ಕಳೆದ ಕೆಲವು ದಿನಗಳಿಂದ ರಾಜ್ಯದಲ್ಲಿ ಗಾಳಿಯ ಗುಣಮಟ್ಟ (AQI) ಏರುಪೇರಾಗುತ್ತಲೇ ಇತ್ತು. ಆದರೆ ಇಂದು ಒಂದು ಸಮಾಧಾನಕರ ವಿಷಯವೆಂದರೆ, ಬೆಂಗಳೂರು ಸೇರಿದಂತೆ ಹಲವು ಜಿಲ್ಲೆಗಳಲ್ಲಿ ವಾಯು ಗುಣಮಟ್ಟದಲ್ಲಿ ತುಸು ಸುಧಾರಣೆ ಕಂಡುಬಂದಿದೆ. ಹಾಗಂತ ಅಪಾಯ ಪೂರ್ಣವಾಗಿ ದೂರವಾಗಿದೆ ಎಂದು ಹೇಳಲಾಗದು. ದೇಶದ ಇತರ ಮೆಟ್ರೋ ಸಿಟಿಗಳಿಗೆ (ದೆಹಲಿ, ಮುಂಬೈ) ಹೋಲಿಸಿದರೆ ನಮ್ಮ ಬೆಂಗಳೂರಿನ ಗಾಳಿ ಎಷ್ಟೋ ವಾಸಿ ಎನ್ನಬಹುದು.
ಬೆಂಗಳೂರಿನ ಸ್ಥಿತಿ ಹೇಗಿದೆ?
ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಇಷ್ಟು ದಿನ ಉಸಿರಾಟಕ್ಕೆ ಕಷ್ಟವಾಗುವಷ್ಟು ಕಳಪೆ ಗಾಳಿ ಇತ್ತು. ಇಂದು ವಾಯು ಗುಣಮಟ್ಟ ಸೂಚ್ಯಂಕ (AQI) 127ಕ್ಕೆ ತಲುಪಿದೆ. ಇದು 'ಕಳಪೆ' ಗುಂಪಿಗೆ ಸೇರಿದರೂ, ಕಳೆದ ವಾರಕ್ಕೆ ಹೋಲಿಸಿದರೆ ಪರಿಸ್ಥಿತಿ ಸ್ವಲ್ಪ ಸುಧಾರಿಸಿದೆ. ಆದರೂ, ಶ್ವಾಸಕೋಶದ ಸಮಸ್ಯೆ ಇರುವವರು ಮತ್ತು ಮಕ್ಕಳು ಸ್ವಲ್ಪ ಜಾಗರೂಕರಾಗಿರುವುದು ಒಳಿತು. ಯಾಕೆಂದರೆ WHO (ವಿಶ್ವ ಆರೋಗ್ಯ ಸಂಸ್ಥೆ) ಮಾನದಂಡಗಳ ಪ್ರಕಾರ ಈ ಮಟ್ಟದ ಗಾಳಿ ಇನ್ನೂ ಪೂರ್ಣವಾಗಿ ಸುರಕ್ಷಿತವಲ್ಲ.
ಹುಬ್ಬಳ್ಳಿ-ಬೆಳಗಾವಿಯಲ್ಲಿದೆ ತಾಜಾ ಗಾಳಿ!
ನೀವು ಬೆಳಗಾವಿ ಅಥವಾ ಹುಬ್ಬಳ್ಳಿಯವರಾಗಿದ್ದರೆ ಇಂದು ನಿಮಗೊಂದು ಖುಷಿ ಸುದ್ದಿಯಿದೆ. ರಾಜ್ಯದ ಇತರ ನಗರಗಳಿಗೆ ಹೋಲಿಸಿದರೆ ಇಲ್ಲಿನ ಗಾಳಿ ತುಂಬಾ ಶುದ್ಧವಾಗಿದೆ. ಬೆಳಗಾವಿಯಲ್ಲಿ AQI ಕೇವಲ 67 ಇದ್ದರೆ, ಹುಬ್ಬಳ್ಳಿಯಲ್ಲಿ 80 ಇದೆ. ಅಂದರೆ ಇಲ್ಲಿನ ಜನರು ಆರಾಮವಾಗಿ ತಾಜಾ ಗಾಳಿಯನ್ನು ಸೇವಿಸಬಹುದು. ಮೈಸೂರಿನಲ್ಲೂ ಗಾಳಿ ಗುಣಮಟ್ಟ 90ರಷ್ಟಿದ್ದು, ಉಸಿರಾಟಕ್ಕೆ ಯೋಗ್ಯವಾಗಿದೆ.
