ಕಿಂಗ್ ಖಾನ್ ಹೊಸ ಕಾರಿನ ಬೆಲೆ ಕೇಳಿದ್ರೆ ಕಣ್ಣು ತಿರುಗುತ್ತೆ - ಅಮೆರಿಕಾದಿಂದ ಭಾರತದ ಅತ್ಯಂತ ದುಬಾರಿ ಕಾರ್ ತರಿಸಿದ ಶಾರುಖ್ ಖಾನ್!!

ಬಾಲಿವುಡ್‌ನ ಬಾದ್‌ಶಾ, ಕಿಂಗ್ ಖಾನ್ ಶಾರುಖ್ ಖಾನ್ ಅಂದ್ರೆನೇ ಲಕ್ಸುರಿ ಲೈಫ್‌ಸ್ಟೈಲ್‌ಗೆ ಇನ್ನೊಂದು ಹೆಸರು. ಸದ್ಯ ಸಿನಿಮಾ ಲೋಕದಲ್ಲಷ್ಟೇ ಅಲ್ಲದೇ ಬಿಸಿನೆಸ್ ಮತ್ತು ಐಪಿಎಲ್ ಮೈದಾನದಲ್ಲೂ ಧೂಳೆಬ್ಬಿಸುತ್ತಿರುವ ಶಾರುಖ್ ಖಾನ್, ಈಗ ತಮ್ಮ ಇತ್ತೀಚಿನ ಹೊಸದೊಂದು ದುಬಾರಿ ಖರೀದಿಯ ಮೂಲಕ ಇಡೀ ದೇಶವೇ ತನ್ನತ್ತ ತಿರುಗಿ ನೋಡುವಂತೆ ಮಾಡಿದ್ದಾರೆ!

ಪ್ರೈವೇಟ್ ಜೆಟ್ ತರಹದ ಇಂಟೀರಿಯರ್ ಹೊಂದಿರುವ ಕಾರ್; | Photo Credit: https://x.com/tapasy_deva_401
ಪ್ರೈವೇಟ್ ಜೆಟ್ ತರಹದ ಇಂಟೀರಿಯರ್ ಹೊಂದಿರುವ ಕಾರ್; | Photo Credit: https://x.com/tapasy_deva_401

ಶಾರುಖ್ ಖಾನ್ ಇತ್ತೀಚೆಗೆ ಭಾರತದಲ್ಲೇ ಅತ್ಯಂತ ದುಬಾರಿ ಎನ್ನಲಾದ ಅಲ್ಟ್ರಾ-ಲಕ್ಸುರಿ ಕಾರೊಂದನ್ನು ಖರೀದಿಸಿದ್ದಾರೆ! ಸದ್ಯ ಸೋಶಿಯಲ್ ಮೀಡಿಯಾ ಹಾಗೂ ಆಟೋಮೊಬೈಲ್ ವಲಯದಲ್ಲಿ ಈ ಕಾರಿನದ್ದೆ ಭಾರಿ ಸೌಂಡ್ ಆಗ್ತಾ ಇದ್ದು, ಇದರ ಬೆಲೆ ಮತ್ತು ಫೀಚರ್ಸ್ ಕೇಳಿ ಸಾಮಾನ್ಯ ಜನ ಮಾತ್ರವಲ್ಲದೇ ದೊಡ್ಡ ದೊಡ್ಡ ಸೆಲೆಬ್ರಿಟಿಗಳೇ ಫುಲ್ ಶಾಕ್ ಆಗಿದ್ದಾರೆ.!

ಸುದ್ದಿಯ ಪ್ರಮುಖ ಮುಖ್ಯಾಂಶಗಳು (Highlights):

ಭಾರತದ ಮೋಸ್ಟ್ ಎಕ್ಸ್‌ಪೆನ್ಸಿವ್ ಕಾರ್ - ಕಿಂಗ್ ಖಾನ್ ಕಲೆಕ್ಷನ್‌ಗೆ ಸೇರಿರುವ ಈ ಹೊಸ ಕಾರು ಸದ್ಯಕ್ಕೆ ಭಾರತದಲ್ಲೇ ಅತಿ ಹೆಚ್ಚು ಬೆಲೆಯ ಅತ್ಯಂತ ದುಬಾರಿ ಕಾರ್ ಎನ್ನಲಾಗಿದೆ.

