ಉಪ್ಪು ನೀರಿನಲ್ಲೇ ಏಕೆ ತೊಳೆಯಬೇಕು? ಬೇರೆಯವರಿಗೆ ನಿಮ್ಮ ಬಟ್ಟೆ ಕೊಡುವ ಮುನ್ನ ತಿಳಿಯಲೇಬೇಕಾದ ಅಸಲಿ ಸತ್ಯ!!

ಹಿಂದೂ ಧರ್ಮ ಮತ್ತು ಸನಾತನ ಸಂಪ್ರದಾಯದಲ್ಲಿ ದಾನ ಮಾಡುವುದಕ್ಕೆ ತುಂಬಾನೇ ಶ್ರೇಷ್ಠ ಸ್ಥಾನ ನೀಡಲಾಗಿದೆ. ಕೈಲಾದ ಮಟ್ಟಿಗೆ ಬಡವರಿಗೆ, ನಿರ್ಗತಿಕರಿಗೆ ಸಹಾಯ ಮಾಡುವುದು ಅತ್ಯಂತ ದೊಡ್ಡ ಪುಣ್ಯದ ಕೆಲಸ ಎಂದು ನಮ್ಮ ಹಿರಿಯರು ಹೇಳುತ್ತಾರೆ. ಆದರೆ, ದಾನ ಮಾಡುವುದಕ್ಕೂ ಕೆಲವು ಶಾಸ್ತ್ರೋಕ್ತ ನಿಯಮಗಳು ಮತ್ತು ಆಚರಣೆಗಳಿವೆ. ಅದರಲ್ಲೂ ನಮ್ಮ ಹಳೇ ಬಟ್ಟೆಗಳನ್ನು ಇತರರಿಗೆ ನೀಡುವಾಗ ಸರಿಯಾದ ವಿಧಾನ ಪಾಲಿಸದಿದ್ದರೆ, ಅಂದುಕೊಂಡ ಫಲ ಸಿಗುವುದಿಲ್ಲ. ಬದಲಿಗೆ ಜಾತಕದಲ್ಲಿ ದೋಷಗಳು ಸುತ್ತಿಕೊಳ್ಳುತ್ತವೆ ಎಂದು ಧಾರ್ಮಿಕ ಗ್ರಂಥಗಳು ಹೇಳುತ್ತವೆ.

ಹಳೇ ಬಟ್ಟೆಗಳನ್ನು ದಾನ ಮಾಡುವ ಮುನ್ನ ಈ ಒಂದು ತಪ್ಪು ಮಾಡಬೇಡಿ | Photo Credit: CANVA
ಹಳೇ ಬಟ್ಟೆಗಳನ್ನು ದಾನ ಮಾಡುವ ಮುನ್ನ ಈ ಒಂದು ತಪ್ಪು ಮಾಡಬೇಡಿ | Photo Credit: CANVA

ಉಪ್ಪು ನೀರಿನಲ್ಲಿ ತೊಳೆದ ನಂತರವೇ ದಾನ ಮಾಡಿ

ನಮ್ಮಲ್ಲಿ ಹೆಚ್ಚಿನವರು ಹಬ್ಬ ಹರಿದಿನಗಳಲ್ಲಿ ಅಥವಾ ಚಳಿಗಾಲದ ಸಮಯದಲ್ಲಿ ವಾರ್ಡ್‌ರೋಬ್ ಕ್ಲೀನ್ ಮಾಡಿ, ತಮಗೆ ಬೇಡದ ಹಳೆಯ ಬಟ್ಟೆಗಳನ್ನು ಬಡವರಿಗೆ ಮತ್ತು ರಸ್ತೆ ಬದಿಯ ನಿರಾಶ್ರಿತರಿಗೆ ನೇರವಾಗಿ ಕೊಟ್ಟುಬಿಡುತ್ತಾರೆ. ಇದು ಮಾನವೀಯತೆಯ ದೃಷ್ಟಿಯಿಂದ ಒಳ್ಳೆಯದೇ ಆದರೂ, ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಹೀಗೆ ಮಾಡುವುದು ತಪ್ಪು.

