Apr 17, 2026 Languages : ಕನ್ನಡ | English

ತೀರ್ಥ ತಗೊಂಡ ಮೇಲೆ ತಲೆಗೆ ಕೈ ಸವರಿಕೊಳ್ತೀರಾ? ಈ ಸಣ್ಣ ತಪ್ಪು ನಿಮ್ಮ ಪುಣ್ಯವನ್ನೇ ನಾಶ ಮಾಡುತ್ತದೆ!!

ನಾವೆಲ್ಲರೂ ದೇವಸ್ಥಾನದಲ್ಲಾಗಲಿ ಅಥವಾ ಮನೆಯಲ್ಲಾಗಲಿ ಪೂಜೆ ಮುಗಿದ ಮೇಲೆ ಭಕ್ತಿಯಿಂದ ತೀರ್ಥ ತಗೋತೀವಿ. ಆದ್ರೆ ಈ ತೀರ್ಥ ತಗೊಳ್ಳುವಾಗ ನಾವು ಮಾಡುವ ಸಣ್ಣ ತಪ್ಪು ಅದರ ಪೂರ್ಣ ಫಲ ನಮಗೆ ಸಿಗದಂತೆ ಮಾಡಬಹುದು ಅನ್ನೋದು ಗೊತ್ತಾ?

ತೀರ್ಥ ಅಂದ್ರೆ ಬರೀ ನೀರಲ್ಲ, ಅದೊಂದು ದಿವ್ಯೌಷಧ
ತೀರ್ಥ ಅಂದ್ರೆ ಬರೀ ನೀರಲ್ಲ, ಅದೊಂದು ದಿವ್ಯೌಷಧ

ತೀರ್ಥ ಅಂದ್ರೆ ಅದು ಬರೀ ನೀರಲ್ಲ, ಸಾಕ್ಷಾತ್ ದೇವರ ಪಾದ ತೊಳೆದ ಪವಿತ್ರ ಜಲ. ಇದನ್ನ ಹೇಗೆ ಸ್ವೀಕರಿಸಬೇಕು ಅನ್ನೋದಕ್ಕೆ ನಮ್ಮ ಶಾಸ್ತ್ರದಲ್ಲಿ ಕೆಲವು ಸರಳ ನಿಯಮಗಳಿವೆ:

ಹಸ್ತದ ಮುದ್ರೆ: ತೀರ್ಥವನ್ನು ಯಾವಾಗಲೂ ಬಲಗೈ ಅಂಗೈಯನ್ನು ‘ಗೋಗರ್ಣ’ ಮುದ್ರೆಯಂತೆ (ಹಸುವಿನ ಕಿವಿಯ ಆಕಾರ) ಮಡಚಿ ಹಿಡಿದು ಸ್ವೀಕರಿಸಬೇಕು.

ಶಬ್ದ ಮಾಡಬಾರದು: ತೀರ್ಥವನ್ನು ಕುಡಿಯುವಾಗ ತುಟಿಗೆ ತಾಗಿಸಿ ಆಚಮನ ಮಾಡಬೇಕು, ಆದರೆ ಯಾವುದೇ ಕಾರಣಕ್ಕೂ ಹೀರುವ ಶಬ್ದ ಬರಬಾರದು.

ತಲೆಗೆ ಸವರಿಕೊಳ್ಳಬೇಡಿ: ತೀರ್ಥ ತಗೊಂಡ ಮೇಲೆ ಕೈಯನ್ನು ತಲೆಗೆ ಅಥವಾ ಬಟ್ಟೆಗೆ ಸವರಿಕೊಳ್ಳುವುದು ತಪ್ಪು. ಇದು ತೀರ್ಥಕ್ಕೆ ಮಾಡುವ ಅಪಚಾರ ಎಂದು ಹೇಳಲಾಗುತ್ತದೆ.

ಭಕ್ತಿ ಮುಖ್ಯ: ತೀರ್ಥವನ್ನು ಸ್ವೀಕರಿಸುವಾಗ ಮನಸ್ಸಿನಲ್ಲಿ ದೇವನ ಸ್ಮರಣೆ ಇರಲಿ.

ತೀರ್ಥ ಅಂದ್ರೆ ಕೇವಲ ನೀರಲ್ಲ!
"ತೀರ್ಥ" ಅಂದ್ರೆ ಪವಿತ್ರವಾದುದು ಅಂತ ಅರ್ಥ. ದೇವರ ಪಾದಗಳನ್ನು ತೊಳೆದ ನೀರು ಅಥವಾ ಕಲಶ ಪೂಜೆಯ ನೀರಿಗೆ ಮಂತ್ರಗಳ ಶಕ್ತಿ ಇರುತ್ತದೆ. ಇದು ನಮ್ಮ ಮನಸ್ಸಿನ ಆತಂಕಗಳನ್ನು ದೂರ ಮಾಡಿ, ದೇಹಕ್ಕೆ ಸಕಾರಾತ್ಮಕ ಶಕ್ತಿಯನ್ನು ನೀಡುವ ಅದ್ಭುತ ಔಷಧಿಯಂತೆ ಕೆಲಸ ಮಾಡುತ್ತದೆ.