ಅಮೆರಿಕಾದಿಂದ ಸ್ಪೆಷಲ್ ಇಂಪೋರ್ಟ್ - ಈ ಐಷಾರಾಮಿ ಕಾರನ್ನು ಬೇರೆ ಎಲ್ಲೂ ಸಿಗದೇ ಇರುವ ಕಾರಣ ಶಾರುಖ್ ಖಾನ್ ಅವರಿಗಾಗಿಯೇ ಸ್ಪೆಷಲ್ ಆಗಿ ಅಮೆರಿಕಾದಿಂದ ಭಾರತಕ್ಕೆ ಇಂಪೋರ್ಟ್ (ಆಮದು) ಮಾಡಿಕೊಳ್ಳಲಾಗಿದೆ.

ಪ್ರೈವೇಟ್ ಜೆಟ್ ತರಹದ ಫೀಚರ್ಸ್ - ಬರೀ ನೂರಾರು ಕೋಟಿ ಬೆಲೆಯಷ್ಟೇ ಅಲ್ಲ, ಈ ಕಾರಿನ ಒಳಗಡೆ ಕುಳಿತರೆ ನೀವು ಕಾರ್‌ನಲ್ಲಿ ಇದ್ದೀರೋ ಅಥವಾ ಯಾವುದಾದರೂ ಪ್ರೈವೇಟ್ ಜೆಟ್ ವಿಮಾನದಲ್ಲಿ ಇದ್ದೀರೋ ಅನ್ನೋ ಅನುಭವ ಆಗುತ್ತದೆಯಂತೆ!

ಕಾರಿನ ಒಳಗಡೆ ಇದೆ ಪ್ರೈವೇಟ್ ಜೆಟ್ ಲೋಕ!

ವರದಿಗಳ ಪ್ರಕಾರ, ಶಾರುಖ್ ಖಾನ್ ಖರೀದಿಸಿರುವ ಈ ಕಾರಿನ ಬೆಲೆ ನೂರಾರು ಕೋಟಿ ರೂಪಾಯಿಗಳು ಎಂದು ಅಂದಾಜಿಸಲಾಗಿದೆ. ಶಾರುಖ್ ಖಾನ್ ಅವರಿಗೆ ಕಾರುಗಳೆಂದರೆ ಮೊದಲಿನಿಂದಲೂ ಸಖತ್ ಕ್ರೇಜ್. ಅವರ ಮನ್ನತ್ ಬಂಗಲೆಯ ಗ್ಯಾರೇಜ್‌ನಲ್ಲಿ ಈಗಾಗಲೇ ದುಬಾರಿ ರೋಲ್ಸ್ ರಾಯ್ಸ್, ಬಿಎಂಡಬ್ಲ್ಯೂ, ಆಡಿ ಸೇರಿದಂತೆ ವಿಶ್ವದ ಟಾಪ್ ಕಾರುಗಳು ಸಾಲಾಗಿ ನಿಂತಿವೆ. ಆದರೆ, ಈಗ ಬಂದಿರುವ ಹೊಸ ಅತಿಥಿ ಇವೆಲ್ಲಕ್ಕಿಂತ ಒಂದು ಹೆಜ್ಜೆ ಮುಂದಿದೆ.

