ಮಾರ್ಕೆಟ್‌ಗೆ ಹೋದಾಗ ಮೋಸ ಹೋಗಬೇಡಿ - ನಾಟಿ ಮತ್ತು ಹೈಬ್ರಿಡ್ ಸೌತೆಕಾಯಿ ಪತ್ತೆಹಚ್ಚಲು ಮ್ಯಾಜಿಕಲ್ ಟಿಪ್ಸ್ ನೋಡಿ!!

ಬೇಸಿಗೆ ಬಂತೆಂದರೆ ಸಾಕು, ಮಾರ್ಕೆಟ್‌ನಲ್ಲಿ ಸೌತೆಕಾಯಿಗೆ (Cucumber) ಎಲ್ಲಿಲ್ಲದ ಡಿಮ್ಯಾಂಡ್ ಇರುತ್ತದೆ. ಮನೆಯಲ್ಲಿ ಊಟದ ಜೊತೆ ಇರಲಿ, ಹೋಟೆಲ್ ಅಥವಾ ರೆಸ್ಟೋರೆಂಟ್‌ಗೆ ಹೋದರೆ ಸಲಾಡ್ ಪ್ಲೇಟ್‌ಗಳಲ್ಲಂತೂ ಸೌತೆಕಾಯಿ ಇರಲೇಬೇಕು. ದೇಹವನ್ನು ತಂಪಾಗಿಡುವಲ್ಲಿ ಸೌತೆಕಾಯಿ ಬೆಸ್ಟ್ ಆಪ್ಷನ್. ಆದರೆ, ಇತ್ತೀಚಿನ ದಿನಗಳಲ್ಲಿ ಮಾರ್ಕೆಟ್‌ಗೆ ಹೋದರೆ ನಮಗೆ ಎರಡು ರೀತಿಯ ಸೌತೆಕಾಯಿಗಳು ಹೆಚ್ಚಾಗಿ ಕಾಣಿಸುತ್ತವೆ - ಒಂದು ನಮ್ಮ ಹಳ್ಳಿಗಳ ಕಡೆಯ ನಾಟಿ ಸೌತೆಕಾಯಿ (Desi Cucumber), ಇನ್ನೊಂದು ಕೆಮಿಕಲ್ ಬಳಸಿ ಬೆಳೆಸಿದ ಹೈಬ್ರಿಡ್ ಸೌತೆಕಾಯಿ (Hybrid Cucumber).

ಗಾಜಿನಂತೆ ಹೊಳೆಯುವ ಸೌತೆಕಾಯಿ ಕೊಳ್ಳುವ ಮುನ್ನ ಎಚ್ಚರ | Photo Credit: AI
ಗಾಜಿನಂತೆ ಹೊಳೆಯುವ ಸೌತೆಕಾಯಿ ಕೊಳ್ಳುವ ಮುನ್ನ ಎಚ್ಚರ | Photo Credit: AI

ಸಾಮಾನ್ಯವಾಗಿ ಗ್ರಾಹಕರಿಗೆ ಇವೆರಡರ ನಡುವಿನ ವ್ಯತ್ಯಾಸ ತಿಳಿಯದೆ, ಯಾವುದು ಆರೋಗ್ಯಕ್ಕೆ ಒಳ್ಳೆಯದು ಎಂದು ಗೊಂದಲಕ್ಕೀಡಾಗುತ್ತಾರೆ. ಇದೀಗ ಒಬ್ಬರು ಅನುಭವಿ ರೈತರು, ನಾಟಿ ಮತ್ತು ಹೈಬ್ರಿಡ್ ಸೌತೆಕಾಯಿಯನ್ನು ಕೇವಲ ನೋಡಿಯೇ ಸುಲಭವಾಗಿ ಪತ್ತೆಹಚ್ಚಲು 3 ಮ್ಯಾಜಿಕಲ್ ಮತ್ತು ಸುಲಭವಾದ ಐಡಿಯಾಗಳನ್ನು ಹಂಚಿಕೊಂಡಿದ್ದಾರೆ.

1. ಸೌತೆಕಾಯಿಯ ಬಣ್ಣ ಮತ್ತು ಹೊಳಪು (Color and Shine)

ನಾಟಿ ಮತ್ತು ಹೈಬ್ರಿಡ್ ಸೌತೆಕಾಯಿಯನ್ನು ಗುರುತಿಸಲು ಇರುವ ಮೊದಲ ಮತ್ತು ಅತ್ಯಂತ ಸುಲಭವಾದ ದಾರಿ ಎಂದರೆ ಅದರ ಕಲರ್.