ಎಷ್ಟು ಬಾರಿ ತಗೋಬೇಕು? ಈ ಮಂತ್ರ ನೆನಪಿಡಿ..
ಸಾಮಾನ್ಯವಾಗಿ ಮನೆಯಲ್ಲಿ ಪೂಜೆ ಮಾಡಿದಾಗ ಮೂರು ಬಾರಿ ತೀರ್ಥ ಸ್ವೀಕರಿಸುವ ಪದ್ಧತಿ ಇದೆ. ತೀರ್ಥ ಕುಡಿಯುವಾಗ ಈ ಕೆಳಗಿನ ಮಂತ್ರವನ್ನು ಹೇಳಿಕೊಂಡರೆ ತುಂಬಾ ಒಳ್ಳೆಯದು:

“ಅಕಾಲಮೃತ್ಯು ಹರಣಂ ಸರ್ವವ್ಯಾಧಿ ನಿವಾರಣಂ |
ಸಮಸ್ತ ದುರಿತೋಪಶಮನಂ ವಿಷ್ಣುಪಾದೋದಕಂ ಶುಭಂ ||”

ಇದರ ಅರ್ಥ ಸರಳವಾಗಿದೆ - ಈ ಪವಿತ್ರ ನೀರು ಅಕಾಲಿಕ ಮರಣವನ್ನು ತಪ್ಪಿಸುತ್ತದೆ, ಸಕಲ ರೋಗಗಳನ್ನು ಗುಣಪಡಿಸುತ್ತದೆ ಮತ್ತು ಜೀವನದ ಸಂಕಷ್ಟಗಳನ್ನು ದೂರ ಮಾಡಿ ಮಂಗಳವನ್ನು ಉಂಟುಮಾಡುತ್ತದೆ.

ತಲೆಗೆ ಕೈ ಉಜ್ಜಿಕೊಳ್ಳೋದು ತಪ್ಪು!
ನಾವು ಮಾಡುವ ದೊಡ್ಡ ತಪ್ಪು ಇಲ್ಲೇ ಇರೋದು. ತೀರ್ಥ ಕುಡಿದ ಮೇಲೆ ಒದ್ದೆಯಾದ ಕೈಯನ್ನು ತಕ್ಷಣ ತಲೆಗೆ ಉಜ್ಜಿಕೊಳ್ಳುತ್ತೇವೆ. ಆದರೆ ಶಾಸ್ತ್ರಗಳ ಪ್ರಕಾರ ಹೀಗೆ ಮಾಡಬಾರದು. ಹೀಗೆ ಮಾಡುವುದರಿಂದ ತೀರ್ಥದ ದೈವಿಕ ಶಕ್ತಿ ನಾಶವಾಗುತ್ತದೆ ಎಂದು ವಿದ್ವಾಂಸರು ಹೇಳುತ್ತಾರೆ.

ಹಾಗಾದ್ರೆ ಏನು ಮಾಡಬೇಕು?
ತೀರ್ಥ ಸೇವಿಸಿದ ನಂತರ ಅಂಗೈಗಳನ್ನು ಪರಸ್ಪರ ಉಜ್ಜಿಕೊಳ್ಳಬೇಕು ಅಥವಾ ಆ ಕೈಗಳಿಂದ ಕಣ್ಣುಗಳನ್ನು ಮೃದುವಾಗಿ ಒತ್ತಿಕೊಳ್ಳಬೇಕು. ಇದರಿಂದ ಕಣ್ಣುಗಳಿಗೆ ತೇಜಸ್ಸು ಸಿಗುತ್ತದೆ ಎಂಬ ನಂಬಿಕೆಯಿದೆ. ಒಂದು ವೇಳೆ ಕೈಯಲ್ಲಿ ಜಾಸ್ತಿ ನೀರು ಉಳಿದಿದ್ದರೆ ಅದನ್ನು ಕರವಸ್ತ್ರದಿಂದ ಒರೆಸಿಕೊಳ್ಳುವ ಬದಲು ಕೈಯಲ್ಲೇ ಆರಿಕೊಳ್ಳಲು ಬಿಡುವುದು ಶ್ರೇಷ್ಠ.

ತುಳಸಿ ತೀರ್ಥದ ವಿಶೇಷತೆ
ತೀರ್ಥದಲ್ಲಿ ತುಳಸಿ ದಳ ಇದ್ದರೆ ಅದು ಇನ್ನೂ ಶಕ್ತಿಶಾಲಿ. ತುಳಸಿಯಲ್ಲಿ ಆಯುರ್ವೇದ ಗುಣಗಳಿರುವುದರಿಂದ ಅದು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.

ಇನ್ಮುಂದೆ ದೇವಸ್ಥಾನಕ್ಕೆ ಹೋದಾಗ ಅಥವಾ ಮನೆಯಲ್ಲಿ ಪೂಜೆ ಮುಗಿಸಿದ ಮೇಲೆ ಈ ಚಿಕ್ಕ ವಿಷಯಗಳನ್ನು ನೆನಪಿನಲ್ಲಿ ಇಟ್ಟುಕೊಳ್ಳಿ. ಸರಿಯಾದ ಕ್ರಮದಲ್ಲಿ ತೀರ್ಥ ಸ್ವೀಕರಿಸಿ ದೇವರ ಸಂಪೂರ್ಣ ಅನುಗ್ರಹಕ್ಕೆ ಪಾತ್ರರಾಗಿ.