ಈ ಸೋಶಿಯಲ್ ಮೀಡಿಯಾದಲ್ಲಿ ಯಾರು, ಯಾವಾಗ, ಫೇಮಸ್ ಆಗುತ್ತಾರೆ ಅಥವಾ ವೈರಲ್ ಆಗ್ತಾರೆ ಅಂತ ಗೊತ್ತೇ ಆಗುವುದಿಲ್ಲ. ಹೌದು ಈ ಸೋಶಿಯಲ್ ಮೀಡಿಯಾ ಅನ್ನೋದು ಜನರಿಗೆ ಒಂದು ದೊಡ್ಡ ವೇದಿಕೆ ಆಗಿದೆ. ಇದನ್ನು ಸರಿಯಾಗಿ ಉಪಯೋಗಿಸಿಕೊಂಡವರು ಇದ್ದಾರೆ, ದುರುಪಯೋಗ ಪಡಿಸಿಕೊಂಡವರು ಇದಾರೆ.. ಹೌದು ಸೋಶಿಯಲ್ ಮೀಡಿಯಾದಲ್ಲಿ ಟ್ರೊಲ್ ಆಗ್ತಿರೋದಕ್ಕೆ 'ಹೂವಿನ ಬಾಣದಂತೆʼ ಹುಡುಗಿ ನಿತ್ಯಶ್ರೀ ಮನನೊಂದು ವಿಡಿಯೋ ಒಂದನ್ನು ಮಾಡಿದ್ದು, ಈ ಮೂಲಕ ತಮ್ಮ ನೋವಿನ ಬೇಸರವನ್ನು ಇದೀಗ ಎಲ್ಲರ ಮುಂದೆ ಸಾಮಾಜಿಕ ಜಾಲತಾಣದಲ್ಲಿ ವ್ಯಕ್ತಪಡಿಸಿದ್ದಾರೆ ಜೊತೆಗೆ ಕೆಲವು ವಿಷಯಗಳನ್ನು ಜನರಿಗೆ ತಲುಪಿಸುವ ಕಾರ್ಯ ಕೈಗೊಂಡಿದ್ದಾರೆ ನೋಡಿ.
ಈಗೆಲ್ಲಾ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗೋದು ಅಷ್ಟೇನು ಕಷ್ಟ ಇಲ್ಲ. ಕಾರಣ, ತಮ್ಮದೇ ಸ್ಟೈಲ್‌ನಲ್ಲಿ ಹಾಡು ಹಾಡಿ, ಹೇಗೇಗೋ ವಿಚಿತ್ರವಾಗಿ ಡ್ಯಾನ್ಸ್ ಮಾಡುವ ರೀಲ್ಸ್‌ಗಳಿಂದ ರಾತ್ರೋರಾತ್ರಿಯೇ ಫೇಮಸ್ ಆಗಿ ಬಿಡ್ತಾರೆ. ಈ ಲಿಸ್ಟ್‌ನಲ್ಲಿ ಇತ್ತೀಚೆಗೆ ʻಹೂವಿನ ಬಾಣದಂತೆʼ ಹಾಡನ್ನ ತಮ್ಮದೇ ಸ್ಟೈಲ್‌ನಲ್ಲಿ ಹಾಡಿ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಫೇಮಸ್ ಆದ ನಿತ್ಯಶ್ರೀ ಅವರು ಕೂಡ ಒಬ್ಬರು. ತಪ್ಪಾಗಿ ಹಾಡು ಹಾಡಿದ್ದು ತಪ್ಪಾ? ಇವರು ವೈರಲ್ ಆಗಿದ್ದು ತಪ್ಪಾ? ಖಂಡಿತವಾಗಿಯೂ ಇಲ್ಲ. ಆದರೆ, ನಿತ್ಯಶ್ರೀ ಅವರು ಇತ್ತೀಚೆಗೆ ʻಜೀ ಕನ್ನಡʼ ವಾಹಿನಿಯ ʻಕಾಮಿಡಿ ಕಿಲಾಡಿಗಳುʼ ರಿಯಾಲಿಟಿ ಶೋನಲ್ಲಿ ಅತಿಥಿಯಾಗಿ ಹೋಗಿದ್ದು ಸ್ಕಿಟ್‌ವೊಂದರಲ್ಲಿ ನಟನೆ ಮಾಡಿದ್ದರು. ಬಳಿಕ ಅದರಿಂದ ಸೋಶಿಯಲ್ ಮೀಡಿಯಾದಲ್ಲಿ ಹೆಚ್ಚು ಟ್ರೋಲ್‌ಗೆ ಒಳಗಾದರು.