ಹೈಬ್ರಿಡ್ ಸೌತೆಕಾಯಿ: ಇವು ನೋಡಲು ತುಂಬಾ ಅಟ್ರಾಕ್ಟಿವ್ ಆಗಿರುತ್ತವೆ. ಇವುಗಳ ಮೇಲ್ಭಾಗದ ಸಿಪ್ಪೆಯು ಗಾಢ ಹಸಿರು (Dark Green) ಬಣ್ಣದಲ್ಲಿದ್ದು, ಮೇಣ ಸವರಿದಂತೆ ಸಿಕ್ಕಾಪಟ್ಟೆ ಹೊಳೆಯುತ್ತಿರುತ್ತದೆ (Wax Finish). ದೂರದಿಂದ ನೋಡಿದರೂ ಇವು ಫ್ರೆಶ್ ಆಗಿರುವಂತೆ ಕಾಣುತ್ತವೆ.

ನಾಟಿ ಸೌತೆಕಾಯಿ: ನಮ್ಮ ದೇಶಿ ಅಥವಾ ನಾಟಿ ಸೌತೆಕಾಯಿಗಳು ಇಷ್ಟೊಂದು ಹೊಳಪು ಹೊಂದಿರುವುದಿಲ್ಲ. ಇವುಗಳ ಬಣ್ಣ ಕೊಂಚ ತಿಳಿ ಹಸಿರು ಅಥವಾ ಅಲ್ಲಲ್ಲಿ ಹಳದಿ ಮಿಶ್ರಿತ ಹಸಿರು ಬಣ್ಣವನ್ನು ಹೊಂದಿರುತ್ತವೆ. ನೋಡುವುದಕ್ಕೆ ಅಷ್ಟೊಂದು ಅಂದವಾಗಿ ಕಾಣದಿದ್ದರೂ, ಆರೋಗ್ಯದ ದೃಷ್ಟಿಯಿಂದ ಇವುಗಳೇ ನಂಬರ್ ಒನ್.

2. ಗಾತ್ರ ಮತ್ತು ಆಕಾರ (Size and Shape)

ಹಣ್ಣು ಅಥವಾ ತರಕಾರಿಗಳನ್ನು ಬೆಳೆಸುವಾಗ ಅವುಗಳ ಶೇಪ್ ನೋಡಿಯೂ ನಾವು ಗುಣಮಟ್ಟವನ್ನು ಅಂದಾಜಿಸಬಹುದು.

ಹೈಬ್ರಿಡ್ ಸೌತೆಕಾಯಿ: ಈ ಸೌತೆಕಾಯಿಗಳು ಒಂದೇ ಅಳತೆಯಲ್ಲಿ, ಅಂದರೆ ಪರ್ಫೆಕ್ಟ್ ಆಗಿ ನೇರವಾಗಿ ಮತ್ತು ಉದ್ದವಾಗಿ ಇರುತ್ತವೆ. ಎಲ್ಲೋ ಒಂದು ಕಡೆ ಇವುಗಳನ್ನು ಮೆಷಿನ್‌ನಲ್ಲಿ ರೆಡಿ ಮಾಡಿದ ಹಾಗೆ ಕಾಣಿಸುತ್ತವೆ. ಯಾವುದೇ ವಂಕರ-ಡೊಂಕು ಇರುವುದಿಲ್ಲ.

ನಾಟಿ ಸೌತೆಕಾಯಿ: ಪ್ರಕೃತಿ ಸಹಜವಾಗಿ ಬೆಳೆಯುವ ನಾಟಿ ಸೌತೆಕಾಯಿಗಳು ಒಂದೇ ತರಹ ಇರುವುದಿಲ್ಲ. ಕೆಲವು ಕೊಂಚ ದಪ್ಪಗಿದ್ದರೆ, ಇನ್ನು ಕೆಲವು ಕೊಂಚ ವಂಕರವಾಗಿರುತ್ತವೆ. ಗಾತ್ರದಲ್ಲೂ ಒಂದಕ್ಕೊಂದು ಮ್ಯಾಚ್ ಆಗುವುದಿಲ್ಲ.