ಈ ಕಾರಿನ ಅಸಲಿ ಹೈಲೈಟ್ ಇರೋದೇ ಇದರ ಇಂಟೀರಿಯರ್‌ನಲ್ಲಿ! ಹೌದು, ಕಾರಿನ ಒಳಗಿನ ಸೀಟುಗಳು, ಲೈಟಿಂಗ್ಸ್, ಮಸಾಜ್ ಫೀಚರ್ಸ್ ಮತ್ತು ಇನ್ಫೋಟೈನ್‌ಮೆಂಟ್ ಸಿಸ್ಟಮ್ ಥೇಟ್ ಬಿಲಿಯನೇರ್‌ಗಳು ಓಡಾಡುವ ಪ್ರೈವೇಟ್ ಜೆಟ್ (Private Jet) ಮಾದರಿಯಲ್ಲೇ ಇವೆ. ಕಾರಿನೊಳಗೆ ಕುಳಿತು ಒಂದು ಬಟನ್ ಒತ್ತಿದರೆ ಸಾಕು, ಇಡೀ ಕಾರು ಒಂದು ಮಿನಿ ಅರಮನೆಯಾಗಿ ಬದಲಾಗುತ್ತದೆ. ಲಾಂಗ್ ಜರ್ನಿ ಮಾಡುವಾಗ ಕಿಂಗ್ ಖಾನ್ ಅವರಿಗೆ ಯಾವುದೇ ಆಯಾಸ ಆಗಬಾರದು ಅನ್ನೋ ಕಾರಣಕ್ಕೆ ಎಲ್ಲಾ ಅತ್ಯಾಧುನಿಕ ಐಷಾರಾಮಿ ಸೌಲಭ್ಯಗಳನ್ನ ಇದರಲ್ಲಿ ಕಸ್ಟಮೈಸ್ ಮಾಡಿಸಲಾಗಿದೆ..

ಸೋಶಿಯಲ್ ಮೀಡಿಯಾದಲ್ಲಿ ಕಿಂಗ್ ಖಾನ್ ಕ್ರೇಜ್;

ಶಾರುಖ್ ಖಾನ್ ಅವರ ಈ ಹೊಸ ಕಾರಿನ ಸುದ್ದಿ ಇಂಟರ್ನೆಟ್‌ನಲ್ಲಿ ಹರಿದಾಡುತ್ತಿದ್ದಂತೆ ಅವರ ಅಭಿಮಾನಿಗಳಂತೂ ಫುಲ್ ಖುಷಿಯಾಗಿದ್ದಾರೆ. ಎಕ್ಸ್ (ಟ್ವಿಟರ್) ಮತ್ತು ಇನ್‌ಸ್ಟಾಗ್ರಾಮ್‌ನಲ್ಲಿ #ShahRukhKhan ಹ್ಯಾಶ್‌ಟ್ಯಾಗ್ ಫುಲ್ ಟ್ರೆಂಡ್ ಆಗ್ತಾ ಇದೆ.

ಬಾಲಿವುಡ್‌ಗೆ ಒಬ್ಬನೇ ರಾಜ, ಅದು ನಮ್ಮ ಕಿಂಗ್ ಖಾನ್.! ಲೈಫ್ ಸ್ಟೈಲ್ ಅಂದ್ರೆ ಶಾರುಖ್ ಖಾನ್ ಅವರದ್ದೇ ಎಂದು ಫ್ಯಾನ್ಸ್ ಕಮೆಂಟ್ ಬಾಕ್ಸ್‌ನಲ್ಲಿ ಅಬ್ಬರಿಸುತ್ತಿದ್ದಾರೆ. ಇನ್ನು ಕೆಲವು ನೆಟ್ಟಿಗರು, 'ಒಂದು ಕಡೆ ಪಠಾಣ್, ಜವಾನ್ ಸಿನಿಮಾಗಳ ಭರ್ಜರಿ ಸಾವಿರ ಕೋಟಿ ಕಲೆಕ್ಷನ್, ಇನ್ನೊಂದು ಕಡೆ ಬ್ಯುಸಿನೆಸ್.. ಹೀಗಿರುವಾಗ ಭಾರತದ ಅತ್ಯಂತ ದುಬಾರಿ ಕಾರ್ ತರಿಸೋದು ಕಿಂಗ್ ಖಾನ್‌ಗೆ ದೊಡ್ಡ ಜುಜುಬಿ ವಿಷಯ' ಎಂದು ಕಮೆಂಟ್ ಮಾಡ್ತಾ ಇದ್ದಾರೆ. ಒಟ್ಟಿನಲ್ಲಿ ಶಾರುಖ್ ಖಾನ್ ಅವರ ಈ ಹೊಸ ಅಮೆರಿಕನ್ ಲಕ್ಸುರಿ ಕಾರ್ ಸದ್ಯಕ್ಕಂತೂ ಇಂಟರ್ನೆಟ್ ಮಂದಿಗೆ ಭರ್ಜರಿ ಟಾಕಿಂಗ್ ಪಾಯಿಂಟ್ ಆಗಿದ್ದಂತೂ ಸುಳ್ಳಲ್ಲ.. 

Latest News