ಇಂಥಹ ಟ್ರೋಲ್‌ಗಳಿಗೆ ನಿತ್ಯಶ್ರೀ ಇದೀಗ ರಿಯಾಕ್ಟ್ ಮಾಡಿದ್ದಾರೆ. ಹೌದು ಅವಾಫ್ರು ಹೇಳಿರುವ ಹಾಗೆ “ಎಲ್ರಿಗೂ ನಮಸ್ಕಾರ. ಈ ವಿಡಿಯೋ ಮಾಡುತ್ತಿರುವುದಕ್ಕೆ ಕಾರಣ, ಇತ್ತೀಚೆಗೆ ಕಾಮಿಡಿ ಕಿಲಾಡಿಗಳು ಶೋನಲ್ಲಿ ನಾನು ಗೆಸ್ಟ್ ಆಗಿ ಆಕ್ಟ್ ಮಾಡಿದ್ದು. ಅದನ್ನ ತುಂಬಾ ಜನ ಕೆಟ್ಟದಾಗಿ ಟ್ರೋಲ್ ಮಾಡಿದ್ದಾರೆ. ಅವರೆಲ್ಲರಿಗೂ ನಾನು ಕೇಳೋದು ಇಷ್ಟೇ, ಇದೇ ಚಾನ್ಸ್ ನಿಮ್ಮ ಮನೆಯಲ್ಲಿ ಅಕ್ಕ ಅಥವಾ ತಂಗಿಗೆ ಸಿಕ್ಕಿದ್ದರೆ, ಇದನ್ನ ಉಪಯೋಗಿಸಿಕೊಳ್ಳದೇ ಬಿಡ್ತಿದ್ರಾ? ಮತ್ತು ಇದನ್ನ ಕೆಟ್ಟದಾಗಿ ಟ್ರೋಲ್ ಮಾಡ್ತಿದ್ರಾ?” ಎಂದು ವಿಡಿಯೋ ಮೂಲಕ ನಿತ್ಯಶ್ರೀ ಅವರು ಪ್ರಶ್ನೆ ಮಾಡಿದ್ದಾರೆ. ಹಾಗೇನೇ ಮಾತು ಮುಂದುವರೆಸಿ 'ನೀವು ಮಾಡುವ ಟ್ರೋಲ್ ವಿಡಿಯೋಗಳ ಬಗ್ಗೆ ಒಂದೇ ಒಂದು ಬಾರಿ ಯೋಚನೆ ಮಾಡಿ. ನೀವುಗಳು ಮಾಡುವ ವಿಡಿಯೋವನ್ನ ನಮ್ಮ ಅಪ್ಪ-ಅಮ್ಮ ನೋಡಿದ್ರೆ ಅವರ ಮನಸ್ಸಿಗೆ ಎಷ್ಟು ಬೇಜಾರಾಗಬಹುದು ಎಂದು ಯೋಚನೆ ಮಾಡಿ. ಆಗಲಾದರೂ ಈ ರೀತಿ ವಿಡಿಯೋಗಳನ್ನ ಮಾಡೋದು ನಿಲ್ಲಿಸುತ್ತೀರಿ” ಎಂದಿದ್ದಾರೆ ನಿತ್ಯಶ್ರೀ.
ಒಟ್ಟಾರೆಯಾಗಿ ಸೋಶಿಯಲ್ ಮೀಡಿಯಾಗಳಲ್ಲಿ ಟ್ರೊಲ್ ಪೇಜುಗಳ ಕೈಗೆ ಸಿಲುಕಿ ನಲುಗಿ ಹೋಗಿರುವ ಲೀಸ್ಟ್ ನಲ್ಲಿ ಸ್ಟಾರ್ ಹೀರೊ ಹಿರೋಯಿನ್ಸ್ ಕೂಡಾ ಮಿಸ್ ಆಗಿಲ್ಲ. ಇನ್ನು ಸಾಮಾನ್ಯ ಜನರು ಫೇಮಸ್ ಆಗೋದಕ್ಕೆ ಸೋಶಿಯಲ್ ಮೀಡಿಯಾ ಆಯ್ಕೆ ಮಾಡ್ಕೊಂಡಿದ್ರೆ ಕೆಲವೊಂದು ಟ್ರೊಲ್ ಪೇಜ್ ಗಳು ಅದನ್ನೇ ಬಳಸ್ಕೊಂಡು ಕೆಟ್ಟದಾಗಿ ಟ್ರೊಲ್ ಮಾಡಿ ಸಾಕಾಪ್ಪ ಸೋಶಿಯಲ್ ಮೀಡಿಯಾ ಸಹವಾಸ ಅನಿಸೋ ಹಾಗೆ ಮಾಡಿಬಿಡ್ತಾರೆ.ಟ್ರೊಲ್ ಮಾಡೋದು ತಪ್ಪಾ ..? ಖಂಡಿತಾ ಅಲ್ಲ ಆದ್ರೆ ಅದರ ಪರಿಣಾಮ ಯಾರ ಮೇಲೆ ಹೇಗೆ ಆಗುತ್ತೆ ಅಂತ ತಿಳಿದುಕೊಂಡಿರಬೇಕು ಅಷ್ಟೇ. ಇನ್ನು ಇದಕ್ಕೆಲ್ಲ ಯಾವಾಗ ಫುಲ್ ಬ್ರೇಕ್ ಬೀಳುತ್ತೆ ಎಂದು ಕಾದು ನೋಡಬೇಕಿದೆ. ನಿತ್ಯಶ್ರೀ ಅವರ ಈ ವಿಡಿಯೋ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.