3. ರುಚಿ ಮತ್ತು ಸುಲಭವಾಗಿ ಸಿಪ್ಪೆ ಸುಲಿಯುವುದು (Taste and Skin texture)

ಇವೆಲ್ಲದರ ನಡುವೆ ಅತ್ಯಂತ ಮುಖ್ಯವಾದ ವ್ಯತ್ಯಾಸ ಅಡಗಿರುವುದು ಅದರ ಟೇಸ್ಟ್ ಮತ್ತು ಸಿಪ್ಪೆಯ ಗಡಸುತನದಲ್ಲಿ.

ಹೈಬ್ರಿಡ್ ಸೌತೆಕಾಯಿ: ಇವುಗಳ ಸಿಪ್ಪೆ ತುಂಬಾ ಗಟ್ಟಿಯಾಗಿರುತ್ತದೆ. ಉಗುರಿನಿಂದ ಒತ್ತಿದರೂ ಅಷ್ಟು ಸುಲಭವಾಗಿ ಕಟ್ ಆಗುವುದಿಲ್ಲ. ಇವುಗಳನ್ನು ಕಟ್‌ ಮಾಡಿ ತಿಂದಾಗ ಯಾವುದೇ ವಿಶೇಷವಾದ ಸುವಾಸನೆ ಇರುವುದಿಲ್ಲ ಮತ್ತು ರುಚಿಯೂ ಕೂಡ ಕೊಂಚ ಸಪ್ಪೆಯಾಗಿರುತ್ತದೆ. ಕೆಲವೊಮ್ಮೆ ಇವು ತಿನ್ನಲು ಜಿಗುಟು ಎನಿಸಬಹುದು.

ನಾಟಿ ಸೌತೆಕಾಯಿ: ನಾಟಿ ಸೌತೆಕಾಯಿಯ ಸಿಪ್ಪೆ ತುಂಬಾ ಸಾಫ್ಟ್ ಆಗಿರುತ್ತದೆ. ಉಗುರಿನಿಂದ ಲೈಟಾಗಿ ಗೀರಿದರೂ ಸಿಪ್ಪೆ ಕಿತ್ತು ಬರುತ್ತದೆ. ಇವುಗಳನ್ನು ಕಟ್ ಮಾಡುತ್ತಿದ್ದಂತೆ ಒಂದು ಅದ್ಭುತವಾದ ಫ್ರೆಶ್ ಸೌತೆಕಾಯಿಯ ವಾಸನೆ ಮೂಗಿಗೆ ಬಡಿಯುತ್ತದೆ. ತಿನ್ನಲು ಸಖತ್ ಕ್ರಂಚಿ (ಕುರುಕಲು) ಆಗಿರುತ್ತವೆ ಮತ್ತು ನೈಸರ್ಗಿಕವಾದ ಸಿಹಿ ರುಚಿಯನ್ನು ಹೊಂದಿರುತ್ತವೆ.

ಮಾರ್ಕೆಟ್‌ಗೆ ಹೋದಾಗ ನೋಡಲು ತುಂಬಾ ಪರ್ಫೆಕ್ಟ್ ಆಗಿ, ಗ್ಲಾಸ್ ತರಹ ಹೊಳೆಯುವ ಸೌತೆಕಾಯಿಗಳ ಹಿಂದೆ ಬೀಳಬೇಡಿ. ಯಾಕಂದರೆ ಅವುಗಳನ್ನು ಕೆಮಿಕಲ್ಸ್ ಬಳಸಿ ದೀರ್ಘಕಾಲ ಕೆಡದಂತೆ ಇಡಲಾಗಿರುತ್ತದೆ. ಅದರ ಬದಲು ಕೊಂಚ ವಂಕರವಾಗಿದ್ದರೂ, ತಿಳಿ ಹಸಿರು ಬಣ್ಣದ ನಾಟಿ ಸೌತೆಕಾಯಿಗಳನ್ನು ಖರೀದಿಸಿ. ಇದು ನಿಮ್ಮ ಆರೋಗ್ಯಕ್ಕೂ ಒಳ್ಳೆಯದು, ಜೊತೆಗೆ ನಮ್ಮ ದೇಶಿ ರೈತರಿಗೂ ಹೆಲ್ಪ್ ಆಗುತ್ತದೆ.

Latest News