Feb 16, 2026 Languages : ಕನ್ನಡ | English

ಬುಡಕಟ್ಟು ಉತ್ಸವ ಮೇದಾರಂ ಜಾತ್ರೆಯಲ್ಲಿ ಪೋಲೀಸರ ಜೊತೆ ಹೆಜ್ಜೆ ಹಾಕಿದ ಸಚಿವೆ ಸೀತಕ್ಕ!!

ಏಷ್ಯಾದ ಅತಿದೊಡ್ಡ ಬುಡಕಟ್ಟು ಉತ್ಸವವೆಂದು ಹೆಸರಾಗಿರುವ ಮೇದಾರಂ ಜಾತ್ರೆಯಲ್ಲಿ ಈ ಬಾರಿ ವಿಶೇಷ ಕ್ಷಣಗಳು ಅಲ್ಲಿ ನೆರೆದಿದ್ದವರ ಕಣ್ಣಿಗೆ  ಕಂಡುಬಂದವು. ಜಾತ್ರೆಗೆ ಆಗಮಿಸಿದ ಸಚಿವೆಯಾದ ಸೀತಕ್ಕ ಅವರು, ಪೊಲೀಸ್ ಅಧಿಕಾರಿಗಳ ಜೊತೆಗೂಡಿ ಡಾನ್ಸ್ ಮಾಡಿದ ಕ್ಷಣ ಅಲ್ಲಿಯ ಭಕ್ತರ ಮನ ಗೆದ್ದಿತು ಎನ್ನಬಹದು. 

ಸೀತಕ್ಕ ನೃತ್ಯ – ಭಕ್ತರ ಮನ ಗೆದ್ದ ಮೇದಾರಂ ಜಾತ್ರೆಯ ವಿಶೇಷ ಕ್ಷಣ
ಸೀತಕ್ಕ ನೃತ್ಯ – ಭಕ್ತರ ಮನ ಗೆದ್ದ ಮೇದಾರಂ ಜಾತ್ರೆಯ ವಿಶೇಷ ಕ್ಷಣ

ಮೇದಾರಂ ಜಾತ್ರೆ, ಬುಡಕಟ್ಟು ಸಮುದಾಯದ ನಂಬಿಕೆ, ಭಕ್ತಿ ಮತ್ತು ಸಂಸ್ಕೃತಿಯ ಪ್ರತಿಬಿಂಬವಾಗಿದ್ದು, ಪ್ರತಿವರ್ಷ ಲಕ್ಷಾಂತರ ಜನರು ಈ ಜಾತ್ರೆಯಲ್ಲಿ ಭಾಗವಹಿಸುತ್ತಾರೆ. ಈ ಬಾರಿ ಸೀತಕ್ಕ ಅವರ ಹಾಜರಾತಿ, ಜನರಲ್ಲಿ ಉತ್ಸಾಹ ಹೆಚ್ಚಿಸಿತು. ಸಾಮಾನ್ಯವಾಗಿ ಗಂಭೀರವಾಗಿ ಕಾಣುವ ಪೊಲೀಸ್ ಅಧಿಕಾರಿಗಳ ಜೊತೆಗೂಡಿ ಅವರು ನೃತ್ಯ ಮಾಡಿದ ಕ್ಷಣ, ಜಾತ್ರೆಯ ವಾತಾವರಣವನ್ನು ಇನ್ನಷ್ಟು ಹುರುದುಂಬಿಸಿತು.

ಭಕ್ತರು ಹಾಗೂ ಸ್ಥಳೀಯರು, “ಸಚಿವೆ ಸೀತಕ್ಕ ನಮ್ಮ ಜೊತೆ ಸೇರಿ ನೃತ್ಯ ಮಾಡಿದದ್ದು ನಮ್ಮ ಸಂಸ್ಕೃತಿಗೆ ಗೌರವ. ಇದು ಜನರೊಂದಿಗೆ ಬೆರೆತು ಬದುಕುವ ನಾಯಕತ್ವದ ನಿಜವಾದ ಉದಾಹರಣೆ” ಎಂದು ಸಂತೋಷ ವ್ಯಕ್ತಪಡಿಸಿದರು.

ಮೇದಾರಂ ಜಾತ್ರೆಯು ಕೇವಲ ಧಾರ್ಮಿಕ ಆಚರಣೆಯಲ್ಲ, ಜನರ ಏಕತೆಯನ್ನು, ಸಂಸ್ಕೃತಿಯ ವೈಭವವನ್ನು ತೋರಿಸುವ ಮಹೋತ್ಸವ. ಸೀತಕ್ಕ ಅವರ ನೃತ್ಯವು, ಜನರೊಂದಿಗೆ ಬೆರೆತು ಅವರ ಸಂಭ್ರಮವನ್ನು ಹಂಚಿಕೊಳ್ಳುವ ಮಾನವೀಯ ಕ್ಷಣವಾಗಿ ನೆನಪಾಯಿತು. ಈ ಘಟನೆ, ರಾಜಕೀಯ ನಾಯಕರು ಜನರೊಂದಿಗೆ ಬೆರೆತು ಅವರ ಸಂಸ್ಕೃತಿಯನ್ನು ಗೌರವಿಸುವುದರ ಮಹತ್ವವನ್ನು ತೋರಿಸುತ್ತದೆ. ಮೇದಾರಂ ಜಾತ್ರೆಯಂತಹ ಉತ್ಸವಗಳು, ಜನರ ನಂಬಿಕೆ, ಭಕ್ತಿ ಮತ್ತು ಸಂಸ್ಕೃತಿಯ ಶಕ್ತಿ ಎಷ್ಟು ದೊಡ್ಡದು ಎಂಬುದನ್ನು ಮತ್ತೊಮ್ಮೆ ನೆನಪಿಸುತ್ತವೆ.

Latest News