ಇಂದಿನ ಪ್ರಮುಖ ನಗರಗಳ AQI ಲಿಸ್ಟ್ ಹೀಗಿದೆ:
ಬೆಂಗಳೂರು: 127 (ಕಳಪೆ)
ಮಂಗಳೂರು: 130 (ಕಳಪೆ)
ಬಳ್ಳಾರಿ: 143 (ಇದು ರಾಜ್ಯದಲ್ಲೇ ಅತಿ ಹೆಚ್ಚು ಅಂದರೆ ಕಳಪೆ ಮಟ್ಟದ ಹತ್ತಿರವಿದೆ)
ಕಲಬುರ್ಗಿ, ಶಿವಮೊಗ್ಗ & ಉಡುಪಿ: ತಲಾ 119
ಮೈಸೂರು: 90 (ಮಧ್ಯಮ - ಪರವಾಗಿಲ್ಲ)
ಹುಬ್ಬಳ್ಳಿ: 80 (ಮಧ್ಯಮ - ಶುದ್ಧ)
ಬೆಳಗಾವಿ: 67 (ಮಧ್ಯಮ - ಬೆಸ್ಟ್)
ಗಾಳಿಯ ಗುಣಮಟ್ಟ ಅಳೆಯುವುದು ಹೇಗೆ?
ನಿಮ್ಮ ಸುತ್ತಮುತ್ತಲ ಗಾಳಿ ಎಷ್ಟು ಶುದ್ಧವಾಗಿದೆ ಎಂದು ತಿಳಿಯಲು ಈ ಕೆಳಗಿನ ಅಂಕಗಳನ್ನು ಗಮನಿಸಿ:
0 - 50 (ಉತ್ತಮ): ಅತ್ಯುತ್ತಮ ಗಾಳಿ, ಎನರ್ಜಿಟಿಕ್ ಆಗಿ ಇರಬಹುದು.
50 - 100 (ಮಧ್ಯಮ): ಪರವಾಗಿಲ್ಲ, ಆರೋಗ್ಯಕ್ಕೆ ಅಷ್ಟೇನು ತೊಂದರೆಯಿಲ್ಲ.
100 - 150 (ಕಳಪೆ): ಸೂಕ್ಷ್ಮ ಆರೋಗ್ಯ ಸಮಸ್ಯೆ ಇರುವವರಿಗೆ ತುಸು ಕಷ್ಟ.
150 - 200 (ಅನಾರೋಗ್ಯಕರ): ಸಾಮಾನ್ಯರಿಗೂ ಉಸಿರಾಟದ ಕಿರಿಕಿರಿ ಉಂಟಾಗಬಹುದು.
200 - 300 (ಗಂಭೀರ): ಆರೋಗ್ಯದ ಮೇಲೆ ನೇರ ಪರಿಣಾಮ ಬೀರುತ್ತದೆ.
300 - 500+ (ಅಪಾಯಕಾರಿ): ಇದು ತೀರಾ ಡೇಂಜರ್ ಪರಿಸ್ಥಿತಿ.
ತಜ್ಞರ ಎಚ್ಚರಿಕೆ
ಗಾಳಿಯಲ್ಲಿ ಧೂಳು ಮತ್ತು ಕಲುಷಿತ ಅಂಶಗಳು ಹೆಚ್ಚಾದಾಗ ಶ್ವಾಸಕೋಶದ ಕಾಯಿಲೆಗಳು ಮತ್ತು ಅಲರ್ಜಿ ಹೆಚ್ಚಾಗುವ ಸಾಧ್ಯತೆ ಇರುತ್ತದೆ. ವಿಶೇಷವಾಗಿ ಕಲಬುರ್ಗಿ ಮತ್ತು ಬಳ್ಳಾರಿಯಂತಹ ನಗರಗಳಲ್ಲಿ AQI ಏರಿಳಿತವಾಗುತ್ತಿರುವುದರಿಂದ ಅಲ್ಲಿನ ಜನರಿಗೆ ಎಚ್ಚರಿಕೆಯಿಂದ ಇರುವಂತೆ ತಜ್ಞರು ಸೂಚಿಸಿದ್ದಾರೆ. ಹೊರಗೆ ಹೋದಾಗ ಮಾಸ್ಕ್ ಧರಿಸುವುದು ಮತ್ತು ಮನೆಯ ಸುತ್ತಮುತ್ತ ಗಿಡಗಳನ್ನು ಬೆಳೆಸುವುದು ಇಂದಿನ ಅನಿವಾರ್ಯತೆಯಾಗಿದೆ.