇಂತಹ ಕನಸುಗಳು ಬಿದ್ದರೆ ಶೀಘ್ರದಲ್ಲೇ ರಾಜಯೋಗ ಪ್ರಾರಂಭವಾಗಲಿದೆ ಎಂಬುದರ ಸೂಚನೆ. ಇದು ಹಣ ಹೆಚ್ಚು ಬರುತ್ತದೆ ಮತ್ತು ಶುಭಫಲದ ಸಂಕೇತವಾಗಿದೆ.

4. ಹಸು ಮತ್ತು ಕರು ಕನಸು

ಮುಂಜಾನೆ ಕಾಣುವ ಕನಸುಗಳನ್ನು ಅತ್ಯಂತ ಶುಭವೆಂದು ಹೆಚ್ಚು ಪರಿಗಣಿಸಲಾಗುತ್ತದೆ. ಕನಸಿನಲ್ಲಿ ಹಸು ಮತ್ತು ಕರು ಒಟ್ಟಿಗೆ ಕಾಣಿಸಿದರೆ ಅದು ಅದೃಷ್ಟದ ಸಂಕೇತ. ಹಸುವನ್ನು ಗೋಮಾತೆಯೆಂದು, ಲಕ್ಷ್ಮಿ ದೇವಿಯ ರೂಪವೆಂದು ಪೂಜೆ ಮಾಡುತ್ತೇವೆ ಹಾಗೆ ಅಪಾರ ಭಕ್ತಿಯಿಂದ ಅದನ್ನು  ಪರಿಗಣಿಸಲಾಗುತ್ತದೆ. ಆದ್ದರಿಂದ ಇಂತಹ ಕನಸುಗಳು ಧನಲಾಭ ಮತ್ತು ಲಕ್ಷ್ಮಿ ದೇವಿಯ ಆಗಮನವನ್ನು ಸೂಚಿಸುತ್ತವೆ.

5. ಚಿನ್ನಾಭರಣ ಮತ್ತು ನೀರಿನ ಕನಸು

ಕನಸಿನಲ್ಲಿ ಚಿನ್ನ ಅಥವಾ ಚಿನ್ನಾಭರಣಗಳನ್ನು ನೋಡುವುದು ಆರ್ಥಿಕ ಲಾಭದ ಸಂಕೇತ. ಇಂತಹ ಕನಸುಗಳು ಉದ್ಯೋಗದಲ್ಲಿ ಬಡ್ತಿ ಪಡೆಯುವ ಸಂಕೇತ ಆಗಿದೆ. ವ್ಯಾಪಾರದಲ್ಲಿ ಲಾಭ ಆಗಲಿದ್ದು ಮತ್ತು ಸಮೃದ್ಧಿ ನೀಡುವ ಸೂಚನೆ ಆಗಿದೆ. ಅದೇ ರೀತಿ ಕನಸಿನಲ್ಲಿ ನೀರು ಅಥವಾ ಜಲಪಾತವನ್ನು ನೋಡುವುದು ಹಣಕಾಸಿನ ಪರಿಸ್ಥಿತಿ ಉತ್ತಮಗೊಳ್ಳುವುದರ ಸೂಚನೆ. ಇದು ಮುಂಬರುವ ದಿನಗಳಲ್ಲಿ ಹಣದ ಲಾಭವನ್ನು ಪಡೆಯುವುದರ ಸೂಚನೆ ಆಗಿರಲಿದೆ ಎಂದು ತಿಳಿದುಬಂದಿದೆ. ಈ ಮಾಹಿತಿ ನಿಮಗೆ ಇಷ್ಟ ಆದ್ರೆ ತಪ್ಪದೆ ಶೇರ್ ಮಾಡಿ ಧನ್ಯವಾದಗಳು.

Latest News