ನಾವು ದೀರ್ಘಕಾಲ ಬಳಸುವ ಬಟ್ಟೆಗಳ ಮೇಲೆ ನಮ್ಮ ವೈಯಕ್ತಿಕ ಭಾವನೆಗಳು, ಧನಾತ್ಮಕ ಹಾಗೂ ನಕಾರಾತ್ಮಕ ಶಕ್ತಿಗಳ ಪ್ರಭಾವ ಗಾಢವಾಗಿ ಬಿದ್ದಿರುತ್ತದೆ. ಆದ್ದರಿಂದ, ನಿಮ್ಮ ಹಳೆಯ ಬಟ್ಟೆಗಳನ್ನು ಇತರರಿಗೆ ಕೊಡುವ ಮುನ್ನ, ಮೊದಲು ಅವುಗಳನ್ನು ಸ್ವಲ್ಪ ಸಮಯದವರೆಗೆ ಉಪ್ಪು ಹಾಕಿದ ನೀರಿನಲ್ಲಿ ನೆನೆಸಿಟ್ಟು, ಆಮೇಲೆ ಚೆನ್ನಾಗಿ ತೊಳೆದು, ಒಣಗಿಸಿ ಕೊಡಬೇಕು. ಉಪ್ಪು ನೀರಿಗೆ ಬಟ್ಟೆಯಲ್ಲಿರುವ ಎಲ್ಲಾ ನೆಗೆಟಿವ್ ಎನರ್ಜಿಯನ್ನು (Negative Energy) ಸಂಪೂರ್ಣವಾಗಿ ಹೀರಿಕೊಳ್ಳುವ ಶಕ್ತಿ ಇರುತ್ತದೆ. ಇದರಿಂದ ಬಟ್ಟೆ ತಗೊಳ್ಳುವವರಿಗೂ ಹಾಗೂ ನಿಮಗೂ ಯಾವುದೇ ದೋಷ ತಟ್ಟಲ್ಲ.

ಕಂಪ್ಲೀಟ್ ಚೆನ್ನಾಗಿರೋ ಬಟ್ಟೆಗಳನ್ನು ಮಾತ್ರ ಕೊಡಿ

ದಾನ ಮಾಡುವುದೆಂದರೆ ಕೇವಲ ನಮ್ಮ ಮನೆಯ ಕಸವನ್ನು ಬೇರೆಯವರ ತಲೆಗೆ ಕಟ್ಟುವುದು ಖಂಡಿತ ಅಲ್ಲ. ದಾನ ಪಡೆಯುವವರ ಮನಸ್ಸಿಗೆ ನಾವು ಕೊಡುವ ವಸ್ತುವಿನಿಂದ ಸಂತೋಷವಾಗಬೇಕು. ಹಾಗಾಗಿ ಫುಲ್ ಹರಿದು ಹೋಗಿರೋ, ಜಿಡ್ಡಿನ ಕಲೆಯಾಗಿರೋ ಅಥವಾ ಇನ್ಯಾರೂ ಧರಿಸಲು ಯೋಗ್ಯವಲ್ಲದ ಬಟ್ಟೆಗಳನ್ನು ದಾನದ ಹೆಸರಿನಲ್ಲಿ ಯಾರಿಗೂ ಕೊಡಬೇಡಿ.

ಬಟ್ಟೆ ಕೊಡುವ ಮುನ್ನ ಅವು ಕ್ಲೀನ್ ಆಗಿವೆಯೇ ಮತ್ತು ಇತರರು ಹಾಕಿಕೊಳ್ಳಲು ಕಂಪ್ಲೀಟ್ ರೆಡಿಯಾಗಿವೆಯೇ ಎಂಬುದನ್ನು ಚೆನ್ನಾಗಿ ಚೆಕ್ ಮಾಡಿಕೊಳ್ಳಿ. ಬಟ್ಟೆಯಲ್ಲಿ ಎಲ್ಲಾದರೂ ಸಣ್ಣಪುಟ್ಟ ಹರಿದಿದ್ದರೆ, ಅದನ್ನು ಸೂಜಿಯಿಂದ ನೀಟಾಗಿ ಹೊಲಿದು ಆಮೇಲೆ ನೀಡುವುದು ದಾನದ ಶ್ರೇಷ್ಠತೆಯನ್ನು ಇನ್ನು ಹೆಚ್ಚಿಸುತ್ತದೆ.

ಪಬ್ಲಿಸಿಟಿಗಾಗಿ ದಾನ ಮಾಡಬೇಡಿ; 'ಗುಪ್ತ ದಾನ' ಬೆಸ್ಟ್

ಇತ್ತೀಚಿನ ದಿನಗಳಲ್ಲಿ ದಾನ ಮಾಡುವುದು ಒಂದು ದೊಡ್ಡ ಪ್ರದರ್ಶನದ ವಸ್ತುವಾಗಿ ಬದಲಾಗಿಬಿಟ್ಟಿದೆ. ನಾಲ್ಕು ಜನರಿಗೆ ಒಂದು ಜೊತೆ ಬಟ್ಟೆ ಕೊಟ್ಟರೆ, ಹತ್ತು ಕ್ಯಾಮೆರಾಗಳ ಮುಂದೆ ಪೋಸ್ ಕೊಟ್ಟು ಸೋಶಿಯಲ್ ಮೀಡಿಯಾದಲ್ಲಿ (Social Media) ಹಂಚಿಕೊಳ್ಳುವ ಟ್ರೆಂಡ್ ಶುರುವಾಗಿದೆ. ಆದರೆ ಧಾರ್ಮಿಕ ಗ್ರಂಥಗಳ ಪ್ರಕಾರ, ಈ ತರಹ ಜಾಹೀರಾತು ಮಾಡಿಕೊಂಡು ಕೊಡುವ ದಾನಕ್ಕೆ ಯಾವುದೇ ಪುಣ್ಯ ಸಿಗುವುದಿಲ್ಲ.

ನಿಜವಾದ ದಾನವನ್ನು ಯಾವುದೇ ಪ್ರತಿಫಲಾಪೇಕ್ಷೆಯಿಲ್ಲದೆ, ನಿಸ್ವಾರ್ಥವಾಗಿ ಮಾಡಬೇಕು. ನಮ್ಮ ಬಲಗೈಯಲ್ಲಿ ನೀಡಿದ ದಾನ ಕನಿಷ್ಠ ಪಕ್ಷ ಪಕ್ಕದಲ್ಲಿರುವ ಎಡಗೈಗೂ ತಿಳಿಯಬಾರದು. ಇದನ್ನೇ ‘ಗುಪ್ತ ದಾನ’ ಅಥವಾ ರಹಸ್ಯ ದಾನ ಎನ್ನುತ್ತಾರೆ. ಶಾಸ್ತ್ರದ ಪ್ರಕಾರ ರಹಸ್ಯವಾಗಿ ಮಾಡುವ ದಾನಕ್ಕೆ ಕೋಟಿ ಪಟ್ಟು ಹೆಚ್ಚಿನ ಮಹತ್ವ ಇರುತ್ತದೆ.

ವಸ್ತ್ರ ದಾನ ಮಾಡಲು ಸೂಕ್ತ ಸಮಯ ಯಾವುದು?

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಯಾವುದೇ ರೀತಿಯ ದಾನ ಧರ್ಮಗಳನ್ನು ಮಾಡಲು ಬೆಳಗಿನ ಸಮಯವನ್ನು ಅತ್ಯಂತ ಶುಭ ಮತ್ತು ಸಕಾರಾತ್ಮಕ ಎಂದು ಪರಿಗಣಿಸಲಾಗುತ್ತದೆ. ಇನ್ನು ದಿನಗಳ ವಿಚಾರಕ್ಕೆ ಬಂದರೆ, ವಿಶೇಷವಾಗಿ ಅಮಾವಾಸ್ಯೆ, ಹುಣ್ಣಿಮೆ, ಸಂಕ್ರಾಂತಿ ಮತ್ತು ಶನಿವಾರದ ದಿನಗಳಂದು ಬಡವರಿಗೆ ಹಾಗೂ ನಿರ್ಗತಿಕರಿಗೆ ವಸ್ತ್ರದಾನ ಮಾಡುವುದರಿಂದ ನಿಮ್ಮ ಜಾತಕದಲ್ಲಿ ಕಾಡುತ್ತಿರುವ ಹಲವು ದೋಷಗಳು ತಾವಾಗಿಯೇ ನಿವಾರಣೆಯಾಗುತ್ತವೆ. ಶನಿವಾರದ ದಾನವು ಶನಿದೇವರ ಕೃಪೆಗೆ ಪಾತ್ರರಾಗುವಂತೆ ಮಾಡುತ್ತದೆ ಮತ್ತು ಮನೆಯಲ್ಲಿ ಸುಖ, ಶಾಂತಿ ನೆಲೆಸುವಂತೆ ಮಾಡುತ್ತದೆ.

Latest News